ಆ್ಯಪ್ನಗರ

Samsung Galaxy S20+: ಇಲ್ಲಿದೆ ಸ್ಯಾಮ್‌ಸಂಗ್‌ನ ಬೆಸ್ಟ್ ಫೋನ್!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್20+ ಎಕ್ಸಿನೊಸ್990 ಪ್ರೊಸೆಸರ್ ಅನ್ನು ಹೊಂದಿದೆ. ಇದರಲ್ಲಿ 8GB RAM ಮತ್ತು 128 GB ಆಂತರಿಕ ಸಂಗ್ರಹಣೆಯಿದೆ. ಫೋನ್ ಹೆಚ್ಚು ಶಕ್ತಿಯನ್ನು ಹೊಂದಿರುವುದರಿಂದ ಎಷ್ಟೇ ಅಪ್ಲಿಕೇಷನ್ಸ್ ತೆರೆದರೂ ಏನು ತೊಂದರೆಯಾಗುವುದಿಲ್ಲ.

Gadgets Now 22 May 2020, 12:50 pm
ಸ್ಯಾಮ್‌ಸಂಗ್‌ 2020 ಗ್ಯಾಲಕ್ಸಿ ಎಸ್ ಪ್ರಮುಖ ಶ್ರೇಣಿಯು S20, S20+ ಮತ್ತು S20ಅಲ್ಟ್ರಾಗಳನ್ನು ಒಳಗೊಂಡಿದೆ. ಸ್ಯಾಮ್‌ಸಂಗ್‌ ಮೂರು ಪ್ರಮುಖ ಫೋನುಗಳು ಮೂರು ಬೇರೆ ಸ್ಥರಗಳ ಬೆಲೆಯನ್ನು ಹೊಂದಿದ್ದು, ಒಳ್ಳೆಯ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ ಪಡೆದಿದೆ. ಇವೆಲ್ಲವೂ ಭಾರತದ ಮಾರುಕಟ್ಟೆಗೆ ಅನುಗುಣವಾಗಿ ವಿನ್ಯಾಸಗೊಂಡಿದ್ದು 5G ಹೊಂದಿಲ್ಲದ ಎಕ್ಸಿನೊಸ್990 ಪ್ರೊಸೆಸರ್ ಹೊಂದಿದೆ. ಈ ಫೋನ್‌ಗಳ ಡಿಸ್‌ಪ್ಲೇ, ಕ್ಯಾಮೆರಾ ಮತ್ತು ಬ್ಯಾಟರಿ ಸಾಮರ್ಥ್ಯ ಇವುಗಳ ಮೇಲೆ ಮುಖ್ಯವಾದ ವ್ಯತ್ಯಾಸಗಳನ್ನು ಗುರುತಿಸಬಹುದಾಗಿದೆ. S20 ಅಲ್ಟ್ರಾದಲ್ಲಿ ಡಿಸ್‌ಪ್ಲೇ ಸೈಜ್ 6.9 ಇಂಚು ಮತ್ತು 16GB RAM ಹೊಂದಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್20+ನ ಸಮೀಕ್ಷೆ ಹೀಗಿದೆ.
Vijaya Karnataka Web Samsung Galaxy S20+
ಕ್ರಿಟಿಕ್‌ ರೇಟಿಂಗ್‌4.5/5



ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್20+ ವಿನ್ಯಾಸ
ಸ್ಯಾಮ್‌ಸಂಗ್‌ನವರು ಕಡಿಮೆ ಅಂಚುಗಳಿರುವ ಪಂಚ್-ಹೋಲ್ ಇನ್ಫಿನಿಟಿ-ಓ ಪ್ರದರ್ಶನದ ಪರದೆಯನ್ನು ಸೃಜಿಸಿದ್ದಾರೆ. ಇದು ನೋಡಲು ಸುಂದರವಾಗಿದ್ದು ಮುಟ್ಟಲು ನವಿರಾಗಿದೆ. ಇದರ ವಿನ್ಯಾಸವೇನು ಹೊಸದಲ್ಲ. ಗ್ಯಾಲಕ್ಸಿ ಎಸ್20+ ಫೋನ್ ಬೂದು, ನೀಲಿ ಮತ್ತು ಕಪ್ಪು ಬಣ್ಣಗಳಂಥ ಸಾಮಾನ್ಯ ಬಣ್ಣಗಳಲ್ಲಿದ್ದರೂ ನೋಡಿದರೆ ವಿಶೇಷವಾಗಿ ಕಾಣುತ್ತದೆ. ಫೋನ್ ತೆಳುವಾಗಿದ್ದು ಮತ್ತು ಹಗುರವಾಗಿದ್ದು ಕೈನಲ್ಲಿ ಆರಾಮವಾಗಿ ಹಿಡಿಯಬಹುದು. ಸ್ಯಾಮ್‌ಸಂಗ್‌ ಫೋನಿನ ಹಿಂಬದಿಯಲ್ಲಿ ಕ್ಯಾಮರಾ ಆಯತಾಕಾರದಲ್ಲಿದೆ. ಇದು ಕ್ವಾಡ್ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ. ಇದು ನೋಡಲು ಚಂದವಾಗಿದ್ದರು ಅಷ್ಟೊಂದು ಆಕರ್ಷಕವಾಗಿಲ್ಲ. ಆದರೂ ಎಸ್10+ ಅಥವಾ ನೋಟ್10 ರಲ್ಲಿ ಇರುವುದಕ್ಕಿಂತ ಬೇರೆಯಾಗಿದೆ.


ಡಿಸ್‌ಪ್ಲೇ
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್20+ನಲ್ಲಿ ಡೈನಾಮಿಕ್ ಅಮೋಲೆಡ್ 2X, ಕ್ವಾಡ್ HD+ ಜೊತೆಗೆ 6.7 ಇಂಚಿನ ಪ್ರದರ್ಶನ ಪರದೆಯಿದೆ. ಇದು 120Hz ರಿಫ್ರೆಶ್ ದರ ಹೊಂದಿದೆ. ಇದನ್ನು ನಾವು ಕ್ವಾಡ್HD+ ಅಥವಾ ಫುಲ್ HD ರೆಸೊಲ್ಯೂಷನ್‌ನೊಂದಿಗೆ ಹೊಂದಿಸಿಕೊಳ್ಳಬಹುದು. ಮತ್ತು 525ಪಿಪಿಐ ಪಿಕ್ಸೆಲ್ ಸಾಂದ್ರತೆಯಿದೆ. 120Hz ರಿಫ್ರೆಶ್ ದರವನ್ನು ಹೊಂದಿದ್ದರೆ ಬ್ಯಾಟರಿ ಬಾಳಿಕೆಯಲ್ಲಿ ಯಾವುದೇ ಮಹತ್ತರ ಬದಲಾವಣೆಯಿಲ್ಲವೆಂದು ಸ್ಯಾಮ್‌ಸಂಗ್‌ ತಿಳಿಸಿದೆ. ಎಸ್20+ನಲ್ಲಿ ದೃಶ್ಯಗಳನ್ನು ನೋಡುವುದು ಮತ್ತು ಆಟವಾಡುವುದೇ ಚಂದ. ಇದರ ಪ್ರದರ್ಶನದ ಗುಣಮಟ್ಟ ಹೆಚ್ಚಾಗಿದ್ದು ಬಣ್ಣಗಳ ಶ್ರೀಮಂತಿಕೆಯನ್ನು ಹೊಂದಿದೆ. ಸಾಧಾರಣ ಹೊಳಪಿನಲ್ಲಿ ಸೂರ್ಯಬೆಳಕಿನ ಪ್ರಖರತೆಯಿದ್ದರೂ ನೀವು ಮೊಬೈಲನ್ನು ಉಪಯೋಗಿಸಬಹುದು.


ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್20+ ಕ್ಯಾಮರಾ
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್20+ ಹಿಂಭಾಗದಲ್ಲಿ ಕ್ವಾಡ್ ಕ್ಯಾಮರಾವಿದೆ. ಇದರ ವಿಶೇಷತೆಗಳು: F2.0 ದ್ಯುತಿರಂದ್ರದೊಂದಿಗೆ 64 MPಯ ಟೆಲಿಫೋಟೋ, F1.8 ದ್ಯುತಿರಂದ್ರದೊಂದಿಗೆ 12 MPಯ ವಿಶಾಲ ಕೋನ, F2.2ದ್ಯುತಿರಂದ್ರದೊಂದಿಗೆ 12 MPಅಲ್ಟ್ರಾ ವೈಡಿನೊಂದಿಗಿನ ಆಳಸಂವೇದಕ. ಇದರಲ್ಲಿ 3Xಹೈಬ್ರಿಡ್ ಆಪ್ಟಿಕಲ್ ಜೂಮ್ ಮತ್ತು 30Xವರೆಗಿನ ಡಿಜಿಟಲ್ ಜೂಮ್ ಹೊಂದಿದೆ. ಮೊಬೈಲಿನ ಮುಂಭಾಗದಲ್ಲಿರುವ ಸೆಲ್ಫಿ ಕ್ಯಾಮರಾವು F2.2ದ್ಯುತಿರಂದ್ರದೊಂದಿಗೆ 10MPಯ 10X ಜೂಮ್ ಮಾಡಬಹುದಾಗಿದೆ. ಸೆಲ್ಫಿ ಕ್ಯಾಮರಾ ಸಾಮಾಜಿಕ ಜಾಲತಾಣಗಳ ಬಳಕೆಗೆ ಉಪಯುಕ್ತವಾಗಿದೆ. ಇದೆ ಕ್ಯಾಮರಾದಲ್ಲಿ 8K ದೃಶ್ಯಗಳನ್ನು ಚಿತ್ರೀಕರಿಸಬಹುದಾಗಿದೆ. ಇದನ್ನು ಯೂಟ್ಯೂಬಿನಲ್ಲಿ ಸಹ ಅಪ್ಲೋಡ್ ಮಾಡಬಹುದಾಗಿದೆ. ಇದರಲ್ಲಿ ಸ್ಪೇಸ್ ಜೂಮ್ ಎಂಬ ಹೊಸ ವಿಶೇಷತೆಯಿದೆ. ಇದರಿಂದ ಹೆಚ್ಚು ರೆಸೊಲ್ಯೂಷನ್ ಫೋಟೋಗಳನ್ನು ಜೂಮ್ ಮಾಡಬಹುದು, ಅದರಲ್ಲಿ ಬೇಕಾದ್ದನ್ನು ಕ್ರಾಪ್ ಮಾಡಿ ಹೊಸ ಫೋಟೋ ತಯಾರು ಮಾಡಬಹುದು.


ಸೂಪರ್ ಸ್ಟೆಡಿ-ಮೋಡ್ ನೊಂದಿಗೆ ಇರುಳಿನ ಹೈಪರ್ ಲ್ಯಾಪ್ಸ್ ವೈಶಿಷ್ಟ್ಯಗಳಿಂದ ಚಿತ್ರಗಳನ್ನು ಮತ್ತು ದೃಶ್ಯಗಳನ್ನು ತೆಗೆಯಲು ಸಹಾಯಕವಾಗುತ್ತದೆ ಎಂದು ಸ್ಯಾಮ್‌ಸಂಗ್‌ ಹೇಳಿಕೊಂಡಿದೆ. ಟಿಕ್ ಟಾಕ್ ಪ್ರಿಯರಿಗಾಗಿಯೇ ಸಿಂಗಲ್ ಟೇಕ್ ಎಂಬ ಹೊಸದೊಂದು ವಿಶೇಷತೆಯಿದೆ. ಇದರಿಂದ ಹತ್ತು ಕ್ಷಣಗಳ ದೃಶ್ಯವನ್ನು ವಿವಿಧ ಲೆನ್ಸ್ ಗಳಿಂದ ಸೃಷ್ಟಿ ಮಾಡಬಹುದು. ಈ ಮೋಡಿನಲ್ಲಿ ಬೇರೆ-ಬೇರೆ ಹೊರ ಫೈಲುಗಳಲ್ಲಿ ಲೈವ್ ಫೋಕಸ್, ಕ್ರಾಪ್ ಆಗಿರುವುದು, ಅಲ್ಟ್ರಾ ವೈಡ್‌ನಂತಹ ವಿಶೇಷತೆಗಳು ಬರುತ್ತವೆ. ಇವೆಲ್ಲದರ ಜತೆಗೆ ಹತ್ತಿರದಲ್ಲೇ ಇರುವ ಇತರ ಸ್ಯಾಮ್‌ಸಂಗ್‌ ಫೋನ್‌ಗಳಿಗೆ ಕ್ಷಣಮಾತ್ರದಲ್ಲಿ ಫೈಲುಗಳನ್ನು ಹಂಚಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಈ ಫೋನಿನ ಕ್ಯಾಮರಾ ಯಾವುದೇ ವಿಷಯದ ಮೇಲೆ ದೃಶ್ಯಗಳನ್ನು ಚಿತ್ರೀಕರಿಸಬಹುದಾದರೂ ಫೋನಿನಲ್ಲಿ 3.5mm ಹೆಡ್ ಫೋನ್ ಜಾಕ್ ಇಲ್ಲದಿರುವುದೇ ಅಡ್ಡಿಯಾಗಿದೆ. ಈ ಫೋನ್‌ನಲ್ಲಿ ಹವ್ಯಾಸಿ ಛಾಯಾಚಿತ್ರಗಾರರಿಗೆ ಹಲವು ವೈಶಿಷ್ಟ್ಯಗಳಿವೆ.


ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್20+ ಕಾರ್ಯಕ್ಷಮತೆ ಮತ್ತು ಬ್ಯಾಟರಿ ಬಾಳಿಕೆ
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್20+ ಎಕ್ಸಿನೊಸ್990 ಪ್ರೊಸೆಸರ್ ಅನ್ನು ಹೊಂದಿದೆ. ಇದರಲ್ಲಿ 8GB RAM ಮತ್ತು 128 GB ಆಂತರಿಕ ಸಂಗ್ರಹಣೆಯಿದೆ. ಫೋನ್ ಹೆಚ್ಚು ಶಕ್ತಿಯನ್ನು ಹೊಂದಿರುವುದರಿಂದ ಎಷ್ಟೇ ಅಪ್ಲಿಕೇಷನ್ಸ್ ತೆರೆದರೂ ಏನು ತೊಂದರೆಯಾಗುವುದಿಲ್ಲ. ತುಂಬಾ ಹೊತ್ತು ಫೋನ್ ಸಕ್ರಿಯವಾಗಿದ್ದರೆ, ಫೋನ್‌ ಶಾಖ ಹೆಚ್ಚಾಗುತ್ತದೆ. ಇದರಲ್ಲಿ 1 TBವರೆಗಿನ ಮೈಕ್ರೋ SD ಕಾರ್ಡ್ ಅನ್ನು ಉಪಯೋಗಿಸಲು ಅವಕಾಶವಿದೆ. 25 W ನೊಂದಿಗೆ 4500mAh ಬ್ಯಾಟರಿ ಇರುವುದರಿಂದ ವೇಗವಾಗಿ ಚಾರ್ಜ್ ಆಗುತ್ತದೆ. ದಿನವೂ ಫೋನ್ ಚಾರ್ಜ್ ಮಾಡಬೇಕಾಗುತ್ತದೆ.

Realme X50 Pro: ಹೇಗಿದೆ ರಿಯಲ್‌ಮಿ ಹೊಸ ಫೋನ್?


ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್20+ ತೀರ್ಮಾನ
ಸ್ಮಾರ್ಟ್‌ಫೋನಿನಲ್ಲಿ ಮುಲ್ಟಿಮೀಡಿಯಾದ ಅನುಭವ ಬಯಸಿದರೆ ನಿಮಗೆ ಹೇಳಿ ಮಾಡಿಸಿದ ಆಂಡ್ರಾಯ್ಡ್‌ನ ಪ್ರಮುಖವಾದ ಫೋನಿದು. ನೀವೇನಾದರೂ ಯೂಟ್ಯೂಬರ್ ಆಗಿದ್ದರೆ ಅಥವಾ ವಿವಿಧ ವಿಷಯಗಳ ರಚನಾಕಾರಾಗಿದ್ದರೆ, ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್20+ ಫೋನ್ ನಿಮಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ನೀಡುತ್ತದೆ. ಇದರಲ್ಲಿ ಅತ್ಯುತ್ತಮ ಹಾರ್ಡ್ ವೇರ್ ಮತ್ತು ಸಹಕಾರಿ ಸಾಫ್ಟ್‌ವೇರ್ ಇರುವುದರಿಂದ ನೀವು ಕೊಳ್ಳಬೇಕಾದ ಪ್ರಮುಖವಾದ ಆಂಡ್ರಾಯ್ಡ್ ಫೋನ್ ಇದು. ಇದರ ಜತೆಗೆ 120Hz ರಿಫ್ರೆಶ್ ದರ ಅಥವಾ 8K ಕ್ಯಾಮೆರಾ ಇವುಗಳ ಬಳಕೆ ದೈನಂದಿನ ಜೀವನದಲ್ಲಿ ಅಷ್ಟೊಂದು ಮುಖ್ಯವಾಗಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ಆದರೆ ಒಂದೊಳ್ಳೆ ಅನುಭವಕ್ಕೆ ಒಂದೊಳ್ಳೆ ಫೋನ್ ಎಂದರೆ ಅದು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್20+. ನೆನಪಿಡಿ..

Samsung Galaxy A51: ಹೇಗಿದೆ ಗೊತ್ತಾ ಗ್ಯಾಲಕ್ಸಿ A51 ಸ್ಮಾರ್ಟ್‌ಫೋನ್?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ