ಬೆಂಗಳೂರು: ವಿಡಿಯೊಕಾನ್ ಕಂಪನಿಯು 2 ಮಾದರಿಗಳ ನೂತನ ಏರ್ ಕಂಡೀಶನರ್ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಸೌರಶಕ್ತಿಯಿಂದ ಈ ಏರ್ಕಂಡೀಶನರ್ಗಳು ಚಾಲನೆಯಾಗುವುದು ವಿಶೇಷವಾಗಿದೆ. ಇಂಧನ ಉಳಿತಾಯಕ್ಕೆ ಇದು ಸಹಕರಿಸಲಿದೆ ಎಂದು ಕಂಪನಿಯ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಕ್ಷಯ್ ಧೂತ್ ತಿಳಿಸಿದ್ದಾರೆ. ಗೃಹ ಬಳಕೆಗೆ ಬಳಸಬಹುದಾದ ಈ ಹೈಬ್ರಿಡ್ ಸೋಲಾರ್ ಏರ್ ಕಂಡೀಶನರ್ ಸೌರ ವಿದ್ಯುತ್ ಬಳಸುತ್ತದೆ. ಬೇರೆ ವಿದ್ಯುತ್ ಇದಕ್ಕೆ ಬೇಡವಾಗಿದ್ದು, ಪರಿಸರಸ್ನೇಹಿಯಾಗಿದೆ ಎಂದರು. ದೇಶದಲ್ಲಿ ಏರ್ ಕಂಡೀಶನರ್ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ ಎಂದು ಕಂಪನಿಯ ಸಿಇಒ ಸಂಜೀವ್ ಬಕ್ಷಿ ತಿಳಿಸಿದರು.
ವಿಡಿಯೊಕಾನ್ ಸೌರ ವಿದ್ಯುತ್ ಚಾಲಿತ ಏರ್ಕಂಡೀಶನರ್
ವಿಡಿಯೊಕಾನ್ ಕಂಪನಿಯು 2 ಮಾದರಿಗಳ ನೂತನ ಏರ್ ಕಂಡೀಶನರ್ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ...
ವಿಕ ಸುದ್ದಿಲೋಕ 3 Feb 2017, 9:17 am