ಆ್ಯಪ್ನಗರ

ಬೀಯಿಂಗ್ ಸ್ಮಾರ್ಟ್; ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಸಲ್ಮಾನ್ ಎಂಟ್ರಿ

ಬಾಲಿವುಡ್‌ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಸಲ್ಮಾನ್ ಖಾನ್, ಅತಿ ಶೀಘ್ರದಲ್ಲೇ ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆಯಿಡಲಿದ್ದಾರೆ. ಸಲ್ಮಾನ್ ಖಾನ್ ಆರಂಭಿಸಲಿರುವ ನೂತನ ಮೊಬೈಲ್ ಸಂಸ್ಥೆಯು 'ಬೀಯಿಂಗ್ ಸ್ಮಾರ್ಟ್' ಎಂಬ ಬ್ರಾಂಡ್‌ನಿಂದ ಅರಿಯಲ್ಪಡಲಿದೆ.

ಟೈಮ್ಸ್ ಆಫ್ ಇಂಡಿಯಾ 9 Mar 2017, 2:42 pm
ಕೋಲ್ಕತ್ತಾ: ಬಾಲಿವುಡ್‌ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಸಲ್ಮಾನ್ ಖಾನ್, ಅತಿ ಶೀಘ್ರದಲ್ಲೇ ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಲಗ್ಗೆಯಿಡಲಿದ್ದಾರೆ. ಸಲ್ಮಾನ್ ಖಾನ್ ಆರಂಭಿಸಲಿರುವ ನೂತನ ಮೊಬೈಲ್ ಸಂಸ್ಥೆಯು 'ಬೀಯಿಂಗ್ ಸ್ಮಾರ್ಟ್' ಎಂಬ ಬ್ರಾಂಡ್‌ನಿಂದ ಅರಿಯಲ್ಪಡಲಿದೆ.
Vijaya Karnataka Web salman khan ventures into smartphones business with beingsmart selects plant models
ಬೀಯಿಂಗ್ ಸ್ಮಾರ್ಟ್; ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಸಲ್ಮಾನ್ ಎಂಟ್ರಿ


ಈ ನಿಟ್ಟಿನಲ್ಲಿ ಪರವಾನಗಿ ಅರ್ಜಿಯನ್ನು ಸಲ್ಲಿಸಲಾಗಿದೆ. ಪ್ರಮುಖವಾಗಿಯೂ ದೇಶದ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ವಿಭಾಗವನ್ನು ಬೀಯಿಂಗ್ ಸ್ಮಾರ್ಟ್ ಮೊಬೈಲ್ ಫೋನ್ ಗುರಿ ಮಾಡಲಿದೆ.

20,000 ರೂ. ಬಜೆಟ್‌ನೊಳಗೆ ಅತ್ಯುತ್ತಮ ಆಂಡ್ರಾಯ್ಡ್ ಫೋನ್‌ಗಳನ್ನು ನೀಡುವುದು ಸಲ್ಮಾನ್ ಗುರಿಯಾಗಿದೆ. ಪ್ರಾರಂಭದಲ್ಲಿ ಇದಕ್ಕಾಗಿ ಚೀನಾ ಘಟಕದಲ್ಲಿ ಫೋನ್ ನಿರ್ಮಿಸಲಿದೆ.

ಭಾರತ ಮಾರುಕಟ್ಟೆಯಲ್ಲಿ ಪ್ರಮುಖವಾಗಿಯೂ ಚೀನಾ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಾದ ಓಪ್ಪೊ, ವಿವೊ ಹಾಗೂ ಕ್ಸಿಯೋಮಿ ಮಾದರಿಗಳಿಗೆ ಬೀಯಿಂಗ್ ಸ್ಮಾರ್ಟ್‌ಫೋನ್‌ಗಳು ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ಬೀಯಿಂಗ್ ಸ್ಮಾರ್ಟ್ ಸ್ಮಾರ್ಟ್‌ಫೋನ್‌ಗಳು ಆರಂಭದಲ್ಲಿ ಆನ್ಲೈನ್ ಮುಖಾಂತರ ಮಾರಾಟವಾಗಲಿದ್ದು, ಬಳಿಕ ಚಿಲ್ಲರೆ ಮಾರುಕಟ್ಟೆಗೂ ಎಂಟ್ರಿ ಕೊಡಲಿದೆ. ಅಲ್ಲದೆ ಬೀಯಿಂಗ್ ಹ್ಯೂಮನ್ ಸ್ಟೋರ್‌ಗಳಲ್ಲೂ ಲಭ್ಯವಾಗಲಿದೆ.

ನಿಮ್ಮ ಮಾಹಿತಿಗಾಗಿ, ಬೀಯಿಂಗ್ ಹ್ಯೂಮನ್ ಫೌಂಡೇಷನ್ ಮೂಲಕ ಸಾಮಾಜಿಕ ಸೇವೆಯನ್ನು ಆರಂಭಿಸಿರುವ ಸಲ್ಮಾನ್, ಬೀಯಿಂಗ್ ಹ್ಯೂಮನ್ ಬಟ್ಟೆ ಬ್ರಾಂಡ್ ಸಹ ಹೊಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌