ಆ್ಯಪ್ನಗರ

ಲಕ್ಷದ್ವೀಪದಲ್ಲಿರುವ ಈ ರಮಣೀಯ ಪ್ರವಾಸಿ ಆಕರ್ಷಣೆಗಳು ನಿಮ್ಮನ್ನು ಬೆರಗುಗೊಳಿಸಬಹುದು

ಲಕ್ಷದ್ವೀಪದಲ್ಲಿ ಆಹ್ಲಾದಕರವಾದ ಪ್ರೇಕ್ಷಣೀಯ ಸ್ಥಳಗಳಿವೆ. ನೀವು ತಪ್ಪದೇ ಲೇಖನದಲ್ಲಿ ಹೇಳಲಾಗಿರುವ 3 ತಾಣಗಳಿಗೆ ಭೇಟಿ ನೀಡಿ.

Authored by ಸೌಮ್ಯ ಟೇಮ್ಕರ್ | Vijaya Karnataka Web 25 Feb 2023, 5:22 pm
PC: iStock
Vijaya Karnataka Web lakshadweep
lakshadweep


ಭಾರತದ ಕೆಲವು ಸುಂದರವಾದ ಹಾಗು ವಿಲಕ್ಷಣವಾದ ಸ್ಥಳಗಳಲ್ಲಿ ಲಕ್ಷದ್ವೀಪವು ಒಂದು. ಇಲ್ಲಿ ವಿಲಕ್ಷಣವಾದ ಸಣ್ಣ ದ್ವೀಪಗಳನ್ನು ಹಾಗು ಆಹ್ಲಾದಕರವಾದ ಕಡಲತೀರಗಳನ್ನು ನೋಡಬಹುದು. ಲಕ್ಷದ್ವೀಪವನ್ನು ಸಾಮಾನ್ಯವಾಗಿ ಕೇರಳ ರಾಜ್ಯದ ಕೊಚ್ಚಿಯಿಂದ ಪ್ರವೇಶಿಸಬಹುದು.

ಆದರೆ ನಿಮಗಿದು ತಿಳಿದಿರಲಿ, ಲಕ್ಷದ್ವೀಪದ ಪ್ರವಾಸ ಮಾಡಲು ಪೂರ್ವನುಮತಿ ಅಗತ್ಯವಾಗಿದೆ. ಕೊಚ್ಚಿಯಿಂದಲೇ ಅನುಮತಿಯನ್ನು ಪಡೆಯಬಹುದು. ಪ್ರಕೃತಿಯ ಸೌಂದರ್ಯ ಆಸ್ವಾದಿಸುವವರಿಗೆ ಮತ್ತು ಸಾಹಸಗಳಂತಹ ಚಟುವಟಿಕೆಗಳನ್ನು ಎಂಜಾಯ್ ಮಾಡಲು ಲಕ್ಷದ್ವೀಪ ಬೆಸ್ಟ್ ಆಗಿದೆ. ಇನ್ನು ಇಲ್ಲಿನ 3 ಜನಪ್ರಿಯ ಪ್ರವಾಸಿ ಆಕರ್ಷಣೆಗಳ ಬಗ್ಗೆ ಲೇಖನದಲ್ಲಿ ಮಾಹಿತಿ ನೀಡಲಾಗಿದೆ ಓದಿ ಒಮ್ಮೆ ಭೇಟಿ ಕೊಡಿ.

೧. ಮಿನಿಕಾಯ್‌ ದ್ವೀಪ ( Minicoy Island)

ಈ ಮಿನಿಕಾಯ್‌ ದ್ವೀಪವನ್ನು ಮಲಿಕು ಎಂದು ಸಹ ಕರೆಯುತ್ತಾರೆ. ಈ ಸಣ್ಣ ದ್ವೀಪವು ಒಟ್ಟು 4.801 ಚದರ ಕಿ.ಮೀ ವಿಸ್ತೀರ್ಣವನ್ನು ಒಳಗೊಂಡಿದೆ. ತನ್ನ ಸುಂದರವಾದ ಹವಳದ ಬಂಡೆಗಳು, ಬಿಳಿ ಮರಳಿನ ಕಡಲತೀರಗಳಿಗೆ ಹೆಸರುವಾಸಿಯಾಗಿದೆ.

ಈ ವಿಶೇಷವಾದ ದ್ವೀಪವು ಲಕ್ಷದ್ವೀಪದ ಎರಡನೇ ಅತಿದೊಡ್ಡ ದ್ವೀಪವಾಗಿದೆ. ಐಷಾರಾಮಿತನ ಎಂಜಾಯ್ ಮಾಡಲು ಇಲ್ಲಿ ಅನೇಕ ರೆಸಾರ್ಟ್ಗಳಿವೆ. ಮೀನುಗಾರಿಕೆ ಸೇರಿದಂತೆ ಹಲವು ಸಾಹಸ ಕ್ರೀಡೆಗಳನ್ನು ಇಲ್ಲಿ ಸಖತ್ ಎಂಜಾಯ್ ಮಾಡಬಹುದು.

೨.ಅಗಟ್ಟಿ ದ್ವೀಪಗಳು (Agatti Islands)

ಲಕ್ಷದ್ವೀಪದ ಮತ್ತೊಂದು ಪ್ರಶಾಂತವಾದ ಪುಟ್ಟ ದ್ವೀಪಗಳಲ್ಲಿ ಈ ಅಗಟ್ಟಿ ದ್ವೀಪಗಳು ಕೂಡ ಒಂದು. ದ್ವೀಪದ ಸೌಂದರ್ಯವನ್ನು ವೀಕ್ಷಿಸಲು ದ್ವಿಚಕ್ರ ವಾಹನಗಳನ್ನು ಹಾಗು ನಡಿಗೆಯ ಮೂಲಕ ಸುತ್ತಬಹುದು. ಶ್ರೀಮಂತ ಭೌಗೋಳಿಕ ದೃಶ್ಯಾವಳಿಗಳನ್ನು ನೀವು ಕಣ್ತುಂಬಿಕೊಳ್ಳಬಹುದು.

ಈ ಅಗತ್ತಿ ದ್ವೀಪದಲ್ಲಿ ಸುಮಾರು 8000 ನಿವಾಸಿಗಳು ವಾಸಿಸುತ್ತಿದ್ದಾರೆ. ಬೀಚ್‌ ಪ್ರಿಯರಿಗೆ ಈ ತಾಣ ತುಂಬಾ ಹಿಡಿಸುವುದರಲ್ಲಿ ಅನುಮಾನವೇ ಬೇಡ.

ಇದನ್ನೂ ಓದಿ:ವಿಮಾನ ಹಾರುವುದಕ್ಕಿಂತ ಮುಂಚೆ ವಿಮಾನದ ಶೌಚಾಲಯವನ್ನು ಬಳಸಬಾರದು ಏಕೆ? ಇಲ್ಲಿದೆ ಮಾಹಿತಿ

೩. ಬಂಗಾರಮ್‌ ದ್ವೀಪ (Bangaram Island)

ಈ ಬಂಗಾರಮ್ ದ್ವೀಪವು 1.234 km2 ವಿಸ್ತೀರ್ಣವನ್ನು ಒಳಗೊಂಡಿದೆ. ಇಲ್ಲಿ ಅನೇಕ ಬೀಚ್ ರೆಸಾರ್ಟ್‌ಗಳಿವೆ. ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಈ ಸಣ್ಣ ದ್ವೀಪದಲ್ಲಿ ಅನೇಕ ಹೋರಾಂಗಣ ಚಟುವಟಿಕೆಗಳನ್ನು ಆನಂದಿಸಬಹುದು. ಅದರಲ್ಲೂ ಅದ್ಭುತವಾದ ಸೂರ್ಯೋದಯ ಹಾಗು ಸೂರ್ಯಾಸ್ತವನ್ನು ನೋಡುವುದು ಮಂತ್ರಮುಗ್ಧಗೊಳಿಸುತ್ತದೆ. ನೆಮ್ಮದಿ ಬಯಸುವ ಮಂದಿಗೆ ಇದೊಂದು ಸ್ವರ್ಗವೇ ಸರಿ.

ಇದನ್ನೂ ಓದಿ:ಸ್ನೇಹಿತರೊಟ್ಟಿಗೆ ಸಾಹಸಿ ಪ್ರವಾಸ ಮಾಡುವವರು ಇಂತಹ ತಾಣಗಳಿಗೆ ಹೋಗಬಹುದು
ಲೇಖಕರ ಬಗ್ಗೆ
ಸೌಮ್ಯ ಟೇಮ್ಕರ್
ಸೌಮ್ಯ ಟೇಮ್ಕರ್ ಅವರು ತಮ್ಮ ಉದ್ಯಮದಲ್ಲಿ 4 ವರ್ಷಗಳ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರಾಗಿದ್ದಾರೆ. ಪ್ರಯಾಣಕ್ಕೆ ಸಂಬಂಧಿಸಿದ ಲೇಖನವನ್ನು ಅಚ್ಚುಕಟ್ಟಾಗಿ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಸೌಮ್ಯಾ ಕಥೆಗಳನ್ನು ಹೇಳುವ ಹಾಗು ಪ್ರಯಾಣದ ಅನುಭವವನ್ನು ತಮ್ಮ ಲೇಖನದ ಮೂಲಕ ಹಂಚಿಕೊಳ್ಳಲು ಹೆಚ್ಚು ಇಷ್ಟ ಪಡುತ್ತಾರೆ. ತನ್ನ ವೃತ್ತಿಜೀವನದ ಅವಧಿಯಲ್ಲಿ, ಪ್ರಪಂಚದ ಅನೇಕ ಸ್ಥಳಗಳ ಬಗ್ಗೆ ರಸವತ್ತಾದ ಲೇಖನಗಳನ್ನು ಓದುಗರಿಗಾಗಿ ಬರೆಯುತ್ತಾ ಬಂದಿದ್ದಾರೆ. ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಸೌಮ್ಯ, ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಟಿಪ್ಸ್‌ಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ವಾಸ್ತವವಾಗಿ, ಆಕೆಯ ಬರವಣಿಗೆಯ ಶೈಲಿಯು ಸ್ಪಷ್ಟ ಮತ್ತು ನಿಖರತೆಯನ್ನು ಹೊಂದಿರುತ್ತದೆ. ಓದುಗರನ್ನು ತನ್ನ ಬರವಣಿಗೆಯಿಂದ ಸೆಳೆಯುವ ವಿಶಿಷ್ಟ ಸಾಮರ್ಥ್ಯ ಆಕೆಯಲ್ಲಿದೆ. ಪ್ರಯಾಣದ ಉತ್ಸಾಹಿಗಳಿಗೆ ಅವಳ ಲೇಖನಗಳನ್ನು ಓದಲೇಬೇಕು ಎನ್ನುವ ಭಾವ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸೌಮ್ಯಾ ಕೇವಲ ಪ್ರವಾಸಗಳಲ್ಲಿ ಮಾತ್ರ ಅತ್ಯಾಸಕ್ತಿ ಹೊಂದಿರುವ ವ್ಯಕ್ತಿಯಲ್ಲ, ಬದಲಾಗಿ ಕಾದಂಬರಿಗಳನ್ನು ಓದುವುದನ್ನು ಆನಂದಿಸುತ್ತಾಳೆ. ಜೊತೆಗೆ ಪ್ರತಿನಿತ್ಯ ನಡೆಯುವ ರಾಜಕೀಯ ಸುದ್ದಿಗಳ ಮಾಹಿತಿಗಳನ್ನು ಸಂಗ್ರಹಿಸುತ್ತಾಳೆ. ಒಟ್ಟಾರೆ ಸೌಮ್ಯಾ ಜೀವನದ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿರುವ ಸುಸಂಬದ್ಧ ವ್ಯಕ್ತಿ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ