ಆ್ಯಪ್ನಗರ

ಸಿಂಗಲ್‌ ಆಗಿ ಕುಡಿದು ತೂರಾಡಿದ್ರೆ 2000, ಗುಂಪಿನಲ್ಲಾದ್ರೆ 10000, ಎಲ್ಲಿ ಗೊತ್ತಾ?

ಗೋವಾ ಅಂದ್ರೆ ನಮ್ಮ ಕಣ್ಣ ಮುಂದೆ ಬರೋದು ಸಮುದ್ರ ತೀರಗಳು, ಬಿಕಿನಿ ಹಾಕಿರುವ ಯುವತಿಯರು, ಕೈಯಲ್ಲಿ ಬಾಟಲಿ ಹಿಡಿದಿರುವ ಯುವಕ ಯುವತಿಯರು. ಇದೇ ಗೋವಾದ ಬಗ್ಗೆ ನಮ್ಮ ಮನಸ್ಸಿನಲ್ಲಿರುವ ಚಿತ್ರಣ. ಹೆಚ್ಚಿನವರು ಗುಂಡು ಪಾರ್ಟಿ ಮಾಡೋದಿಕ್ಕಾಗಿಯೇ ಗೋವಾಕ್ಕೆ ಹೋಗುತ್ತಾರೆ. ಸ್ನೇಹಿತರ ಜೊತೆ ಗುಂಪು ಗುಂಪಾಗಿ ಗೋವಾದ ಕಡಲ ತೀರದಲ್ಲಿ ಪಾರ್ಟಿ ಮಾಡೋದರ ಮಜಾನೇ ಒಂಥರಾ ಸಖತ್ ಆಗಿರುತ್ತದೆ. ಆದರೆ ಈ ಎಂಜಾಯ್‌ಮೆಂಟ್‌ಗೆ ತೆರೆ ಬಿದ್ದಿದೆ.

Vijaya Karnataka Web 16 Nov 2019, 3:55 pm
ಗೋವಾ ಅಂದ್ರೆ ನಮ್ಮ ಕಣ್ಣ ಮುಂದೆ ಬರೋದು ಸಮುದ್ರ ತೀರಗಳು, ಬಿಕಿನಿ ಹಾಕಿರುವ ಯುವತಿಯರು, ಕೈಯಲ್ಲಿ ಬಾಟಲಿ ಹಿಡಿದಿರುವ ಯುವಕ ಯುವತಿಯರು. ಇದೇ ಗೋವಾದ ಬಗ್ಗೆ ನಮ್ಮ ಮನಸ್ಸಿನಲ್ಲಿರುವ ಚಿತ್ರಣ. ಹೆಚ್ಚಿನವರು ಗುಂಡು ಪಾರ್ಟಿ ಮಾಡೋದಿಕ್ಕಾಗಿಯೇ ಗೋವಾಕ್ಕೆ ಹೋಗುತ್ತಾರೆ. ಸ್ನೇಹಿತರ ಜೊತೆ ಗುಂಪು ಗುಂಪಾಗಿ ಗೋವಾದ ಕಡಲ ತೀರದಲ್ಲಿ ಪಾರ್ಟಿ ಮಾಡೋದರ ಮಜಾನೇ ಒಂಥರಾ ಸಖತ್ ಆಗಿರುತ್ತದೆ. ಆದರೆ ಈ ಎಂಜಾಯ್‌ಮೆಂಟ್‌ಗೆ ತೆರೆ ಬಿದ್ದಿದೆ.
Vijaya Karnataka Web drinking of alcohol on goa beaches to be intensified
ಸಿಂಗಲ್‌ ಆಗಿ ಕುಡಿದು ತೂರಾಡಿದ್ರೆ 2000, ಗುಂಪಿನಲ್ಲಾದ್ರೆ 10000, ಎಲ್ಲಿ ಗೊತ್ತಾ?


​ಬೀಚ್‌ನಲ್ಲಿ ಮಧ್ಯಪಾನ

ಇನ್ನು ಮುಂದೆ ಗೋವಾದ ಬೀಚ್‌ನಲ್ಲಿ ಮಧ್ಯಪಾನ ಮಾಡಿದ್ರೆ ನೀವು ದಂಡ ತೆರಬೇಕಾಗುತ್ತದೆ. ಹೌದು, ಗೋವಾ ಸರ್ಕಾರ ಈ ಹಿಂದೆ ಜನವರಿಯಲ್ಲಿ ಬೀಚ್‌ನಲ್ಲಿ ಮಧ್ಯಪಾನವನ್ನು ನಿಷೇಧಿಸಿತ್ತು, ಆದರೂ ಹೆಚ್ಚಿನವರು ಇದನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಈಗ ಗೋವಾ ಸರ್ಕಾರ ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ. ಯಾರು ಕಾನೂನು ಪಾಲಿಸೋದಿಲ್ಲವೋ ಅವರಿಗೆ ದಂಡ ವಿಧಿಸಲಾಗುತ್ತದೆ.

ಕಡಲತೀರಗಳಲ್ಲಿ ಮದ್ಯಪಾನ ಮಾಡುವುದನ್ನು ತಡೆಗಟ್ಟಲಾಗುವುದು ಎಂದು ಗೋವಾ ಸರ್ಕಾರ ಮತ್ತೊಮ್ಮೆ ಘೋಷಿಸಿದೆ. ಇದೇ ರೀತಿಯ ಮಾರ್ಗಗಳ ಕುರಿತು ಪ್ರಕಟಣೆ ಹೊರಡಿಸಲಾಗಿದ್ದು, ಕಡಲತೀರಗಳಲ್ಲಿ ಕುಡಿಯಲು ದಂಡ ವಿಧಿಸಲು ಗೋವಾ ಸರ್ಕಾರ ಪ್ರವಾಸಿ ವ್ಯಾಪಾರ ನೋಂದಣಿ ಕಾಯ್ದೆಗೆ ತಿದ್ದುಪಡಿ ತಂದಿದೆ.

ಬಾಗಾ ಬೀಚ್

ಬಾಗಾ ಬೀಚ್ ಗೋವಾದ ಅತ್ಯಂತ ಜನಪ್ರಿಯ ಬೀಚ್ ಆಗಿದೆ. ಕ್ಯಾಲಂಗುಟ್‌ನ ವ್ಯಾಪ್ತಿಗೆ ಬರುತ್ತಿದೆ; ಬಾಗಾ ಬೀಚ್ ಕ್ರೀಕ್, ವಾಟರ್ ಸ್ಪೋರ್ಟ್ಸ್, ಡೈವಿಂಗ್ ಸಾಹಸ ಮತ್ತು ಮೋಜಿನ ಉದ್ಯಾನವನಕ್ಕೆ ಹೆಸರುವಾಸಿಯಾಗಿದೆ. ಯುವ ಪೀಳಿಗೆಯ ಮತ್ತು ಹಿರಿಯರಲ್ಲಿ ಜನಪ್ರಿಯವಾಗಿದೆ.

​ಕ್ಯಾಂಡೋಲಿಮ್ ಬೀಚ್

ಕ್ಯಾಂಡೋಲಿಮ್ ಕೂಡ ವಿಶೇಷವಾಗಿ ಮಧುಚಂದ್ರದ ಪ್ರವಾಸಿ ತಾಣವಾಗಿದೆ. ಇದು ಇತರ ಕಡಲತೀರಗಳಂತೆ ಕಾಣುತ್ತಿದ್ದರೂ; ಜೆಟ್ ಸ್ಕೀಯಿಂಗ್, ಕ್ಯಾಟಮರನ್ ನೌಕಾಯಾನ, ಬನಾನ ಸವಾರಿಗಳು, ಸರ್ಫಿಂಗ್, ಬಂಪ್ ಸವಾರಿಗಳು, ಪ್ಯಾರಾಸೈಲಿಂಗ್ ಮತ್ತು ಪ್ಯಾರಾಗ್ಲೈಡಿಂಗ್‌ನಂತಹ ಜಲ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಉತ್ತಮ. ಈ ಎಲ್ಲಾ ಚಟುವಟಿಕೆಗಳು ಮೊದಲ ಸೂರ್ಯನ ಬೆಳಕಿನಿಂದ ಪ್ರಾರಂಭವಾಗುತ್ತವೆ ಮತ್ತು ಸಂಜೆ 4 ಗಂಟೆಯವರೆಗೆ ಇರುತ್ತದೆ. ಮಳೆ ಮತ್ತು ಗಾಳಿಯ ದಿನಗಳನ್ನು ಹೊರತುಪಡಿಸಿ ಜಲಕ್ರೀಡೆಗಳು ಇಲ್ಲಿ ಸಾಮಾನ್ಯವಾಗಿ ವರ್ಷದುದ್ದಕ್ಕೂ ನಡೆಸಲಾಗುತ್ತದೆ.

ಮೈಸೂರಿನ ಮೇಣದ ಮ್ಯೂಸಿಯಂಗೆ ಹೋಗಿದ್ದೀರಾ?

​ಕ್ಯಾಲಂಗುಟ್ ಬೀಚ್

ಗೋವಾದ ಅತ್ಯಂತ ಜನಪ್ರಿಯ ಕಡಲತೀರಗಳಲ್ಲಿ ಕ್ಯಾಲಂಗುಟ್ ಬೀಚ್ ಒಂದಾಗಿದೆ, ಇದು ಕ್ಯಾಲಂಗುಟ್ ಪಟ್ಟಣದಲ್ಲಿದೆ. ಇದು ಉತ್ತರ ಗೋವಾದ ಅತಿದೊಡ್ಡ ಬೀಚ್ ಆಗಿದೆ. ವಿಶೇಷವಾಗಿ ನವೆಂಬರ್ - ಡಿಸೆಂಬರ್ ತಿಂಗಳುಗಳಲ್ಲಿ ವಿಶ್ವದಾದ್ಯಂತ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.ಇದು ಕ್ರೀಡಾ ಚಟುವಟಿಕೆಗಳು, ನೈಟ್‌ ಲೈಫ್ ಮತ್ತು ಪ್ರವಾಸಿ ತಾಣಗಳಿಂದ ತುಂಬಿದೆ.

​ಕೊಲ್ವಾ ಬೀಚ್

ಕೊಲ್ವಾ ದಕ್ಷಿಣ ಗೋವಾದ ಸಾಲ್ಸೆಟೆ ಗ್ರಾಮದ ಸುಂದರವಾದ ಬೀಚ್ ಆಗಿದೆ. ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾದ ಇದು ಕಡಲತೀರಗಳು, ಪಬ್‌ಗಳು ಮತ್ತು ಬಾರ್‌ಗಳಿಗೆ ಹೆಸರುವಾಸಿಯಾಗಿದೆ. ಇದು ಇತಿಹಾಸ, ಸೊಬಗು ಮತ್ತು ವಾಸ್ತುಶಿಲ್ಪದ ಬಗ್ಗೆ ಮಾತನಾಡುವ ಹಲವಾರು ಕಟ್ಟಡಗಳೊಂದಿಗೆ ಪೋರ್ಚುಗಲ್ ಮಹತ್ವಕ್ಕೆ ಹೆಸರುವಾಸಿಯಾಗಿದೆ. ಬೊಗ್ಮಾಲೊ ಬೀಚ್‌ನಿಂದ ಕ್ಯಾಬೊ ಡಿ ರಾಮಾ ಬೀಚ್‌ವರೆಗೆ ವಿಸ್ತರಿಸಿರುವುದು. ತೆಂಗಿನ ಮರಗಳಿಂದ ತುಂಬಿದ ಕಡಲತೀರವಾಗಿದೆ

ಸೀತೆಯ ಮೂಗುತ್ತಿ ತಂದು ಕೊಟ್ಟ ಮುತ್ತೆತ್ತರಾಯ ಮಂಡ್ಯದಲ್ಲಿ ಎಲ್ಲಿ ನೆಲೆಸಿದ್ದಾನೆ ಗೊತ್ತಾ?

​​ಮೊರ್ಜಿಮ್ ಬೀಚ್

ಮೊರ್ಜಿಮ್ ಬೀಚ್ ಖಂಡಿತವಾಗಿಯೂ ಗೋವಾದ ಅತ್ಯುತ್ತಮ ಕಡಲತೀರಗಳಲ್ಲಿ ಒಂದಾಗಿದೆ. ಆಕಾಶದ ಬದಲಾಗುವ ಬಣ್ಣಗಳು, ಸೂರ್ಯ ಮುಳುಗುವುದನ್ನು ನೋಡಲು ಇದು ಸೂಕ್ತವಾಗಿದೆ. ಇದು ಗೋವಾದ ಅತ್ಯಂತ ಶಾಂತವಾದ ಕಡಲತೀರಗಳಲ್ಲಿ ಒಂದಾಗಿದೆ, ಇದು ಶಾಂತಿ ಮತ್ತು ಪ್ರಶಾಂತತೆಯನ್ನು ನೀಡುತ್ತದೆ. ಪ್ರವಾಸಿಗರು ವಿಶ್ರಾಂತಿ ಪಡೆಯಲು ಇಲ್ಲಿಗೆ ಬರುತ್ತಾರೆ. ಈ ಸ್ಥಳವು ರೆಸ್ಟೋರೆಂಟ್‌ಗಳು ಮತ್ತು ಕುಟೀರಗಳಿಂದ ಕೂಡಿದ್ದು, ಇದು ಕೆಲವು ಅತ್ಯುತ್ತಮ ವಿಶ್ರಾಂತಿ ವಿಷಯಗಳನ್ನು ನೀಡುತ್ತದೆ. ಮೊರ್ಜಿಮ್ ಬೀಚ್ ಅನ್ನು ಸ್ಥಳೀಯವಾಗಿ "ಲಿಟಲ್ ರಷ್ಯಾ" ಎಂದೂ ಕರೆಯುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ