ಆ್ಯಪ್ನಗರ

Gmail Password: ಬದಲಾಯಿಸುವುದು ಹೇಗೆ? ಇಲ್ಲಿದೆ ಓದಿ

ಗೂಗಲ್‌ನ ಜನಪ್ರಿಯ ಸೇವೆಗಳಲ್ಲಿ ಒಂದಾದ ಜಿಮೇಲ್‌ನಲ್ಲಿ ಖಾತೆ ತೆರೆದರೆ ಅದು ಗೂಗಲ್‌ನ ವಿವಿಧ ಸೇವೆಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ. ಜಿಮೇಲ್‌ನ ಪಾಸ್‌ವರ್ಡ್ ಬದಲಾಯಿಸುವುದು ಹೇಗೆನ್ನುವುದನ್ನು ಇಲ್ಲಿ ತಿಳಿಸಲಾಗಿದೆ.

Times Now 9 Sep 2019, 5:57 pm
ಆನ್‌ಲೈನ್ ವಹಿವಾಟುಗಳಿಗೆ ಇ ಮೇಲ್ ಬಳಕೆ ಅತಿ ಅಗತ್ಯವಾಗಿದೆ. ಆನ್‌ಲೈನ್‌ನ ಯಾವುದೇ ಪ್ರಮುಖ ಸೇವೆ ಬಳಸುವುದಿದ್ದರೂ, ಅದಕ್ಕೆ ಇ ಮೇಲ್ ಮೂಲಕ ಲಾಗಿನ್ ಆಗುವುದು, ಖಾತೆ ಹೊಂದುವುದಕ್ಕೆ ಇ ಮೇಲ್ ಐಡಿ ನೀಡಲೇ ಬೇಕಾಗುತ್ತದೆ.
Vijaya Karnataka Web Google


ಜಿಮೇಲ್ ಖಾತೆಗೆ ಲಾಗಿನ್ ಆಗಲು, ಪಾಸ್‌ವರ್ಡ್ ಅಗತ್ಯ. ಅದರ ಜತೆಗೆ ಗೂಗಲ್‌ನ ಇತರ ಸೇವೆಗಳಾದ ಜಿಮೇಲ್, ಯೂಟ್ಯೂಬ್, ಗೂಗಲ್ ಡ್ರೈವ್ ಮತ್ತು ಗೂಗಲ್ ಫೋಟೋಸ್, ಮ್ಯಾಪ್ ಹೀಗೆ ವಿವಿಧ ಸೇವೆಗಳಿಗೆ ಜಿಮೇಲ್ ಮತ್ತು ಪಾಸ್‌ವರ್ಡ್ ಬೇಕಾಗುತ್ತದೆ.

ಅಕಸ್ಮಾತ್ ಜಿಮೇಲ್ ಪಾಸ್‌ವರ್ಡ್ ಮರೆತುಹೋದರೆ ಏನು ಮಾಡಬೇಕು?
ಜಿಮೇಲ್‌ನ ಪಾಸ್‌ವರ್ಡ್ ರಿಕವರಿ ಆಯ್ಕೆ ಮಾಡಿಕೊಳ್ಳಿ
ಅಲ್ಲಿ ಕೇಳಲಾಗುವ ಖಾತೆ ಭದ್ರತೆ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿ. ನಿಮ್ಮ ಖಾತೆ ಹೌದೇ ಅಲ್ಲವೇ ಎಂದು ದೃಢೀಕರಿಸಬೇಕಾಗುತ್ತದೆ. ಬಳಿಕ ಹೊಸ ಪಾಸ್‌ವರ್ಡ್ ರಚಿಸಿ, ಲಾಗಿನ್ ಆಗಬೇಕು.

Gmail ನಲ್ಲಿ ಏನೆಲ್ಲ ಮಾಡಬಹುದು...

ಜಿಮೇಲ್ ಪಾಸ್‌ವರ್ಡ್ ಬದಲಾಯಿಸುವುದು ಹೇಗೆ ಎಂದು ಇಲ್ಲಿ ವಿವರಿಸಲಾಗಿದೆ.
ಕಂಪ್ಯೂಟರ್‌ನಲ್ಲಿ
ಗೂಗಲ್ ಖಾತೆಗೆ ಹೋಗಿ ಅಲ್ಲಿ ಬಲತುದಿಯಲ್ಲಿನ ಸೈನ್ ಇನ್ ಆಯ್ಕೆ ಮಾಡಿಕೊಳ್ಳಿ
ಸೈನ್ ಇನ್ ಆಗಿದ್ದರೆ, ಎಡಭಾಗದಲ್ಲಿ ಸೆಕ್ಯುರಿಟಿ ಆಯ್ಕೆ ಮಾಡಿ.
ಹೊಸದಾಗಿ ತೆರೆದುಕೊಳ್ಳುವ ಪೇಜ್‌ನಲ್ಲಿ ಪಾಸ್‌ವರ್ಡ್ ಆಯ್ದುಕೊಳ್ಳಿ
ಅಲ್ಲಿ ಮತ್ತೆ ಸೈನ್ ಇನ್ ಆಗಬೇಕು
ನಂತರ ಹೊಸ ಪಾಸ್‌ವರ್ಡ್ ನಮೂದಿಸಿ, ಚೇಂಜ್ ಪಾಸ್‌ವರ್ಡ್ ಆಯ್ಕೆ ಮಾಡಿ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ
ಫೋನ್‌ನ ಸೆಟ್ಟಿಂಗ್ಸ್ ತೆರೆಯಿರಿ
ಅಲ್ಲಿ ಗೂಗಲ್-ಗೂಗಲ್ ಅಕೌಂಟ್ ಆಯ್ಕೆ ಮಾಡಿ
ಬಳಿಕ ಸೆಕ್ಯುರಿಟಿ ತೆರೆಯಿರಿ
ನಂತರ ಪಾಸ್‌ವರ್ಡ್ ಎಂದಿರುವಲ್ಲಿ ಸೈನಿಂಗ್ ಇನ್‌ ಟು ಗೂಗಲ್ ಆಯ್ಕೆ ಮಾಡಿ
ಮತ್ತೊಮ್ಮೆ ಸೈನ್ ಇನ್ ಆಗಬೇಕು
ಬಳಿಕ ಹೊಸ ಪಾಸ್‌ವರ್ಡ್ ಕೊಟ್ಟು ಚೇಂಜ್ ಪಾಸ್‌ವರ್ಡ್‌ ಒತ್ತಿರಿ.

Online Shopping: ಹೊಸ ಫೋನ್ ಖರೀದಿಸುತ್ತಿದ್ದೀರಾ? ಗಮನಿಸಿ

ಐಫೋನ್ ಅಥವಾ ಐಪ್ಯಾಡ್‌ನಲ್ಲಿ
ಮೆನು-ಸೆಟ್ಟಿಂಗ್ಸ್-ಅಕೌಂಟ್-ಮ್ಯಾನೇಜ್ ಯುವರ್ ಗೂಗಲ್ ಅಕೌಂಟ್
ಪರ್ಸನಲ್ ಇನ್ಫೋ ಆಯ್ಕೆ ಮಾಡಿ
ಪ್ರೊಫೈಲ್ ಸೆಕ್ಷನ್ ಅಡಿ ಪಾಸ್‌ವರ್ಡ್ ತೆರೆಯಿರಿ
ಹೊಸ ಪಾಸ್‌ವರ್ಡ್ ಎಂಟರ್ ಮಾಡಿ, ನಂತರ ಚೇಂಜ್ ಪಾಸ್‌ವರ್ಡ್ ಎಂದು ಕೊಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌