ಆ್ಯಪ್ನಗರ

ಇದೋ ಬಂದಿದೆ ಬಾಗಿದ ಮಾನಿಟರ್

ಮಾನಿಟರ್‌ಗಳು ಕೂಡ ಈಗ ಸ್ಮಾರ್ಟ್ ಆಗುತ್ತಿದ್ದು, ಬಾಗಿದ ವಕ್ರವಾದ ಮಾನಿಟರ್‌ಗಳು ಈಗ ಮಾರುಕಟ್ಟೆಗೆ ಬಂದಿವೆ. ಸ್ಮಾರ್ಟ್ ಫೋನ್‌ಗಳಂತೆಯೇ ಕಂಪ್ಯೂಟರ್ ಕ್ಷೇತ್ರವೂ ಸ್ಮಾರ್ಟ್ ಆಗುತ್ತಿದ್ದು, ಹಲವಾರು ಪೋರ್ಟ್‌ಗಳು ಇದರಲ್ಲಿವೆ. ಇದರಿಂದಾಗಿ ಟಿವಿ, ಫೋನ್ ಕಂಟೆಂಟ್ ಕೂಡ ಈ ಮಾನಿಟರ್ ಮೂಲಕ ವೀಕ್ಷಿಸಬಹುದು.

Vijaya Karnataka Web 20 Apr 2019, 1:01 pm
ಬೆಂಗಳೂರು: ಈಗ ಟಿವಿಗಳು ಮತ್ತು ಮಾನಿಟರ್‌ಗಳು ಕೂಡ ಸ್ಮಾರ್ಟ್ ಆಗುವ ಕಾಲ. ಸ್ಮಾರ್ಟ್‌ಫೋನ್‌ಗಳಲ್ಲಿ ಎರಡೂ ಅಂಚುಗಳನ್ನು ಆವರಿಸಿರುವ, ಬಾಗಿದ ಮತ್ತು ಮಡಚಬಹುದಾದ ಸ್ಕ್ರೀನ್ ಇರುವ ವೈಶಿಷ್ಟ್ಯವೀಗ ಸಾಕಾರಗೊಳ್ಳುತ್ತಿರುವಾಗ, ಕಂಪ್ಯೂಟರ್ ಮಾನಿಟರ್‌ಗಳೂ ಆಧುನೀಕರಣಗೊಂಡಿವೆ. ಇದೋ ಬಂದಿದೆ ಬಾಗಿದ ಮಾನಿಟರ್.
Vijaya Karnataka Web zebronics curved led ultra slim monitor
ಇದೋ ಬಂದಿದೆ ಬಾಗಿದ ಮಾನಿಟರ್


ಜೆಬ್ರಾನಿಕ್ಸ್ ಇಂಡಿಯಾ ಹೊರತಂದಿರುವ 80 ಸೆ.ಮೀ. ಗಾತ್ರದ ಎಲ್‌ಇಡಿ ಪರದೆಯುಳ್ಳ ಈ ಮಾನಿಟರ್, ಬಾಗಿರುವ ರೂಪದಲ್ಲಿ ಆಕರ್ಷಕವಾಗಿದೆ. ಬಾಗಿದ ಅಂಚಿನೊಂದಿಗೆ, ವೀಕ್ಷಣೆಯ ಅನುಭವವನ್ನು ಅದ್ಭುತವಾಗಿಸುತ್ತದೆ. ಕಂಪ್ಯೂಟರಿನಲ್ಲಿ ಸಿನಿಮಾ, ವೀಡಿಯೊ ನೋಡಲು ಅಥವಾ ಟಿವಿಯನ್ನು ನೋಡುವುದಕ್ಕೆ ಕೂಡ ಇದು ಅನುಕೂಲ ಮಾಡಿಕೊಡುತ್ತದೆ. ಅಂತರ್‌ನಿರ್ಮಿತ ಸ್ಪೀಕರ್‌ಗಳು ಕೂಡ ಇದರಲ್ಲಿದೆ. ಈ ಮಾಡೆಲ್ ಹೆಸರು ZEB-AC32FHD LED.

ಮಾನಿಟರ್‌ನಲ್ಲಿ ಡಿಸ್‌ಪ್ಲೇ ಪೋರ್ಟ್ ಮತ್ತು ಎಚ್‌ಡಿಎಂಐ ಇನ್‌ಪುಟ್ ಆಯ್ಕೆಯಿದೆ. ಬಾಗಿರುವ ಸ್ಕ್ರೀನ್‌ನಲ್ಲಿ 178 ಡಿಗ್ರಿ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತದೆ. ಡಿಸಿ ಇನ್‌ಪುಟ್, ಹೆಡ್‌ಫೋನ್ ಜ್ಯಾಕ್ ಕೂಡ ಇದೆ. ಈ ಮಾನಿಟರ್ ಅನ್ನು ಗೋಡೆಯಲ್ಲೂ ತಗುಲಿಹಾಕಬಹುದು. ಈ ಉತ್ಪನ್ನವು ಎಲ್ಲಾ ಪ್ರಮುಖ ಮಳಿಗೆಗಳಲ್ಲಿ ಲಭ್ಯವಿದ್ದು, ಬೆಲೆ 26,999 ರೂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌