ಆ್ಯಪ್ನಗರ

ರೋಮನ್ ಸರ್ಕಾರವು 55 ವರ್ಷದ ವ್ಯಕ್ತಿಗೆ INR 36,079 ದಂಡವನ್ನು ವಿಧಿಸಿದೆ

ಪ್ರಸಿದ್ಧ ಮತ್ತು ಪುರಾತನವಾದ ಕಾರಂಜಿಯ ಎದುರು ಕುಡಿದು ತಿನ್ನುತ್ತಿದ್ದ ಒಬ್ಬ ವ್ಯಕ್ತಿಗೆ ರೋಮನ್‌ ಸರ್ಕಾರವು INR 36,079 ದಂಡ ವಿಧಿಸಿದೆ.

Vijaya Karnataka Web 15 Sep 2022, 6:09 pm

Read In English: Rome fines tourist for eating and drinking on a famous ancient fountain

PC: Pixabay
Vijaya Karnataka Web 1
ರೋಮನ್ ಸರ್ಕಾರವು 55 ವರ್ಷದ ವ್ಯಕ್ತಿಗೆ INR 36,079 ದಂಡವನ್ನು ವಿಧಿಸಿದೆ


ನಾವು ಬೇರೊಂದು ದೇಶದ ಪ್ರವಾಸ ಕೈಗೊಳ್ಳುವ ಮುಂಚೆ ಆ ದೇಶದ ನಿಯಮಗಳು, ನಿರ್ಬಂಧಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಒಂದು ದೇಶದಲ್ಲಿ ಸಮುದ್ರದ ವಸ್ತುಗಳನ್ನು ಕದ್ದರೆ ಭಾರೀ ಮೊತ್ತದ ದಂಡವನ್ನು ವಿಧಿಸಿದರೆ ಮತ್ತೊಂದು ದೇಶದಲ್ಲಿ ಬಿಕಿನಿ ಮತ್ತು ಚಪ್ಪಲಿಗಳನ್ನು ಧರಿಸಿದರೆ ಶಿಕ್ಷೆ ವಿಧಿಸುತ್ತಾರೆ.

ಈ ರೀತಿಯ ನಿಯಮಗಳನ್ನು ಹೊಂದಿರುವ ದೇಶಗಳಲ್ಲಿ ರೋಮ್‌ ಹೊರತಲ್ಲ. ರೋಮ್‌ ವಿಶ್ವದ ಸುಂದರವಾದ ದೇಶಗಳಲ್ಲಿ ಒಂದಾಗಿದೆ. ಈ ದೇಶದಲ್ಲಿ 55 ವರ್ಷದ ವ್ಯಕ್ತಿಯ ಮೇಲೆ ರೋಮನ್ ಸರ್ಕಾರವು ದೊಡ್ಡ ಮೊತ್ತದ ದಂಡ ವಿಧಿಸಿದೆ.

ಇದಕ್ಕೆ ಪ್ರಮುಖವಾದ ಕಾರಣ, ಫಾಂಟಾನಾ ಡೀ ಕ್ಯಾಟೆಕ್ಯುಮೆನಿಯ ಬದಿಯಲ್ಲಿ ಕುಡಿದು ತಿನ್ನುತ್ತಿರುವುದನ್ನು ಸರ್ಕಾರವು ಗಮನಿಸಿ, ಆತನಿಗೆ EUR 450 ದಂಡವನ್ನು ವಿಧಿಸಿದೆ. ಇದನ್ನು ಭಾರತದ ರೂಪಾಯಿ ಬೆಲೆಯಲ್ಲಿ ಹೇಳಬೇಕಾದರೆ ಬರೋಬ್ಬರಿ INR 36,079 ರೂಪಾಯಿಗಳು.

ರೋಮ್‌ನ ಅತ್ಯಂತ ಪುರಾತನವಾದ ಕಾರಂಜಿಯನ್ನು ಮಲಿನಗೊಳಿಸುವುದು, ಆಸುಪಾಸಿನಲ್ಲಿ ತಿಂಡಿಗಳನ್ನು ತಿನ್ನುವುದು, ಶಿಲ್ಪಗಳನ್ನು ಹಾಳು ಮಾಡುವುದು ಮಾಡುವಂತಿಲ್ಲ. ಒಂದು ವೇಳೆ ಇಂತಹ ಕೃತ್ಯ ವೆಸಗಿದ್ದಲ್ಲಿ ರೋಮನ್‌ ಸರ್ಕಾರವು ದೊಡ್ಡ ದಂಡವನ್ನೇ ವಿಧಿಸುತ್ತದೆ.

ನಿಯಮ ಮತ್ತು ಉಲ್ಲಂಘನೆ

ರೋಮನ್ ಸರ್ಕಾರವು 55 ವರ್ಷದ ವ್ಯಕ್ತಿಗೆ INR 36,079 ದಂಡವನ್ನು ವಿಧಿಸಿದೆ


ಸಾಂಸ್ಕೃತಿಕ ಪರಂಪರೆಯ ಕ್ಯಾಪಿಟೋಲಿನ್‌ ಸೂಪರಿಂಟೆಂಡೆನ್ಸ್ ಪ್ರಕಾರ, ಈ ಪ್ರಾಚೀನವಾದ ಕಾರಂಜಿಯನ್ನು 1588 ರಿಂದ 1589ರ ನಡುವಿನಲ್ಲಿ ನಿರ್ಮಿಸಲಾಯಿತು. ಇಂತಹ ಹಳೆಯ ರಚನೆಯನ್ನು ಸುರಕ್ಷಿತವಾಗಿರಿಸಲು ರೋಮನ್‌ ಸರ್ಕಾರವು ಹಲವಾರು ನಿಯಮಗಳು ಮತ್ತು ನಿಬಂಧನೆಗಳನ್ನು ಹಾಕಿದೆ.

ಆ ನಿಯಮಗಳಲ್ಲಿ ಬೀದಿಗಳಲ್ಲಿ ಕುಡಿಯುವುದು, ಕಾರಂಜಿಯಲ್ಲಿ ಈಜುವುದು ಕೂಡ ಒಳಗೊಂಡಿವೆ. ಈ ರೀತಿಯ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿ ಬಿದ್ದವರಿಗೆ ಸರ್ಕಾರವು ಈಗಾಗಲೇ ಸಾಕಷ್ಟು ಜನರಿಗೆ ದಂಡ ವಿಧಿಸಿದೆ.

ಈ ಪಟ್ಟಿಯಲ್ಲಿ ಸೌದಿ ಅರೇಬಿಯಾದ 37 ವರ್ಷದ ವ್ಯಕ್ತಿಯೊಬ್ಬರು ಸ್ಪ್ಯಾನಿಷ್‌ ಸ್ಟೆಪ್ಸ್‌ನಲ್ಲಿ ಕಾರನ್ನು ಓಡಿಸಿ, ಅಲ್ಲಿನ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.

ಇದನ್ನೂ ಓದಿ: ರೆಸಾರ್ಟ್‌ ರೂಪದಲ್ಲಿ ಭೂಮಿಗೆ ಬರಲಿದ್ದಾನೆ ಚಂದ್ರ..!

ಇಬ್ಬರು ಅಮೇರಿಕನ್‌ ಪ್ರವಾಸಿಗರು ಎಲೆಕ್ಟ್ರಿಕ್‌ ಸ್ಕೂಟರ್‌ಗಳಿಂದ ಪುರಾತನ ಮತ್ತು ಸಂರಕ್ಷಿತ ರಚನೆಯ ಮೆಟ್ಟಿಲುಗಳನ್ನು ಹಾನಿಗೊಳಿಸಿದ್ದರು. ಈ ರೋಮನ್‌ ದೇಶವನ್ನು ಬಿಟ್ಟು ಮತ್ತೆ ಇಟಾಲಿಯನ್‌ ನಗರಗಳು ಸಹ ಈ ರೀತಿಯ ನಿಷೇಧ ಮತ್ತು ನಿಯಮಗಳನ್ನು ಒಳಗೊಂಡಿವೆ.

ಅದೇ ರೀತಿ ವೆನಿಸ್‌ನಲ್ಲಿ ಕೂಡ ಸರ್ಫ್‌ ಬೋರ್ಡ್‌ಗಳನ್ನು ಸವಾರಿ ಮಾಡಿದ್ದಕ್ಕಾಗಿ ಇಬ್ಬರು ಪ್ರವಾಸಿಗರಿಗೆ ದಂಡ ವಿಧಿಸಿತು.

ಇದನ್ನೂ ಓದಿ: ನರೇಂದ್ರ ಮೋದಿ ಜನ್ಮದಿನದಂದು 5 ರೈಲುಗಳನ್ನು ಪ್ರಾರಂಭಿಸಲು ಸರ್ಕಾರ ಅಸ್ತು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ