ಆ್ಯಪ್ನಗರ

ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಂದು ಕಂಪನ: ಬಂದಿದೆ 'ಪುಕ್ಕಟೆ' ಜಿಯೋ ಫೋನ್

ಈಗಾಗಲೇ ಪ್ರತಿಸ್ಫರ್ಧಿ ಫೋನ್ ಕಂಪನಿಗಳ ಬೆವರಿಳಿಸಿರುವ ರಿಲಾಯನ್ಸ್ ಈಗ ಪುಕ್ಕಟೆ ಫೋನ್ ಮೂಲಕ ಮತ್ತೊಂದು ಕ್ರಾಂತಿಕಾರಿ ಕ್ರಮಕ್ಕೆ ಮುಂದಾಗಿದೆ.

ET Online 21 Jul 2017, 1:39 pm
ಮುಂಬಯಿ: ಈಗಾಗಲೇ ಪ್ರತಿಸ್ಫರ್ಧಿ ಫೋನ್ ಕಂಪನಿಗಳ ಬೆವರಿಳಿಸಿರುವ ರಿಲಾಯನ್ಸ್ ಈಗ ಪುಕ್ಕಟೆ ಫೋನ್ ಮೂಲಕ ಮತ್ತೊಂದು ಕ್ರಾಂತಿಕಾರಿ ಕ್ರಮಕ್ಕೆ ಮುಂದಾಗಿದೆ.
Vijaya Karnataka Web ril agm jio launches affordable 4g phone called jio phone
ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಂದು ಕಂಪನ: ಬಂದಿದೆ 'ಪುಕ್ಕಟೆ' ಜಿಯೋ ಫೋನ್


ಮುಕೇಶ್ ಅಂಬಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 40ನೇ ವಾರ್ಷಿಕ ಸಭೆಯಲ್ಲಿ ಬಹುನಿರೀಕ್ಷಿತ 4ಜಿ ಫೀಚರ್ ಹ್ಯಾಂಡ್‌ಸೆಟ್ ಫೋನ್‌ ಬಿಡುಗಡೆ ಮಾಡಿದ್ದು, ಇದು ಬಳಸಿದವರಿಗೆ ಪುಕ್ಕಟೆಯಾಗಿಯೇ ಫೋನ್ ದೊರೆತಂತಾಗುತ್ತದೆ.

ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನವನ್ನೇ ಹುಟ್ಟಿಸಲಿರುವ ಈ ಫೋನ್, ರಿಲಾಯನ್ಸ್ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ. 3 ವರ್ಷದ ಅವಧಿಗೆ 1500 ರೂ. ಮರುಪಾವತಿಸಬಹುದಾದ ಠೇವಣಿ ಇಟ್ಟರೆ ಈ ಫೋನ್ ಉಚಿತವಾಗಿ ಸಿಗಲಿದೆ. ಠೇವಣಿಯನ್ನು ಮೂರು ವರ್ಷಗಳ ಬಳಿಕ ಹಿಂಪಡೆಯಬಹುದಾಗಿದೆ.

ಇದು ಕೇವಲ ಭದ್ರತಾ ಕಾರಣಗಳಿಗಾಗಿ ಎಂದು ಆರ್‌ಐಎಲ್ ಅಧ್ಯಕ್ಷ ಮುಖೇಶ್ ಅಂಬಾನಿ ತಿಳಿಸಿದ್ದಾರೆ.

ಈ 4ಜಿ ಫೀಚರ್ ಹ್ಯಾಂಡ್‌ಸೆಟ್‌ಗಳಲ್ಲಿ ಮಾಸಿಕ 153 ರೂಪಾಯಿ ಪ್ಲ್ಯಾನ್ ಆಯ್ದುಕೊಂಡರೆ ಧ್ವನಿ ಕರೆ ಮತ್ತು ಡೇಟಾ ಸಂಪೂರ್ಣ ಉಚಿತ. ಅಲ್ಲದೆ, ಇದೇ ಕೊಡುಗೆಯು ವಾರಕ್ಕೆ 54 ರೂ. ಹಾಗೂ ಎರಡು ದಿನಗಳಿಗೆ 24 ರೂ.ಗಳಲ್ಲಿಯೂ ಲಭ್ಯ ಇವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌