ಆ್ಯಪ್ನಗರ

ವೀಡಿಯೋ ಆನ್‌ಲೈನ್‌ ಕನ್ವರ್ಟರ್‌

ವೀಡಿಯೋಗಳಿಗೆ ಹೆಚ್ಚು ಸ್ಪೇಸ್‌ (ಮೆಮೊರಿ) ಬೇಕಾಗಿರುವುದರಿಂದ, ಅದರಲ್ಲಿರುವ ಧ್ವನಿ (ಹಾಡು ಅಥವಾ ಭಾಷಣ) ಮಾತ್ರ ಬಳಸಿಕೊಂಡರೆ, ಕಡಿಮೆ ಮೆಮೊರಿ ಸಾಕಾಗುತ್ತದೆ

Vijaya Karnataka Web 8 May 2017, 8:48 am

ಆನ್‌ಲೈನ್‌ನಲ್ಲಿ, ವಿಶೇಷವಾಗಿ ಯೂಟ್ಯೂಬ್‌ನಲ್ಲಿ ದೊರೆಯುವ ವೀಡಿಯೋ ಅಥವಾ ಆಡಿಯೋ ಫೈಲುಗಳನ್ನು ಮೊಬೈಲ್‌ ಫೋನ್‌ಗಳಲ್ಲಿ ಇಂಟರ್ನೆಟ್‌ ಇಲ್ಲದೆಯೇ ಆನಂದಿಸಬೇಕಿದ್ದರೆ ಅವುಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕಾಗುತ್ತದೆ. ವೀಡಿಯೋಗಳಿಗೆ ಹೆಚ್ಚು ಸ್ಪೇಸ್‌ (ಮೆಮೊರಿ) ಬೇಕಾಗಿರುವುದರಿಂದ, ಅದರಲ್ಲಿರುವ ಧ್ವನಿ (ಹಾಡು ಅಥವಾ ಭಾಷಣ) ಮಾತ್ರ ಬಳಸಿಕೊಂಡರೆ, ಕಡಿಮೆ ಮೆಮೊರಿ ಸಾಕಾಗುತ್ತದೆ ಮತ್ತು ಪ್ರಯಾಣದಲ್ಲಿರುವಾಗಲೂ ಕಿವಿಗೆ ಇಯರ್‌ಫೋನ್‌ ತಗುಲಿಸಿಕೊಂಡು ಆಲಿಸಬಹುದು.

Vijaya Karnataka Web tech tonic video online converter
ವೀಡಿಯೋ ಆನ್‌ಲೈನ್‌ ಕನ್ವರ್ಟರ್‌


ಇದನ್ನು ಸಾಧ್ಯವಾಗಿಸಲು ಅಂತರ್ಜಾಲದಲ್ಲಿ ಸಾಕಷ್ಟು ತಾಣಗಳಿವೆ. ಇಂಥ ತಾಣಗಳಲ್ಲಿ ನಾನು ಬಳಸಿ ನೋಡಿದ್ದು ​ onlinevideoconverter.com ತಾಣ. ಇಲ್ಲಿ ಸಂಬಂಧಿಸಿದ ವೀಡಿಯೋದ ಯುಆರ್‌ಎಲ್‌ ದಾಖಲಿಸಿದರೆ ಅಥವಾ ನಮ್ಮಲ್ಲಿರುವ ವೀಡಿಯೋ ಅಪ್‌ಲೋಡ್‌ ಮಾಡಿದರೆ, ನಮಗೆ ಬೇಕಾದ ಫಾಮ್ರ್ಯಾಟ್‌ನಲ್ಲಿ ಅವುಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಅವಕಾಶವಿದೆ. ಕೆಲವು ಸ್ಮಾರ್ಟ್‌ಫೋನುಗಳಲ್ಲಿ ಕೆಲವೊಂದು ಮಾದರಿಯ ವೀಡಿಯೋಗಳನ್ನು ಪ್ಲೇ ಮಾಡುವುದಿಲ್ಲ. ಹಾಗಿರುವಾಗ ಅಂಥವುಗಳನ್ನು ಸಪೋರ್ಟ್‌ ಮಾಡಬಲ್ಲ ಫಾಮ್ರ್ಯಾಟ್‌ಗೆ ಕನ್ವರ್ಟ್‌ ಮಾಡಲು ಕೂಡ ಈ ತಾಣವನ್ನು ಬಳಸಬಹುದು. ಟ್ರೈ ಮಾಡಿ ನೋಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌