ಆ್ಯಪ್ನಗರ

YouTube History: ಡಿಲೀಟ್ ಮಾಡುವುದು ಹೇಗೆ?

ಜನಪ್ರಿಯ ಯೂಟ್ಯೂಬ್‌ನಲ್ಲಿ ಅಸಂಖ್ಯಾತ ವಿಡಿಯೋಗಳು ಇಂದು ದೊರೆಯುತ್ತವೆ. ವಿಡಿಯೋ ವೀಕ್ಷಣೆ ಬಳಿಕ ಹಿಸ್ಟರಿ ಬೇಡವಾದಲ್ಲಿ ಡಿಲೀಟ್ ಮಾಡುವುದು ಹೇಗೆ? ಇಲ್ಲಿದೆ ಓದಿ.

Gadgets Now 5 Oct 2019, 9:50 am
ಗೂಗಲ್‌ನ ಪ್ರಮುಖ ಉತ್ಪನ್ನಗಳಲ್ಲಿ ಒಂದಾದ ಯೂಟ್ಯೂಬ್‌, ವಿವಿಧ ರೀತಿಯ ವಿಡಿಯೋಗಳನ್ನು ಹೊಂದಿದೆ. ಅದರಲ್ಲಿ ಬಳಕೆದಾರರು ವಿಡಿಯೋ ವೀಕ್ಷಿಸಿದ ಬಳಿಕ, ಅದರ ವಿವರ ಹಾಗೆಯೇ ಉಳಿದುಬಿಡುತ್ತದೆ.
Vijaya Karnataka Web Youtube


ಆದರೆ ಬಳಕೆದಾರರ ಖಾಸಗೀತನ ಮತ್ತು ಭದ್ರತೆಗಾಗಿ, ಯೂಟ್ಯೂಬ್ ಅಟೋ ಡಿಲೀಟ್ ಹಿಸ್ಟರಿ ಆಯ್ಕೆಯನ್ನು ಪರಿಚಯಿಸಿದೆ.

ಗೂಗಲ್ ಈ ಮೊದಲು ಲೊಕೇಶನ್ ಹಿಸ್ಟರಿಯನ್ನು ಅಟೋ ಡಿಲೀಟ್ ಮಾಡುವ ಆಯ್ಕೆಯನ್ನು ವೆಬ್ ಮತ್ತು ಆ್ಯಪ್‌ನಲ್ಲಿ ಪರಿಚಯಿಸಿತ್ತು.

ಈಗ ಯೂಟ್ಯೂಬ್‌ ಹಿಸ್ಟರಿಯನ್ನು ಅಟೋ ಡಿಲೀಟ್ ಮಾಡುವ ಆಯ್ಕೆಯನ್ನು ಗೂಗಲ್ ಪರಿಚಯಿಸಿದೆ. ಯೂಟ್ಯೂಬ್ ಹಿಸ್ಟರಿಯನ್ನು ಡಿಲೀಟ್ ಮಾಡುವ ಕುರಿತು ಇಲ್ಲಿ ವಿವರಿಸಲಾಗಿದೆ.

ಹೊಸ ಆಯ್ಕೆಯನ್ನು ಬಳಸಲು ಈ ವಿಧಾನ ಅನುಸರಿಸಿ.ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್ಸ್ ತೆರೆಯಿರಿ.
ಅದರಲ್ಲಿ ಗೂಗಲ್ ಓಪನ್ ಮಾಡಿ

ನಂತರ ಗೂಗಲ್ ಅಕೌಂಟ್ ತೆರೆಯಿರಿ
ಡಾಟಾ ಮತ್ತು ಪರ್ಸೊನಲೈಸೇಶನ್ ತೆರೆಯಿರಿ.
ಯೂಟ್ಯೂಬ್ ಹಿಸ್ಟರಿ ಆಯ್ಕೆ ಮಾಡಿ
ಮ್ಯಾನೇಜ್ ಆಕ್ಟಿವಿಟಿ ಕ್ಲಿಕ್ ಮಾಡಿ

ಯೂಟ್ಯೂಬ್ ಹಿಸ್ಟರಿ


ಅದು ನಿಮ್ಮನ್ನು ಗೂಗಲ್ ಮೈ ಆಕ್ಟಿವಿಟಿ ಪೇಜ್‌ಗೆ ಕರೆದೊಯ್ಯುತ್ತದೆ.

ಯೂಟ್ಯೂಬ್ ಹಿಸ್ಟರಿ

ಅಲ್ಲಿ, ಯೂಟ್ಯೂಬ್ ಹಿಸ್ಟರಿ ಆನ್ ಇರುತ್ತದೆ. ಅದರಲ್ಲಿ ಚೂಸ್ ಟು ಡಿಲೀಟ್ ಆಟೋಮ್ಯಾಟಿಕಲಿ ಆಯ್ಕೆ ಮಾಡಿ.

ಅದರಲ್ಲಿ ನಿಮಗೆ 3 ಆಯ್ಕೆ ಕಾಣಿಸಿಕೊಳ್ಳುತ್ತದೆ.
ಕೀಪ್ ಅಂಟಿಲ್ ಐ ಡಿಲೀಟ್ ಮ್ಯಾನ್ಯುವಲಿ,
ಕೀಪ್ ಫಾರ್ 18 ಮಂತ್ಸ್,
ಕೀಪ್ ಫಾರ್ 3 ಮಂತ್ಸ್,

ನಿಮ್ಮ ಆಯ್ಕೆಯನ್ನು ನಮೂದಿಸಿ.
ಜತೆಗೆ ಯೂಟ್ಯೂಬ್ ಹಿಸ್ಟರಿ ತಕ್ಷಣ ಡಿಲೀಟ್ ಮಾಡುವ ಆಯ್ಕೆ ಕೂಡ ಅಲ್ಲಿ ಲಭ್ಯ.

ಆ್ಯಪ್‌ ಹೊರತಾಗಿ ವೆಬ್‌ನಲ್ಲಿ ಈ ವಿಧಾನ ಅನುಸರಿಸಿ
ಈ ಲಿಂಕ್ ತೆರೆಯಿರಿ
ಮೈ ಆಕ್ಟಿವಿಟಿ

ಕೀಪಿಂಗ್ ಆಕ್ಟಿವಿಟಿ ಅಂಟಿಲ್ ಯು ಡಿಲೀಟ್ ಇಟ್ ಮ್ಯಾನ್ಯುವಲಿ
ಚೂಸ್ ಟು ಡಿಲೀಟ್ ಅಟೋಮ್ಯಾಟಿಕಲಿ

ಯೂಟ್ಯೂಬ್ ಹಿಸ್ಟರಿ


ನಿಮ್ಮ ಆಯ್ಕೆ ನಮೂದಿಸಿ
ಬಳಿಕ, ನೆಕ್ಸ್ಟ್ ಕೊಟ್ಟು, ಕನ್ಫರ್ಮ್ ಮಾಡಿ.

Best Smartphone: 10 ಸಾವಿರ ರೂ.ಗೆ ಬೆಸ್ಟ್ ಫೋನ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌