ಆ್ಯಪ್ನಗರ

ಜಿಯೋ ಗ್ರಾಹಕರು 20GB ಡೇಟಾವನ್ನು ಸಂಪೂರ್ಣ ಉಚಿತವಾಗಿ ಪಡೆಯಿರಿ!..ಹೇಗೆ ಗೊತ್ತಾ?

ನೀವು ಜಿಯೋದಿಂದ 20GB ಉಚಿತ ಡೇಟಾವನ್ನು ಗೆಲ್ಲಲು ಯಾವುದೇ ರೀಚಾರ್ಜ್ ಯೋಜನೆಯನ್ನು ಖರೀದಿಸಬೇಕಾಗಿಲ್ಲ ಅಥವಾ ಈ ಕೊಡುಗೆಯು ಯಾವುದೇ ಹೆಚ್ಚುವರಿ ಕೊಡುಗೆಯ ಭಾಗವಾಗಿರುವುದಿಲ್ಲ. ಜಿಯೋದ ಈ ಅವಕಾಶವನ್ನು ಬಳಸಿಕೊಳ್ಳಲು, ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಜಿಯೋವಿನ ಅಧಿಕೃತ ಅಪ್ಲಿಕೇಶನ್ 'My Jio' ಅಪ್ಲಿಕೇಶನ್ ಹೊಂದಿರಬೇಕು.

Vijaya Karnataka Web 11 Jul 2022, 10:41 am
ಭಾರತದ ನಂ.1 ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಸೇವೆಯನ್ನು ಪಡೆಯುತ್ತಿರುವ ಅದೃಷ್ಟವಂತ ಗ್ರಾಹಕರು ಉಚಿತವಾಗಿ 20GB ಹೈ-ಸ್ಪೀಡ್ ಡೇಟಾವನ್ನು ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ಜಿಯೋ ತನ್ನ ಗ್ರಾಹಕರಿಗೆ ಕೈಗೆಟುಕುವ ಯೋಜನೆಗಳನ್ನು ನೀಡುವುದರ ಜೊತೆಗೆ, ಇನ್ನೂ ಅನೇಕ ಅದ್ಭುತ ಕೊಡುಗೆಗಳು ಮತ್ತು ಪ್ರಯೋಜನಗಳನ್ನು ಒದಗಿಸಲು ಮುಂದಾಗಿದ್ದು, ಜಿಯೋ ಆರಂಭಿಸಿರುವ ಹೊಸ ಲಕ್ಕಿ ಡ್ರಾ ಯೋಜನೆ ಮೂಲಕ ಆಯ್ದ ಕೆಲವು ಗ್ರಾಹಕರಿಗೆ 20GB ಡೇಟಾವನ್ನು ಗೆಲ್ಲುವ ಅವಕಾಶವನ್ನು ನೀಡಿದೆ. ಹಾಗಾದರೆ, ಜಿಯೋ ಗ್ರಾಹಕರು 20GB ಹೈ-ಸ್ಪೀಡ್ ಡೇಟಾವನ್ನು ಉಚಿತವಾಗಿ ಗೆಲ್ಲಬಹುದಾದ ಈ ಕೊಡುಗೆಯು ಹೇಗಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
Vijaya Karnataka Web ಜಿಯೋ ಗ್ರಾಹಕರು 20GB ಡೇಟಾವನ್ನು ಸಂಪೂರ್ಣ ಉಚಿತವಾಗಿ ಪಡೆಯಿರಿ!..ಹೇಗೆ ಗೊತ್ತಾ?


ನೀವು ಜಿಯೋದಿಂದ 20GB ಉಚಿತ ಡೇಟಾವನ್ನು ಗೆಲ್ಲಲು ಯಾವುದೇ ರೀಚಾರ್ಜ್ ಯೋಜನೆಯನ್ನು ಖರೀದಿಸಬೇಕಾಗಿಲ್ಲ ಅಥವಾ ಈ ಕೊಡುಗೆಯು ಯಾವುದೇ ಹೆಚ್ಚುವರಿ ಕೊಡುಗೆಯ ಭಾಗವಾಗಿರುವುದಿಲ್ಲ. ಜಿಯೋದ ಈ ಅವಕಾಶವನ್ನು ಬಳಸಿಕೊಳ್ಳಲು, ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಜಿಯೋವಿನ ಅಧಿಕೃತ ಅಪ್ಲಿಕೇಶನ್ 'My Jio' ಅಪ್ಲಿಕೇಶನ್ ಹೊಂದಿರಬೇಕು. ಈ My Jio ಅಪ್ಲಿಕೇಷನ್ ಮೂಲಕ ಜಿಯೋ ಲಕ್ಕಿ ಡ್ರಾ ಕೊಡುಗೆಯನ್ನು ಆಯೋಜಿಸಲಾಗಿದ್ದು, ಜುಲೈ 8 ರವರೆಗೆ ನೀವು ಈ ಲಕ್ಕಿ ಡ್ರಾದಲ್ಲಿ ಭಾಗವಹಿಸಬಹುದು. ಈ ಅದೃಷ್ಟದ ಡ್ರಾದಲ್ಲಿ ಐದು ಜನರು 20GB ಡೇಟಾವನ್ನು ಗೆಲ್ಲುವ ಅವಕಾಶವನ್ನು ಪಡೆಯುತ್ತಾರೆ ಎಂದು ಜಿಯೋ ಸಂಸ್ಥೆಯು ತನ್ನ ಈ ಹೊಸ ಕೊಡುಗೆಯ ಅಡಿಯಲ್ಲಿ ಮಾಹಿತಿಯನ್ನು ಒದಗಿಸಿದೆ.

20GB ಡೇಟಾವನ್ನು ಗೆಲ್ಲುವುದು ಹೇಗೆ?
ಮೊದಲೇ ಹೇಳಿದಂತೆ, ಜಿಯೋ ಗ್ರಾಹಕರು ಉಚಿತ 20GB ಡೇಟಾವನ್ನು ಗೆಲ್ಲಲು ತಮ್ಮ ಸ್ಮಾರ್ಟ್‌ಫೋನಿನಲ್ಲಿ My Jio ಅಪ್ಲಿಕೇಶನ್ ಅನ್ನು ಹೊಂದಿರಬೇಕು. ಈಗಾಗಲೇ My Jio ಅಪ್ಲಿಕೇಶನ್ ಅನ್ನು ಹೊಂದಿರುವ ಗ್ರಾಹಕರು ಅಪ್ಲಿಕೇಷನ್ ಅನ್ನು ತೆರೆದರೆ, ಹೋಮ್ ಸ್ಕ್ರೀನ್‌ನಲ್ಲಿಯೇ ಸ್ವಲ್ಪ ಕೆಳಗೆ ಸ್ಕ್ರಾಲ್ ಮಾಡಿದಾಗ, Play and Win (ಜಿಯೋ ಪ್ಲೇ ಮತ್ತು ವಿನ್) ಆಯ್ಕೆಯು ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಮೊದಲ ಆಯ್ಕೆಯು ಉಚಿತವಾಗಿ 20GB ಡೇಟಾವನ್ನು ಹೊಂದಿರುವ ಲಕ್ಕಿ ಡ್ರಾ ಆಫರ್ ಆಗಿದ್ದು, ಈ ಆಯ್ಕೆಯನ್ನು ಕ್ಲಿಕ್ ಮಾಡಿದ ತಕ್ಷಣ, ನೀವು 'ಈಗ ಭಾಗವಹಿಸಿ' ಎಂಬ ಆಯ್ಕೆಯು ಕಾಣಿಸುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಿದ ನಂತರ, ನೀವು ಅಲ್ಲಿ ಪ್ರಕಟಿಸಿರುವ ಸರಳವಾದ ಪ್ರಶ್ನೆಗೆ ಸರಿಯಾಗಿ ಉತ್ತರಿಸಬೇಕಾಗುತ್ತದೆ.
ಏರ್‌ಟೆಲ್‌ನಿಂದ 109 ರೂ. ಮತ್ತು 111 ರೂ.ಗಳ ಹೊಸ ಪ್ರೀಪೇಡ್ ಪ್ಲ್ಯಾನ್ಸ್ ಲಾಂಚ್!
ಹೀಗೆ ಜಿಯೋವಿನ Play and Win (ಜಿಯೋ ಪ್ಲೇ ಮತ್ತು ವಿನ್) ನಲ್ಲಿ ಸರಿಯಾಗಿ ಉತ್ತರಿಸುವ ಅದೃಷ್ಟವಂತ 5 ಜನ ಜಿಯೋ ಗ್ರಾಹಕರು 20GB ಹೈ-ಸ್ಪೀಡ್ ಡೇಟಾವವನ್ನು ತಮ್ಮ ಖಾತೆಯಲ್ಲಿ ಪಡೆಯಲಿದ್ದಾರೆ. ಈ ಲಕ್ಕಿ ಡ್ರಾ ಫಲಿತಾಂಶ ಜುಲೈ 8 ರಂದು ಪ್ರಕಟವಾಗಲಿದೆ ಎಂದು ಜಿಯೋ ತಿಳಿಸಿದೆ. ನೀವು ಕೂಡ 20GB ಡೇಟಾವನ್ನು ಸಂಪೂರ್ಣ ಉಚಿತವಾಗಿ ಗೆಲ್ಲುವ ಅದೃಷ್ಟಶಾಲಿಯಾಗಿರಬಹುದು. ಒಮ್ಮೆ ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌