ಆ್ಯಪ್ನಗರ

Xiaomi Data Leak: ರೆಡ್ಮಿ ಫೋನ್ ಮಾಹಿತಿ ಸೋರಿಕೆ ಆರೋಪ!

ಚೀನಾ ಮೂಲದ ಅಲಿಬಾಬಾ ಒಡೆತನದ ಸರ್ವರ್‌ಗೆ ಶವೋಮಿ ಫೋನ್ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿ, ಅಲ್ಲಿ ಸ್ಟೋರ್ ಆಗುತ್ತಿತ್ತು ಎಂದು ಗೇಬ್ರಿಯಲ್ ತಿಳಿಸಿದ್ದಾರೆ. ಗ್ರಾಹಕರ ಮಾಹಿತಿ ಕಳವು ಗಂಭೀರ ವಿಚಾರ ಎಂದು ವೈಟ್ ಒಪಿಎಸ್ ಕಳವಳ ವ್ಯಕ್ತಪಡಿಸಿದೆ.

Times Now 2 May 2020, 12:48 pm
ಸ್ಮಾರ್ಟ್‌ಫೋನ್‌ಗಳು ಬಳಕೆದಾರರ ಮಾಹಿತಿ ಕದಿಯುತ್ತವೆ ಎನ್ನುವ ಗಂಭೀರ ಆರೋಪಗಳಿವೆ. ಈ ಮಧ್ಯೆಯೇ ಚೀನಾ ಮೂಲದ ಶವೋಮಿ ರೆಡ್ಮಿ ಫೋನ್ ಮಾಹಿತಿ ಸೋರಿಕೆಯಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಸೈಬರ್‌ಸೆಕ್ಯುರಿಟಿ ರಿಸರ್ಚ್ ವೈಟ್ ಒಪಿಎಸ್ ಸಂಸ್ಥೆಯ ಪ್ರಕಾರ ಅವರಲ್ಲಿದ್ದ ರೆಡ್ಮಿ ನೋಟ್ 8 ಫೋನ್‌ ಬಳಕೆದಾರನ ಬಹುತೇಕ ಮಾಹಿತಿ ಮತ್ತು ಚಟುವಟಿಕೆಯನ್ನು ಟ್ರ್ಯಾಕ್ ಮಾಡಿ ದಾಖಲಿಸಿಕೊಳ್ಳುತ್ತಿತ್ತು ಎನ್ನುವ ಆರೋಪ ಕೇಳಿಬಂದಿದೆ. ಅದರ ಜತೆಗೆ ಡಕ್‌ಡಕ್‌ಗೋ ಮತ್ತು ಗೂಗಲ್‌ನಲ್ಲಿ ಕೂಡ ಸರ್ಚ್ ಹಿಸ್ಟರಿ, ಬ್ರೌಸಿಂಗ್ ಆಕ್ಟಿವಿಟಿಯನ್ನು ರೆಡ್ಮಿ ಫೋನ್ ರಹಸ್ಯವಾಗಿ ನೋಡಿ, ಶೇಖರಿಸಿದೆ ಎಂದು ಆರೋಪಿಸಲಾಗಿದೆ.
Vijaya Karnataka Web Redmi Phone Leak
Xiaomi Redmi


ಖಾಸಗಿತನಕ್ಕೆ ಧಕ್ಕೆ
ಶವೋಮಿ ರೆಡ್ಮಿ ಫೋನ್‌ನಲ್ಲಿ ಇನ್‌ಕಾಗ್ನಿಟೊ ಮೋಡ್ ಬಳಸಿರುವ ಸಂದರ್ಭದಲ್ಲೂ ಗ್ರಾಹಕರ ಮಾಹಿತಿ ಕಳವಾಗಿದ್ದು, ವೈಟ್ ಒಪಿಎಸ್‌ನ ತಜ್ಞ ಗೇಬ್ರಿಯಲ್ ಸರ್ಲಿಗ್ ಈ ಬಗ್ಗೆ ಎಚ್ಚರಿಕೆಯ ಸಂದೇಶ ಪ್ರಕಟಿಸಿದ್ದಾರೆ. ಚೀನಾ ಮೂಲದ ಅಲಿಬಾಬಾ ಒಡೆತನದ ಸರ್ವರ್‌ಗೆ ಶವೋಮಿ ಫೋನ್ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿ, ಅಲ್ಲಿ ಸ್ಟೋರ್ ಆಗುತ್ತಿತ್ತು ಎಂದು ಗೇಬ್ರಿಯಲ್ ತಿಳಿಸಿದ್ದಾರೆ. ಗ್ರಾಹಕರ ಮಾಹಿತಿ ಕಳವು ಗಂಭೀರ ವಿಚಾರ ಎಂದು ವೈಟ್ ಒಪಿಎಸ್ ಕಳವಳ ವ್ಯಕ್ತಪಡಿಸಿದೆ.

ಜತೆಗೆ ಮತ್ತೋರ್ವ ಭದ್ರತಾ ಸಂಶೋಧಕ ಆಂಡ್ರ್ಯೂ ಟರ್ನಿ ಕೂಡ, ಎಂಐ ಬ್ರೌಸರ್ ಮತ್ತು ಮಿಂಟ್ ಬ್ರೌಸರ್ ಗ್ರಾಹಕರ ಮಾಹಿತಿ ಕದಿಯುತ್ತಿದ್ದವು ಎಂದು ಆರೋಪಿಸಿದ್ದಾರೆ.

Video Calling Apps: ಝೂಮ್ ಆ್ಯಪ್‌ ಬದಲು ಇವುಗಳನ್ನು ಬಳಸಿ..

ಶವೋಮಿ ನಿರಾಕರಣೆ
ಆದರೆ ಮಾಹಿತಿ ಕಳವು ಮತ್ತು ಬಳಕೆದಾರರ ಡಾಟಾ ಸೋರಿಕೆ ವಿಚಾರವನ್ನು ಅಲ್ಲಗಳೆದಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿ ಶವೋಮಿ, ಮಾಹಿತಿ ಕಳವು ವಿಚಾರ ನಿಜವಲ್ಲ. ಗ್ರಾಹಕರ ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಆದ್ಯತೆಯ ಸುರಕ್ಷತೆಯನ್ನು ಶವೋಮಿ ನೀಡುತ್ತದೆ ಎಂದು ಉತ್ತರಿಸಿದೆ.

Samsung Galaxy M21: ಸ್ಯಾಮ್‌ಸಂಗ್ ಫೋನ್ ದರ 1000 ರೂ. ಕಡಿತ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌