ಆ್ಯಪ್ನಗರ

Mi A3: ದೇಶದಲ್ಲಿ ಆ. 21ಕ್ಕೆ ಬಿಡುಗಡೆ

ಶವೋಮಿ ಎಂಐ ಎ3 ಫೋನ್ ಜನರಲ್ಲಿ ಹೆಚ್ಚಿನ ನಿರೀಕ್ಷೆ ಹುಟ್ಟುಹಾಕಿದ್ದು, ಇದೇ ಆಗಸ್ಟ್‌ನಲ್ಲಿ ದೇಶದ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ.

TNN & Agencies 17 Aug 2019, 4:16 pm
ಚೀನಾ ಮೂಲದ ಶವೋಮಿ ಭಾರತದಲ್ಲಿ ಅತ್ಯಂತ ಜನಪ್ರಿಯ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಶವೋಮಿ ರೆಡ್ಮಿ ಮತ್ತು ಎಂಐ ಎಂಬ ಎರಡು ಬ್ರ್ಯಾಂಡ್‌ ಹೆಸರಿನಲ್ಲಿ ಫೋನ್‌ಗಳನ್ನು ದೇಶದಲ್ಲಿ ಬಿಡುಗಡೆ ಮಾಡುತ್ತಿದೆ.

ಶವೋಮಿ ಹೊಸದಾಗಿ ಎಂಐ ಸರಣಿಯಲ್ಲಿ ಎಂಐ A3 ಮಾದರಿಯನ್ನು ಹೊರತರುತ್ತಿದ್ದು, ಆಗಸ್ಟ್ 21ಕ್ಕೆ ಬಿಡುಗಡೆಯಾಗುತ್ತಿದೆ. ಅಮೆಜಾನ್ ಮೂಲಕ ನೂತನ ಫೋನ್ ದೊರೆಯಲಿದೆ.

ಆಂಡ್ರಾಯ್ಡ್ ಒನ್ ಸರಣಿಯಲ್ಲಿ ಹೊಸ ಫೋನ್ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಶವೋಮಿ ಎಂಐ ಎ ಸರಣಿಯಲ್ಲಿ ಆಂಡ್ರಾಯ್ಡ್ ಒನ್ ಫೋನ್‌ಗಳನ್ನು ಹೊರತರುತ್ತದೆ. ಈ ಮೊದಲು ಶವೋಮಿ ಎಂಐ ಎ1 ಮತ್ತು ಎ2 ಎಂಬ ಎರಡು ಮಾದರಿಗಳನ್ನು ಪರಿಚಯಿಸಿತ್ತು.
ಹೊಸ ಎಂಐ A3, ಹಿಂಬದಿಯಲ್ಲಿ 48 ಮೆಗಾಪಿಕ್ಸೆಲ್ ಸಹಿತ ತ್ರಿವಳಿ ಕ್ಯಾಮರಾ ಹೊಂದಿದೆ.

ದೇಶದಲ್ಲಿ ಶವೋಮಿ ಎಂಐ A3, ಅಂದಾಜು 19,900 ರೂ.ಬೆಲೆ ಹೊಂದಿರುತ್ತದೆ ಎನ್ನಲಾಗಿದೆ.

ಎಂಐ A3 ವಿಶೇಷತೆಗಳು:6.08 ಇಂಚಿನ ಡಿಸ್‌ಪ್ಲೇ, ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 665 SoC, 4GB RAM, 64 GB ಮತ್ತು 128 GB ಆಯ್ಕೆ, 48+8+2 ಮೆಗಾಪಿಕ್ಸೆಲ್‌ನ ತ್ರಿವಳಿ ಕ್ಯಾಮರಾ ಇದರ ವಿಶೇ‍ಷತೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌