ಆ್ಯಪ್ನಗರ

Mi TV 5 Pro: ದೇಶದ ಮಾರುಕಟ್ಟೆಗೆ QLED ಟಿವಿ ಬಿಡುಗಡೆ ಮಾಡಲು ಮುಂದಾದ ಶವೋಮಿ

ಶವೋಮಿ ಎಂಐ ಟಿವಿ ಸರಣಿಯಲ್ಲಿ ಬಿಡುಗಡೆಯಾಗಲಿರುವ QLED ಟಿವಿ, ದೇಶದ ಮಾರುಕಟ್ಟೆಯಲ್ಲಿ ಈ ವರ್ಷದ ಕೊನೆಗೆ ಲಭ್ಯವಾಗುವ ನಿರೀಕ್ಷೆಯಿದೆ.

TNN & Agencies 4 Dec 2020, 3:31 pm
ಚೀನಾ ಹೊರತುಪಡಿಸಿದರೆ ಅತ್ಯಂತ ದೊಡ್ಡ ಮಾರುಕಟ್ಟೆ ಹೊಂದಿರುವ ಭಾರತದಲ್ಲಿ ಶವೋಮಿ, ಹೊಸ QLED ಟಿವಿ Mi TV 5 Pro ಬಿಡುಗಡೆ ಮಾಡಲು ಮುಂದಾಗಿದೆ. ಶವೋಮಿ ರೆಡ್ಮಿ ಮತ್ತು ಎಂಐ ಸರಣಿಯಲ್ಲಿ ದೇಶದಲ್ಲಿ ವಿವಿಧ ಮಾದರಿಯ ಮತ್ತು ಬಜೆಟ್ ದರದ ಟಿವಿಗಳನ್ನು ಬಿಡುಗಡೆ ಮಾಡಿದ್ದು, ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಮಾರಾಟ ಮಾಡಿ ದಾಖಲೆ ಸೃಷ್ಟಿಸಿದೆ.
Vijaya Karnataka Web Mi TV 5 Pro
Xiaomi Mi TV 5 Pro


ಶವೋಮಿ QLED ಟಿವಿ
ಗ್ಯಾಜೆಟ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಸ್ಮಾರ್ಟ್‌ಫೋನ್ ಹೊರತುಪಡಿಸಿದರೆ, ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವುದು ಸ್ಮಾರ್ಟ್ ಟಿವಿಗಳು. ಅದರಲ್ಲೂ ದೇಶದಲ್ಲಿ ದೀಪಾವಳಿ ಮತ್ತು ಇತರ ಹಬ್ಬದ ಸಂದರ್ಭದಲ್ಲಂತೂ ಅತ್ಯಂತ ಹೆಚ್ಚಿನ ಸಂಖ್ಯೆಯ ಸ್ಮಾರ್ಟ್ ಟಿವಿ ಮಾರಾಟವಾಗುತ್ತದೆ. ಶವೋಮಿ ಈ ಬಾರಿ ಎಂಐ ಟಿವಿ ಸರಣಿಯಲ್ಲಿ ಹೊಸ QLED ಟಿವಿ ಬಿಡುಗಡೆ ಮಾಡಲು ಮುಂದಾಗಿದೆ.

Mi TV 5 Pro
ಶವೋಮಿ ಎಂಐ ಟಿವಿ ಸರಣಿಯಲ್ಲಿ ಈಗಾಗಲೇ ವಿವಿಧ ಮಾದರಿಗಳನ್ನು ಬಿಡುಗಡೆ ಮಾಡಿದೆ. ಮುಂದೆ ಅತ್ಯಾಧುನಿಕ ಆವೃತ್ತಿಯಲ್ಲಿ Mi TV 5 Pro QLED ಟಿವಿ ಮಾರುಕಟ್ಟೆ ಪ್ರವೇಶಿಸಲಿದೆ. ಹೊಸ ಸರಣಿ, 55, 65 ಮತ್ತು 75 ಇಂಚಿನ ಡಿಸ್‌ಪ್ಲೇ ಮಾದರಿಯಲ್ಲಿ ಲಭ್ಯವಾಗಲಿದೆ.

Android Device: ಹಳೆ ಟಿವಿಯನ್ನು ಕಡಿಮೆ ಖರ್ಚಿನಲ್ಲಿ ಸ್ಮಾರ್ಟ್ ಟಿವಿಯನ್ನಾಗಿಸಿ..

ಹೇಗಿರಲಿದೆ ಹೊಸ QLED ಟಿವಿ?
ಶವೋಮಿ ಎಂಐ ಟಿವಿ ಸರಣಿಯಲ್ಲಿ ಬಿಡುಗಡೆಯಾಗಲಿರುವ QLED ಟಿವಿ, ದೇಶದ ಮಾರುಕಟ್ಟೆಯಲ್ಲಿ ಈ ವರ್ಷದ ಕೊನೆಗೆ ಲಭ್ಯವಾಗುವ ನಿರೀಕ್ಷೆಯಿದೆ. ಅಲ್ಲದೆ, 33,800 ರೂ ಅರಂಭಿಕ ದರ ಹೊಂದಿರುವ ನಿರೀಕ್ಷೆಯಿದೆ. ಉಳಿದಂತೆ 4 GB RAM ಮತ್ತು 64 GB ಸ್ಟೋರೇಜ್ ಹೊಸ QLED ಟಿವಿಯಲ್ಲಿ ಇರಲಿದೆ ಎನ್ನಲಾಗಿದೆ.

Online Shopping: ಹಬ್ಬದ ಆಫರ್‌ನಲ್ಲಿ ಹೊಸ ಟಿವಿ ಖರೀದಿಸುವಿರಾ? ಇಲ್ಲಿ ಗಮನಿಸಿ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌