ಆ್ಯಪ್ನಗರ

ರಕ್ಷಾ ಬಂಧನವನ್ನು ಬಿಹಾರ್‌ನಲ್ಲಿ ಹೇಗೆ ಆಚರಿಸುತ್ತಾರೆ ಗೊತ್ತಾ?

ಭಾರತದ ಈ ರಾಜ್ಯಗಳಲ್ಲಿ ರಕ್ಷಾ ಬಂಧನ ಈ ರೀತಿ ಆಚರಿಸುತ್ತಾರಂತೆ. ಯಾವ ರಾಜ್ಯ? ಯಾವ ರೀತಿ ಆಚರಿಸುತ್ತಾರೆ ಎಂಬುದನ್ನು ಇಲ್ಲಿ ತಿಳಿಯಿರಿ.

Vijaya Karnataka Web 11 Aug 2022, 12:41 pm
PC: istock
Vijaya Karnataka Web raksha bandhan celebration in different states
ರಕ್ಷಾ ಬಂಧನವನ್ನು ಬಿಹಾರ್‌ನಲ್ಲಿ ಹೇಗೆ ಆಚರಿಸುತ್ತಾರೆ ಗೊತ್ತಾ?


ನಮ್ಮ ಭಾರತದಲ್ಲಿ ನಡೆಯುವ ಹಬ್ಬಗಳು ಒಂದೊಂದು ರಾಜ್ಯಗಳಲ್ಲಿ ಒಂದೊಂದು ರೀತಿಯಲ್ಲಿ ಆಚರಿಸಿ ಸಂಭ್ರಮಿಸುತ್ತಾರೆ. ಅದೇ ರೀತಿಯಲ್ಲಿ ಅಣ್ಣ-ತಂಗಿಯ ಬಂಧನವನ್ನು ಮತ್ತಷ್ಟು ಗಟ್ಟಿಗೊಳಿಸುವ ರಕ್ಷಾ ಬಂಧನವನ್ನು ಕೂಡ ವಿಭಿನ್ನವಾಗಿ ಆಚರಿಸುತ್ತಾರೆ.

ಅಣ್ಣ ಅಥವಾ ತಮ್ಮನ ಮಣಿಕಟ್ಟಿಗೆ ತಂಗಿ ಅಥವಾ ಅಕ್ಕ ದೇವರ ಸ್ಮರಣೆ ಮಾಡುತ್ತಾ ರಕ್ಷಾ ಬಂಧನವನ್ನು ಕಟ್ಟುತ್ತಾರೆ. ಇದರಿಂದ ಮುಂದಿನ ದಿನಗಳಲ್ಲಿ ಆರೋಗ್ಯ, ಅದೃಷ್ಟ ಎಲ್ಲವೂ ತಮ್ಮ ಸಹೋದರನಿಗೆ ಒಲಿದು ಬರಲಿ ಎಂಬುದೇ ಆಗಿದೆ. ನಂತರ ಅಣ್ಣನ ಬಾಯಿಗೆ ಸಿಹಿಯನ್ನು ತಿನ್ನಿಸಿ ಆಶೀರ್ವಾದ ಪಡೆಯುತ್ತಾರೆ.

ಇದಕ್ಕೆ ಪ್ರತಿಯಾಗಿ ಸಹೋದರನು ತನ್ನ ಸಹೋದರಿಗೆ ಕಾಣಿಕೆ ಅಥವಾ ಬಹುಮಾನವನ್ನು ನೀಡುತ್ತಾನೆ. ಇಂತಹ ಆಚರಣೆಗಳನ್ನು ಭಾರತದ ವಿವಿಧ ಭಾಗಗಳಲ್ಲಿ ಹೇಗೆ ಆಚರಿಸುತ್ತಾರೆ ಎಂಬುದನ್ನು ಇಲ್ಲಿ ತಿಳಿಯಿರಿ.

​ಮಹಾರಾಷ್ಟ್ರ

ಮಹಾರಾಷ್ಟ್ರ ಸೇರಿದಂತೆ ಇನ್ನಿತರ ಕರಾವಳಿ ಪ್ರದೇಶಗಳಲ್ಲಿ ರಕ್ಷಾ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಮಹಾರಾಷ್ಟ್ರದ ಮಂದಿ ಕೂಡ ಪೌರ್ಣಿಮಾದ ದಿನದಂದು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ.

ಈ ಸಮಯದಲ್ಲಿ ಮೀನುಗಾರ ಸಮುದಾಯವು ತೆಂಗಿನಕಾಯಿಯನ್ನು ಸಮುದ್ರಕ್ಕೆ ಅರ್ಪಿಸುತ್ತಾರೆ. ನಂತರ ತೆಂಗಿನಕಾಯಿಯಿಂದ ರುಚಿಯಾದ ಖಾದ್ಯವನ್ನು ಬೇಯಿಸಿ ಆಹಾರವನ್ನು ಕುಟುಂಬ ಸಮೇತ ಸೇವಿಸುತ್ತಾರೆ. ಈ ಪ್ರಕ್ರಿಯೆ ಆದ ನಂತರವಷ್ಟೇ ರಕ್ಷಾ ಬಂಧನ ಹಬ್ಬವು ಆರಂಭವಾಗುತ್ತದೆ.

ಗುಜರಾತ್‌

ಗುಜರಾತ್‌ ರಾಜ್ಯದಲ್ಲಿ ಕೂಡ ರಕ್ಷಾ ಬಂಧನವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಈ ಸಮಯದಲ್ಲಿ ಮಹಿಳೆಯರು ಶಿವನ ಆರಾಧನೆಯಿಂದ ಪ್ರಾರಂಭಿಸುತ್ತಾರೆ. ಸಮೀಪದ ದೇವಾಲಯಗಳಲ್ಲಿ ಶಿವಲಿಂಗವನ್ನು ಪೂಜಿಸಿ, ಕೆಲವು ಸಿಹಿಯಾದ ಭಕ್ಷ್ಯಗಳನ್ನು ಸಮರ್ಪಿಸುತ್ತಾರೆ. ನಂತರ ತಮ್ಮ ಸಹೋದರನ ಮಣಿಕಟ್ಟಿಗೆ ರಕ್ಷಾ ಬಂಧನವನ್ನು ಕಟ್ಟಿ ಆಶೀರ್ವಾದ ಪಡೆಯುತ್ತಾರೆ.

​ಒಡಿಶಾ

ಒಡಿಶಾದಲ್ಲಿ ಕೂಡ ಇತರ ರಾಜ್ಯಗಳಂತೆ ರಾಖಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಒಡಿಶಾದ ಹಲವಾರು ಭಾಗಗಳಲ್ಲಿ ಹಸುಗಳು ಮತ್ತು ಹೋರಿಗಳನ್ನು ಪೂಜಿಸುತ್ತಾರೆ. ಸ್ಥಳೀಯ ಕ್ರೀಡಾ ಹಬ್ಬವಾಗಿರುವ ಗಮ್ಹ ದಿಯಾನ್ ಅನ್ನು ಹಬ್ಬದ ಸಮಯದಲ್ಲಿ ಆಚರಿಸುತ್ತಾರೆ.

ಒಡಿಶಾದಲ್ಲಿ ರಕ್ಷಾ ಬಂಧನದ ದಿನವನ್ನು ಶ್ರೀ ಕೃಷ್ಣನ ಹಿರಿಯ ಸಹೋದರ ಬಲದೇವನ ಜನ್ಮದಿನದ ಸ್ಮರಣಾರ್ಥಕವಾಗಿ ಆಚರಿಸುತ್ತಾರೆ.

ಇದನ್ನೂ ಓದಿ: ಡಾರ್ಜಿಲಿಂಗ್‌ನಲ್ಲಿದೆ ಜಪಾನೀಯರ ಅದ್ಭುತ ದೇವಾಲಯ

​ಮಧ್ಯ ಪ್ರದೇಶ ಮತ್ತು ಬಿಹಾರ

ಭಾರತದ ಮಧ್ಯ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ರೈತರು ಭೂಮಿಯನ್ನು ರಕ್ಷಾ ಬಂಧನದ ಪೂರ್ಣಿಮಾ ದಿನದಂದು ಪೂಜಿಸುತ್ತಾರೆ. ಪೂರ್ಣಿಮಾದ 1 ವಾರದ ಮುಂಚಿತವಾಗಿ ವಿವಿಧ ಉತ್ಸವಗಳು ಪ್ರಾರಂಭವಾಗುತ್ತವೆ.

ಈ ಸಮಯದಲ್ಲಿ ತಾವು ಬೆಳೆದ ಧಾನ್ಯಗಳಿಂದ ಸ್ವಾದಿಷ್ಟವಾದ ಭಕ್ಷ್ಯವನ್ನು ತಯಾರಿಸುತ್ತಾರೆ. ಪವಿತ್ರವಾದ ನದಿ, ತೀರ ಅಥವಾ ಬಾವಿಗಳಲ್ಲಿ ಸ್ನಾನವನ್ನು ಮಾಡಿ ರಕ್ಷಾ ಬಂಧನದ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸುತ್ತಾರೆ. ನಂತರ ತಾಯಂದಿರರು ತಮ್ಮ ಗಂಡು ಮಕ್ಕಳ ದೀರ್ಘಾಯುಷ್ಯಕ್ಕೆ ದೇವರಲ್ಲಿ ಪ್ರಾರ್ಥಿಸುತ್ತಾರೆ.

ಇದನ್ನೂ ಓದಿ: 1,800 ರೂಪಾಯಿಗೆ ಸರ್ಕಾರಿ ಅತಿಥಿ ಗೃಹಗಳನ್ನು ಬುಕ್ ಮಾಡಿ

ತಮಿಳುನಾಡು

ದಕ್ಷಿಣ ಭಾರತದ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಅವನಿ ಅವಿಟ್ಟಂ ಎಂದು ಕರೆದು ರಕ್ಷಾ ಬಂಧನವನ್ನು ಸಂಭ್ರಮಿಸುತ್ತಾರೆ. ಪುರುಷರು ಈ ದಿನ ಪವಿತ್ರವಾದ ನದಿಗಳಲ್ಲಿ ಸ್ನಾನ ಮಾಡುತ್ತಾ, ತಮ್ಮ ಹಿಂದಿನ ಪಾಪಗಳನ್ನು ಮತ್ತು ದುಷ್ಕೃತ್ಯಗಳನ್ನು ಕಳೆಯಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ.

ನಂತರ ಪವಿತ್ರವಾದ ದಾರವನ್ನು ಬದಲಾಯಿಸುವ ಮೂಲಕ ಹೊಸ ದಾರವನ್ನು ಧರಿಸುತ್ತಾರೆ. ಇನ್ನು ಒಳ್ಳೆಯ ಕಾರ್ಯವನ್ನು ಕೈಗೊಳ್ಳಲು ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸುತ್ತಾರೆ.

ಇದನ್ನೂ ಓದಿ: 1 ದಿನದ ಪ್ರವಾಸದಲ್ಲಿ ಕೂರ್ಗ್‌ನಲ್ಲಿ ಇಷ್ಟೇಲ್ಲಾ ತಾಣಗಳನ್ನು ನೋಡಬಹುದಂತೆ…

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ