ಆ್ಯಪ್ನಗರ

Income Tax Fraud: ಬ್ಯಾಂಕ್ ವಂಚನೆಯಿಂದ ಪಾರಾಗುವುದು ಹೇಗೆ?

ಆದಾಯ ತೆರಿಗೆ ಇಲಾಖೆ ಮತ್ತು ಅಧಿಕಾರಿಗಳು, ಬ್ಯಾಂಕ್‌ ಖಾತೆ ಪರಿಶೀಲನೆ ಎಂಬ ಹೆಸರಿನಲ್ಲಿ ಹಲವು ಕರೆ, ಇ ಮೇಲ್ ಮತ್ತು ಎಸ್‌ಎಂಎಸ್ ಬರುತ್ತವೆ. ಅಂತಹ ವಂಚನೆ ಕುರಿತು ಎಚ್ಚರವಿರಲಿ.

Times Now 16 Aug 2019, 5:26 pm
ಉಡುಗೊರೆ, ಉಚಿತ ಆಫರ್ ಎಂದೆಲ್ಲ ಬಂದರೆ ಯಾರು ತಾನೆ ಸುಮ್ಮನಿರುತ್ತಾರೆ? ಡಿಜಿಟಲ್ ಯುಗದಲ್ಲಿ ಕಳ್ಳರು ಕೂಡ ಡಿಜಿಟಲ್ ಮಾರ್ಗ ಹಿಡಿದಿದ್ದು, ವಿವಿಧ ರೀತಿಯ ನವೀನ ತಂತ್ರಗಳ ಮೊರೆಹೋಗುತ್ತಿದ್ದಾರೆ.
Vijaya Karnataka Web Bank


ಎಸ್‌ಎಂಎಸ್ ಉಡುಗೊರೆ, ಇ ಮೇಲ್ ಉಡುಗೊರೆಯಂತಹ ತಂತ್ರ ಹಳತಾದಂತೆ, ಮತ್ತೆ ಹೊಸ ತಂತ್ರ ಹುಡುಕುತ್ತಾರೆ. ಈ ಪೈಕಿ ಹ್ಯಾಕರ್‌ಗಳು ಇತ್ತೀಚೆಗೆ ಹುಡುಕಿಕೊಂಡಿರುವುದು ಆದಾಯ ತೆರಿಗೆ ರಿಟರ್ನ್ಸ್ ಎಂಬ ಎಸ್‌ಎಂಎಸ್ ಕಳುಹಿಸುವುದು!

ಆದಾಯ ತೆರಿಗೆ ಪಾವತಿಸುವುದಕ್ಕೂ ಮೊದಲು ಹಲವು ರೀತಿಯ ವಿನಾಯಿತಿಯನ್ನು ತೆರಿಗೆದಾರರು ಪಡೆದುಕೊಂಡಿರುತ್ತಾರೆ. ಆದರೆ ಅದರ ಜತೆಗೆ ಹೆಚ್ಚುವರಿ ಮೊತ್ತವನ್ನು ಮರುಪಾವತಿಸಲಾಗುತ್ತದೆ, ಅದಕ್ಕಾಗಿ ನಿಮ್ಮ ಬ್ಯಾಂಕ್ ಖಾತೆ ವಿವರವನ್ನು ಹಂಚಿಕೊಳ್ಳಿ ಎಂಬ ಎಸ್‌ಎಂಎಸ್ ಬರುತ್ತದೆ.

ಈ ಎಸ್‌ಎಂಎಸ್ ಜತೆ ವೆಬ್‌ಸೈಟ್ ಲಿಂಕ್ ಕೂಡ ಇದ್ದು, ಅದನ್ನು ಕ್ಲಿಕ್ ಮಾಡಿ, ಬ್ಯಾಂಕ್ ವಿವರ ಭರ್ತಿ ಮಾಡಿ, ತೆರಿಗೆ ಮರುಪಾವತಿ ಪಡೆಯಿರಿ ಎಂದು ಹೇಳಲಾಗುತ್ತದೆ.

ವಂಚನೆಯಿಂದ ಪಾರಾಗುವುದು ಹೇಗೆ?
ನೆನಪಿಡಿ, ಯಾವುದೇ ಕಾರಣಕ್ಕೂ ಬ್ಯಾಂಕ್ ಅಧಿಕಾರಿಗಳು ಫೋನ್ ಮಾಡಿ ಇಲ್ಲವೆ ಎಸ್‌ಎಂಎಸ್, ಇ ಮೇಲ್ ಕಳುಹಿಸಿ ನಿಮ್ಮ ವೈಯಕ್ತಿಕ ವಿವರ, ಬ್ಯಾಂಕ್, ಆಧಾರ್ ಮತ್ತು ಪ್ಯಾನ್ ಕಾರ್ಡ್ ದಾಖಲೆ ಕೇಳುವುದಿಲ್ಲ.

ನಿಮ್ಮ ಬ್ಯಾಂಕ್ ಖಾತೆ, ಒಟಿಪಿ, ಪಾಸ್‌ವರ್ಡ್, ಪಿನ್ ನಂಬರ್ ಇತ್ಯಾದಿಗಳನ್ನು ಬ್ಯಾಂಕ್ ಮತ್ತು ಐಟಿ ಅಧಿಕಾರಿಗಳು ಕೇಳುವುದಿಲ್ಲ, ಹೀಗಾಗಿ ಅಧಿಕಾರಿಗಳ ಹೆಸರಿನಲ್ಲಿ ಕರೆಬಂದರೆ, ವಿವರ ಕೇಳಿದರೆ ಯಾವುದೇ ಕಾರಣಕ್ಕೂ ಕೊಡಬೇಡಿ.

ಉಚಿತ ಆಫರ್, ಐಟಿ ರಿಫಂಡ್, ಡಿಸ್ಕೌಂಟ್ ಎಂದೆಲ್ಲ ಬರುವ ಎಸ್‌ಎಂಎಸ್, ಇ ಮೇಲ್, ಕರೆಗೆ ಉತ್ತರಿಸುವ, ಪ್ರತಿಕ್ರಿಯಿಸುವ ಗೋಜಿಗೆ ಹೋಗಬೇಡಿ.

ವೈಯಕ್ತಿಕ ಮಾಹಿತಿಯನ್ನು ಉಡುಗೊರೆ ಕಳುಹಿಸುವ, ದಾಖಲೆ ಸರಿಪಡಿಸುವ ನೆಪದಲ್ಲಿ ಕೇಳುವ ಯಾವುದೇ ಪ್ರಕರಣವಿದ್ದರೂ, ಅದು ವಂಚನೆಯ ಸ್ವರೂಪವಾಗಿರಬಹುದು ಎನ್ನುವುದು ನಿಮ್ಮ ಗಮನದಲ್ಲಿರಲಿ.

ಉಡುಗೊರೆ ಮತ್ತು ಉಚಿತ ಆಫರ್‌ನ ಎಸ್‌ಎಂಎಸ್‌, ಇ ಮೇಲ್, ವೆಬ್‌ಸೈಟ್ ಲಿಂಕ್‌ನ ಸ್ಪೆಲ್ಲಿಂಗ್, ಗಮನಿಸಿ. ಅವು ತಪ್ಪಿರುತ್ತವೆ ಮತ್ತು ಅದರಲ್ಲಿ ವ್ಯತ್ಯಾಸವಿರುತ್ತದೆ.

ನಕಲಿ ವೆಬ್‌ಸೈಟ್‌ನ ವಿಳಾಸ, ಯುಆರ್‌ಎಲ್ ಗಮನಿಸಿ. ಅದು ನೋಡಲು ನೈಜವೆಂಬಂತೆ ಕಂಡರೂ, ಅದರಲ್ಲಿ ಹಲವು ತಪ್ಪುಗಳಿರುತ್ತವೆ. ಅಲ್ಲದೆ ವೆಬ್‌ಸೈಟ್ ವಿನ್ಯಾಸ, ಅಕ್ಷರ, ಬಣ್ಣ ಹೀಗೆ ಎಲ್ಲವೂ ನೈಜವೆಂಬಂತೆ ಕಂಡರೂ, ಅದರಲ್ಲಿ ದೋಷವಿರುತ್ತದೆ ಅದನ್ನು ಗಮನಿಸಿ.

ನಿಮ್ಮ ಎಚ್ಚರಿಕೆ, ಉಚಿತ ಮತ್ತು ಉಡುಗೊರೆಯ ದುರಾಸೆಯಿಂದ ದೂರವಿದ್ದರೆ, ಹ್ಯಾಕರ್‌ಗಳು ಹಾಗೂ ವಂಚನೆಯ ಜಾಲದಿಂದ ದೂರವಿರಬಹುದು.

ಜತೆಗೆ ಇಂಟರ್‌ನೆಟ್ ಬ್ಯಾಂಕಿಂಗ್, ಮೊಬೈಲ್‌ ಬ್ಯಾಂಕಿಂಗ್‌ಗೆ ಕ್ಲಿಷ್ಟಕರ ಪಾಸ್‌ವರ್ಡ್ ರೂಪಿಸಿಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌