ಆ್ಯಪ್ನಗರ

ಮೊಬೈಲ್‌ಗಳಿಗೆ ಕಡ್ಡಾಯ ಆಗಲಿದೆ ಪ್ಯಾನಿಕ್‌ ಬಟನ್‌

ಮುಂದಿನ ವರ್ಷ ಜನವರಿ 1ರಿಂದ ದೇಶದಲ್ಲಿ ಮಾರಾಟವಾಗಲಿರುವ ಎಲ್ಲ ಮೊಬೈಲ್ ಫೋನ್‌ಗಳಲ್ಲಿ ಪ್ಯಾನಿಕ್‌ ಬಟನ್‌ ಕಡ್ಡಾಯವಾಗಲಿದೆ.

ಏಜೆನ್ಸೀಸ್ 26 Apr 2016, 1:02 pm
ಹೊಸದಿಲ್ಲಿ: ಮುಂದಿನ ವರ್ಷ ಜನವರಿ 1ರಿಂದ ದೇಶದಲ್ಲಿ ಮಾರಾಟವಾಗಲಿರುವ ಎಲ್ಲ ಮೊಬೈಲ್ ಫೋನ್‌ಗಳಲ್ಲಿ ಪ್ಯಾನಿಕ್‌ ಬಟನ್‌ ಕಡ್ಡಾಯವಾಗಲಿದೆ.
Vijaya Karnataka Web panic button must for all new mobile phones from next year
ಮೊಬೈಲ್‌ಗಳಿಗೆ ಕಡ್ಡಾಯ ಆಗಲಿದೆ ಪ್ಯಾನಿಕ್‌ ಬಟನ್‌


2018 ಜನವರಿ 1ರಿಂದ ಎಲ್ಲ ಫೋನ್‌ಗಳಲ್ಲಿ ಜಿಪಿಎಸ್‌ ದಿಕ್ಸೂಚಿ ವ್ಯವಸ್ಥೆ ಕಡ್ಡಾಯಗೊಳಿಸಲಾಗುವುದು ಎಂದು ಟೆಲಿಕಾಂ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

'ಜೀವನ ಮಟ್ಟ ಸುಧಾರಿಸುವುದೇ ತಂತ್ರಜ್ಞಾನದ ಏಕೈಕ ಉದ್ದೇಶ. ಜತೆಗೆ, ಮಹಿಳೆಯರಿಗೆ ಸುರಕ್ಷತೆ ಒದಗಿಸುವುದು ಬಹಳ ಮುಖ್ಯ. ತುರ್ತು ಸಂದರ್ಭಗಳಲ್ಲಿ ಕರೆ ಮಾಡಲು ಅನುಕೂಲವಾಗುವಂತೆ ಎಲ್ಲ ಫೋನ್‌ಗಳಲ್ಲಿ ಪ್ಯಾನಿಕ್‌ ಬಟನ್‌ ಅಳವಡಿಸುವುದು 2017 ಜನವರಿ 1ರಿಂದ ಕಡ್ಡಾಯವಾಗಲಿದೆ. 2018ರಿಂದ ಜಿಪಿಎಸ್‌ ವ್ಯವಸ್ಥೆ ಅಳವಡಿಸುವುದೂ ಕಡ್ಡಾಯವಾಗಲಿದೆ,' ಎಂದು ರವಿಶಂಕರ್‌ ಹೇಳಿದ್ದಾರೆ.

ಸದ್ಯ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಜಿಪಿಎಸ್‌ ವ್ಯವಸ್ಥೆ ಲಭ್ಯವಿದೆ.

ಪ್ಯಾನಿಕ್‌ ಬಟನ್‌ ಯಾವುದು ?

ಏಪ್ರಿಲ್‌ 22ರಂದು ಹೊರಡಿಸಿರುವ ಅಧಿಸೂಚನೆ ಪ್ರಕಾರ, ಸಂಖ್ಯೆ 5 ಅಥವಾ 9 ಅನ್ನು ಒತ್ತಿ ಹಿಡಿದಾಗ ತುರ್ತು ಕರೆ ಮಾಡುವಂತೆ ಮೊಬೈಲ್‌ ಹ್ಯಾಂಡ್‌ಸೆಟ್‌ ವಿನ್ಯಾಸಗೊಳಿಸರಬೇಕು. ಅಥವಾ, ಫೋನ್‌ ಆಫ್‌ ಹಾಗೂ ಆನ್ ಮಾಡುವ ಬಟನ್‌ ಅನ್ನು 3 ಬಾರಿ ಬಾರಿ ಒತ್ತಿದಾಗ ತುರ್ತು ಕರೆ ಸಾಧ್ಯವಾಗಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌