Please enable javascript.5 Highest Waterfall In India - ಭಾರತದ ಅತಿ ಎತ್ತರದ 5 ಜಲಪಾತಗಳನ್ನು ನೋಡಿದ್ದೀರಾ? - Vijaya Karnataka

ಭಾರತದ ಅತಿ ಎತ್ತರದ 5 ಜಲಪಾತಗಳನ್ನು ನೋಡಿದ್ದೀರಾ?

Vijaya Karnataka Web 17 Oct 2022, 10:40 am
Subscribe

ಭಾರತದಲ್ಲಿರುವ ಅತಿ ಎತ್ತರವಾದ ಜಲಪಾತಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ ಓದಿ.

5 highest waterfall in india
ಭಾರತದ ಅತಿ ಎತ್ತರದ 5 ಜಲಪಾತಗಳನ್ನು ನೋಡಿದ್ದೀರಾ?
PC: istock

ಭಾರತವು ಸಾಟಿಯಿಲ್ಲದ ಅಸಂಖ್ಯಾತ ಜಲಪಾತಗಳನ್ನು ಒಳಗೊಂಡಿದೆ. ಇಲ್ಲಿನ ಜಲಪಾತಗಳನ್ನು ವೀಕ್ಷಿಸಲು ದೇಶ-ವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ದಟ್ಟವಾದ ಕಾಡಿನ ನಡುವೆ ಬಿಳಿ ನೊರೆಯಂತೆ ಧರೆಗೆ ಧುಮ್ಮಿಕ್ಕುವ ದೃಶ್ಯ ರೋಮಾಂಚಕವಾಗಿರುತ್ತದೆ. ಸಾಕಷ್ಟು ಪ್ರಾಕೃತಿಕ ಮಡಿಲಲ್ಲಿ ರೂಪುಗೊಂಡಿರುವ ಜಲಪಾತಗಳು ಪ್ರಕೃತಿ ಪ್ರೇಮಿಗಳನ್ನು ಮಂತ್ರಮುಗ್ಧಗೊಳಿಸುವ ಸೌಂದರ್ಯವನ್ನು ಹೊಂದಿರುತ್ತದೆ.

ಅದರಲ್ಲೂ ಮಳೆಗಾಲದ ಸಮಯದಲ್ಲಿ ಮೈದುಂಬಿ ಧುಮ್ಮಿಕ್ಕುತ್ತದೆ. ಜಲಪಾತ ಪ್ರೇಮಿಗಳು ತಪ್ಪದೇ ಭಾರತದ ಅತಿ ಎತ್ತರದ ಜಲಪಾತಗಳಿಗೆ ಒಮ್ಮೆ ಪ್ರವಾಸ ಮಾಡಲೇಬೇಕು. ಹಾಗಾದರೆ ಆ ಜಲಪಾತಗಳು ಯಾವುವು? ಎಲ್ಲೆಲ್ಲಿವೆ? ಎಂಬುದನ್ನು ಇಲ್ಲಿ ತಿಳಿಯಿರಿ.

ಕುಂಚಿಕಲ್ ಜಲಪಾತ, ಕರ್ನಾಟಕ

ಕುಂಚಿಕಲ್ ಜಲಪಾತ, ಕರ್ನಾಟಕ

ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿರುವ ಈ ಕುಂಚಿಕಲ್‌ ಜಲಪಾತವು ಅತ್ಯಂತ ರಮಣೀಯವಾದ ತಾಣದಲ್ಲಿ ನೆಲೆಸಿದೆ. ನಿಮಗಿದು ತಿಳಿದಿರಲಿ, ಈ ಜಲಪಾತವು ಭಾರತದ ಅತಿ ಎತ್ತರದ ಜಲಪಾತ ಮಾತ್ರವಲ್ಲ, ಏಷ್ಯಾದ ಎರಡನೇ ಅತಿದೊಡ್ಡ ಜಲಪಾತವಾಗಿದೆ.

ಇವು ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯ ಗಡಿಭಾಗದಲ್ಲಿನ ಹೊಸನಗರ ತಾಲೂಕಿನಲ್ಲಿದೆ. ವಾರಾಹಿ ನದಿಯಿಂದ ಸೃಷ್ಟಿಯಾಗುವ ಈ ಜಲಪಾತವು ಸುಮಾರು 1,493 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಮಳೆಗಾಲದ ಸಮಯದಲ್ಲಿ ನೀರಿನ ರಭಸ ಹೆಚ್ಚಾಗಿರುತ್ತದೆ.

​ಬರೇಹಿಪಾನಿ ಜಲಪಾತ, ಒಡಿಶಾ

​ಬರೇಹಿಪಾನಿ ಜಲಪಾತ, ಒಡಿಶಾ

PC: Samarth Joel Ram

ಬರೇಹಿಪಾನಿ ಜಲಪಾತವು ಭಾರತದ ಒಡಿಶಾ ರಾಜ್ಯದ ಮಯೂರ್‌ಭಂಜ್‌ ಜಿಲ್ಲೆಯ ಸಿಮ್ಲಿಪಾಲ್ ರಾಷ್ಟ್ರೀಯ ಉದ್ಯಾನವನದಲ್ಲಿ ನೆಲೆಸಿದೆ. ಇದು ಎರಡು ಹಂತದ ಜಲಪಾತವಾಗಿದ್ದು, ಭಾರತದ 2 ನೇ ಅತಿ ಎತ್ತರದ ಜಲಪಾತವಾಗಿದೆ. ಇದು 399 ಮೀ ಎತ್ತರದಿಂದ ಧರೆಗೆ ಬೀಳುತ್ತದೆ. ಈ ತಾಣವು ದೇಶದ ಪ್ರವಾಸಿಗರನ್ನು ಮತ್ತು ಪ್ರಕೃತಿ ಉತ್ಸಾಹಿಗಳನ್ನು ಆಕರ್ಷಿಸುತ್ತದೆ.

ಚಾರಣ ಮಾಡಲು ಆಸಕ್ತಿ ಇರುವವರು ಈ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುತ್ತಾರೆ. ಅಲ್ಲದೆ, ಒಡಿಶಾದ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಜಲಪಾತ ಒಂದಾಗಿದೆ.

​ನೋಹ್‌ಕಲಿಕಾಯ್‌ ಜಲಪಾತ, ಮೇಘಾಲಯ

​ನೋಹ್‌ಕಲಿಕಾಯ್‌ ಜಲಪಾತ, ಮೇಘಾಲಯ

PC: Kunal Dalui

ಮೇಘಾಲಯದ ಪೂರ್ವ ಖಾಸಿ ಹಿಲ್ಸ್‌ ಜಿಲ್ಲೆಯ ಚಿರಾಪುಂಜಿಯ ಬಳಿ ಈ ನೋಹ್‌ಕಲಿಕಾಯ್‌ ಜಲಪಾತವಿದೆ. ಇದನ್ನು ನೊಹ್ಕಾಲಿಕೈ ಜಲಪಾತ ಎಂದೂ ಕೂಡ ಕರೆಯುತ್ತಾರೆ. ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಇದು ಒಂದಾಗಿದ್ದು, ಸುಮಾರು 340 ಮೀ ಎತ್ತರದಿಂದ ಬೀಳುತ್ತದೆ. ಜಲಪಾತದ ಕೆಳಗೆ ಜಲಪಾತದ ನೀರಿನಿಂದ ಕೊಳವು ರೂಪುಗೊಂಡಿದೆ.

ಸುತ್ತಲೂ ಹಚ್ಚ ಹಸಿರಿನ ಸ್ವರ್ಗದ ಮಧ್ಯೆ ಬಿಳಿ ನೊರೆಯ ನೀರು ರಭಸವಾಗಿ ಬೀಳುತ್ತಿರುವ ದೃಶ್ಯವನ್ನು ಕಣ್ಣಾರೆ ಕಾಣುವುದೇ ಸ್ವರ್ಗ.

ಇದನ್ನೂ ಓದಿ: ಗೋವಾದಿಂದ ಕೇವಲ 15 ಕಿ.ಮೀ ದೂರದಲ್ಲಿರುವ ಕಾರವಾರದಲ್ಲಿವೆ ಕಣ್ಮನ ಸೆಳೆಯುವ ಪ್ರವಾಸಿ ತಾಣಗಳು

​ನೋಹ್‍ಸ್ಗಿಥಿಯಾಂಗ್ ಜಲಪಾತ

​ನೋಹ್‍ಸ್ಗಿಥಿಯಾಂಗ್ ಜಲಪಾತ

PC: Ppyoonus

ಭಾರತದ ಮತ್ತೊಂದು ಅತಿ ಎತ್ತರವಾದ ಜಲಪಾತಗಳಲ್ಲಿ ಮೇಘಾಲಯದ ನೋಹ್‍ಸ್ಗಿಥಿಯಾಂಗ್ ಜಲಪಾತ ಕೂಡ ಒಂದು. ಇದನ್ನು ಸೆವೆನ್‌ ಸಿಸ್ಟರ್ಸ್‌ ಫಾಲ್ಸ್‌ ಅಥವಾ ಏಳು ಸಹೋದರಿಯರ ಜಲಪಾತ ಎಂದೂ ಸಹ ಕರೆಯುತ್ತಾರೆ. ಇದು ಮೇಘಾಲಯದ ಪ್ರಸಿದ್ಧ ಮಾವ್ಸ್ಮೈ ಗ್ರಾಮದಿಂದ ಸುಮಾರು 1 ಕಿ.ಮೀ ದೂರದಲ್ಲಿದೆ.

ಮೇಘಾಲಯದ ಪೂರ್ವ ಖಾಸಿ ಗುಡ್ಡಗಳ ಜಿಲ್ಲೆಯಲ್ಲಿನ ಮಾಸ್ಮಾಯ್‌ ಎಂಬ ಗ್ರಾಮದಲ್ಲಿರುವ ಈ ಜಲಪಾತವು ಸುಮಾರು 315 ಮೀ ಎತ್ತರವನ್ನು ಹೊಂದಿದೆ.

ಇದನ್ನೂ ಓದಿ: 2 ದಿನದ ಪ್ರವಾಸಕ್ಕಾಗಿ ಮೈಸೂರಿನ ಈ ತಾಣಗಳ ಪ್ರವಾಸ ಮಾಡಿ

​ದೂಧ್‌ ಸಾಗರ್‌ ಜಲಪಾತ, ಗೋವಾ

​ದೂಧ್‌ ಸಾಗರ್‌ ಜಲಪಾತ, ಗೋವಾ

PC: Purshi

ದೂಧ್ ಸಾಗರ್ ಅತ್ಯದ್ಭುತವಾದ ಜಲಪಾತ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಇನ್ನು, ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ದೂಧ್‌ ಸಾಗರ್ ಕೂಡ ಒಂದು. ಇದು 310 ಮೀ ಎತ್ತರದಿಂದ ಧುಮ್ಮಿಕ್ಕುತ್ತದೆ.

ಈ ಸುಂದರವಾದ ಜಲಪಾತವು ಗೋವಾ ಹಾಗು ಕರ್ನಾಟಕದ ಗಡಿಯಲ್ಲಿದೆ .ಇದು ಗೋವಾದ ಅತ್ಯುತ್ತಮವಾದ ಹಾಗೂ ಸುಂದರವಾದ ಜಲಪಾತವು ಹೌದು. ಇದು ಮಾಂಡೋವಿ ಎಂಬ ನದಿಯಿಂದ ಹುಟ್ಟುತ್ತದೆ. ಒಟ್ಟಾರೆ ಈ ರಮಣೀಯವಾದ ಜಲಪಾತವು ಭಾರತದ ಐದನೇ ಅತಿದೊಡ್ಡ ಜಲಪಾತವಾಗಿದೆ.

ಇದನ್ನೂ ಓದಿ: ದೂಧ್‌ಸಾಗರ್‌ ಟ್ರೆಕ್ಕಿಂಗ್ ಮಾಡುವ ಮುಂಚೆ ಈ ವಿಷಯ ತಿಳಿದಿರಲಿ

Read In English: 5 HIGHEST WATERFALLS IN INDIA

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ