ಆ್ಯಪ್ನಗರ

ಬಗರ್‌ ಹುಕುಂಗಾಗಿ ಕೊನೆಯ ಹೋರಾಟ: ಕಾಗೋಡು

ಬಗರ್‌ ಹುಕುಂ ಸಹಿತ ಜನತೆ ಎದುರಿಸುತ್ತಿರುವ ಜಮೀನು ಸಂಬಂಧಿತ ಸಮಸ್ಯೆಗೆ ಪರಿಹಾರ ಒದಗಿಸಲು ಕೊನೆಯ ಹೋರಾಟ ನಡೆಸುವುದಾಗಿ ಸಚಿವ ಕಾಗೋಡು ತಿಮ್ಮಪ್ಪ ಘೋಷಿಸಿದರು.

ವಿಕ ಸುದ್ದಿಲೋಕ 26 Sep 2016, 4:00 am

ಬೆಂಗಳೂರು: ಬಗರ್‌ ಹುಕುಂ ಸಹಿತ ಜನತೆ ಎದುರಿಸುತ್ತಿರುವ ಜಮೀನು ಸಂಬಂಧಿತ ಸಮಸ್ಯೆಗೆ ಪರಿಹಾರ ಒದಗಿಸಲು ಕೊನೆಯ ಹೋರಾಟ ನಡೆಸುವುದಾಗಿ ಸಚಿವ ಕಾಗೋಡು ತಿಮ್ಮಪ್ಪ ಘೋಷಿಸಿದರು.

ಮಲೆನಾಡು ಮಿತ್ರ ವೃಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ಮಲೆನಾಡು ಮಿತ್ರ ಪ್ರಶಸ್ತಿ-2016' ಸ್ವೀಕರಿಸಿ ಮಾತನಾಡಿದ ಅವರು, ''ಸರಕಾರದ ಅಧಿಕಾರಿಗಳು ಅರಣ್ಯ ಭೂಮಿಯನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಂಡಿದ್ದಾರೆ. ಮಲೆನಾಡಿನ ಸೊಪ್ಪಿನ ಬೆಟ್ಟ, ಕಾನು, ಜಮ್ಮಾ ಬಾಣೆಯಂತಹ ಪ್ರದೇಶಗಳನ್ನು ಅರಣ್ಯವೆಂದು ಪರಿಗಣಿಸಿದ್ದಾರೆ. ಇದನ್ನು ಬಿಡಿಸಿಕೊಳ್ಳದಿದ್ದರೆ ನಮ್ಮ ಮಕ್ಕಳು-ಮೊಮ್ಮಕ್ಕಳಿಗೆ ಸೇರಬೇಕಾದ ಭೂಮಿ ಕೈಬಿಡುತ್ತದೆ. ಎಂಥದ್ದೇ ಅಡ್ಡಿಯಾದರೂ,ಅಲ್ಲಿ ನೆಲೆ ನಿಂತಿರುವ ಸಹಸ್ರಾರು ಜನರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ,'' ಎಂದರು.

''ಆಡಳಿತ ನಡೆಸುತ್ತಿರುವ ಅಧಿಕಾರಿಗಳಿಗೆ ಏನೂ ಬೇಕಾಗಿಲ್ಲ. ಕಾರಲ್ಲಿ ಬರ್ತಾರೆ ಹೋಗ್ತಾರೆ. ಅಂತಹ ಅಧಿಕಾರಿಗಳಿಗೆ ಜನರ ನೋವಿಗೆ ಸ್ಪಂದಿಸಬೇಕೆಂಬ ಕಾಳಜಿ ಇಲ್ಲ. ಇದ್ದರೂ, ಸಮಸ್ಯೆಗೆ ಸ್ಪಂದಿಸುವ ಪ್ರಜ್ಞೆಯೇ ಇಲ್ಲ. ಇದನ್ನು ಗಮನಿಸಿಯೇ ಸಿಎಂ ಬಳಿ ವಿವರವಾಗಿ ಚರ್ಚಿಸಿದ್ದು ಕಾಲಮಿತಿಯಲ್ಲಿ ಅರಣ್ಯ ಭೂಮಿ ಎಂದು ಹೇಳಲಾಗುತ್ತಿರುವ ಜಮೀನನ್ನು ಜನರಿಗೆ ಬಿಟ್ಟುಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಾಸಿಕ ಸಭೆಗಳನ್ನು ಆಯೋಜಿಸಿ ಪ್ರಗತಿಯ ವಿವರಗಳನ್ನು ಪಡೆಯುತ್ತಿದ್ದು, ತಪ್ಪು ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ,'' ಎಂದು ಎಚ್ಚರಿಸಿದರು.

ಶುಲ್ಕ ಪರಿಶೀಲನೆಗೆ ಚಿಂತನೆ

''ಅರಣ್ಯ ಸಹಿತ ಸರಕಾರದ ಜಮೀನಿನಲ್ಲಿ ವಾಸವಿರುವವರಿಗೆ ಆ ಭೂಮಿಯನ್ನು ದೃಢೀಕರಿಸಿ ಕೊಡಲು ಇಂತಿಷ್ಟು ಶುಲ್ಕ ನಿಗದಿಯಾಗಿದೆ. ಈ ಶುಲ್ಕ ದುಬಾರಿಯಾಗಿದೆ ಎಂಬ ಆಕ್ಷೇಪ ಜನರಿಂದ ವ್ಯಕ್ತವಾಗಿದೆ. ಇದನ್ನು ಕಂದಾಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಶುಲ್ಕ ಪರಿಷ್ಕರಣೆಗೆ ಚಿಂತನೆ ನಡೆಸಿದೆ. ಶೀಘ್ರವೇ ಅಧಿಕಾರಿಗಳ ಮಟ್ಟದ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು,'' ಎಂದರು.

ಮಲೆನಾಡಿನ ಸಂಸ್ಕೃತಿ ಉಳಿಸಿ

''ರಾಜ್ಯದ ಪ್ರಾಕೃತಿಕ ಸೌಂದರ್ಯದಲ್ಲಿ ಮಲೆನಾಡು ಅತ್ಯಂತ ಶ್ರೀಮಂತವಾಗಿದೆ. ಇದನ್ನು ಆಸ್ವಾದಿಸಿಯೇ ರಾಷ್ಟ್ರಕವಿ ಕುವೆಂಪು ನಾಡಗೀತೆ ಬರೆದು ಮಲೆನಾಡಿನ ಸಂಸ್ಕೃತಿ, ಬದುಕನ್ನು ಪರಿಚಯಿಸಿದ್ದಾರೆ. ನಾಡಿಗೀತೆಯ ಕೊನೆಯ ಚರಣದಲ್ಲಿ ಉಲ್ಲೇಖವಾಗಿರುವ ಭಾವೈಕ್ಯತೆಯ ಸಾಲನ್ನು ಹಿಂದಿಗೆ ಅನುವಾದಿಸಿ ಇಡೀ ರಾಷ್ಟ್ರಕ್ಕೆ ಪರಿಚಯಿಸಬೇಕಿದೆ. ಇದೀಗ ಮಲೆನಾಡಿನ ಪರಂಪರಾನುಗತ ಸಂಸ್ಕೃತಿ ಉಳಿಸಿ ಬೆಳೆಸಲು ಯುವ ಜನತೆ ಮುಂದಾಗಬೇಕಿದೆ,'' ಎಂದು ಕಾಗೋಡು ತಿಮ್ಮಪ್ಪ ಕರೆ ನೀಡಿಧಿದರು.

ಶಾಸಕ ಡಿ.ಎನ್‌.ಜೀವರಾಜ್‌, ಮಲೆನಾಡು ಮಿತ್ರ ವೃಂದದ ಅಧ್ಯಕ್ಷ ಅನಿಲ್‌ ಹೊಸಕೊಪ್ಪ, ಟಿ.ಡಿ.ರಾಜೇಗೌಡ ಮತ್ತಿತರರಿದ್ದರು.

ಐವರಿಗೆ ಪ್ರಶಸ್ತಿ ಪ್ರದಾನ

ಸಚಿವ ಕಾಗೋಡು ತಿಮ್ಮಪ್ಪಗೆ 'ಮಲೆನಾಡು ಮಿತ್ರ ಪ್ರಶಸ್ತಿ' ಪ್ರದಾನ ಮಾಡಧಿಲಾಯಿತು. 'ಮಲೆನಾಡು ಸಾಧಕ ಪ್ರಶಸ್ತಿ'ಯನ್ನು ಕೆ.ವಿಶ್ವನಾಥ್‌(ಕೃಷಿ), ಎಚ್‌.ಎಸ್‌.ಮಂಜುನಾಥ್‌(ಶಿಕ್ಷಣ), ಎಚ್‌.ವಿ.ಲಕ್ಷ್ಮಣ ರಾವ್‌(ಉದ್ಯಮ), ಕುಂಜೂರು ಹರೀಶ್‌(ಸಾಹಿತ್ಯ ಹಾಗೂ ಕಲೆ)ಗೆ ಪ್ರದಾನ ಮಾಡಲಾಯಿತು. ಇದೇ ವೇಳೆ ಮಲೆನಾಡಿನ ಸಂಸ್ಕೃತಿ ಸೇರಿದಂತೆ ನಾನಾ ವಿಷಯಗಳನ್ನು ಒಳಗೊಂಡ

Vijaya Karnataka Web the last fight for bagar hukum kagodu
ಬಗರ್‌ ಹುಕುಂಗಾಗಿ ಕೊನೆಯ ಹೋರಾಟ: ಕಾಗೋಡು

ವೆಬ್‌ಸೈಟ್‌ (www.malenadu.com) ಬಿಡುಗಡೆಗೊಳಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ