ಆ್ಯಪ್ನಗರ

ಭಾರತದ ಚೀಪೆಸ್ಟ್‌ ಹನಿಮೂನ್‌ ಪ್ಲೇಸ್‌ಗಳಿವು…

ಮಧುಚಂದ್ರಕ್ಕಾಗಿ ಬಜೆಟ್‌ ಸ್ನೇಹಿ ತಾಣಗಳ ಹುಡುಕಾಟದಲ್ಲಿ ನೀವಿದ್ದರೆ ಇಲ್ಲಿವೆ ಭಾರತದ ಚೀಪೆಸ್ಟ್‌ ಹನಿಮೂನ್‌ ಪ್ಲೇಸ್‌ಗಳು. ಅದರ ಬಗ್ಗೆ ಸಂಪೂರ್ಣ ಮಾಹಿತಿ ಲೇಖನದಲ್ಲಿದೆ ಓದಿ.

Authored by ಸೌಮ್ಯ ಟೇಮ್ಕರ್ | Vijaya Karnataka Web 24 Nov 2022, 6:36 pm
PC: istock
Vijaya Karnataka Web cheapest honeymoon destinations in india
ಭಾರತದ ಚೀಪೆಸ್ಟ್‌ ಹನಿಮೂನ್‌ ಪ್ಲೇಸ್‌ಗಳಿವು…


ನವಜೋಡಿಗಳು ವಿವಾಹವಾದ ನಂತರ ಬಂಧುಗಳಿಂದ ದೂರವಿದ್ದು, ಕೆಲವು ದಿನಗಳು ಏಕಾಂತ ಬಯಸುತ್ತಾರೆ. ದುಬಾರಿ ಗಿರಿಧಾಮಗಳಿಗೆ ಹೋಗಲು ಸಾಧ್ಯವಾಗದವರು ಬೇಸರಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮ ಭಾರತದಲ್ಲಿ ‘ಚೀಪೆಸ್ಟ್‌ ಹನಿಮೂನ್‌ ಪ್ಲೇಸ್‌’ಗಳಿವೆ.

ಲೇಖನದಲ್ಲಿ ಹೇಳಲಾಗುವ ತಾಣಗಳಲ್ಲಿ ಮನೋಹರವಾದ ಪ್ರೇಕ್ಷಣೀಯ ಸ್ಥಳಗಳು ಕೂಡ ಇವೆ. ನೀವು ಅವುಗಳನ್ನು ಕೂಡ ಅನ್ವೇಷಿಸಿ ಬರಬಹುದು. ಹಾಗಾದರೆ ಭಾರತದ ಚೀಪೆಸ್ಟ್‌ ಹನಿಮೂನ್‌ ಸ್ಥಳಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯಿರಿ.

ಗೋವಾ

ಬಜೆಟ್ ಸ್ನೇಹಿ ಹನಿಮೂನ್‌ಗೆ ಗೋವಾದ ಅತ್ಯಂತ ಸೂಕ್ತವಾದ ತಾಣಗಳಲ್ಲಿ ಒಂದಾಗಿದೆ. ಈ ಪುಟ್ಟದಾದ ರಾಜ್ಯದಲ್ಲಿ ಡಜನ್‌ಗಟ್ಟಲೆ ಕಡಲತೀರಗಳಿವೆ. ಪ್ರಾಚೀನ ದೇವಾಲಯಗಳು, ಕೋಟೆ, ಗುಹೆಗಳನ್ನು ನೀವು ಸಂಗಾತಿಯೊಂದಿಗೆ ಅನ್ವೇಷಿಸಬಹುದು. ನಿಮ್ಮ ಏಕಾಂತಕ್ಕೆ ಭಂಗವಾಗದ ರೀತಿಯ ಹೋಂ ಸ್ಟೇಗಳು, ರೆಸಾರ್ಟ್‌ಗಳು ಇಲ್ಲಿವೆ.

ಗೋವಾದ ಪ್ರವಾಸದಲ್ಲಿ ಶಾಪಿಂಗ್‌, ಸಾಹಸ ಚಟುವಟಿಕೆಗಳನ್ನು ಅಂತ್ಯವಿಲ್ಲದೇ ಎಂಜಾಯ್ ಮಾಡಬಹುದು. ಒಟ್ಟಾರೆ ಭಾರತದ ಚೀಪೆಸ್ಟ್‌ ಹನಿಮೂನ್‌ ಪ್ಲೇಸ್‌ಗಳಲ್ಲಿ ಗೋವಾ ರಾಜ್ಯವು ಒಂದು.

ಶಿಮ್ಲಾ

ನೀವು ಅಂದುಕೊಂಡಿರುವ ಹಾಗೆ ಶಿಮ್ಲಾದ ಪ್ರವಾಸ ತುಂಬಾ ದುಬಾರಿಯಲ್ಲ. ನೈನಿತಾಲ್‌ಗೆ ಹೋಲಿಸಿದರೆ ಶಿಮ್ಲಾ ಬೆಸ್ಟ್ ಎಂದೇ ಹೇಳಬಹುದು. ಮಧುಚಂದ್ರಕ್ಕೆ ಮತ್ತು ಬಜೆಟ್‌ ಸ್ನೇಹಿ ಪ್ರವಾಸಕ್ಕೆ ಹಿಮಾಚಲ ಪ್ರದೇಶದ ಶಿಮ್ಲಾ ಆಯ್ಕೆ ಮಾಡಿಕೊಳ್ಳಿ.

ಚುಮು ಚುಮು ಚಳಿಗೆ ನವ ಜೋಡಿಗಳು ಮತ್ತಷ್ಟು ಹತ್ತಿರವಾಗುವುದರಲ್ಲಿ ಅನುಮಾನವೇ ಇಲ್ಲ. ಶಿಮ್ಲಾದ ಪ್ರವಾಸದಲ್ಲಿ ತಪ್ಪದೇ ರಿಡ್ಜ್‌, ಜಾಖೂ ದೇವಾಲಯ, ಶಿಮ್ಲಾ ಟಾಯ್ ಟ್ರೈನ್, ನರಕಂದದಂತಹ ರೋಮಾಂಚಕ ತಾಣಗಳಿಗೂ ಹೋಗಿ. ನಿಮ್ಮ ಏಕಾಂತಕ್ಕೆ ಇಲ್ಲಿ ಹಲವಾರು ಖಾಸಗಿ ಹೋಂ ಸ್ಟೇಗಳಿವೆ.

ವಯನಾಡ್

ಕೇರಳ ರಾಜ್ಯದ ವಯನಾಡ್‌ ಅತ್ಯಂತ ರಮಣೀಯವಾದ ಗಿರಿಧಾಮವಾಗಿದೆ. ಬಜೆಟ್‌ ಸ್ನೇಹಿ ಮಧುಚಂದ್ರಕ್ಕೆ ಇದು ಬೆಸ್ಟ್ ಆಗಿದೆ. ಹೇಳಿ-ಕೇಳಿ ವಯನಾಡ್‌ ಕೇರಳದ ಗಿರಿಧಾಮ. ತನ್ನ ಸಾಟಿಯಿಲ್ಲದ ಪ್ರಾಕೃತಿಕ ಸೌಂದರ್ಯದಿಂದ ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತದೆ. ಇಲ್ಲಿ ಚೆಂಬ್ರ ಶಿಖರ, ನೀಲಿಮಲ, ಮೀನ್‌ಮುಟ್ಟಿ ಜಲಪಾತ, ಚೇತಾಲಯಮ್‌, ಪಕ್ಷಿಪಾತಾಳಮ್‌, ಬಾಣಾಸುರಸಾಗರ ಅಣೆಕಟ್ಟು, ಸೇರಿದಂತೆ ಇನ್ನು ಅನೇಕ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡಬಹುದು.

ಇದನ್ನೂ ಓದಿ: ಬಜೆಟ್‌ ಸ್ನೇಹಿ ಹೋಂ ಸ್ಟೇಗಾಗಿ ಮುನ್ನಾರ್‌ನ ಈ ತಾಣಗಳನ್ನು ಆಯ್ಕೆ ಮಾಡಿಕೊಳ್ಳಿ

ಊಟಿ

ಬೆಂಗಳೂರು ಹಾಗು ಮೈಸೂರಿನ ಜನರಿಗೆ ಊಟಿ ಗಿರಿಧಾಮ ಸಮೀಪದಲ್ಲಿದೆ. ದಕ್ಷಿಣ ಭಾರತದ ಅತ್ಯಂತ ಸೊಗಸಾದ ಗಿರಿಧಾಮಗಳಲ್ಲಿ ಊಟಿ ಕೂಡ ಒಂದು. ಊಟಿಯನ್ನು ನೀಲಗಿರಿ ಬೆಟ್ಟಗಳ ರಾಣಿ ಎಂದೇ ಕರೆಯುತ್ತಾರೆ. ಇನ್ನು ದಟ್ಟವಾದ ಚಹಾದ ತೋಟಗಳು ಸಂಗಾತಿಗಳಿಗೆ ಬಹಳ ರೋಮ್ಯಾಂಟಿಕ್‌ ಅನ್ನಿಸಬಹುದು.

ಬಜೆಟ್‌ ಸ್ನೇಹಿ ಪ್ರವಾಸ ಮಾಡಲು ಇದಕ್ಕಿಂತ ಅತ್ಯುತ್ತಮವಾದ ಗಿರಿಧಾಮ ಬೇಕೇ? ಇಲ್ಲಿಗೆ ಹೋದಾಗ ದೊಡ್ಡ ಬೆಟ್ಟ, ಕೆಟ್ಟಿ ಕಣಿವೆ, ಡಾಲ್ಫಿನ್‌ ನೋಸ್‌ಅನ್ನು ನೋಡುವುದನ್ನು ಮರೆಯದಿರಿ.

ಇದನ್ನೂ ಓದಿ: ರಜೆ ಸಿಕ್ಕಾಗ ತಪ್ಪದೇ ಶಿಮ್ಲಾದ ಪ್ರವಾಸ ಮಾಡಿ…! ಏನೇನಿದೆ ಶಿಮ್ಲಾದಲ್ಲಿ…?

​ಕೊಡೈಕೆನಾಲ್‌

ತಮಿಳುನಾಡಿನ ಮತ್ತೊಂದು ಆಹ್ಲಾದಕರವಾದ ಗಿರಿಧಾಮಗಳಲ್ಲಿ ಕೊಡೈಕೆನಾಲ್‌ ಕೂಡ ಒಂದು. ತನ್ನ ಅಪೂರ್ವವಾದ ಸೌಂದರ್ಯದಿಂದ ಈ ಸುಂದರವಾದ ಗಿರಿಧಾಮದ ಸೌಂದರ್ಯ ಇಮ್ಮಡಿಗೊಂಡಿದೆ. ಎತ್ತರವಾದ ತೆಂಗಿನ ಮರಗಳು, ಚಹಾದ ತೋಟಗಳು ಸಂಗಾತಿಗಳಿಗೆ ಇಷ್ಟವಾಗುತ್ತದೆ.

ಕೊಡೈಕೆನಾಲ್‌ನಲ್ಲಿ ಬಜೆಟ್ ಸ್ನೇಹಿ ಹೋಂ ಸ್ಟೇಗಳಿಗೇನೂ ಕೊರತೆ ಇಲ್ಲ. ಮಧುಚಂದ್ರಕ್ಕೆ ಈ ತಾಣ ಹೇಳಿ ಮಾಡಿಸಿದ ಸ್ಥಳವಾಗಿದೆ. ಕೊಡೈ ಸರೋವರ, ಬೇರ್ ಶೋಲಾ ಜಲಪಾತ, ಗ್ರೀನ್‌ ವ್ಯಾಲಿ ವ್ಯೂ, ಬೆರಿಜಮ್‌ ಸರೋವರ, ಟ್ರೆಕ್ಕಿಂಗ್‌ನಂತಹ ರೋಮಾಂಚಕ ಚಟುವಟಿಕೆಗಳನ್ನು ಕೈಗೊಳ್ಳಬಹುದು.

ಇದನ್ನೂ ಓದಿ: ಕೊಡೈಕೆನಾಲ್‌ನಲ್ಲಿ ಯಾವೆಲ್ಲಾ ತಾಣಗಳಿಗೆ ಹೋಗಿ ಎಂಜಾಯ್ ಮಾಡಬೇಕು ಗೊತ್ತಾ?

ಲೇಖಕರ ಬಗ್ಗೆ
ಸೌಮ್ಯ ಟೇಮ್ಕರ್
ಸೌಮ್ಯ ಟೇಮ್ಕರ್ ಅವರು ತಮ್ಮ ಉದ್ಯಮದಲ್ಲಿ 4 ವರ್ಷಗಳ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರಾಗಿದ್ದಾರೆ. ಪ್ರಯಾಣಕ್ಕೆ ಸಂಬಂಧಿಸಿದ ಲೇಖನವನ್ನು ಅಚ್ಚುಕಟ್ಟಾಗಿ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಸೌಮ್ಯಾ ಕಥೆಗಳನ್ನು ಹೇಳುವ ಹಾಗು ಪ್ರಯಾಣದ ಅನುಭವವನ್ನು ತಮ್ಮ ಲೇಖನದ ಮೂಲಕ ಹಂಚಿಕೊಳ್ಳಲು ಹೆಚ್ಚು ಇಷ್ಟ ಪಡುತ್ತಾರೆ. ತನ್ನ ವೃತ್ತಿಜೀವನದ ಅವಧಿಯಲ್ಲಿ, ಪ್ರಪಂಚದ ಅನೇಕ ಸ್ಥಳಗಳ ಬಗ್ಗೆ ರಸವತ್ತಾದ ಲೇಖನಗಳನ್ನು ಓದುಗರಿಗಾಗಿ ಬರೆಯುತ್ತಾ ಬಂದಿದ್ದಾರೆ. ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಸೌಮ್ಯ, ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಟಿಪ್ಸ್‌ಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ವಾಸ್ತವವಾಗಿ, ಆಕೆಯ ಬರವಣಿಗೆಯ ಶೈಲಿಯು ಸ್ಪಷ್ಟ ಮತ್ತು ನಿಖರತೆಯನ್ನು ಹೊಂದಿರುತ್ತದೆ. ಓದುಗರನ್ನು ತನ್ನ ಬರವಣಿಗೆಯಿಂದ ಸೆಳೆಯುವ ವಿಶಿಷ್ಟ ಸಾಮರ್ಥ್ಯ ಆಕೆಯಲ್ಲಿದೆ. ಪ್ರಯಾಣದ ಉತ್ಸಾಹಿಗಳಿಗೆ ಅವಳ ಲೇಖನಗಳನ್ನು ಓದಲೇಬೇಕು ಎನ್ನುವ ಭಾವ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸೌಮ್ಯಾ ಕೇವಲ ಪ್ರವಾಸಗಳಲ್ಲಿ ಮಾತ್ರ ಅತ್ಯಾಸಕ್ತಿ ಹೊಂದಿರುವ ವ್ಯಕ್ತಿಯಲ್ಲ, ಬದಲಾಗಿ ಕಾದಂಬರಿಗಳನ್ನು ಓದುವುದನ್ನು ಆನಂದಿಸುತ್ತಾಳೆ. ಜೊತೆಗೆ ಪ್ರತಿನಿತ್ಯ ನಡೆಯುವ ರಾಜಕೀಯ ಸುದ್ದಿಗಳ ಮಾಹಿತಿಗಳನ್ನು ಸಂಗ್ರಹಿಸುತ್ತಾಳೆ. ಒಟ್ಟಾರೆ ಸೌಮ್ಯಾ ಜೀವನದ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿರುವ ಸುಸಂಬದ್ಧ ವ್ಯಕ್ತಿ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ