ಆ್ಯಪ್ನಗರ

ದೆಹಲಿಯಿಂದ ಶಿಮ್ಲಾಕ್ಕೆ ದೈನಂದಿನ ವಿಮಾನಗಳು: ಟಿಕೆಟ್‌ ಬೆಲೆ ಎಷ್ಟು?

ಇನ್ನುಮುಂದೆ ದೆಹಲಿಯಿಂದ ನೇರವಾಗಿ ಶಿಮ್ಲಾಕ್ಕೆ ದೈನಂದಿನ ವಿಮಾನದ ಮೂಲಕ ತಲುಪಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

Vijaya Karnataka Web 28 Sep 2022, 3:08 pm

Read In English : You can now fly from Delhi to Shimla! Daily flights commence from today

PC: Pixabay
Vijaya Karnataka Web Daily flights
ದೆಹಲಿಯಿಂದ ಶಿಮ್ಲಾ


ದೆಹಲಿಯಿಂದ ಹಿಮಾಚಲ ಪ್ರದೇಶದ ಜನಪ್ರಿಯ ಪ್ರವಾಸಿ ಆಕರ್ಷಣೆ ಶಿಮ್ಲಾಗೆ ಹೋಗಲು ಸುಮಾರು 405 ಕಿ.ಮೀ ದೂರದಲ್ಲಿದೆ. ಸುಮಾರು 9 ಗಂಟೆಗಳ ಪ್ರಯಾಣವನ್ನು ನೀವು ತಪ್ಪಿಸಲು ವಿಮಾನಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಸಂತೋಷಕರವಾದ ಸುದ್ದಿ ಏನೆಂದರೆ, ಪ್ರಸ್ತುತ ನೀವು ದೆಹಲಿಯಿಂದ ನೇರವಾಗಿ ಶಿಮ್ಲಾಕ್ಕೆ ಹಾರಬಹುದು. ಅದು ಕೂಡ ದೈನಂದಿನ ವಿಮಾನಗಳಲ್ಲಿ.

ವರದಿಗಳ ಪ್ರಕಾರ, ಅಲಯನ್ಸ್‌ ಏರ್‌ ತನ್ನ ಮೊದಲ ಪ್ರಾದೇಶಿಕ ಸಂಪರ್ಕ ಯೋಜನೆ ಮಾರ್ಗವನ್ನು ದೆಹಲಿಯಿಂದ ಶಿಮ್ಲಾ ಮತ್ತು ಶಿಮ್ಲಾದಿಂದ ದೆಹಲಿಗೆ ಪ್ರಾರಂಭಿಸಿದೆ.

ಇದರಿಂದಾಗಿ ಹಿಮಾಚಲ ಪ್ರದೇಶದ ಅದ್ಭುತ ಪ್ರವಾಸಿ ಆಕರ್ಷಣೆ ಮತ್ತು ರಾಜಧಾನಿಯಾಗಿರುವ ಶಿಮ್ಲಾ, ಮತ್ತಷ್ಟು ಜನರನ್ನು ಆಕರ್ಷಿಸಲಿದೆ. ಅಲ್ಲದೆ, ಈ ವಿಮಾನ ಯೋಜನೆಯಿಂದ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ.

ಮೂಲಗಳ ಪ್ರಕಾರ, ನವ ಭಾರತವನ್ನು ಸಂಪರ್ಕಿಸುವ ಸಲುವಾಗಿ ಹತ್ತಿರದ ನಗರ ಕೇಂದ್ರಗಳಿಗೆ ಶ್ರೇಣಿ 2/ ಶ್ರೇಣಿ 3 ಪಟ್ಟಣಗಳ ನಡುವೆ ಉತ್ತಮ ವಾಯು ಸಂಪರ್ಕವನ್ನು ನೀಡಲು ಏರ್‌ಲೈನ್‌ನ ಡೆಪ್ಯುಟಿ ಇಂಜಿನಿಯರ್ ಆದ ಯಶ್ ವರ್ಧನ್ ಸಿಂಗ್ ಅವರು ಪ್ರಯತ್ನಿಸುತ್ತಿದ್ದಾರೆ. ಇನ್ನುಮುಂದೆ ವಿಮಾಗಳು ATR42-600 ವಿಮಾನಗಳೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ವಿಮಾನಯಾನ ಸಂಸ್ಥೆಯಿಂದ ತಿಳಿದುಬಂದಿದೆ.

ಟಿಕೆಟ್‌ ಬೆಲೆ ಎಷ್ಟು?

ದೆಹಲಿಯಿಂದ ಶಿಮ್ಲಾ


ದೆಹಲಿಯ ಅದ್ಭುತವಾದ ಪ್ರವಾಸಿ ಸೌಂದರ್ಯವನ್ನು ಕಣ್ತುಂಬಿಕೊಂಡು ಶಿಮ್ಲಾಗೆ ಹೋಗಲು ಬಯಸುವವರಿಗೆ ಈ ದೈನಂದಿನ ವಿಮಾನಗಳು ಸಾಕಷ್ಟು ಅನುಕೂಲಕರವಾಗಲಿದೆ. ವರದಿಗಳ ಪ್ರಕಾರ, ಈ ಮಾರ್ಗದ ವಿಮಾನ ಟಿಕೆಟ್‌ಗಳ ದರವು INR 2141 ಆಗಿರುತ್ತದೆ. ಇನ್ನು, ದೆಹಲಿಯಿಂದ ಶಿಮ್ಲಾಗೆ ವಿಮಾನವು ಬೆಳಗ್ಗೆ 7:10 ಕ್ಕೆ ತನ್ನ ಪ್ರಯಾಣ ಪ್ರಾರಂಭಿಸುತ್ತದೆ.

ಈ ಬೆಳವಣಿಗೆಯಿಂದಾಗಿ ಎರಡು ರಾಜ್ಯಗಳ ವ್ಯಾಪಾರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂದು ವಿಮಾನಯಾನ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಕ್ರಮವು ಎರಡು ರಾಜ್ಯಗಳ ಸಂಪರ್ಕ ಹೆಚ್ಚಾಗುವುದು ಮಾತ್ರವಲ್ಲ ಆರ್ಥಿಕ ಅಭಿವೃದ್ಧಿಗೆ ಸಹಾಯಕವಾಗಲಿದೆ.

ಇದನ್ನೂ ಓದಿ: ಪೋಲೆಂಡ್‌: ಹೆಣ್ಣು ರಕ್ತಪಿಶಾಚಿಯ ಅಸ್ಥಿಪಂಜರ ಪತ್ತೆ

ಶಿಮ್ಲಾದ ಪ್ರವಾಸಿ ಆಕರ್ಷಣೆ

ದೆಹಲಿಯಿಂದ ಶಿಮ್ಲಾ


ಬೇಸಿಗೆಗೆ ಭಾರತದ ಅತ್ಯಂತ ಜನಪ್ರಿಯವಾದ ತಾಣಗಳಲ್ಲಿ ಶಿಮ್ಲಾ ಕೂಡ ಒಂದು. ಸಮುದ್ರ ಮಟ್ಟದಿಂದ ಸುಮಾರು 2000 ಮೀ ಎತ್ತರದಲ್ಲಿ ನೆಲೆಗೊಂಡಿರುವ ಈ ಗಿರಿಧಾಮವು ವರ್ಷವಿಡೀ ಆಹ್ಲಾದಕರವಾದ ಹವಾಮಾನವನ್ನು ಹೊಂದಿರುತ್ತದೆ. ಬೆಟ್ಟಗಳ ರಾಣಿ ಎಂದೇ ಜನಪ್ರಿಯವಾಗಿರುವ ಶಿಮ್ಲಾ, ಹಿಮಾಚಲ ಪ್ರದೇಶದ ರಾಜಧಾನಿ ಕೂಡ ಹೌದು. ಇಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ದೇಶದ ನಾನಾ ಭಾಗಗಳಿಂದ ಮಾತ್ರವಲ್ಲ, ವಿದೇಶಗಳಿಂದ ಕೂಡ ಭೇಟಿ ನೀಡುತ್ತಾರೆ.

ಇದನ್ನೂ ಓದಿ: ಈ ಒಂದು ಡಿಜಿಟಲ್‌ ಪಾಸ್‌ನೊಂದಿಗೆ ಕಾಶಿ ದರ್ಶನ ಮಾಡಬಹುದು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ