ಆ್ಯಪ್ನಗರ

Best Smartphone: ಸೆಪ್ಟೆಂಬರ್‌ನಲ್ಲಿ ಕೊಳ್ಳಬಹುದಾದ 10,000 ರೂ. ಒಳಗಿನ ಫೋನ್

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರತಿವಾರವೂ ಹೊಸ ಮಾದರಿ ಬಂದಿರುತ್ತದೆ. ಸೆಪ್ಟೆಂಬರ್‌ನಲ್ಲಿ 10 ಸಾವಿರ ಬಜೆಟ್‌ಗೆ ಲಭ್ಯವಿರುವ ಫೋನ್ ಇಲ್ಲಿದೆ.

Times Now 23 Sep 2019, 5:10 pm
ಸ್ಮಾರ್ಟ್‌ಫೋನ್ ಮಾರುಕಟ್ಟೆ ಎನ್ನುವುದು ದಿನವೂ ಹೊಸತನದಿಂದ ಕೂಡಿರುತ್ತದೆ. ಅದರಲ್ಲೂ, ಬೆಲೆ, ಆಫರ್ ಮತ್ತು ತಾಂತ್ರಿಕ ವೈಶಿಷ್ಟ್ಯಗಳು ಪ್ರತಿ ಫೋನ್ ಬಿಡುಗಡೆಯೊಂದಿಗೆ ಬದಲಾಗುತ್ತಿರುತ್ತವೆ.
Vijaya Karnataka Web Phone


ಸೆಪ್ಟೆಂಬರ್ ತಿಂಗಳಿನಲ್ಲಿ ವಿವಿಧ ಫೋನ್‌ಗಳು ಮಾರುಕಟ್ಟೆ ಪ್ರವೇಶಿಸಿದ್ದು, ಅದರಲ್ಲಿ 10,000 ರೂ. ಬಜೆಟ್ ಒಳಗಿನ ಫೋನ್ ಕೊಳ್ಳಲು ನೀವು ಬಯಸುವುದಾದಲ್ಲಿ ನಿಮಗೆ ಹಲವು ಆಯ್ಕೆಗಳನ್ನು ಇಲ್ಲಿ ನೀಡಲಾಗಿದೆ.

ಬೆಲೆ, ಲಭ್ಯತೆ, ತಾಂತ್ರಿಕ ವೈಶಿಷ್ಟ್ಯಗಳನ್ನು ಆಧರಿಸಿ ಇಲ್ಲಿ ವಿವಿಧ ಸ್ಮಾರ್ಟ್‌ಫೋನ್‌ಗಳ ಪಟ್ಟಿ ನೀಡಲಾಗಿದೆ.

ರಿಯಲ್‌ಮಿ 5
ರಿಯಲ್‌ಮಿ 5 ಫೋನ್ ಇತ್ತೀಚೆಗೆ ಬಿಡುಗಡೆಯಾಗಿದ್ದು, 6.5 ಇಂಚಿನ ಡಿಸ್‌ಪ್ಲೇ, ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 665 ಪ್ರೊಸೆಸರ್, 4 GB ಮತ್ತು 64 GB/128 GB ಆಯ್ಕೆಯಲ್ಲಿ ಲಭ್ಯ. 5000mAh ಬ್ಯಾಟರಿ ಇದ್ದು, 12+8+2+2 ಮೆಗಾಪಿಕ್ಸೆಲ್‌ನ ನಾಲ್ಕು ಕ್ಯಾಮರಾ ವ್ಯವಸ್ಥೆ, 13 ಮೆಗಾಪಿಕ್ಸೆಲ್ ಸೆಲ್ಫಿ ಕೂಡ ಇದರಲ್ಲಿದೆ.
ಬೆಲೆ 9,999 ರೂ.

ರಿಯಲ್‌ಮಿ 5


ರಿಯಲ್‌ಮಿ 3i
ರಿಯಲ್‌ಮಿಯ ಮತ್ತೊಂದು ಫೋನ್ 3i ಮಾದರಿ, 6.22 ಇಂಚಿನ ಡಿಸ್‌ಪ್ಲೇ, ಹಿಲಿಯೋ AI ಪ್ರೊಸೆಸರ್, 3 GB/32GB ಮತ್ತು 4GB/64GB ಮಾದರಿಯಲ್ಲಿ ಲಭ್ಯ.
13+2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ, 13 ಮೆಗಾಪಿಕ್ಸೆಲ್ ಸೆಲ್ಫಿ ಇದರಲ್ಲಿದೆ.
ಬೆಲೆ 7,999 ರೂ.

ರಿಯಲ್‌ಮಿ 3i


ರೆಡ್ಮಿ 7S
ಶವೋಮಿ ರೆಡ್ಮಿ ಫೋನ್ ಸರಣಿಯಲ್ಲಿನ 7S, 6.3 ಇಂಚಿನ ಡಿಸ್‌ಪ್ಲೇ, ಸ್ನ್ಯಾಪ್‌ಡ್ರ್ಯಾಗನ್ 660 ಪ್ರೊಸೆಸರ್ ಹೊಂದಿದೆ.
4 GB RAM ಮತ್ತು 64 GB ಸ್ಟೋರೇಜ್ ಇದ್ದು, ಹಿಂಬದಿಯಲ್ಲಿ 48+5 ಮೆಗಾಪಿಕ್ಸೆಲ್ ಕ್ಯಾಮರಾ, 13 ಮೆಗಾಪಿಕ್ಸೆಲ್ ಸೆಲ್ಫಿ ಇರಲಿದೆ.
ಬೆಲೆ 9,999 ರೂ.

ರೆಡ್ಮಿ 7S


ಸ್ಯಾಮ್‌ಸಂಗ್ ಗ್ಯಾಲಕ್ಸಿ M20
ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಎಂ ಸರಣಿಯಲ್ಲಿ ಲಭ್ಯವಿರುವ M20, ಒಕ್ಟಾ ಕೋರ್ ಎಕ್ಸಿನೋಸ್ ಪ್ರೊಸೆಸರ್ ಹೊಂದಿದೆ. ಜತೆಗೆ 3 GB RAM /32GB ಹಾಗೂ 4GB/64GB ಮಾದರಿಯಲ್ಲಿ ಲಭ್ಯವಿದೆ.
13+5 ಮೆಗಾಪಿಕ್ಸೆಲ್ ಕ್ಯಾಮರಾ ಇದರ ವಿಶೇಷ.
ಬೆಲೆ 9,990 ರೂ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M20


ಏಸಸ್ ಝೆನ್‌ಫೋನ್ ಮ್ಯಾಕ್ಸ್ ಪ್ರೊ M2
ಏಸಸ್‌ನ ಝೆನ್‌ಫೋನ್ ಸರಣಿಯಲ್ಲಿ ಬಿಡುಗಡೆಯಾಗಿರುವ ಮ್ಯಾಕ್ಸ್ ಪ್ರೊ M2, 6.26 ಇಂಚಿನ ಡಿಸ್‌ಪ್ಲೇ ಹೊಂದಿದೆ. ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 660 ಪ್ರೊಸೆಸರ್, 5000mAh ಬ್ಯಾಟರಿ ಇದರಲ್ಲಿದೆ.
12+5 ಮೆಗಾಪಿಕ್ಸೆಲ್ ಕ್ಯಾಮರಾ, 13 ಮೆಗಾಪಿಕ್ಸೆಲ್ ಸೆಲ್ಫಿ ಏಸಸ್ ಫೋನ್‌ನ ವಿಶೇಷತೆಯಾಗಿದೆ.
ಬೆಲೆ: 9,999 ರೂ.

ಏಸಸ್ ಝೆನ್‌ಫೋನ್ ಮ್ಯಾಕ್ಸ್ ಪ್ರೊ M2


Nokia Price Cut: ನೋಕಿಯಾ ಫೋನ್ ಬೆಲೆ ಇಳಿಕೆ

Best DSLR camera: 30,000 ರೂ. ಒಳಗಿನ ಬೆಸ್ಟ್ ಕ್ಯಾಮರಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌