ಆ್ಯಪ್ನಗರ

Google Calendar Spam: ಬಳಕೆದಾರರಿಗೆ ಎಚ್ಚರಿಕೆ

ಗೂಗಲ್‌ ಕ್ಯಾಲೆಂಡರ್ ಮೂಲಕ ಪ್ರವೇಶಿಸುತ್ತಿರುವ ಹೊಸ ವಿಧದ ಸ್ಪಾಮ್‌ ಕುರಿತು ಜನರು ಎಚ್ಚರಿಕೆ ವಹಿಸಬೇಕಿದೆ.

Agencies 28 Aug 2019, 12:12 pm
ಗೂಗಲ್‌ನ ಕ್ಯಾಲೆಂಡರ್ ಆ್ಯಪ್ ಅನ್ನು ಬಳಸುತ್ತಿದ್ದರೆ ನಿಮಗೆ ಅಪರಿಚಿತರಿಂದ ಯಾವುದಾದರೂ ಒಂದು ಆಹ್ವಾನ ಬಂದಿರಬಹುದು. ಇತ್ತೀಚಿನ ದಿನಗಳಲ್ಲಿ ಹೊಸ ವಿಧದ ಸ್ಪಾಮ್ ಒಂದು ಗೂಗಲ್ ಕ್ಯಾಲೆಂಡರ್ ಬಳಕೆದಾರರಿಗೆ ತಲೆನೋವಾಗಿದ್ದು, ನಿಮಗರಿವಿಲ್ಲದೆಯೇ ನೀವು ಕ್ಯಾಲೆಂಡರ್ ಆಹ್ವಾನವನ್ನು ಒಪ್ಪಿಕೊಂಡಿದ್ದರೆ, ನಿಮಗೆ ತೊಂದರೆ ತಪ್ಪಿದ್ದಲ್ಲ.
Vijaya Karnataka Web gOOGLE


ಗೂಗಲ್ ಸ್ಪಾಮ್ ಕುರಿತು ಈಗಾಗಲೇ ನೂರಾರು ಜನರು ದೂರು ನೀಡಿದ್ದು, ಸ್ಪಾಮ್ ಮೆಸೇಜ್ ಮತ್ತು ಕ್ಯಾಲೆಂಡರ್ ಇನ್ವಿಟೇಶನ್ ಕುರಿತು ಎಚ್ಚರಿಕೆ ವಹಿಸಬೇಕಿದೆ.

ಗೂಗಲ್ ಇನ್ವಿಟೇಶನ್ ಬಂದಾಗ ಅದನ್ನು ನೀವು ಒಪ್ಪಿಕೊಂಡರೆ, ನಿಮ್ಮ ಕ್ಯಾಲೆಂಡರ್‌ಗೆ ಮೀಟಿಂಗ್ ಆಹ್ವಾನ ಸೇರ್ಪಡೆಯಾಗುತ್ತದೆ.

ನಂತರ ಅದರಲ್ಲಿನ ಈವೆಂಟ್ ವಿವರವನ್ನು ಕ್ಲಿಕ್ ಮಾಡಿದರೆ, ಅಪಾಯಕಾರಿ ಲಿಂಕ್‌ಗಳಿಗೆ ಪ್ರವೇಶ ಕಲ್ಪಿಸುತ್ತದೆ. ಇದು ಮುಂದೆ ನಿಮ್ಮ ವೈಯಕ್ತಿಕ ವಿವರ ಕದಿಯಲು ಅವಕಾಶ ಕಲ್ಪಿಸಬಹುದು. ಜತೆಗೆ ಹ್ಯಾಕರ್‌ಗಳ ಪ್ರವೇಶಕ್ಕೂ ಅನುವು ಮಾಡಿಕೊಡಬಹುದು. ಹೀಗಾಗಿ ಅಪರಿಚಿತ ಮತ್ತು ಸಂಶಯಾಸ್ಪದ ಗೂಗಲ್ ಕ್ಯಾಲೆಂಡರ್ ಆಹ್ವಾನವನ್ನು ಒಪ್ಪಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತ.

ಗೂಗಲ್ ಕ್ಯಾಲೆಂಡರ್ ಸೆಟ್ಟಿಂಗ್ಸ್ ಬದಲಾಯಿಸಿಕೊಳ್ಳಿ
ಗೂಗಲ್ ಕ್ಯಾಲೆಂಡರ್ ಪೇಜ್ ಸೆಟ್ಟಿಂಗ್ಸ್ ಆಯ್ಕೆ ಮಾಡಿಕೊಳ್ಳಿ
ಅದರಲ್ಲಿ ಈವೆಂಟ್ ಸೆಟ್ಟಿಂಗ್ಸ್ ಆಯ್ದುಕೊಳ್ಳಿ

ನಂತರ, ಅಟೋಮ್ಯಾಟಿಕಲಿ ಆಡ್ ಇನ್ವಿಟೇಶನ್ಸ್ ಆಯ್ಕೆ ಬದಲಾಗಿ, ನೊ, No, only show invitations to which I have responded ಆಯ್ಕೆ ಮಾಡಿಕೊಳ್ಳಿ.

ಇದರಿಂದ ನೀವು ಒಪ್ಪಿಕೊಂಡ ಕ್ಯಾಲೆಂಡರ್ ಆಹ್ವಾನಗಳು ಮಾತ್ರ ನಿಮಗೆ ಲಭ್ಯವಾಗಿ, ಸ್ಪಾಮ್ ಮೆಸೇಜ್‌ಗಳು ದೂರವಾಗುತ್ತವೆ.

WhatsApp ಟ್ರಿಕ್ಸ್: ಗ್ರೂಪಿಗೆ ಸೇರಿಸದಂತೆ ತಡೆಯಿರಿ; ಫೇಕ್ ಸುದ್ದಿ ಗುರುತಿಸಿ

Gmail ನಲ್ಲಿ ಏನೆಲ್ಲ ಮಾಡಬಹುದು...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌