ಆ್ಯಪ್ನಗರ

Jio Fiber Connection: ಜಿಯೋ ಗಿಗಾಫೈಬರ್ ವಿವಿಧ ಪ್ಲ್ಯಾನ್ ವಿವರ

ರಿಲಯನ್ಸ್ ಜಿಯೋ ಗಿಗಾಫೈಬರ್ ಬ್ರಾಡ್‌ಬ್ಯಾಂಡ್ ಸಂಪರ್ಕ ಪಡೆಯಲು ಗ್ರಾಹಕರು ಉತ್ಸುಕರಾಗಿದ್ದು, ಹೇಗೆ ಹೊಸ ಸಂಪರ್ಕ ಪಡೆಯುವುದು ಮತ್ತು ಜಿಯೋ ಹೊಸದಾಗಿ ಘೋಷಿಸಿದ ಪ್ಲ್ಯಾನ್‌ಗಳ ವಿವರವನ್ನೂ ಇಲ್ಲಿ ನೀಡಲಾಗಿದೆ.

Times Now 6 Sep 2019, 12:28 pm
ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಗಳ ಮೂಲಕ ಗ್ರಾಹಕರು ವಾಯ್ಸ್ ಮತ್ತು ವಿಡಿಯೋ ಕರೆಗಳನ್ನು ಮಾಡಬಹುದು. ಅದರ ಜತೆಗೆ ಬೇಡಿಕೆಯ ಮನೋರಂಜನೆ, ಸಿನಿಮಾ ಸೇವೆಗಳನ್ನೂ ಆನಂದಿಸಬಹುದು. ಉಳಿದಂತೆ ಅನಿಯಮಿತ ವೇಗದ ಡೇಟಾ ಕೂಡ ಲಭ್ಯವಿದೆ.
Vijaya Karnataka Web Jio Plan


ರಿಲಯನ್ಸ್ ಜಿಯೋ ಗಿಗಾಫೈಬರ್‌ನಲ್ಲಿ 6 ವಿವಿಧ ಯೋಜನೆಗಳನ್ನು ಪ್ರಕಟಿಸಿದ್ದು, ತಿಂಗಳ ದರ 699 ರೂ. ನಿಂದ ತೊಡಗಿ, 8,499 ರೂ.ವರೆಗೆ ಇರಲಿದೆ. ಜತೆಗೆ 100 Mbps ವೇಗದಿಂದ ಆರಂಭಿಸಿ 1GBps ವರೆಗಿನ ವೇಗದವರೆಗೆ ಇಂಟರ್‌ನೆಟ್ ಸಂಪರ್ಕ ಲಭ್ಯವಾಗಲಿದೆ.

ಜಿಯೋ ಗಿಗಾಫೈಬರ್ ಪ್ರಿಪೇಯ್ಡ್ ಪ್ಲ್ಯಾನ್‌
ಬ್ರೋನ್ಝ್ ಪ್ಯಾಕ್: 699 ರೂ. ಮಾಸಿಕ ಶುಲ್ಕ 150 GB ಡೇಟಾ

ಸಿಲ್ವರ್ ಬ್ರಾಡ್‌ಬ್ಯಾಂಡ್ ಪ್ಯಾಕ್: 849 ರೂ. 200 GB ಡೇಟಾ

ಗೋಲ್ಡ್ ಪ್ಯಾಕ್: 1,299 ರೂ. 500 GB ಡೇಟಾ

Jio Free HD TV: ಉಚಿತ ಟಿವಿ ಪಡೆಯುವುದು ಹೇಗೆ?

ಡೈಮಂಡ್ ಪ್ಯಾಕ್: 2,499 ರೂ.ಗೆ 1250 GB ಡೇಟಾ

ಪ್ಲಾಟಿನಂ ಪ್ಯಾಕ್: 3,999 ರೂ. ಶುಲ್ಕ 2500 GB ಡೇಟಾ

ಟೈಟಾನಿಯಂ ಪ್ಯಾಕ್: 8,499 ರೂ. 5000 GB ಡೇಟಾ ಲಭ್ಯವಿದೆ.

ಜತೆಗೆ ಮೂರು, ಆರು ಮತ್ತು 12 ತಿಂಗಳ ಪ್ಯಾಕ್ ಕೂಡ ಆಯ್ದುಕೊಳ್ಳಬಹುದು.
ಗೋಲ್ಡ್ ಮತ್ತು ನಂತರದ ಪ್ಲ್ಯಾನ್ ಆಯ್ಡುಕೊಳ್ಳುವ ಗ್ರಾಹಕರಿಗೆ ಉಚಿತ ಟಿವಿ ಕೂಡ ಲಭ್ಯವಾಗಲಿದೆ.

Jio Giga Fiber: ಮುಂದಿನ ವರ್ಷ ಜಿಯೋ ಟಿವಿಯಲ್ಲೂ ಸಿನಿಮಾ ಬಿಡುಗಡೆ

ಜಿಯೋ ವೆಲ್‌ಕಂ ಆಫರ್
ಜಿಯೋ ಫೈಬರ್ ಬ್ರೋನ್ಝ್ ಚಂದಾದಾರರಿಗೆ ಮೂರು ತಿಂಗಳ ಉಚಿತ ಜಿಯೋ ಸಿನಿಮಾ ಮತ್ತು ಜಿಯೋ ಸಾವನ್ ಸೇವೆಗಳು ದೊರೆಯಲಿವೆ. ಸಿಲ್ವರ್ ಪ್ಲ್ಯಾನ್‌ಗೆ ಮೂರು ತಿಂಗಳ OTT ಆ್ಯಪ್ ಸೇವೆಗಳು ಹಾಗೂ, ಗೋಲ್ಡ್ ಮತ್ತು ಅದರ ನಂತರದ ಪ್ಯಾಕೇಜ್‌ಗೆ ಪ್ರಮುಖ OTT ಆ್ಯಪ್ ಸೇವೆಗಳ ವಾರ್ಷಿಕ ಚಂದಾ ಉಚಿತವಾಗಿ ದೊರೆಯಲಿದೆ.

Motorola One Zoom, Moto E6 Plus ಘೋಷಣೆ: ವಿವರ ಇಲ್ಲಿದೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌