ಆ್ಯಪ್ನಗರ

ಟೆಕ್‌ ಟಾನಿಕ್‌: FB ವೀಡಿಯೊ ಆಟೊ ಪ್ಲೇ

ನಿಮ್ಮ ಮೊಬೈಲ್‌ ಫೋನ್‌ನಲ್ಲಿ ಫೇಸ್‌ಬುಕ್‌ ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದೀರಿ. ಬ್ರೌಸ್‌ ಮಾಡುತ್ತಾ ಹೋದಂತೆ ಹೆಚ್ಚು ಹೆಚ್ಚು ವೀಡಿಯೋಗಳೇ ಕಾಣಿಸಿಕೊಳ್ಳುತ್ತವೆ. ಅಷ್ಟೇ ಅಲ್ಲ, ಅವುಗಳು ಸ್ವಯಂಚಾಲಿತವಾಗಿ ಪ್ಲೇ ಕೂಡ ಆಗಿಬಿಡುತ್ತವೆ.

Vijaya Karnataka Web 16 Aug 2017, 4:09 pm

ನಿಮ್ಮ ಮೊಬೈಲ್‌ ಫೋನ್‌ನಲ್ಲಿ ಫೇಸ್‌ಬುಕ್‌ ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದೀರಿ. ಬ್ರೌಸ್‌ ಮಾಡುತ್ತಾ ಹೋದಂತೆ ಹೆಚ್ಚು ಹೆಚ್ಚು ವೀಡಿಯೋಗಳೇ ಕಾಣಿಸಿಕೊಳ್ಳುತ್ತವೆ. ಅಷ್ಟೇ ಅಲ್ಲ, ಅವುಗಳು ಸ್ವಯಂಚಾಲಿತವಾಗಿ ಪ್ಲೇ ಕೂಡ ಆಗಿಬಿಡುತ್ತವೆ. ಇದಕ್ಕೆ ಹೆಚ್ಚಿನ ಡೇಟಾ (ನೆಟ್‌ ಪ್ಯಾಕ್‌) ಬೇಕಾಗುತ್ತದೆ, ಬ್ಯಾಟರಿಯೂ ಬೇಗನೇ ಖಾಲಿಯಾಗುತ್ತದೆ. ಇದನ್ನು ತಡೆಯಲು, ಫೇಸ್‌ಬುಕ್‌ ಆ್ಯಪ್‌ ತೆರೆದಾಗ ಮೂರು ಗೆರೆಗಳುಳ್ಳ ಸೆಟ್ಟಿಂಗ್ಸ್‌ ಬಟನ್‌ ಕ್ಲಿಕ್‌ ಮಾಡಿ. ಬಳಿಕ ಕೆಳಗೆ ಬ್ರೌಸ್‌ ಮಾಡುತ್ತಾ ಹೋಗಿ. ಆ್ಯಪ್‌ ಸೆಟ್ಟಿಂಗ್ಸ್ ಎಂಬ ಆಯ್ಕೆ ಕಾಣಿಸುತ್ತದೆ. ಅಲ್ಲಿ ಒತ್ತಿದಾಗ, ಒಂದಿಷ್ಟು ಕೆಳಗೆ ಆಟೋ-ಪ್ಲೇ ಎಂಬ ಬಟನ್‌ ಕಾಣಿಸುತ್ತದೆ. ಒತ್ತಿ, Nnever autoplay videos ಆಯ್ಕೆ ಮಾಡಿಕೊಳ್ಳಿ. ಇನ್ನು ಫೇಸ್‌ಬುಕ್‌ ಬ್ರೌಸ್‌ ಮಾಡಿದರೆ, ವೀಡಿಯೋಗಳೂ ಕಡಿಮೆ ಕಾಣಿಸುತ್ತವೆ ಮತ್ತು ಸ್ವಯಂಚಾಲಿತವಾಗಿ ಪ್ಲೇ ಕೂಡ ಆಗುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌