ಆ್ಯಪ್ನಗರ

Google Play Protect: ಅಪರಿಚಿತ ಆ್ಯಪ್‌ ಬಗ್ಗೆ ಭಯ ಬಿಟ್ಹಾಕಿ!

ಗೂಗಲ್ ಪ್ಲೇ ಸ್ಟೋರ್ ಮೂಲಕ ಅತ್ಯಧಿಕ ಮಾಲ್ವೇರ್ ಮತ್ತು ವೈರಸ್ ಹರಡುವ ಆ್ಯಪ್‌ಗಳು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಪ್ರವೇಶಿಸುತ್ತವೆ. ಆದರೆ ಅವುಗಳಿಂದ ಉಂಟಾಗುವ ಸಮಸ್ಯೆ ಬಗ್ಗೆ ಗೂಗಲ್ ಸ್ವಯಂಚಾಲಿತ ವ್ಯವಸ್ಥೆ ಮೂಲಕ ಎಚ್ಚರಿಕೆ ನೀಡುತ್ತದೆ!

Vijaya Karnataka Web 21 Jan 2020, 11:52 am
ನಿಮ್ಮ ಫೋನ್‌ನಲ್ಲಿ ನಿಮಗೆ ಬೇಕಾದ್ದು, ಬೇಡವಾದ ಬೇಕಾದಷ್ಟು ಆ್ಯಪ್‌ಗಳಿರುತ್ತವೆ. ಅಗತ್ಯವಿಲ್ಲದಿದ್ದರೂ ಅನೇಕ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡಿರುತ್ತೀರಿ. ಆದರೆ, ಈ ರೀತಿಯಾಗಿ ಡೌನ್‌ಲೋಡ್‌ ಮಾಡಿಕೊಂಡಿರುವ ಆ್ಯಪ್‌ಗಳು ಕೆಲವೊಮ್ಮೆ ಅಪಾಯಕಾರಿಯಾಗಿರುವ ಸಾಧ್ಯತೆಗಳಿರುತ್ತವೆ. ಆದರೆ, ಈ ಬಗ್ಗೆ ನಮಗೆ ಗೊತ್ತಿರುವುದಿಲ್ಲ. ಕೆಲವು ಆ್ಯಪ್‌ಗಳು ನಮಗೆ ಗೊತ್ತಿಲ್ಲದಂತೆ ನಮ್ಮೆಲ್ಲ ಖಾಸಗಿ ಮಾಹಿತಿಯನ್ನು ರವಾನಿಸುವ ಕೆಲಸವನ್ನು ಮಾಡುತ್ತಿರುತ್ತವೆ. ಇದಕ್ಕೆಲ್ಲ ಪರಿಹಾರ ಇಲ್ಲವೇ? ಖಂಡಿತ ಇದೆ. ನೀವು ಆಂಡ್ರಾಯ್ಡ್‌ ಆಧರಿತ ಸಾಧನಗಳನ್ನು ಬಳಸುತ್ತಿದ್ದರೆ, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿರುವ ಗೂಗಲ್‌ ಪ್ಲೇ ಪ್ರೋಟೆಕ್ಟ್ ಆಪ್ಷನ್‌ ನಿಮಗೆ ಅಪಾಯಕಾರಿ ಆ್ಯಪ್‌ಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ ಮತ್ತು ಅಂಥ ಆ್ಯಪ್‌ಗಳನ್ನು ಅನ್‌ಇನ್ಸ್‌ಟಾಲ್‌ ಮಾಡಲು ಸೂಚಿಸುತ್ತದೆ. ಇಲ್ಲವೇ ಅಂಥ ಆ್ಯಪ್‌ಗಳನ್ನು ಈ ಆಪ್ಷನ್‌ ನಿಷ್ಕ್ರಿಯಗೊಳಿಸುತ್ತದೆ. ಆದರೆ, ಇಂಥ ಆ್ಯಪ್ಷನ್‌ ಬಗ್ಗೆ ಎಷ್ಟೊ ಬಳಕೆದಾರರಿಗೆ ಗೊತ್ತಿರುವುದಿಲ್ಲ. ಡಿಫಾಲ್ಟ್‌ ಆಗಿಯೇ ಸಕ್ರಿಯವಾಗಿರುವ ಈ ಆಪ್ಷನ್‌ ಕೆಲವೊಮ್ಮೆ ನಮಗೆ ಗೊತ್ತಿಲ್ಲದಂತೆ ನಿಷ್ಕ್ರಿಯವಾಗಿರುತ್ತದೆ. ಹಾಗಾಗಿ ಈ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.
Vijaya Karnataka Web what is google play protect and how to activate that option in google play store
Google Play Protect: ಅಪರಿಚಿತ ಆ್ಯಪ್‌ ಬಗ್ಗೆ ಭಯ ಬಿಟ್ಹಾಕಿ!



ಮಾಹಿತಿ: ಮಲ್ಲಿಕಾರ್ಜುನ ತಿಪ್ಪಾರ

​ಏನೇನು ಲಾಭ?

ಆ್ಯಪ್‌ ಡೌನ್‌ಲೋಡ್‌ ಮಾಡುವ ಮುನ್ನ ಈ ಗೂಗಲ್‌ ಪ್ಲೇ ಪ್ರೋಟೆಕ್ಟ್ ಆಪ್ಷನ್‌ ಆ್ಯಪ್‌ಗಳ ಸುರಕ್ಷತೆಯನ್ನು ಪರೀಕ್ಷಿಸುತ್ತದೆ.

ಅಪರಿಚಿತ ಮೂಲಗಳಿಂದ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದರೆ ಅಂಥ ಆ್ಯಪ್‌ಗಳನ್ನು ಪರೀಕ್ಷಿಸಿ ಅಪಾಯಕಾರಿ ಸಂಗತಿಗಳಿದ್ದರೆ ತಿಳಿಸುತ್ತದೆ.

ಅಪಾಯಕಾರಿ ಆ್ಯಪ್‌ಗಳು ಕಂಡು ಬಂದರೆ ಅದು ನಿಮಗೆ ನೋಟಿಫೈ ಮಾಡುತ್ತದೆ ಮತ್ತು ಆ್ಯಪ್‌ ಅನ್‌ಇನ್ಸ್‌ಟಾಲ್‌ ಮಾಡಲು ಸೂಚಿಸುತ್ತದೆ.

ಈ ಆಪ್ಷನ್‌ ಬಳಕೆದಾರರಿಗೆ ಪ್ರೈವೆಸಿ ಎಚ್ಚರಿಕೆಗಳನ್ನು ಕಳುಹಿಸುತ್ತದೆ.

Video-Dangerous Android Apps: ಈ ಕೂಡಲೇ ಡಿಲೀಟ್ ಮಾಡಿ!

​ಸಕ್ರಿಯ ಅಥವಾ ನಿಷ್ಕ್ರಿಯ

ಡಿಫಾಲ್ಟ್‌ ಆಗಿಯೇ ಗೂಗಲ್‌ ಪ್ಲೇ ಪ್ರೋಟೆಕ್ಟ್ ಆಪ್ಷನ್‌ ಸಕ್ರಿಯವಾಗಿರುತ್ತದೆ. ಆದರೆ, ನೀವು ಅದನ್ನು ನಿಷ್ಕ್ರಿಯಗೊಳಿಸಬಹುದು. ಫೋನ್‌ನ ಸುರಕ್ಷತೆಯ ದೃಷ್ಟಿಯಿಂದ ಈ ಆಪ್ಷನ್‌ ಅನ್ನು ಯಾವಾಗಲೂ ಸಕ್ರಿಯವಾಗಿರುವುದೇ ಲೇಸು. ಇದಕ್ಕಾಗಿ ನೀವು ಮೊದಲು ನಿಮ್ಮ ಆ್ಯಂಡ್ರಾಯ್ಡ್‌ ಫೋನ್‌ನಲ್ಲಿರುವ ಗೂಗಲ್‌ ಪ್ಲೇ ಸ್ಟೋರ್‌ ಆ್ಯಪ್‌ ಓಪನ್‌ ಮಾಡಿ. ಎಡಭಾಗದ ಮೇಲ್ತುದಿಯಲ್ಲಿರುವ ಮೂರು ಗೆರೆಯುಳ್ಳ ಮೆನು ಮೇಲೆ ಟ್ಯಾಪ್‌ ಮಾಡಿ. ಆಗ ಅಲ್ಲಿರುವ ಗೂಗಲ್‌ ಪ್ಲೇ ಪ್ರೋಟೆಕ್ಟ್ ಆಪ್ಷನ್‌ ಮೇಲೆ ಟ್ಯಾಪ್‌ ಮಾಡಿದರೆ, ಮತ್ತೊಂದು ಪೇಜ್‌ ತೆರೆದುಕೊಳ್ಳುತ್ತದೆ. ಆ್ಯಪ್‌ನ ಬಲಭಾಗದ ಮೇಲ್ತುದಿಯಲ್ಲಿರುವ ಸೆಟ್ಟಿಂಗ್ಸ್‌ ಐಕಾನ್‌ ಮೇಲೆ ಟ್ಯಾಪ್‌ ಮಾಡಿ, ಸ್ಕ್ಯಾ‌ನ್‌ ಆಫ್ಸ್‌ ವಿತ್‌ ಪ್ಲೇ ಪ್ರೋಟೆಕ್ಟ್ ಆಪ್ಷನ್‌ ಆನ್‌ ಮಾಡಿ.

Video-Dangerous Android Apps: ಫೋಟೋ ಕದಿಯುವ ಆ್ಯಪ್‌ಗಳಿವೆ!

​ಅಪರಿಚಿತ ಆ್ಯಪ್‌ಗಳು

ಒಂದು ವೇಳೆ ಗೂಗಲ್‌ ಪ್ಲೇ ಸ್ಟೋರ್‌ನಿಂದ ಹೊರತಾದ ಮೂಲಗಳಿಂದ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವವರಿದ್ದರೆ, Improve harmful app detection ಆಯ್ಕೆಯನ್ನು ಸಕ್ರಿಯಗೊಳಿಸಿ. ಆಗ ಗೂಗಲ್‌ ಪ್ಲೇ ಪ್ರೋಟೆಕ್ಟ್ ಅಪಾಯಕಾರಿ ಆ್ಯಪ್‌ಗಳ ಬಗ್ಗೆ ಎಚ್ಚರಿಸುತ್ತದೆ. ಇದಕ್ಕಾಗಿ ನೀವು ಮೊದಲು, ನಿಮ್ಮ ಆ್ಯಂಡ್ರಾಯ್ಡ್‌ ಫೋನ್‌ ಅಥವಾ ಟ್ಯಾಬ್ಲೆಟ್‌ನಲ್ಲಿ ಗೂಗಲ್‌ ಪ್ಲೇ ಸ್ಟೋರ್‌ ಆ್ಯಪ್‌ ಓಪನ್‌ ಮಾಡಿ. ನಂತರ ಆ್ಯಪ್‌ ಎಡಭಾಗ ಮೇಲ್ತುದಿಯಲ್ಲಿ ಇರುವ 3 ಅಡ್ಡಗೆರೆಗಳ ಮೆನು ಮೇಲೆ ಟ್ಯಾಪ್‌ ಮಾಡಿ, ಅಲ್ಲಿಂದ ಪ್ಲೇ ಪ್ರೋಟೆಕ್ಟ್ ಆಪ್ಷನ್‌ ಅನ್ನು ಸಕ್ರಿಯಗೊಳಿಸಿದಾಗ ಆ್ಯಪ್‌ನ ಬಲುತುದಿಯ ಮೇಲ್ಭಾಗದಲ್ಲಿರುವ ಸೆಟ್ಟಿಂಗ್ಸ್‌ ಐಕಾನ್‌ ಮೇಲೆ ಟ್ಯಾಪ್‌ ಮಾಡಿ. ಆಗ ನಿಮಗೆ ಆ್ಯಪ್‌ಗಳು ಗೋಚರವಾಗುತ್ತದೆ. ಅಲ್ಲಿರುವ ಇಂಪ್ರೊವ್‌ ಹಾರ್ಮ್‌ಫುಲ್ ಆ್ಯಪ್‌ ಡಿಟೆಕ್ಷನ್‌ ಅನ್ನು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದು.

Video-Online Fraud: ನಕಲಿ ಕೆವೈಸಿ ಜಾಲದ ಕುರಿತು ಎಚ್ಚರಿಕೆ

​ಹೇಗೆ ಕೆಲಸ ಮಾಡುತ್ತದೆ?

ನೀವು ಇನ್ಸ್‌ಟಾಲ್‌ ಮಾಡುವ ಆ್ಯಪ್‌ಗಳನ್ನು ಈ ಆಪ್ಷನ್‌ ನಿಗದಿತವಾಗಿ ಪರೀಕ್ಷಿಸುತ್ತದೆ. ನಿಮ್ಮ ಫೋನ್‌ ಅನ್ನು ಸ್ಕ್ಯಾ‌ನ್‌ ಮಾಡುತ್ತದೆ. ಒಂದು ವೇಳೆ ಅಪಾಯಕಾರಿ ಆ್ಯಪ್‌ಗಳು ಏನಾದರೂ ಕಂಡು ಬಂದರೆ ಅದು ನಿಮಗೆ, ಅಂಥ ಆ್ಯಪ್‌ ಅನ್ನು ತೆಗೆದು ಹಾಕಲು ನೋಟಿಫಿಕೇಷನ್‌ ಕಳುಹಿಸಬಹುದು. ಇಲ್ಲವೇ ನೀವು ಆ್ಯಪ್‌ ಅನ್‌ಇನ್ಸ್‌ಟಾಲ್‌ ಮಾಡುವವರಿಗೆ ಅಪಾಯಕಾರಿ ಆ್ಯಪ್‌ ಅನ್ನು ನಿಷ್ಕ್ರಿಯಗೊಳಿಸಬಹುದು. ಇಲ್ಲವೇ ಆಟೊಮೆಟಿಕಲೀ ಅಪಾಯಕಾರಿ ಆ್ಯಪ್‌ ಅನ್ನು ತೆಗೆದು ಹಾಕಬಹುದು. ಆದರೆ, ಬಹಳಷ್ಟು ಸಂದರ್ಭದಲ್ಲಿಅಪಾಯಕಾರಿ ಆ್ಯಪ್‌ ಕಂಡುಬಂದರೆ ಬಳಕೆದಾರರಿಗೆ ಆ ಬಗ್ಗೆ ನೋಟಿಫಿಕೇಷನ್‌ ಕಳುಹಿಸುತ್ತದೆ.

Video-Google Apps: ನಿಮ್ಮ ಬ್ಯಾಂಕ್ ಖಾತೆಗೆ ಹೇಗೆ ಕನ್ನ ಹಾಕುತ್ತಾರೆ?

​ಪ್ರೈವೆಸಿ ಅಲರ್ಟ್‌ ಹೇಗೆ?

ಒಂದು ವೇಳೆ ನೀವು ಡೌನ್‌ಲೋಡ್‌ ಮಾಡಿದ ಆ್ಯಪ್‌ ಗೂಗಲ್‌ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಿದ್ದರೆ ಆ ಸಂಬಂಧ ಗೂಗಲ್‌ ಪ್ಲೇ ಪ್ರೋಟೆಕ್ಟ್ ಆಯ್ಕೆಯು ನಿಮಗೆ ನೋಟಿಫಿಕೇಷನ್‌ ಕಳುಹಿಸುತ್ತದೆ ಮತ್ತು ನೀವು ಅಂತಹ ಆ್ಯಪ್‌ ಅನ್ನು ಅನ್‌ಇನ್ಸ್‌ಟಾಲ್‌ ಮಾಡಬೇಕಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌