ಆ್ಯಪ್ನಗರ

ನಿಮ್ಮ ಮನೆಯಲ್ಲಿ ನೆಟ್‌ವರ್ಕ್‌ ಸರಿಯಾಗಿ ಸಿಗುತ್ತಿಲ್ಲವೇ?: ಈ ಟ್ರಿಕ್ ಪ್ರಯೋಗಿಸಿ

ಗುಡ್ಡಗಾಡು ಪ್ರದೇಶ, ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ನೆಟ್‌ವರ್ಕ್‌ ಸಿಗುವುದಿಲ್ಲ. ಇನ್ನು ಪ್ರಯಾಣಿಸುವಾಗಲೂ ಸಹ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

Vijaya Karnataka Web 2 Jun 2021, 3:30 pm
ಕೊರೊನಾ ವೈರಸ್ ಕಾರಣದಿಂದ ಈಗ ಹೆಚ್ಚಿನವರು ಮನೆಯಿಂದಲೇ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದಾರೆ. ಆದರೆ, ಕೆಲವು ಪ್ರದೇಶಗಳಲ್ಲಿ ಸರಿಯಾಗಿ ಮೊಬೈಲ್ ನೆಟ್‌ವರ್ಕ್‌/ಸಿಗ್ನಲ್‌ ಸಿಗದೇ ಇರುವುದು ದೊಡ್ಡ ಸಮಸ್ಯೆಯಾಗಿದೆ. ಟೆಲಿಕಾಂ ಕಂಪೆನಿಗಳ ಸೇವೆ ಎಲ್ಲೆಡೇಯೂ ತಲುಪಲು ಸಾಧ್ಯವಾಗುವುದು ಬಹಳ ಕಷ್ಟವೇ ಸರಿ. ಏಕೆಂದರೇ ಎಲ್ಲೆಡೆ ನೆಟ್‌ವರ್ಕ್ ಸ್ಥಾಪನೆಯ ಕಾರ್ಯ ಅಷ್ಟು ಸುಲಭವಾದುದಲ್ಲ.
Vijaya Karnataka Web ನಿಮ್ಮ ಮನೆಯಲ್ಲಿ ನೆಟ್‌ವರ್ಕ್‌ ಸರಿಯಾಗಿ ಸಿಗುತ್ತಿಲ್ಲವೇ?: ಈ ಟ್ರಿಕ್ ಪ್ರಯೋಗಿಸಿ


ಹಾಗಾಗಿ, ಗುಡ್ಡಗಾಡು ಪ್ರದೇಶ, ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ನೆಟ್‌ವರ್ಕ್‌ ಸಿಗುವುದಿಲ್ಲ. ಇನ್ನು ಪ್ರಯಾಣಿಸುವಾಗಲೂ ಸಹ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ, ಯಾವುದೇ ಪ್ರದೇಶದಲ್ಲಿ ಸರಿಯಾಗಿ ಸಿಗ್ನಲ್‌ ಸಿಗುತ್ತಿಲ್ಲವಾದಲ್ಲಿ ನಾವು ಮಾಡಬಹುದಾದ ಸರಳ ಕಾರ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ.

ಸಖತ್ ಟ್ರೆಂಡಿಂಗ್ ನಲ್ಲಿರುವ ಕಡಿಮೆ ಬೆಲೆಯ ಬೆಸ್ಟ್ ಸ್ಮಾರ್ಟ್ ಟಿವಿಗಳು ಇಲ್ಲಿವೆ ನೋಡಿ

ಸ್ಪೆಕ್ಟ್ರಮ್ ಬದಲಾಯಿಸಿ: ಟೆಲಿಕಾಂನಲ್ಲಿ 4ಜಿ, 3ಜಿ ಮತ್ತು 2ಜಿ ನೆಟ್‌ವರ್ಕ್, ಬೇರೆ ಬೇರೆ ಸ್ಪೆಕ್ಟ್ರಮ್‌ಗಳಲ್ಲಿ ಕಾರ್ಯನಿರ್ವಹಣೆ ನೀಡುತ್ತವೆ. ಇವುಗಳಲ್ಲಿ 2ಜಿ, 3ಜಿ ಸೇವೆ ಬಹುತೇಕ ಎಲ್ಲೆಡೆ ಲಭ್ಯವಿರುವುದರಿಂದ ಸ್ಮಾರ್ಟ್‌ಫೋನ್‌ನಲ್ಲಿ 2ಜಿ,3ಜಿ ಕನೆಕ್ಟಿವಿಟಿಗೆ ಬದಲಾದರೆ ಹೆಚ್ಚು ನೆಟ್‌ವರ್ಕ್ ಸಿಗುತ್ತದೆ.

ನಂಬರ್ ಫಾರ್ವಡ್ ಮಾಡಿ: ಬಹುತೇಕ ಎಲ್ಲರೂ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಉಪಯೋಗ ಮಾಡುತ್ತಿರುತ್ತಾರೆ. ಹಾಗಾಗಿ, ಒಂದು ಕಂಪೆನಿಯ ಸಿಗ್ನಲ್‌ ಸಿಗುತ್ತಿಲ್ಲವೆಂದಾದಲ್ಲಿ ಆ ನಂಬರ್‌ಗೆ ಬರಬೇಕಾದ ಎಲ್ಲಾ ಕರೆಗಳನ್ನು ನಿಮ್ಮದೇ ಮತ್ತೊಂದು ನಂಬರ್‌ಗೆ ಫಾರ್ವಡ್ ಮಾಡಿ. ಹೀಗೆ ಸಮಸ್ಯೆ ಬಗೆಹರಿಸಿಕೊಳ್ಳಿ.

ಭಾರತದಲ್ಲಿ ಇನ್‌ಫಿನಿಕ್ಸ್‌ ನೋಟ್‌ 10 ಸರಣಿ ಫೋನ್ ಬಿಡುಗಡೆಗೆ ಸಿದ್ಧತೆ: ಏನು ವಿಶೇಷತೆ?

ನೆಟ್‌ವರ್ಕ್ ರಿಸೀವರ್ ಖರೀದಿಸಿ: ಪ್ರಯಾಣದ ವೇಳೆಯಲ್ಲಿ ಇದು ಉಪಯೋಗಕ್ಕೆ ಬರದಿರಬಹುದು. ಆದರೆ, ಮನೆಯ ಒಳಗೆ ನೆಟ್‌ವರ್ಕ್ ಸರಿಯಾಗಿ ಸಿಗುತ್ತಿಲ್ಲ ಎಂದರೆ ನೆಟ್‌ವರ್ಕ್ ರಿಸೀವರ್ ಬಹಳಷ್ಟು ಉಪಯೋಗಕಾರಿ. ಹಾಗಾಗಿ, ಮನೆಯಲ್ಲಿ ಉತ್ತಮ ಸಿಗ್ನಲ್‌ ಪಡೆಯಲು ನೆಟ್‌ವರ್ಕ್ ರಿಸೀವರ್ ಖರೀದಿಸಿ.

ಮೊಬೈಲ್ ಕವರ್ ಸಹ ಪ್ರಾಬ್ಲಮ್: ಹೌದು, ಮೊಬೈಲ್ ಮೇಲೆ ರಕ್ಷಣೆಗೆ ಹಾಕುವ ಕವರ್ ಸಹ ಸಿಗ್ನಲ್ ಪ್ರಾಬ್ಲಮ್ ತರುತ್ತದೆ. ಹಾಗಾಗಿ, ನೆಟ್‌ವರ್ಕ್ ಕ್ಷಿಣವಾಗಿರುವ ಪ್ರದೇಶದಲ್ಲಿ ಮೊಬೈಲ್ ಕವರ್ ತೆಗೆದು ಉಪಯೋಗಿಸಿರಿ.

PUBG ಭಾರತದ ಅವತಾರ ಬಿಡುಗಡೆಗೆ ದಿನಾಂಕ ಫಿಕ್ಸ್: ಜೂನ್ 18ಕ್ಕೆ ರಿಲೀಸ್?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌