ಆ್ಯಪ್ನಗರ

ಸಂಗಾತಿಯೊಂದಿಗೆ 40 ಸಾವಿರದಲ್ಲಿ ವಿದೇಶದಲ್ಲಿ ಹನಿಮೂನ್‌ ಮಾಡಬಹುದು…

Low Budget Honeymoon Destinations Outside India: 

Authored by ಸೌಮ್ಯ ಟೇಮ್ಕರ್ | Vijaya Karnataka Web 7 Jun 2023, 5:19 pm

PC:Unsplash

ನವ ವಿವಾಹಿತರು ಅಥವಾ ದಂಪತಿಗಳು ಹನಿಮೂನ್‌ಗಾಗಿ ವಿದೇಶಗಳಿಗೆ ಹಾರಬೇಕು ಎಂದು ಸಾಮಾನ್ಯವಾಗಿ ಬಯಸುತ್ತಾರೆ. ವಿದೇಶ ಪ್ರವಾಸ ತುಂಬಾ ದುಬಾರಿ ಎಂಬುದು ಕೂಡ ನಮಗೆ ತಿಳಿದಿದೆ. ಆದರೆ ಕಡಿಮೆ ಖರ್ಚಿನಲ್ಲಿ ವಿದೇಶ ಪ್ರವಾಸ ಮಾಡುವ ಅವಕಾಶಗಳಿವೆ ಎಂಬ ಮಾಹಿತಿ ನಿಮಗೆ ತಿಳಿದಿದೆಯೇ? ಹೌದು, ಭಾರತಕ್ಕೆ ಹತ್ತರವಿರುವ ದೇಶಗಳಿಗೆ ಹಾಗು ಬಜೆಟ್ ಸ್ನೇಹಿ ವೆಚ್ಚದಲ್ಲಿ ಪ್ರವಾಸ ಮುಗಿಸಬಹುದು.

ನಿಮ್ಮ ಜೇಬಿನಲ್ಲಿ 40 ಸಾವಿರ ರೂಪಾಯಿ ಇದ್ದರೆ ಸಾಕು ಶಾಪಿಂಗ್, ತಂಪಾದ ಆಕರ್ಷಣೆಗಳು, ಕಣ್ಮನ ಸೆಳೆಯುವ ಯುರೋಪಿಯನ್ ಕಟ್ಟಡಗಳನ್ನು ಸುತ್ತಾಡಬಹುದು.

Vijaya Karnataka Web budget friendly honeymoon destinations outside india
ಸಂಗಾತಿಯೊಂದಿಗೆ 40 ಸಾವಿರದಲ್ಲಿ ವಿದೇಶದಲ್ಲಿ ಹನಿಮೂನ್‌ ಮಾಡಬಹುದು…


ಥೈಲ್ಯಾಂಡ್

PC:Unsplash

ಥೈಲ್ಯಾಂಡ್, ಭಾರತದಿಂದ ಬಜೆಟ್ ಸ್ನೇಹಿ ಪ್ರವಾಸ ಮಾಡಲು ಬೆಸ್ಟ್ ದೇಶವಾಗಿದೆ. ಇದು ಎಂದಿಗೂ ಭಾರತೀಯರಿಗೆ ಅಗ್ರ ಪಟ್ಟಿಯಲ್ಲಿ ಉಳಿಯುತ್ತದೆ. ನೀವು 40 ಸಾವಿರದಲ್ಲಿ ಆರಾಮವಾಗಿ ತಿರುಗಾಡಬಹುದು. ಥೈಲ್ಯಾಂಡ್‌ನಲ್ಲಿ ಸಾಕಷ್ಟು ದ್ವೀಪಗಳು, ಕಡಲತೀರಗಳು, ಬೆಟ್ಟಗಳು, ಸಾಂಸ್ಕೃತಿಕ ಸ್ಥಳಗಳಿವೆ. ಬಜೆಟ್‌ಸ್ನೇಹಿ ಹನಿಮೂನ್‌ ಟ್ರಿಪ್‌ ಅನ್ನು ನೀವು ಅಚ್ಚಕಟ್ಟಾಗಿ ಮಾಡಬಹುದು. ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳು, ದುಬಾರಿ ವಾಸ್ತವ್ಯ, ಕ್ಯಾಬ್‌ಗಳ ಪರ್ಯಾಯವಾಗಿ ಸಿಂಪಲ್‌ ಆಗಿ ಪ್ರವಾಸ ಮಾಡಬಹುದು.

​​ಇಂಡೋನೇಷ್ಯಾ​

PC:Unsplash

ಭಾರತೀಯರು ಬಜೆಟ್ ಸ್ನೇಹಿ ಪ್ರವಾಸ ಮಾಡಲು ಇಂಡೋನೇಷ್ಯಾ ದೇಶವನ್ನು ಕೂಡ ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಬಾಲಿಗೆ ಹೋಗಲು ಇಷ್ಟಪಡುತ್ತಾರೆ.

ಥೈಲ್ಯಾಂಡ್ ನಂತರ, ಬಾಲಿ ಮಧುಚಂದ್ರಕ್ಕಾಗಿ ದಂಪತಿಗಳ ಮೊದಲ ಆಯ್ಕೆಯಾಗಿ ಉಳಿದಿದೆ. ಇಲ್ಲಿ ಸಾಕಷ್ಟು ಕಡಲತೀರಗಳು, ಹಳೆಯ ದೇವಾಲಯಗಳು, ಮಾರುಕಟ್ಟೆಗಳು ಮತ್ತು ವನ್ಯಜೀವಿ ಪ್ರವಾಸಿ ಸ್ಥಳಗಳು ಇವೆ. ಅಚ್ಚಕಟ್ಟಾಗಿ ನೀವು 40 ಸಾವಿರಕ್ಕಿಂತ ಕಡಿಮೆ ವೆಚ್ಚ ಮಾಡಿ ಪ್ರವಾಸ ಯೋಜಿಸಬಹುದು. ದೆಹಲಿಯಿಂದ ಸುಮಾರು 2500 ರೂ ಪ್ರಯಾಣದ ವೆಚ್ಚ ತಗಲುತ್ತದೆ.

​​ವಿಯೆಟ್ನಾಂ​

PC:Unsplash

ವಿಯೆಟ್ನಾಂ ಭಾರತಕ್ಕೆ ಹತ್ತಿರದ ದೇಶವಾಗಿದೆ. ವಾಸ್ತವವಾಗಿ, ವಿಯೆಟ್ನಾ ಅತ್ಯಂತ ರೋಮ್ಯಾಂಟಿಕ್‌ ದೇಶವು ಹೌದು. ಐತಿಹಾಸಿಕ ಸ್ಮಾರಕಗಳು, ನೈಸರ್ಗಿಕ ಸೌಂದರ್ಯ, ಪ್ರಶಾಂತ ಕಡಲತೀರಗಳು ಮತ್ತು ಉತ್ತಮ ಆಹಾರದೊಂದಿಗೆ ಜನರನ್ನು ಈ ದೇಶ ಆಕರ್ಷಿಸುತ್ತದೆ. ದೆಹಲಿಯಿಂದ ಪ್ರಯಾಣದ ವೆಚ್ಚ 18000 ವೆಚ್ಚವಾಗುತ್ತದೆ. ಸೀಸನ್‌ ಇಲ್ಲದ ಸಮಯದಲ್ಲಿ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಬಹುದು.

​​ಮಾಲ್ಡೀವ್ಸ್​

PC:Unsplash

ಹನಿಮೂನ್‌ಗೆ ಮಾಲ್ಡೀವ್ಸ್‌ ಬೆಸ್ಟ್ ಎಂದೇ ಪರಿಗಣಿಸಲಾಗಿದೆ. ವಿಶ್ವದ ಜನರನ್ನು ಆಕರ್ಷಿಸುವ ಈ ಸುಂದರವಾದ ದ್ವೀಪ ರಾಷ್ಟ್ರಕ್ಕೆ ಬಜೆಟ್ ಸ್ನೇಹಿ ಪ್ರವಾಸ ಮಾಡಬಹುದಾಗಿದೆ. ಈ ಸ್ಥಳವು ತನ್ನ ಸ್ಪಟಿಕ ಸ್ಪಷ್ಟವಾದ ಕಡಲತೀರಗಳಿಗೆ ಹಾಗು ಪ್ರಮುಖ ಆಕರ್ಷಣೆಗಳಿಗೆ ಹೆಸರುವಾಸಿಯಾಗಿದೆ. ಡೈವಿಂಗ್ ಅಥವಾ ಸ್ನಾರ್ಕ್ಲಿಂಗ್‌ನಂತಹ ನೀರಿನ ಚಟುವಟಿಕೆಗಳನ್ನು ದಂಪತಿಗಳು ಆನಂದಿಸಬಹುದು. ಬಜೆಟ್‌ ಸ್ನೇಹಿ ಹನಿಮೂನ್‌ ಟ್ರಿಪ್ ಮಾಡಲು ಆಫ್-ಸೀಸನ್ ಸಮಯದಲ್ಲಿ ಭೇಟಿ ನೀಡುವುದು ಉತ್ತಮ.

ಇದನ್ನೂ ಓದಿ: ಮಾಲ್ಡೀವ್ಸ್‌ಗೆ ಹೋಗುವವರು ರೆಸಾರ್ಟ್‌ನಲ್ಲಿ ಉಳಿಯಲು ಹೋಗುವುದಿಲ್ಲ…ಬದಲಾಗಿ ಇಂತಹ ಚಟುವಟಿಕೆ ಕೈಗೊಳ್ಳುತ್ತಾರೆ

​​ಭೂತಾನ್‌ ​

PC:Unsplash

ಬಜೆಟ್‌ ಸ್ನೇಹಿ ಅಂತಾರಾಷ್ಟ್ರೀಯ ಪ್ರವಾಸ ಪಟ್ಟಿಯಲ್ಲಿ ಭೂತಾನ್‌ ಕೂಡ ಒಂದಾಗಿದೆ. ಇಲ್ಲಿ ಸಾಕಷ್ಟು ಪ್ರಾಕೃತಿಕ ತಾಣಗಳು, ಮಠಗಳು, ಆಳವಾದ ಕಣಿವೆಗಳು ಇವೆ. ಸಂಗಾತಿಯೊಂದಿಗೆ ಹಾಯಾಗಿ ಉಳಿಯಲು ಭೂತಾನ್‌ ಕೂಡ ಬೆಸ್ಟ್ ಎಂದೇ ಹೇಳಬಹುದು. ಭಾರತೀಯ ಪಾಸ್‌ಪೋರ್ಟ್‌ ಹೊಂದಿದ್ದು, ವೀಸಾ ಇಲ್ಲದೆ ಭುತಾನ್‌ ದೇಶಕ್ಕೆ ಬಜೆಟ್ ಸ್ನೇಹಿ ಪ್ರವಾಸ ಮಾಡಬಹುದು.

ಇದನ್ನೂ ಓದಿ: ಚಿತ್ತೂರಿನಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಈ ಸುಂದರ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ

ಲೇಖಕರ ಬಗ್ಗೆ
ಸೌಮ್ಯ ಟೇಮ್ಕರ್
ಸೌಮ್ಯ ಟೇಮ್ಕರ್ ಅವರು ತಮ್ಮ ಉದ್ಯಮದಲ್ಲಿ 4 ವರ್ಷಗಳ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರಾಗಿದ್ದಾರೆ. ಪ್ರಯಾಣಕ್ಕೆ ಸಂಬಂಧಿಸಿದ ಲೇಖನವನ್ನು ಅಚ್ಚುಕಟ್ಟಾಗಿ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಸೌಮ್ಯಾ ಕಥೆಗಳನ್ನು ಹೇಳುವ ಹಾಗು ಪ್ರಯಾಣದ ಅನುಭವವನ್ನು ತಮ್ಮ ಲೇಖನದ ಮೂಲಕ ಹಂಚಿಕೊಳ್ಳಲು ಹೆಚ್ಚು ಇಷ್ಟ ಪಡುತ್ತಾರೆ. ತನ್ನ ವೃತ್ತಿಜೀವನದ ಅವಧಿಯಲ್ಲಿ, ಪ್ರಪಂಚದ ಅನೇಕ ಸ್ಥಳಗಳ ಬಗ್ಗೆ ರಸವತ್ತಾದ ಲೇಖನಗಳನ್ನು ಓದುಗರಿಗಾಗಿ ಬರೆಯುತ್ತಾ ಬಂದಿದ್ದಾರೆ. ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಸೌಮ್ಯ, ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಟಿಪ್ಸ್‌ಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ವಾಸ್ತವವಾಗಿ, ಆಕೆಯ ಬರವಣಿಗೆಯ ಶೈಲಿಯು ಸ್ಪಷ್ಟ ಮತ್ತು ನಿಖರತೆಯನ್ನು ಹೊಂದಿರುತ್ತದೆ. ಓದುಗರನ್ನು ತನ್ನ ಬರವಣಿಗೆಯಿಂದ ಸೆಳೆಯುವ ವಿಶಿಷ್ಟ ಸಾಮರ್ಥ್ಯ ಆಕೆಯಲ್ಲಿದೆ. ಪ್ರಯಾಣದ ಉತ್ಸಾಹಿಗಳಿಗೆ ಅವಳ ಲೇಖನಗಳನ್ನು ಓದಲೇಬೇಕು ಎನ್ನುವ ಭಾವ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸೌಮ್ಯಾ ಕೇವಲ ಪ್ರವಾಸಗಳಲ್ಲಿ ಮಾತ್ರ ಅತ್ಯಾಸಕ್ತಿ ಹೊಂದಿರುವ ವ್ಯಕ್ತಿಯಲ್ಲ, ಬದಲಾಗಿ ಕಾದಂಬರಿಗಳನ್ನು ಓದುವುದನ್ನು ಆನಂದಿಸುತ್ತಾಳೆ. ಜೊತೆಗೆ ಪ್ರತಿನಿತ್ಯ ನಡೆಯುವ ರಾಜಕೀಯ ಸುದ್ದಿಗಳ ಮಾಹಿತಿಗಳನ್ನು ಸಂಗ್ರಹಿಸುತ್ತಾಳೆ. ಒಟ್ಟಾರೆ ಸೌಮ್ಯಾ ಜೀವನದ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿರುವ ಸುಸಂಬದ್ಧ ವ್ಯಕ್ತಿ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ