ಆ್ಯಪ್ನಗರ

Twitter Account: ದೃಢೀಕರಿಸುವುದು ಹೇಗೆ? ಇಲ್ಲಿದೆ ಟಿಪ್ಸ್

ಟ್ವಿಟರ್‌ ಬ್ಲೂ ಟಿಕ್ ಎಂದರೇನು? ಅದನ್ನು ಪಡೆಯುವುದು ಹೇಗೆ? ಅದಕ್ಕಿರುವ ಮಾನದಂಡಗಳೇನು ಎಂಬ ವಿವರ ಇಲ್ಲಿದೆ. ಟ್ವಿಟರ್‌ ಖಾತೆಗೆ ಬ್ಲೂ ಟಿಕ್ ಪಡೆದುಕೊಳ್ಳುವ ಮೂಲಕ ನೀವು ಕೂಡ ಅಧಿಕೃತ ಟ್ವಿಟರ್‌ ವೆರಿಫೈಡ್ ಅನ್ನಿಸಿಕೊಳ್ಳಬಹುದು.

Times Now 6 Dec 2019, 5:38 pm
ಇಂಟರ್‌ನೆಟ್ ಮತ್ತು ಸೋಶಿಯಲ್ ಮೀಡಿಯಾ ಯುಗದಲ್ಲಿ ಎಲ್ಲರಿಗೂ ಅವರದ್ದೇ ಆದ ಅಭಿಪ್ರಾಯಗಳಿರುತ್ತವೆ. ಅಲ್ಲದೆ ನಕಲಿ ಖಾತೆ, ನಕಲಿ ಪೋಸ್ಟ್‌ಗಳ ಹಾವಳಿಯೂ ಬಹಳಷ್ಟಿದೆ. ಹೀಗಿರುವಾಗ ಅಧಿಕೃತ ಮತ್ತು ದೃಢೀಕೃತ ಖಾತೆಗಳನ್ನು ಸಾಮಾಜಿಕ ತಾಣಗಳಲ್ಲಿ ಹೊಂದುವುದು ಅಗತ್ಯವಾಗಿರುತ್ತದೆ. ಸೆಲೆಬ್ರಿಟಿಗಳು, ಹೆಸರು ಪಡೆದ ಸಂಸ್ಥೆಗಳು, ರಾಜಕಾರಣಿಗಳು ಮತ್ತು ಕೆಲವೊಂದು ಕ್ಷೇತ್ರಗಳ ಪ್ರಮುಖರು ಟ್ವಿಟರ್ ವೆರಿಫೈಡ್ ಖಾತೆ ಹೊಂದಿರುತ್ತಾರೆ. ಅದೇ ಮಾದರಿಯಲ್ಲಿ ದೃಢೀಕೃತ ಖಾತೆ ಹೊಂದಲು ನೀವೇನು ಮಾಡಬೇಕು ಎಂಬ ವಿವರ ಇಲ್ಲಿದೆ.
Vijaya Karnataka Web Twitter Verified
Twitter Blue Tick


ಟ್ವಿಟರ್‌ನಲ್ಲಿ ಕೆಲವೊಂದು ಮಾನದಂಡಗಳನ್ನು ಪಾಲಿಸಿ, ಅವು ಸೂಕ್ತ ನಿಯಮಾನುಸಾರ ಇದ್ದರೆ, ಅದಕ್ಕೆ ನೀವು ಅರ್ಹತೆ ಪಡೆದುಕೊಂಡಿದ್ದರೆ, ನಿಮಗೂ ಟ್ವಿಟರ್ ಬ್ಲೂ ಟಿಕ್ ನೀಡುತ್ತದೆ.

ಬ್ಲೂ ಟಿಕ್ ಎಂದರೇನು?
ನಿಮ್ಮಲ್ಲಿ ಟ್ವಿಟರ್ ಖಾತೆ ಇದ್ದು, ನಿಮ್ಮ ಖಾತೆ ಅಧಿಕೃತ ಮತ್ತು ಟ್ವಿಟರ್‌ನಿಂದ ದೃಢೀಕರಿಸಲ್ಪಟ್ಟಿದೆ ಎಂದಾದರೆ ನಿಮ್ಮ ಖಾತೆಗೆ ಮಾನ್ಯತೆ ಇರುತ್ತದೆ. ಬ್ಲೂ ಟಿಕ್ ಅದನ್ನು ದೃಢಪಡಿಸುತ್ತದೆ. ಹೀಗಾಗಿ ಟ್ವಿಟರ್ ಬ್ಲೂ ಟಿಕ್ ವಿಶೇಷ ಮಾನ್ಯತೆ ಪಡೆದಿದೆ.

ಬ್ಲೂ ಟಿಕ್ ಯಾಕೆ ಬೇಕು?
ಟ್ವಿಟರ್‌ನಲ್ಲಿ ನಿಮ್ಮ ಅಧಿಕೃತ ಖಾತೆ ಇದ್ದು, ಬ್ಲೂ ಟಿಕ್ ಪಡೆದುಕೊಂಡಿದ್ದರೆ, ನಿಮ್ಮ ಹೆಸರಿನಲ್ಲಿ ಅಧಿಕೃತ ಖಾತೆಯೊಂದು ಇರುವ ಜತೆಗೆ, ನಿಮ್ಮ ಮಾತುಗಳನ್ನು ಅಧಿಕೃತವಾಗಿ ಸಾಮಾಜಿಕ ತಾಣದಲ್ಲಿ ತಿಳಿಸಲೂ ನೆರವಾಗುತ್ತದೆ. ನಿಮ್ಮ ನಕಲಿ ಹೆಸರಿನಲ್ಲಿ ಬೇರೆಯವರು ದುರುಪಯೋಗ ಪಡಿಸಿಕೊಳ್ಳುವುದನ್ನು ತಡೆಯಬಹುದು.

ಟ್ವಿಟರ್ ಬ್ಲೂ ಟಿಕ್ ಪಡೆಯುವುದು ಹೇಗೆ?
ಟ್ವಿಟರ್ ಖಾತೆಗೆ ಲಾಗಿನ್ ಆಗಿ. ನಿಮ್ಮ ಖಾತೆ ಮತ್ತು ಸಂಬಂಧಿಸಿದ ಬಯೋ, ಪ್ರೊಫೈಲ್ ಫೋಟೋ ಇತ್ಯಾದಿಗಳನ್ನು ಅಪ್‌ಡೇಟ್ ಮಾಡಿ. ಅಗತ್ಯವಿರುವ ಎಲ್ಲ ವಿವರ ಇರಲಿ.

ಮೊಬೈಲ್ ನಂಬರ್ ವೆರಿಫೈ ಮಾಡಿ
ಸೆಟ್ಟಿಂಗ್ಸ್ ಮತ್ತು ಪ್ರೈವೆಸಿ ಆಯ್ಕೆಯಡಿ ನಿಮ್ಮ ಮೊಬೈಲ್ ನಂಬರ್ ಮತ್ತು ಇ ಮೇಲ್ ಐಡಿಯನ್ನು ವೆರಿಫೈ ಮಾಡಿಕೊಳ್ಳಿ.

ಟ್ವೀಟ್ಸ್ ಪಬ್ಲಿಕ್ ಇರಲಿ
ಟ್ವಿಟರ್‌ನ ಪ್ರೈವೆಸಿ ಸೆಟ್ಟಿಂಗ್ಸ್ ಮೂಲಕ, ನಿಮ್ಮ ಟ್ವೀಟ್‌ ಪ್ರೈವೆಸಿ ಸೆಟ್ಟಿಂಗ್ಸ್ ಬದಲಿಸಿಕೊಳ್ಳಿ. ಈ ಆಯ್ಕೆ, ಸೆಟ್ಟಿಂಗ್ಸ್ ಮತ್ತು ಪ್ರೈವೆಸಿ ಎಂದಿರುವಲ್ಲಿ, ಪ್ರೈವೆಸಿ ಆಂಡ್ ಸೇಫ್ಟಿ ಅಡಿಯಲ್ಲಿ, ಪ್ರೊಟೆಕ್ಟ್ ಯುವರ್ ಟ್ವೀಟ್ಸ್ ಎಂದಿರುವನ್ನು ಡಿಸೇಬಲ್ ಮಾಡಿ, ಟ್ವೀಟ್ ಅನ್ನು ಪಬ್ಲಿಕ್‌ ವಿಸಿಬಲ್ ಮಾಡಿ. ಟ್ವಿಟರ್‌ ಖಾತೆಗೆ ನಿಮ್ಮ ಅಥವಾ ನಿಮ್ಮ ಸಂಸ್ಥೆಯ ಫೋಟೋ ಇರಲಿ, ಇನ್ಯಾವುದೋ ಫೋಟೋ ಅಥವಾ ವಿವರ ತುಂಬಿಸಬೇಡಿ.

Reliance Jio: ನೂತನ ಆಲ್ ಇನ್ ಒನ್ ಪ್ಲ್ಯಾನ್ ವಿವರ

ಸೂಕ್ತ ದಾಖಲೆ ಒದಗಿಸಿ
ಸರಕಾರ ಒದಗಿಸಿದ ಫೋಟೋ ಸಹಿತ ಐಡಿ ಮತ್ತು ಇತರ ಸಂಬಂಧಿತ ದಾಖಲೆಗಳನ್ನು ಟ್ವಿಟರ್ ವೆರಿಫಿಕೇಶನ್‌ಗೆ ಸಲ್ಲಿಸಿ. ನಿಗದಿತ ನಮೂನೆಯಲ್ಲಿ ದಾಖಲೆ ಸಹಿತ ಟ್ವಿಟರ್ ಬ್ಲೂ ಟಿಕ್‌ಗೆ ಅರ್ಜಿ ಸಲ್ಲಿಸಬಹುದು. ಟ್ವಿಟರ್ ಅದನ್ನು ಪರಿಶೀಲಿಸಿ, ನಿಮ್ಮ ಖಾತೆ ಟ್ವಿಟರ್ ನಿಯಮಾವಳಿ ಮತ್ತು ಮಾನದಂಡಕ್ಕೆ ಸೂಕ್ತವಾಗಿದ್ದರೆ, ಬ್ಲೂ ಟಿಕ್ ಒದಗಿಸುತ್ತದೆ.

Sundar Pichai: ಗೂಗಲ್ ಸಿಇಒ ಯಾವೆಲ್ಲ ಕಂಪನಿಗಳಿಗೆ ಬಾಸ್ ಗೊತ್ತೇ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌