ಆ್ಯಪ್ನಗರ

0 ಯಿಂದ 5 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್​ ಮಾಡಿಸುವುದು ಹೇಗೆ?

ನಿಮ್ಮ ಮಗುವಿನ ಆಧಾರ್ ಕಾರ್ಡ್(Aadhaar)ಮಾಡಲು ಬಯಸುವುದಾದರೆ, ಅದಕ್ಕಾಗಿ ನೀವು ಕೆಲದಾಖಲೆಗಳನ್ನು ಹೊಂದಿರಬೇಕು. ಮಕ್ಕಳ ಆಧಾರ್ ಕಾರ್ಡ್ ಮಾಡಿಸುವ ಪ್ರಕ್ರಿಯೆಯಲ್ಲಿ ಎರಡು ವಿಭಾಗಗಳನ್ನು ಮಾಡಲಾಗಿದೆ.

Vijaya Karnataka Web 3 May 2021, 11:31 am
ಭಾರತದ ಪ್ರತಿಯೊಬ್ಬ ಪ್ರಜೆಯು ಆಧಾರ್ ಕಾರ್ಡ್‌ ಮಾಡಿಸುವುದು ಕಡ್ಡಾಯವಾಗಿದೆ. ಅದೇ ರೀತಿ ಮಕ್ಕಳಿಗೂ ಸಹ ಆಧಾರ್ ಮಾಡಿಸುವುದು ಕಡ್ಡಾಯ ಎಂದು ಸರ್ಕಾರ ಹೇಳಿದೆ. ಆದರೆ 5 ವರ್ಷದ ಒಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸುವ ಸಾಧ್ಯತೆಗಳು ಕಡಿಮೆ. ಈ ನಿಟ್ಟಿನಲ್ಲಿ ಚಿಕ್ಕ ಮಕ್ಕಳಿಗಾಗಿಯೇ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಬಯೋಮೆಟ್ರಿಕ್ ರಹಿತ ನೀಲಿ ಬಣ್ಣದ ಬಾಲ ಆಧಾರ್ ಕಾರ್ಡ್ ವ್ಯವಸ್ಥೆಯನ್ನು ಜಾರಿ ಮಾಡಿದೆ.
Vijaya Karnataka Web 0 ಯಿಂದ 5 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್​ ಮಾಡಿಸುವುದು ಹೇಗೆ?


ಆದರೆ ಯುಐಡಿಎಐ ಈಗ ಹೊಸ ನಿಯಮ ತಿಳಿಸಿದ್ದು, ಮಗು 5ನೇ ವಯಸ್ಸಿನಲ್ಲಿದ್ದಾಗ ಬಯೋಮೆಟ್ರಿಕ್ ಕಡ್ಡಾಯ ಎಂದಿದೆ. ನೀಲಿ ಬಣ್ಣದ ಬಾಲ ಆಧಾರ್ ಕಾರ್ಡ್‌ಗೆ ಮಗುವಿನ ಕಣ್ಣುಗಳು, ಬೆರಳ ಗುರುತಿನ ಬಯೋಮೆಟ್ರಿಕ್ ಅಗತ್ಯ ಇರುವುದಿಲ್ಲ. ಆದರೆ ಮಗು 5 ವರ್ಷ ಆದಾಗ ಒಮ್ಮೆ ಬಯೋಮೆಟ್ರಕ್ ಮಾಡಿಸುವುದು ಕಡ್ಡಾಯ. ಹಾಗೂ ಮಗುವಿಗೆ 15 ವರ್ಷ ಆದಾಗ ಮತ್ತೊಮ್ಮೆ ಬಯೋಮೆಟ್ರಿಕ್ ಮಾಡಿಸಬೇಕು ಎಂದು ಯುಐಡಿಎಐ ಹೇಳಿದೆ.

ಬೊಂಬಾಟ್ ಫೀಚರ್ ನೀಡಲು ಮುಂದಾದ ವಾಟ್ಸ್ಆ್ಯಪ್: ಹೊಸ ಅಪ್ಡೇಟ್ ಏನು?

ನಿಮ್ಮ ಮಗುವಿನ ಆಧಾರ್ ಕಾರ್ಡ್(Aadhaar)ಮಾಡಲು ಬಯಸುವುದಾದರೆ, ಅದಕ್ಕಾಗಿ ನೀವು ಕೆಲದಾಖಲೆಗಳನ್ನು ಹೊಂದಿರಬೇಕು. ಮಕ್ಕಳ ಆಧಾರ್ ಕಾರ್ಡ್ ಮಾಡಿಸುವ ಪ್ರಕ್ರಿಯೆಯಲ್ಲಿ ಎರಡು ವಿಭಾಗಗಳನ್ನು ಮಾಡಲಾಗಿದೆ. ಮೊದಲ ವಿಭಾಗದಲ್ಲಿ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಇರಿಸಲಾಗಿದ್ದು, ಎರಡನೇ ವಿಭಾಗದಲ್ಲಿ 5 ರಿಂದ 15 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್‌ಗಳನ್ನಾಗಿ ಮಾಡಲಾಗುತ್ತದೆ.

5 ವರ್ಷದ ಒಳಗಿನ ಮಕ್ಕಳ ಆಧಾರ್ ಕಾರ್ಡ್ ಮಾಡಿಸಲು ಬೇಕಾದ ದಾಖಲೆಗಳು :

  • ಮಗುವಿನ ಜನನ ಪ್ರಮಾಣಪತ್ರ (Birth Certificate), ಅಥವಾ ಜನನದ ವೇಳೆ ಆಸ್ಪತ್ರೆಯಿಂದ (Hospital) ನೀಡಿದ ಡಿಸ್ಚಾರ್ಜ್ ಕಾರ್ಡ್ ಅಥವಾ ಆಸ್ಪತ್ರೆಯಿಂದ ನೀಡಲ್ಪಟ್ಟ ಸ್ಲಿಪ್
  • ಪೋಷಕರಲ್ಲಿ ಒಬ್ಬರ ಆಧಾರ್ ಕಾರ್ಡ್
  • ಮಗುವಿನ ಆಧಾರ್ ಮಾಡಿಸುವ ವೇಳೆಎಲ್ಲಾ ದಾಖಲೆಗಳಮೂಲ ಪ್ರತಿಯನ್ನು ನಿಮ್ಮೊಂದಿಗೆ ತೆಗೆದುಕೊಳ್ಳಿ.
ಬಳಕೆದಾರರಿಗಾಗಿ ಗೂಗಲ್ ಪೇ ಯಿಂದ ವಿನೂತನ ಫೀಚರ್: ಏನದು ಗೊತ್ತೇ?

5 ರಿಂದ 15 ವರ್ಷದ ಮಕ್ಕಳ ಆಧಾರ್ಗೆ ಬೇಕಾಗುವ ದಾಖಲೆಗಳು:


  • ಜನನ ಪ್ರಮಾಣಪತ್ರ
  • ಶಾಲೆಯ ಗುರುತಿನ ಚೀಟಿ(School ID Card)
  • ಶಾಲೆಯ ಗುರುತಿನ ಚೀಟಿ ಜೊತೆಗೆಶಾಶ್ವತ ವಿಳಾಸ ಪ್ರಮಾಣಪತ್ರ

ಆನ್‌ಲೈನ್‌ನಲ್ಲಿ ಬಾಲ ಆಧಾರ್ ಕಾರ್ಡ್ ರಿಜಿಸ್ಟರ್ ಮಾಡುವುದು ಹೇಗೆ?:

ನೀಲಿ ಬಣ್ಣದ ಬಾಲ ಆಧಾರ್ ಕಾರ್ಡ್ ಮಾಡಿಸಲು ಆನ್‌ಲೈನ್‌ ನಲ್ಲಿ ರಿಜಿಸ್ಟರ್ ಮಾಡಿಸುವುದಕ್ಕೆ ಅವಕಾಶ ನೀಡಲಾಗಿದೆ. ಆಧಾರ್‌ ಸೆಂಟರ್‌ಗೆ ಭೇಟಿ ಮಾಡುವ ದಿನವನ್ನು ಆನ್‌ಲೈನ್‌ನಲ್ಲಿಯೇ ನಿಗದಿ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ ಪಾಲಕರು ಈ ಮುಂದಿನ ಹಂತಗಳನ್ನು ಅನುಸರಿಸಿರಿ.

22 ನಿಮಿಷದಲ್ಲಿ ಫುಲ್ ಚಾರ್ಜ್ ಆಗೋ ಮೊಬೈಲ್ ಬೇಕಿದ್ದರೆ ಇಂದೇ ಬುಕ್ ಮಾಡಿ

  • ಅಧಿಕೃತದ UIDAI ವೆಬ್‌ಸೈಟ್‌ಗೆ ತೆರೆಯಿರಿ.
  • ವೆಬ್‌ಸೈಟ್‌ಗೆ ಲಾಗ್‌ ಇನ್‌ ಆಗಿ, ಆಧಾರ್ ಕಾರ್ಡ್‌ ರಿಜಿಸ್ಟೆಷನ್ ಲಿಂಕ್ ಒತ್ತಿರಿ.
  • ನಂತರ ಪಾಲಕರು ಮೊಬೈಲ್ ನಂಬರ್, ಮೇಲ್ ಐಡಿ ನಮೂದಿಸುವುದು.
  • ಆನಂತರ ನಿಮ್ಮ ಜಿಲ್ಲಾ, ರಾಜ್ಯ ಗಳ ಮಾಹಿತಿ ಭರ್ತಿ ಮಾಡುವುದು.
  • ಮುಂದೆ Fix Appointment tab ಅನ್ನು ಸೆಲೆಕ್ಟ್ ಮಾಡಿರಿ. ಮತ್ತು ನಿಮ್ಮ ಹತ್ತಿರದ ಆಧಾರ್ ಸೆಂಟರ್ ಸೆಲೆಕ್ಟ್ ಮಾಡಿ.
  • ನಿಗದಿತ ದಿನಾಂಕದಂದು ಅಗತ್ಯ ದಾಖಲೆಗಳೊಂದಿಗೆ ಆಧಾರ್ ಸೆಂಟರ್‌ಗೆ ಭೇಟಿ ನೀಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌