ಆ್ಯಪ್ನಗರ

ರಿಲಯನ್ಸ್ 2 ವರ್ಷಗಳಲ್ಲಿ 20 ಕೋಟಿ 4ಜಿ ಫೋನ್ ಮಾರಾಟ ಗುರಿ

ರಿಲಯನ್ಸ್ ಜಿಯೋ ಮುಖಾಂತರ 4ಜಿ ಜಾಲದಲ್ಲಿ ಹೊಸ ತರಂಗ ಸೃಷ್ಟಿ ಮಾಡಿರುವ ರಿಲಯನ್ಸ್ ಇಂಡಸ್ಟ್ರೀಸ್, ಮುಂದಿನ ಎರಡು ವರ್ಷದೊಳಗೆ 20 ಕೋಟಿಗಳಷ್ಟು 4ಜಿ ಫೀಚರ್ ಫೋನ್ ಮಾರಾಟ ಮಾಡುವ ಗುರಿ ಹೊಂದಿದೆ.

ಟೈಮ್ಸ್ ಆಫ್ ಇಂಡಿಯಾ 19 Jul 2017, 9:00 pm
ಹೊಸದಿಲ್ಲಿ: ರಿಲಯನ್ಸ್ ಜಿಯೋ ಮುಖಾಂತರ 4ಜಿ ಜಾಲದಲ್ಲಿ ಹೊಸ ತರಂಗ ಸೃಷ್ಟಿ ಮಾಡಿರುವ ರಿಲಯನ್ಸ್ ಇಂಡಸ್ಟ್ರೀಸ್, ಮುಂದಿನ ಎರಡು ವರ್ಷದೊಳಗೆ 20 ಕೋಟಿಗಳಷ್ಟು 4ಜಿ ಫೀಚರ್ ಫೋನ್ ಮಾರಾಟ ಮಾಡುವ ಗುರಿ ಹೊಂದಿದೆ.
Vijaya Karnataka Web ril plans to sell 20 crore 4g feature phones in two years
ರಿಲಯನ್ಸ್ 2 ವರ್ಷಗಳಲ್ಲಿ 20 ಕೋಟಿ 4ಜಿ ಫೋನ್ ಮಾರಾಟ ಗುರಿ


ಪ್ರಮುಖವಾಗಿಯೂ 2ಜಿ ಮೊಬೈಲ್ ಬಳಕೆದಾರರನ್ನು ಗುರಿ ಮಾಡಲಿರುವ ಸಂಸ್ಥೆಯು 1,000 ರೂ.ಗಳಿಂದ 1,500 ರೂ.ಗಳ ಬೆಲೆ ಪರಿಧಿಯಲ್ಲಿ 4ಜಿ ಫೋನ್ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಆಗಸ್ಟ್ ದ್ವಿತಿಯಾರ್ಧದಲ್ಲಿ ನೂತನ 4ಜಿ ಫೀಚರ್ ಫೋನ್ ಬಿಡುಗಡೆ ಮಾಡುವ ಯೋಜನೆ ಹೊಂದಲಾಗಿದ್ದು, ನೂತನ ಹ್ಯಾಂಡ್‌ಸೆಟ್ ರಿಲಯನ್ಸ್ ರಿಟೈಲ್ ಅಥವಾ ಜಿಯೋ ಮುಖಾಂತರ ಮಾರಾಟವಾಗಲಿದೆಯೇ ಎಂಬುದು ತಿಳಿದು ಬಂದಿಲ್ಲ.

ನೂತನ ರಿಲಯನ್ಸ್ 4ಜಿ ಫೀಟರ್ ಫೋನ್, ಜಿಯೋ ಟಿವಿ, ಜಿಯೋ ಮೊಬೈಲ್ ಇತ್ಯಾದಿ ಫೀಚರ್‌ಗಳನ್ನು ಹೊಂದಿರಲಿದೆ. ಹಾಗಿದ್ದರೂ ಸ್ಮಾರ್ಟ್‌ಫೋನ್‌ಗಳಂತೆ ಟಚ್ ಸ್ಕ್ರೀನ್ ವ್ಯವಸ್ಥೆಯಿರುವುದಿಲ್ಲ.

ವೈ-ಫೈ ಕನೆಕ್ಟಿವಿಟಿ, ಬ್ರೌಸಿಂಗ್ ಮತ್ತು ಜಿಯೋ ಟಿವಿ ವೀಕ್ಷಿಸಲು ಟೆಲಿವಿಷನ್‌ ಸೆಟ್ಸ್‌ನೊಂದಿಗೆ ಹ್ಯಾಂಡ್‌ಸೆಟ್ ಅನ್ನು ಸಂಪರ್ಕಿಸುವ ಕೇಬಲ್ ವ್ಯವಸ್ಥೆಯೊಂದಿಗೆ ಬರುತ್ತದೆ. ಇವೆಲ್ಲದಕ್ಕಿಂತ ಮಿಗಿಲಾಗಿ ಜಿಯೋ ವಾಯ್ಸ್ ಕಾಲ್ಸ್ ಉಚಿತವಾಗಿ ಲಭ್ಯವಾಗಲಿದೆ.

ಭಾರತದಲ್ಲಿ ಹ್ಯಾಂಡ್‌ಸೆಟ್ ನಿರ್ಮಾಣಕ್ಕೆ ಸಂಬಂಧ ಫಾಕ್ಸ್‌ಕಾನ್ (Foxconn) ಮತ್ತು ಇಂಟೆಕ್ಸ್ (Intex) ಜೊತೆಗೂ ರಿಲಯನ್ಸ್ ಮಾತುಕತೆಯನ್ನು ಆರಂಭಿಸಿದೆ. ಜಿಯೋ 4ಜಿ ಫೀಚರ್ ಫೋನ್‌ಗಳಿಗೆ ಕ್ವಾಲ್ಕಂ ಚಿಪ್‌ಸೆಟ್‌ಗಳನ್ನು ಬಳಕೆ ಮಾಡಲಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌