ಆ್ಯಪ್ನಗರ

WhatsAppನಲ್ಲಿ ನಂಬರ್ ಸೇವ್ ಮಾಡದೇ ಮೆಸೇಜ್ ಮಾಡುವುದು ಹೇಗೆ?..ಇಲ್ಲಿದೆ ಟ್ರಿಕ್!

ನೀವು ಮೊಬೈಲ್ ಸಂಖ್ಯೆಯನ್ನು ಸೇವ್ ಮಾಡದೇ WhatsApp ನಲ್ಲಿ ಸಂದೇಶವನ್ನು ಹೇಗೆ ಕಳುಹಿಸುವುದು ಎಂಬುದರ ಕುರಿತು ನಾವು ಹಂತ-ಹಂತದ ಮಾರ್ಗದರ್ಶಿಯನ್ನು ತಿಳಿಸಿಕೊಡುತ್ತೇವೆ. ಹೀಗೆ ಸಂದೇಶ ಕಳುಹಿಸುವಾಗ ಸಕ್ರಿಯ WhatsApp ಖಾತೆಯನ್ನು ಹೊಂದಿರುವ ವ್ಯಕ್ತಿಗೆ ಮಾತ್ರ ನೀವು ಸಂದೇಶ ಕಳುಹಿಸಬಹುದು.

Vijaya Karnataka Web 3 Dec 2021, 6:16 pm
ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಸೇವ್ ಮಾಡದ ಯಾವುದೇ ಮೊಬೈಲ್ ಸಂಖ್ಯೆಗೆ WhatsApp ಮೂಲಕ ಸಂದೇಶಗಳನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ನೀವು ಗಮನಿಸಿರಬಹುದು. ಏಕೆಂದರೆ, ಮೊಬೈಲ್ ಸಂಖ್ಯೆಯನ್ನು ಸೇವ್ ಮಾಡದೇ ಆ ಸಂಖ್ಯೆಗೆ ಸಂದೇಶವನ್ನು ಕಳುಹಿಸಲು WhatsApp ನಲ್ಲಿ ಯಾವುದೇ ನೇರ ಆಯ್ಕೆಗಳಿಲ್ಲ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ WhatsApp ಬಳಕೆದಾರರು ಸಂಪರ್ಕವನ್ನು ಉಳಿಸದೆ ಯಾರೊಂದಿಗಾದರೂ ಚಾಟ್ ಮಾಡಬಹುದು. ಆದರೆ, ಅಂತಹ ಸಂದರ್ಭದಲ್ಲಿ ನೀವು ವೆಬ್ ಬ್ರೌಸರ್‌ನಲ್ಲಿ ಚಾಟ್ ಮಾಡಲು WhatsApp ನ ಕ್ಲಿಕ್ ಅನ್ನು ಬಳಸಬೇಕಾಗುತ್ತದೆ. ಇದು ಸಾಮಾನ್ಯ WhatsApp ಬಳಕೆಗಿಂತ ಹೆಚ್ಚು ಕೆಲಸವನ್ನು ತೆಗೆದುಕೊಳ್ಳುತ್ತದೆ.
Vijaya Karnataka Web WhatsAppನಲ್ಲಿ ನಂಬರ್ ಸೇವ್ ಮಾಡದೇ ಮೆಸೇಜ್ ಮಾಡುವುದು ಹೇಗೆ?..ಇಲ್ಲಿದೆ ಟ್ರಿಕ್!


ಹೌದು, ನೀವು WhatsApp ಆಪ್ ತೆರೆದು ನೋಡಿದರೆ ಇಂತಹ ಯಾವುದೇ ಆಯ್ಕೆಯು ಇರುವುದಿಲ್ಲ. ಆದರೆ, ನಿಮ್ಮ ಡೆಸ್ಕ್‌ಟಾಪ್ ಮತ್ತು ಮೊಬೈಲ್ ವೆಬ್ ಬ್ರೌಸರ್‌ಗಳಲ್ಲಿನ ವೈಶಿಷ್ಟ್ಯದ ಮೂಲಕ ಬಳಸಬಹುದು. ಈ ಲೇಖನದಲ್ಲಿ ನೀವು ಮೊಬೈಲ್ ಸಂಖ್ಯೆಯನ್ನು ಸೇವ್ ಮಾಡದೇ WhatsApp ನಲ್ಲಿ ಸಂದೇಶವನ್ನು ಹೇಗೆ ಕಳುಹಿಸುವುದು ಎಂಬುದರ ಕುರಿತು ನಾವು ಹಂತ-ಹಂತದ ಮಾರ್ಗದರ್ಶಿಯನ್ನು ತಿಳಿಸಿಕೊಡುತ್ತೇವೆ. ಹೀಗೆ ಸಂದೇಶ ಕಳುಹಿಸುವಾಗ ಸಕ್ರಿಯ WhatsApp ಖಾತೆಯನ್ನು ಹೊಂದಿರುವ ವ್ಯಕ್ತಿಗೆ ಮಾತ್ರ ನೀವು ಸಂದೇಶ ಕಳುಹಿಸಬಹುದು. ಏಕೆಂದರೆ, ನಿಮ್ಮ ಸಂದೇಶವನ್ನು ಸ್ವೀಕರಿಸುವವರು WhatsApp ಸಂಪರ್ಕವನ್ನು ಹೊಂದಿಲ್ಲದಿದ್ದರೆ, ಅವರು ಸಂದೇಶಗಳನ್ನು ಸ್ವೀಕರಿಸುವುದಿಲ್ಲ.

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಅಥವಾ ಕಂಪ್ಯೂಟರ್‌ನಲ್ಲಿ ಗೂಗಲ್ ಕ್ರೋಮ್ ಅಥವಾ ಯಾವುದೇ ವೆಬ್ ಬ್ರೌಸರ್ ಅನ್ನು ತೆರೆಯಿರಿ. ನಂತರ ಅಲ್ಲಿ https://wa.me/ ಲಿಂಕ್ ಅಡ್ರೆಸ್ ಅನ್ನು ಟೈಪಿಸಿ ಅಥವಾ ನಕಲಿಸಿ. ನಂತರ ಆ ಲಿಂಕಿನ ಮುಂದೆ ನೀವು ಸಂದೇಶವನ್ನು ಕಳುಹಿಸಬೇಕಿರುವ ಮೊಬೈಲ್ ನಂಬರ್ ಅನ್ನು ದಾಖಲಿಸಿ. https://wa.me/919123456789 (ದೇಶದ ಕೋಡ್ ಅನ್ನು ಸಹ ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ.) ಈ ಮೇಲಿನ ರೀತಿಯಲ್ಲಿ ಫೋನ್ ಸಂಖ್ಯೆಯನ್ನು ರಚಿಸಿದ ನಂತರ ನೀವು ಚಾಟ್ ಮಾಡಲು 'ಮುಂದುವರಿಸಿ' ಬಟನ್ ಮೇಲೆ ಕ್ಲಿಕ್ ಮಾಡಿ. ಈಗ, WhatsApp ಅನ್ನು ಸ್ಥಾಪಿಸಲು ಅಥವಾ WhatsApp ವೆಬ್ ಆವೃತ್ತಿಯನ್ನು ಬಳಸಲು ನಿಮ್ಮನ್ನು ಕೇಳಲಾಗುತ್ತದೆ.
ಜಿಯೋ ಫೋನ್ ಗ್ರಾಹಕರಿಗೂ ಬೆಲೆ ಏರಿಕೆ ಬಿಸಿ!..ಡೇಟಾ ವೋಚರ್‌ಗಳು ಕೂಡ ಸ್ಥಗಿತ!
ಒಂದು ವೇಳೆ ನೀವು ಮೊಬೈಲ್ ವೆಬ್ ಬ್ರೌಸರ್ ಅನ್ನು ಬಳಸುತ್ತಿದ್ದರೆ, WhatsApp ನಲ್ಲಿ ಚಾಟ್ ತೆರೆಯಲು ಪ್ರಾಂಪ್ಟ್ ಅನ್ನು ನೀವು ನೋಡುತ್ತೀರಿ.ಈಗ ನಿಮ್ಮನ್ನು WhatsApp ಚಾಟ್ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ. ಇಲ್ಲಿ ನೀವು ನಮೂದಿಸಿದ ಸಂಖ್ಯೆಯೊಂದಿಗೆ ಚಾಟ್ ಮಾಡಲು ಪ್ರಾರಂಭಿಸಬಹುದು.ಅಷ್ಟೆ! ನೀವು ಕಾಂಟ್ಯಾಕ್ಟ್ ಉಳಿಸದೆಯೇ ನೀವು ವಾಟ್ಸಾಪ್‌ನಲ್ಲಿ ಸಂದೇಶವನ್ನು ಹೀಗೆ ಮಾಡಬಹುದು. ನಿಮ್ಮ ಸಂಪರ್ಕ ಪಟ್ಟಿಯಲ್ಲಿ ಯಾರೊಬ್ಬರ ಫೋನ್ ಸಂಖ್ಯೆಯನ್ನು ಉಳಿಸದೆಯೇ ಚಾಟ್ ಮಾಡಲು ನಿಮಗೆ ಅನುಮತಿಸುತ್ತದೆ. ಮೇಲೆ ಹಂಚಿಕೊಂಡಿರುವ ಈ ವಿಧಾನವು ನಿಮ್ಮ ಸ್ಮಾರ್ಟ್‌ಫೋನ್ ಮತ್ತು WhatsApp ವೆಬ್ ಎರಡರಲ್ಲೂ ಕಾರ್ಯನಿರ್ವಹಿಸುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌