ಆ್ಯಪ್ನಗರ

Best DSLR camera: 30,000 ರೂ. ಒಳಗಿನ ಬೆಸ್ಟ್ ಕ್ಯಾಮರಾ

ಈಗ ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್ ಇದ್ದರೂ, ವೃತ್ತಿಪರ ಫೋಟೋ ಬೇಕೆಂದು ಬಯಸುವವರು ಡಿಎಸ್‌ಎಲ್‌ಆರ್ ಕ್ಯಾಮರಾ ಬೇಕೆಂದೇ ಕೇಳುತ್ತಾರೆ. ಅವರಿಗಾಗಿ ದೇಶದಲ್ಲಿ ಲಭ್ಯವಿರುವ ಕೆಲವು ಮಾದರಿಗಳನ್ನು ಇಲ್ಲಿ ನೀಡಲಾಗಿದೆ.

Times Now 21 Aug 2019, 4:15 pm
ಸುಂದರ ಕ್ಷಣಗಳನ್ನು ಕ್ಯಾಮರಾದಲ್ಲಿ ಬಂಧಿಸಿಡಬೇಕು, ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳಬೇಕು, ಬಂಧುಮಿತ್ರರಿಗೆ ಕಳುಹಿಸಬೇಕು ಎನ್ನುವುದು ಎಲ್ಲರ ಒತ್ತಾಸೆಯಾಗಿರುತ್ತದೆ.
Vijaya Karnataka Web best cam


ಆದರೆ ಸ್ಮಾರ್ಟ್‌ಫೋನ್ ಇದ್ದರೂ, ಕ್ಯಾಮರಾ ಇದ್ದರೆ ಚೆನ್ನಾಗಿತ್ತು ಎನ್ನುತ್ತಾರೆ. ಅಲ್ಲದೆ ಡಿಎಸ್‌ಎಲ್‌ಆರ್ ಕ್ಯಾಮರಾ ಮೂಲಕ ತೆಗೆದ ಚಿತ್ರಗಳು ಉತ್ತಮವಾಗಿ ಮೂಡಿಬರುವುದೂ ಇದಕ್ಕೆ ಕಾರಣ.

ದೇಶದಲ್ಲಿ ಲಭ್ಯವಿರುವ 30,000 ರೂ. ಬಜೆಟ್ ಒಳಗಿನ ಉತ್ತಮ ಕ್ಯಾಮರಾ ಇಲ್ಲಿದೆ.
ನಿಕಾನ್ D3500
ವೃತ್ತಿಪರರು ಬಯಸುವ ಎಲ್ಲ ಪ್ರಮುಖ ಆಯ್ಕೆಗಳು ಈ ಕ್ಯಾಮರಾದಲ್ಲಿದ್ದು, 23,999 ರೂ.ಗೆ ಲಭ್ಯವಿದೆ. 24.2 ಮೆಗಾಪಿಕ್ಸೆಲ್ ಸೆನ್ಸರ್, 16 GB ಮೆಮೊರಿ ಇದರ ವಿಶೇಷ.

ನಿಕಾನ್ D5300
ಹೊರಾಂಗಣ ಮತ್ತು ಒಳಾಂಗಣ ಫೋಟೋಗ್ರಫಿಗೆ ಈ ಕ್ಯಾಮರಾ ಸೂಕ್ತವಾಗಿದ್ದು, 31,999 ರೂ. ಬೆಲೆ ಹೊಂದಿದೆ. 24.2 ಮೆಗಾಪಿಕ್ಸೆಲ್ ಸೆನ್ಸರ್ ಮತ್ತು 16 GB ಮೆಮೊರಿ ಕಾರ್ಡ್ ಇದರಲ್ಲಿ ಲಭ್ಯ.

ಕೆನಾನ್ ಇಒಎಸ್ 1300D
ಫೋಟೋಗ್ರಫಿ ಪರಿಣತರು ಬಯಸುವ ಕೆನಾನ್ ಕ್ಯಾಮರಾ ಇಒಎಸ್ ಸರಣಿ ಅತ್ಯುತ್ತಮ ಚಿತ್ರಗಳನ್ನು ನೀಡುತ್ತದೆ. 18 ಮೆಗಾಪಿಕ್ಸೆಲ್ ಸೆನ್ಸರ್ ಸಹಿತ ಇರುವ ಈ ಕ್ಯಾಮರಾದ ಬೆಲೆ 28,500 ರೂ. ಆಗಿದೆ.

ಕೆನಾನ್ EOS 3000D
ಕೆನಾನ್‌ನ ಇಒಎಸ್ ಡಿಜಿಟಲ್ ಕ್ಯಾಮರಾ ಸರಣಿಯಲ್ಲಿ ಹೊರಬಂದಿರುವ ಮತ್ತೊಂದು ಆಕರ್ಷಕ ಮಾದರಿಯಾಗಿದ್ದು, 18 ಮೆಗಾಪಿಕ್ಸೆಲ್ ಸೆನ್ಸರ್ ಇದೆ. 25,999 ರೂ. ಬೆಲೆ ಹೊಂದಿದೆ.

ನಿಕಾನ್ D5200ನಿಕಾನ್‌ ನೂತನ ಕ್ಯಾಮರಾ 24.1 ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿದ್ದು, 27,900 ರೂ. ಬೆಲೆ ಹೊಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌