ಆ್ಯಪ್ನಗರ

Xiaomi Mi 11: ಶವೋಮಿ ಪರಿಚಯಿಸುತ್ತಿದೆ ಫ್ಲ್ಯಾಗ್‌ಶಿಪ್ ಫೋನ್

ಶವೋಮಿ ರೆಡ್ಮಿ ಮತ್ತು ಎಂಐ ಫೋನ್‌ಗಳು ದೇಶದಲ್ಲಿ ಅತ್ಯಂತ ಜನಪ್ರಿಯ ಮತ್ತು ಅತಿ ಹೆಚ್ಚು ಮಾರಾಟವಾಗುವ ಬ್ರ್ಯಾಂಡ್ ಎಂಬ ಹೆಸರು ಪಡೆದಿವೆ.

Gadgets Now 9 Nov 2020, 9:02 pm
ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್‌ಫೋನ್ ಮತ್ತು ಗ್ಯಾಜೆಟ್ ಬ್ರ್ಯಾಂಡ್ ಶವೋಮಿ, ಹೊಸ ಎಂಐ ಸರಣಿಯಲ್ಲಿ ನೂತನ ಮಾದರಿ ಬಿಡುಗಡೆ ಮಾಡಲು ಮುಂದಾಗಿದೆ. ಹೊಸ ಫೋನ್ ಕಂಪನಿಯ ಫ್ಲ್ಯಾಗ್‌ಶಿಪ್ ಉತ್ಪನ್ನವಾಗಿರಲಿದೆ. ಜತೆಗೆ ಎಂ ಸರಣಿಯಲ್ಲಿ ಬಿಡುಗಡೆ ಮಾಡುತ್ತಿರುವ ಮಾದರಿಯಾಗಿದ್ದು, ಕ್ವಾಲ್ಕಂನ ಲೇಟೆಸ್ಟ್ ಪ್ರೊಸೆಸರ್ ಅನ್ನು ಒಳಗೊಂಡಿರುತ್ತದೆ.
Vijaya Karnataka Web Xiaomi Mi 11
Xiaomi Mi 11


ಶವೋಮಿ ಎಂಐ 11
ಶವೋಮಿ ಎಂಐ ಮತ್ತು ರೆಡ್ಮಿ ಬ್ರ್ಯಾಂಡ್ ಅಡಿಯಲ್ಲಿ ಹೊಸ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಪೈಕಿ, ರೆಡ್ಮಿ ಫೋನ್‌ಗಳಲ್ಲಿ ಬಜೆಟ್ ಫೋನ್‌ನಿಂದ ತೊಡಗಿ, ಮಧ್ಯಮ ಮತ್ತು ಪ್ರೀಮಿಯಂ ಫೋನ್‌ವರೆಗೆ ವಿವಿಧ ಮಾದರಿಗಳು ದೊರೆಯುತ್ತವೆ. ಆದರೆ ಎಂಐ ಸರಣಿಯಲ್ಲಿ ಆಕರ್ಷಕ ಫೀಚರ್ ಇರುವ ಫೋನ್‌ಗಳನ್ನು ಶವೋಮಿ ಪರಿಚಯಿಸುತ್ತಿದೆ. ಶವೋಮಿ ಹೊಸದಾಗಿ ಎಂಐ 11 ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

Xiaomi Mi 11
ಮೂಲಗಳ ಪ್ರಕಾರ, ಹೊಸ ಶವೋಮಿ Mi 11 ಫೋನ್ ಫೆಬ್ರವರಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಸ್ಯಾಮ್‌ಸಂಗ್ ಜನವರಿ ಅಥವಾ ಫೆಬ್ರವರಿಯಲ್ಲಿ ಹೊಸ Galaxy S21 ಸಿರೀಸ್ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಹಾಗಾದಲ್ಲಿ, ಶವೋಮಿ ಕೂಡ ಅದೇ ಸಂದರ್ಭದಲ್ಲಿ ಹೊಸ ಎಂಐ 11 ಫೋನ್ ಬಿಡುಗಡೆ ಮಾಡುವ ಸಾಧ್ಯತೆಯಿದೆ.

Nokia: 4K ಸಹಿತ ಹೊಸ ಸ್ಟ್ರೀಮಿಂಗ್ ಬಾಕ್ಸ್ ಪರಿಚಯಿಸಿದ ನೋಕಿಯಾ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್
ಶವೋಮಿ ರೆಡ್ಮಿ ಮತ್ತು ಎಂಐ ಫೋನ್‌ಗಳು ದೇಶದಲ್ಲಿ ಅತ್ಯಂತ ಜನಪ್ರಿಯ ಮತ್ತು ಅತಿ ಹೆಚ್ಚು ಮಾರಾಟವಾಗುವ ಬ್ರ್ಯಾಂಡ್ ಎಂಬ ಹೆಸರು ಪಡೆದಿವೆ. ಈ ಬಾರಿ ಶವೋಮಿ ಬಿಡುಗಡೆ ಮಾಡಲು ಉದ್ದೇಶಿಸಿರುವ ಎಂಐ 11, ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 875 ಪ್ರೊಸೆಸರ್ ಹೊಂದಿರುವ ಸಾಧ್ಯತೆಯಿದೆ. ಜತೆಗೆ 48 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಕೂಡ ಇರಲಿದೆ ಎನ್ನಲಾಗಿದೆ.

Micromax In 1b: ಮಂಗಳವಾರದಿಂದ ಹೊಸ ಫೋನ್ ಪ್ರಿಬುಕಿಂಗ್ ಆರಂಭ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌