Please enable javascript.Shiva Statue,ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ ಭಾರತದ ಈ ಭಾಗದಲ್ಲಿ ನಿರ್ಮಾಣವಾಗಿದೆ - world tallest shiva statue in rajasthan - Vijay Karnataka

ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ ಭಾರತದ ಈ ಭಾಗದಲ್ಲಿ ನಿರ್ಮಾಣವಾಗಿದೆ

Vijaya Karnataka Web 2 Nov 2022, 10:26 am
Subscribe

ನಮ್ಮ ಭಾರತದ ಯಾವ ಭಾಗದಲ್ಲಿ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ ನಿರ್ಮಾಣವಾಗಿದೆ ಗೊತ್ತಾ?. ಅದರ ವಿಶೇಷತೆಗಳೇನು ಎಂಬುದನ್ನು ಇಲ್ಲಿ ತಿಳಿಯಿರಿ.

world tallest shiva statue in rajasthan
ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ ಭಾರತದ ಈ ಭಾಗದಲ್ಲಿ ನಿರ್ಮಾಣವಾಗಿದೆ
PC: unspalsh

ಪರಮಶಿವನ ಆಲಯಗಳು ವಿಶ್ವದ ಮೂಲೆ ಮೂಲೆಗಳಲ್ಲಿ ಇವೆ. ಇನ್ನು ನಮ್ಮ ಭಾರತವು ಸಾಟಿಯಿಲ್ಲದ ಆಧ್ಯಾತ್ಮಿಕ ತಾಣಗಳನ್ನು ಹೊಂದಿದೆ. ವಿಶ್ವದ ಅತಿ ಎತ್ತರದ ಪ್ರತಿಮೆಗಳಲ್ಲಿ ಗುಜರಾತ್‌ನ ಏಕತಾ ಪ್ರತಿಮೆ ತನ್ನ ಸ್ಥಾನವನ್ನು ಪಡೆದಿದ್ದರೆ, ಪ್ರಸ್ತುತ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯನ್ನು ನಿರ್ಮಿಸುವುದರ ಮೂಲಕ ಧಾರ್ಮಿಕ ಸ್ಥಾನವನ್ನು ಕೂಡ ಪಡೆಯಲಿದೆ.

ಅಷ್ಟಕ್ಕೂ ಭಾರತದ ಯಾವ ಭಾಗದಲ್ಲಿ ಶಿವನ ಪ್ರತಿಮೆ ನಿರ್ಮಾಣ ಮಾಡಲಾಗಿದೆ? ಪ್ರತಿಮೆಯ ವಿಶೇಷತೆಯಾದರೂ ಏನು ಎಂಬುದನ್ನು ಸಂಕ್ಷಿಪ್ತವಾಗಿ ಲೇಖನದಲ್ಲಿ ಮಾಹಿತಿ ನೀಡಲಾಗಿದೆ ಓದಿ.

​ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ

​ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ

ರಾಜಸ್ಥಾನ ನಾಥದ್ವಾರ ಪಟ್ಟಣದಲ್ಲಿ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಪ್ರತಿಮೆಯ ಎತ್ತರ ಸುಮಾರು 369 ಅಡಿಯಾಗಿದ್ದು, ಕಣ್ಮನ ಸೆಳೆಯುತ್ತದೆ. ಎತ್ತರದ ಶಿವನ ಸ್ವರೂಪವನ್ನು ಕಾಣುವ ಶೈವ ಭಕ್ತರು ಆನಂದ ಪರವಶರಾಗುವುಂದತು ಸತ್ಯ.

ಇದನ್ನು ಉದ್ಘಾಟಿಸುವ ಸಮಯದಲ್ಲಿ ರಾಜಸ್ಥಾನ ರಾಜ್ಯದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ವಿಧಾನಸಭಾ ಸ್ಪೀಕರ್‌ ಸಿಪಿ ಜೋಶಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

​ವಿಶೇಷತೆ ಏನು?

​ವಿಶೇಷತೆ ಏನು?

ಈ ಪ್ರತಿಮೆಯು ರಾಜಸ್ಥಾನ ರಾಜ್ಯದ ಉದಯಪುರದಿಂದ ಸುಮಾರು 45 ಕಿ.ಮೀ ದೂರದಲ್ಲಿದೆ. ನೀವು ಮತ್ತೊಮ್ಮೆ ರಾಜಸ್ಥಾನದ ಉದಯಪುರಕ್ಕೆ ಹೋದಾಗ ಈ ಶಿವನ ಪ್ರತಿಮೆಯನ್ನು ನೋಡಿ ಬನ್ನಿ. ಅಷ್ಟಕ್ಕೂ ಈ ಪ್ರತಿಮೆಯನ್ನು ನಿರ್ಮಿಸಿದ್ದು ಯಾರು ಗೊತ್ತೇ?

ತತ್‌ ಪದಮ್‌ ಎಂಬ ಸಂಸ್ಥಾನವು ಈ ಪ್ರತಿಮೆಯನ್ನು ನಿರ್ಮಿಸಿದೆ. ನವೆಂಬರ್‌ 6 ರವರೆಗೆ ಒಟ್ಟು 9 ದಿನಗಳ ಕಾಲ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇನ್ನು ಈ ಪ್ರತಿಮೆಯು ರಾಜಸ್ಥಾನದ ಪ್ರವಾಸೋದ್ಯಮದಲ್ಲಿ ಏರಿಕೆ ಕಾಣುವುದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಾರೆ ಅಧಿಕಾರಿಗಳು.

​ಪ್ರತಿಮೆ ಒಂದು ಅದ್ಭುತ

​ಪ್ರತಿಮೆ ಒಂದು ಅದ್ಭುತ

ಪರಮಶಿವನ ಪ್ರತಿಮೆಯು ಬೆಟ್ಟದ ತುದಿಯಲ್ಲಿ ಸ್ಥಾಪಿಸಲಾಗಿದ್ದು, ಧ್ಯಾನ ಮಾಡುತ್ತಿರುವ ಭಂಗಿಯಲ್ಲಿ ಕುಳಿತಿದ್ದಾನೆ. ವಿಶ್ವದ ಅತಿ ದೊಡ್ಡ ಶಿವನ ಪ್ರತಿಮೆಯು ಸುಮಾರು 20 ಕಿಮೀ ದೂರದಿಂದಲೂ ಕಾಣಿಸುತ್ತದೆ ಎನ್ನಲಾಗಿದೆ.

ಈ ಪ್ರತಿಮೆಯನ್ನು ನೋಡಲು ಬರುವ ಪ್ರವಾಸಿಗರಿಗೆ ಅವಶ್ಯಕವಾದ ಲಿಫ್ಟ್‌ಗಳು, ಮೆಟ್ಟಿಲುಗಳು ಸಭಾಂಗಣಗಳನ್ನು ನಿರ್ಮಿಸಲಾಗಿದೆ. ಪ್ರತಿಮೆಯ ಮತ್ತೊಂದು ವಿಶೇಷತೆ ಏನೆಂದರೆ ಸುಮಾರು ಎರಡೂವರೆ ಸಾವಿರ ವರ್ಷಗಳ ಕಾಲ ಗಟ್ಟಿಮುಟ್ಟಾಗಿ ನಿಲ್ಲಲಿದೆ ಎನ್ನಲಾಗಿದೆ. ಇದು ಸುಮಾರು 250 ಮೀ ವೇಗದ ಗಾಳಿಯನ್ನು ತಡೆದುಕೊಳ್ಳುವಷ್ಟು ಭದ್ರವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಹಂಪಿಯ ಪ್ರವಾಸ ಮಾಡಲು ಇದಲ್ವಾ ಒಳ್ಳೆಯ ಸಮಯ ಅಂದ್ರೆ…!

​10 ವರ್ಷಗಳ ಪ್ರತಿಫಲ

​10 ವರ್ಷಗಳ ಪ್ರತಿಫಲ

ಸುಮಾರು 10 ವರ್ಷಗಳ ಶ್ರಮದ ಪ್ರತಿಫಲವೇ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ. ಸಂತ ಮೊರಾರಿ ಬಾಪು ಅವರು ಈ ವಿಗ್ರಹವನ್ನು ತಯಾರಿಸಲು ಅಡಿಪಾಯ ಹಾಕಿದರು. ಸುಮಾರು 369 ಅಡಿ ಎತ್ತರವಿರುವ ಶಿವನ ಪ್ರತಿಮೆಯನ್ನು “ವಿಶ್ವಾಸ ಸ್ವರೂಪ” ಎಂಬ ನಾಮಾಂಕಿತದಿಂದ ಕರೆಯಲಾಗುತ್ತದೆ.

ನಂದಿಯಿಲ್ಲದೆ ಶಿವ ಅಪೂರ್ಣ ಎಂದು ಹೇಳಲಾಗುತ್ತದೆ. ಹಾಗಾಗಿ ಶಿವನ ಎದುರು 25 ಅಡಿ ಎತ್ತರ ಮತ್ತು 37 ಅಡಿ ಅಗಲದ ನಂದಿ ಮೂರ್ತಿಯನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ: ಈ ವನ್ಯಜೀವಿ ರೆಸಾರ್ಟ್‌ಗಳು ಸಾಹಸಿಗಳ ಫೇವರೆಟ್

​ವಿಶ್ವದ ಇತರ ಎತ್ತರದ ಶಿವನ ಪ್ರತಿಮೆಗಳು

​ವಿಶ್ವದ ಇತರ ಎತ್ತರದ ಶಿವನ ಪ್ರತಿಮೆಗಳು

ನೇಪಾಳದಲ್ಲಿ 143 ಅಡಿ ಎತ್ತರದ ಶಿವನ ಪ್ರತಿಮೆ ಇದೆ. ಈ ಪ್ರತಿಮೆಯನ್ನು ಅಲ್ಲಿನ ಜನರು ಕೈಲಾಸನಾಥ ಮಹಾದೇವ ಎಂದೇ ಕರೆಯುತ್ತಾರೆ. ಇದು ಹೆಚ್ಚು ಜನಪ್ರಿಯ ಪ್ರತಿಮೆ ಕೂಡ ಹೌದು.

ಎರಡನೇ ಅತಿ ಎತ್ತರದ ಶಿವನ ಪ್ರತಿಮೆ ಎಂದರೆ 123 ಅಡಿ ಎತ್ತರವಿರುವ ಕರ್ನಾಟಕದ ಮುರುಡೇಶ್ವರ. ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಆದಿ ಯೋಗಿ ಎಂಬ ಪ್ರತಿಮೆಯು 112 ಅಡಿ ಎತ್ತರವಾಗಿರುವ ಶಿವನ ಪ್ರತಿಮೆಯಾಗಿದೆ. ಹಾಗೆಯೇ ಮಾರಿಷಸ್‌ನಲ್ಲಿ 108 ಅಡಿ ಎತ್ತರದ ಮಂಗಲ್‌ ಮಹಾದೇವ್‌ ಪ್ರತಿಮೆ ಇದೆ.

ಇದನ್ನೂ ಓದಿ: ಇವು ಕರ್ನಾಟಕದ ಅಪರೂಪದ ತಾಣಗಳು…ಬಹುಶಃ ನೀವು ನೋಡಿಲ್ಲದಿರಬಹುದು

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ