ಆ್ಯಪ್ನಗರ

WhatsApp Status: ವಾಟ್ಸಪ್ ಸ್ಟೇಟಸ್ ಫೇಸ್‌ಬುಕ್‌ಗೆ ಶೇರ್ ಮಾಡುವ ವಿಧಾನ

ಫೇಸ್‌ಬುಕ್ ಒಡೆತನದ ಜನಪ್ರಿಯ ವಾಟ್ಸಪ್ ಆ್ಯಪ್‌ ಸ್ಟೇಟಸ್ ಸ್ಟೋರಿಯನ್ನು ಈಗ ಫೇಸ್‌ಬುಕ್‌ಗೂ ಹಂಚಿಕೊಳ್ಳಬಹುದು. ಸ್ಟೇಟಸ್ ಶೇರ್ ಮಾಡುವುದು ಹೇಗೆ? ವಿವರ ಇಲ್ಲಿದೆ.

TNN & Agencies 20 May 2020, 5:15 pm
ಒಂದೇ ಆ್ಯಪ್‌ ಮೂಲಕ ಫೇಸ್‌ಬುಕ್, ವಾಟ್ಸಪ್‌ ಮತ್ತು ಇನ್‌ಸ್ಟಾಗ್ರಾಂ ಅನ್ನು ಬಳಸಲು ಸಾಧ್ಯವಾಗುವಂತೆ ಫೇಸ್‌ಬುಕ್ ಮುಂದಾಗಿದ್ದು,
Vijaya Karnataka Web Whatsapp

ಅದಕ್ಕೆ ಪೂರಕವಾಗಿ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ.

ಈ ಬಾರಿ ವಾಟ್ಸಪ್ ಸ್ಟೇಟಸ್‌ನಲ್ಲಿ ವಿಶೇಷವಾಗಿ ಫೇಸ್‌ಬುಕ್ ಶೇರ್ ಆಯ್ಕೆಯನ್ನು ಒದಗಿಸಿದೆ. ಅಂದರೆ ವಾಟ್ಸಪ್ ಬಳಕೆದಾರರು, ಬಯಸಿದಲ್ಲಿ, ಅವರ ಸ್ಟೇಟಸ್ ಪೋಸ್ಟ್ ಅನ್ನು ಫೇಸ್‌ಬುಕ್ ಸ್ಟೋರೀಸ್‌ನಲ್ಲಿ ಹಂಚಿಕೊಳ್ಳಬಹುದಾಗಿದೆ.

ಈಗಾಗಲೇ ಇನ್‌ಸ್ಟಾಗ್ರಾಂ ಸ್ಟೋರಿಯನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಳ್ಳುವ ಆಯ್ಕೆ ಲಭ್ಯವಿದೆ. ಅದೇ ರೀತಿ ಇನ್‌ಸ್ಟಾಗ್ರಾಂನಲ್ಲಿ ಸ್ಟೇಟಸ್‌ಗೆ ಮ್ಯೂಸಿಕ್ ಸೇರಿಸುವ ಆಯ್ಕೆ ಕೂಡ ಇನ್‌ಸ್ಟಾಗ್ರಾಂನಲ್ಲಿ ಸೇರ್ಪಡೆಯಾಗಿದೆ. ಹೀಗಿರುವಾಗ, ಹೊಸದಾಗಿ ವಾಟ್ಸಪ್ ಸ್ಟೇಟಸ್ ಶೇರಿಂಗ್ ಆಯ್ಕೆಯನ್ನು ಒದಗಿಸಲಾಗಿದೆ..

ವಾಟ್ಸಪ್ ಸ್ಟೇಟಸ್ ಶೇರ್ ಮಾಡುವುದು ಹೇಗೆ?
ವಾಟ್ಸಪ್‌ನಲ್ಲಿ ಮೈ ಸ್ಟೇಟಸ್‌ಗೆ ಹೋಗಿ
ಅಲ್ಲಿ ಸ್ಟೇಟಸ್ ಪಕ್ಕದ ಮೂರು ಚುಕ್ಕಿಗಳ ಆಪ್ಷನ್ ಅನ್ನು ಆಯ್ಕೆ ಮಾಡಿ.

ಅದರಲ್ಲಿ ಶೇರ್ ಟು ಫೇಸ್‌ಬುಕ್ ಆಯ್ದುಕೊಳ್ಳಿ
ನಂತರ ನಿಮ್ಮ ಫೇಸ್‌ಬುಕ್ ಖಾತೆ ಗೋಚರಿಸುತ್ತದೆ. ಅಲ್ಲಿ ಶೇರ್ ನೌ ಎಂಬ ಆಯ್ಕೆ ಮಾಡಿ. ಈಗ ನಿಮ್ಮ ಸ್ಟೇಟಸ್ ಫೇಸ್‌ಬುಕ್‌ಗೆ ಶೇರ್ ಆಗುತ್ತದೆ.

ವಾಟ್ಸಪ್‌ನಲ್ಲಿ ಸ್ಟೇಟಸ್ ಅಪ್‌ಡೇಟ್ ಮಾಡುವ ಸಮಯದಲ್ಲೂ ನೇರವಾಗಿ ಫೇಸ್‌ಬುಕ್‌ಗೆ ಶೇರ್ ಮಾಡುವ ಆಯ್ಕೆ ಇದೆ.
ಹೊಸ ಆಯ್ಕೆ ಆಂಡ್ರಾಯ್ಡ್ ಮತ್ತು ಐಫೋನ್‌ಗಳಲ್ಲಿ ಲಭ್ಯ.

ವಾಟ್ಸಪ್ ಸ್ಟೇಟಸ್ ಶೇರ್


ಫೇಸ್‌ಬುಕ್‌ಗೆ ಸ್ಟೇಟಸ್ ಶೇರ್ ಮಾಡಿಕೊಳ್ಳುವ ಮೊದಲು, ಪಬ್ಲಿಕ್, ಫ್ರೆಂಡ್ಸ್, ಕಸ್ಟಂ ಎಂಬ ಆಯ್ಕೆಗಳು ಲಭ್ಯವಿದೆ.
ಫೇಸ್‌ಬುಕ್ ಸ್ಟೋರಿಗೆ ನಿಮ್ಮ ವಾಟ್ಸಪ್ ಸ್ಟೇಟಸ್ ಶೇರ್ ಆದ ಬಳಿಕ, 24 ಗಂಟೆ ಅವಧಿಗೆ ಅದು ಅಲ್ಲಿ ಇರುತ್ತದೆ.

OnePlus TV: ಮತ್ತಷ್ಟು ಮಾಹಿತಿ ಬಹಿರಂಗ

ಇಲ್ಲಿ ವಾಟ್ಸಪ್ ಸ್ಟೇಟಸ್, ಒಂದು ಸ್ಕ್ರೀನ್ ಶಾಟ್ ರೂಪದಲ್ಲಿ ಫೇಸ್‌ಬುಕ್‌ಗೆ ಶೇರ್ ಆಗುವುದರಿಂದ, ನಿಮ್ಮ ವಾಟ್ಸಪ್ ಸ್ಟೇಟಸ್‌ನಲ್ಲಿ ಯಾವುದಾದರೂ ಯುಆರ್‌ಎಲ್ ಲಿಂಕ್ ಹಾಕಿದ್ದರೆ, ಅದು ಫೇಸ್‌ಬುಕ್‌ನಲ್ಲಿ ತೆರೆಯಲು ಸಾಧ್ಯವಾಗುವುದಿಲ್ಲ.

Instagram Music: ದೇಶದಲ್ಲಿ ಲಭ್ಯ, ಬಳಕೆ ಹೇಗೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌