ಆ್ಯಪ್ನಗರ

IRCTC ಭಾರತ ನೇಪಾಳ ಅಷ್ಟ ಯಾತ್ರೆ: ಇಷ್ಟು ಕಡಿಮೆ ಬೆಲೆಯಲ್ಲಿ ಮಾಡಬಹುದು ಎಂದರೆ ನಂಬಲು ಕಷ್ಟ ಬಿಡಿ



Authored by ಸೌಮ್ಯ ಟೇಮ್ಕರ್ | Vijaya Karnataka Web 14 Mar 2023, 1:26 pm

PC:Unsplash

IRCTC ಕಾಲಕಾಲಕ್ಕೆ ತರುವ ಪ್ರತಿಯೊಂದು ಪ್ಯಾಕೇಜ್‌ಗಳು ಕೂಡ ಪ್ರವಾಸಿಗರ ಅನುಕೂಲಕ್ಕಾಗಿ. ಕೈಗೆಟುವ ದರದಲ್ಲಿ ತಾವು ಕಂಡ ಕನಸಿನ ಸ್ಥಳಗಳನ್ನು ಕಂಡು ಪುಳಕಿತರಾಗಬಹುದು. ಅದು ಧಾರ್ಮಿಕ ಪ್ರವಾಸವೇ ಆಗಿರಬಹುದು, ಉತ್ಸವ ಅಥವಾ ಗಿರಿಧಾಮಗಳ ಪ್ರವಾಸವೇ ಆಗಿರಬಹುದು. ಇನ್ನು, ವಿದೇಶ ಪ್ರವಾಸದ ಕನಸು ಹೊತ್ತಿರುವ ಜೀವಗಳಿಗೆ IRCTC ಅದ್ಭುತವಾದ ಪ್ರವಾಸ ಮಾಡಿಸುತ್ತಿದೆ.

ಪ್ರಸ್ತುತ, IRCTC ನವೀನ ಪ್ಯಾಕೇಜ್‌ ಪರಿಚಯಿಸಿದೆ. ಅದು ಮತ್ಯಾವುದು ಅಲ್ಲ, ಭಾರತ ನೇಪಾಳ ಅಷ್ಟ ಯಾತ್ರೆ. ನೇಪಾಳದ ಅದ್ಭುತ ಪ್ರವಾಸ ಮಾಡಲು ನೀವು ಎಷ್ಟು ಮೊತ್ತದ ಟಿಕೆಟ್‌ ಖರೀದಿ ಮಾಡಬೇಕು? ಎಷ್ಟು ದಿನಗಳ ಪ್ರವಾಸ? ಯಾವೆಲ್ಲಾ ತಾಣಗಳು ನೋಡಲಿದ್ದೀರಿ? ಎಂಬೆಲ್ಲಾ ಮಾಹಿತಿಗಳನ್ನು ಲೇಖನದಲ್ಲಿ ಮಾಹಿತಿ ನೀಡಲಾಗಿದೆ ಓದಿ.

Vijaya Karnataka Web complete details about bharat nepal ashtha yatra package in kannada
IRCTC ಭಾರತ ನೇಪಾಳ ಅಷ್ಟ ಯಾತ್ರೆ: ಇಷ್ಟು ಕಡಿಮೆ ಬೆಲೆಯಲ್ಲಿ ಮಾಡಬಹುದು ಎಂದರೆ ನಂಬಲು ಕಷ್ಟ ಬಿಡಿ


ಭಾರತ ನೇಪಾಳ ಅಷ್ಟ ಯಾತ್ರೆ

PC:Unsplash

ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು (IRCTC) ಪ್ರಯಾಣಿಕರ ಅನುಕೂಲಕ್ಕಾಗಿ ನೇಪಾಳ ಪ್ರವಾಸ ಯೋಜಿಸಿದೆ. ಇದು ಭಾರತ್ ಗೌರವ್ ಟೂರಿಸ್ಟ್ ರೈಲಿನಲ್ಲಿ ಮಾರ್ಚ್ 31 ರಿಂದ ಭಾರತ್ ನೇಪಾಳ ಅಷ್ಟ ಯಾತ್ರಾ ಪ್ರವಾಸ ಪ್ಯಾಕೇಜ್ ಅನ್ನು ಕೈಗೊಳ್ಳಲಿದೆ. ಇದು "ದೇಖೋ ಅಪ್ನಾ ದೇಶ್" ಯೋಜನೆಯ ಅಡಿಯಲ್ಲಿ ಬರುತ್ತದೆ ಎಂದು ನಾವು ನಿಮಗೆ ಹೇಳಲೇಬೇಕು.

ಎಷ್ಟು ದಿನಗಳ ಪ್ರವಾಸ?

PC:Unsplash

IRCTC ಯ ಈ ಭಾರತ ನೇಪಾಳ ಅಷ್ಟ ಯಾತ್ರೆಯ ಪ್ಯಾಕೇಜ್‌ ಅನ್ನು ನೀವು ಬುಕ್‌ ಮಾಡಿದರೆ 10 ದಿನಗಳವರೆಗೆ ನೇಪಾಳದ ಪ್ರವಾಸ ಮಾಡುತ್ತೀರಿ.

ಪ್ಯಾಕೇಜ್ ಹೆಸರು: ಭಾರತ್ ನೇಪಾಳ ಅಷ್ಟ ಯಾತ್ರೆ

ದಿನಾಂಕ: ಮಾರ್ಚ್ 31 ರಂದು ಪ್ರಾರಂಭ

ಎಷ್ಟು ದಿನಗಳ ಪ್ರವಾಸ: 9 ರಾತ್ರಿಗಳು ಮತ್ತು 10 ಹಗಲು.

ಯಾವೆಲ್ಲಾ ಪ್ರವಾಸಿ ತಾಣಗಳನ್ನು ನೋಡಲಿದ್ದೀರಿ?

PC:Unsplash

ಅಯೋಧ್ಯೆ: ಹನುಮಾನ್ ಗರ್ಹಿ, ರಾಮ ಜನ್ಮಭೂಮಿ ದೇವಸ್ಥಾನ, ನಂದಿಗ್ರಾಮ ಮತ್ತು ಸರಯೂ ಘಾಟ್

ಕಠ್ಮಂಡು: ಸ್ವಯಂಭುನಾಥ ಸ್ತೂಪ, ಪಶುಪತಿನಾಥ ದೇವಾಲಯ, ಮತ್ತು ದರ್ಬಾರ್ ಚೌಕ

ವಾರಣಾಸಿ: ಸಂಕಟ್ ಮೋಚನ್ ದೇವಸ್ಥಾನ, ವಾರಣಾಸಿ ಘಾಟ್‌ನಲ್ಲಿ ಗಂಗಾ ಆರತಿ, ತುಳಸಿ ಮಾನಸ ದೇವಸ್ಥಾನ, ಮತ್ತು ಕಾಶಿ ವಿಶ್ವನಾಥ ಕಾರಿಡಾರ್ ಮತ್ತು ದೇವಸ್ಥಾನ.

ಪ್ರಯಾಗರಾಜ್: ಹನುಮಾನ್ ದೇವಾಲಯ, ಗಂಗಾ-ಯಮುನಾ ಸಂಗಮ.

ಏನೆಲ್ಲಾ ಸೌಲಭ್ಯಗಳನ್ನು ಪಡೆಯುತ್ತೀರಿ

PC: Unsplash

ಒಂದು ವೇಳೆ ಭಾರತ-ನೇಪಾಳ ಅಷ್ಟ ಯಾತ್ರೆಯ ಪ್ಯಾಕೇಜ್‌ ಅನ್ನು ನೀವು ಆಯ್ಕೆ ಮಾಡಿಕೊಂಡರೆ IRCTC ಪ್ರಯಾಣಿಕರಿಗೆ ಅನೇಕ ಅನುಕೂಲಗಳನ್ನು ನೀಡುತ್ತದೆ. ಈ ಎಲ್ಲಾ ಸೌಲಭ್ಯಗಳು ಪ್ಯಾಕೇಜ್‌ನಲ್ಲಿ ಸೇರ್ಪಡೆಗೊಂಡಿರುತ್ತದೆ ಎಂಬುದನ್ನು ನಾವು ನಿಮಗೆ ಹೇಳಲೇಬೇಕು.

ಊಟ, ವಸತಿ, ಟೋಲ್‌ಗಳು, ಸ್ಥಳಗಳ ಅನ್ವೇಷಣೆಗೆ ಸಾರಿಗೆ ವ್ಯವಸ್ಥೆ, ಪ್ರಯಾಣ ವಿಮೆ ಸೇರಿದಂತೆ ಇನ್ನು ಅನೇಕ ಸೌಲಭ್ಯಗಳನ್ನು IRCTC ನೀಡುತ್ತದೆ. ಊಟದಲ್ಲಿ ಸಸ್ಯಾಹಾರಿ ಆಹಾರಗಳನ್ನು ಮಾತ್ರ ನೀಡಲಾಗುತ್ತದೆ.

ಇದನ್ನೂ ಓದಿ: IRCTCಯ ಈ ಪ್ರವಾಸ ಪ್ಯಾಕೇಜ್‌ ಆಯ್ಕೆ ಮಾಡಿಕೊಂಡರೆ ಕರ್ನಾಟಕ ಸರ್ಕಾರದಿಂದ ಪ್ರತಿ ವ್ಯಕ್ತಿಗೆ ರೂ. 5000/- ವಿಶೇಷ ರಿಯಾಯಿತಿ

ಪ್ಯಾಕೇಜ್‌ನ ಬೆಲೆ

PC: Unsplash

ಈ ಪ್ಯಾಕೇಜ್‌ ಸ್ಟ್ಯಾಂಡರ್ಡ್‌ ಹಾಗು ಸುಪೀರಿಯರ್‌ ಗಳೆಂಬ ವರ್ಗಗಳನ್ನು ಹೊಂದಿದೆ. ಅವುಗಳಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಟಿಕೆಟ್ ಬುಕ್‌ ಮಾಡಬಹುದು.

ಸ್ಟ್ಯಾಂಡರ್ಡ್‌ ಕ್ಲಾಸ್‌: ವ್ಯಕ್ತಿಗೆ 36,160 ರೂಪಾಯಿಗಳು, ಇಬ್ಬರು ಅಥವಾ ಮೂವರು ಪ್ರಯಾಣಿಸಿದರೆ ವ್ಯಕ್ತಿಗೆ 27,815 ರೂಪಾಯಿಗಳು. ನೀವು 5 ರಿಂದ 11ವರ್ಷದ ಮಗುವಿನೊಂದಿಗೆ ಪ್ರಯಾಣಿಸುವವರಾಗಿದ್ದರೆ ವ್ಯಕ್ತಿಗೆ 25,035 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.

ಸುಪೀರಿಯರ್‌ ಕ್ಲಾಸ್‌: ವ್ಯಕ್ತಿಗೆ 41,090 ರೂಪಾಯಿಗಳು, ಇಬ್ಬರು ಅಥವಾ ಮೂವರು ಪ್ರಯಾಣಿಸಿದರೆ ವ್ಯಕ್ತಿಗೆ 31,610 ರೂಪಾಯಿಗಳು. ನೀವು 5 ರಿಂದ 11ವರ್ಷದ ಮಗುವಿನೊಂದಿಗೆ ಪ್ರಯಾಣಿಸುವವರಾಗಿದ್ದರೆ ವ್ಯಕ್ತಿಗೆ 28,450 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: IRCTC: 13,900 ರೂ ಇದ್ದರೆ ಸಾಕು ದಕ್ಷಿಣ ಭಾರತದ ಈ ಯಾತ್ರಾ ಸ್ಥಳಗಳಿಗೆ 9 ದಿನಗಳ ಪ್ರವಾಸ ಮಾಡಬಹುದು

ಲೇಖಕರ ಬಗ್ಗೆ
ಸೌಮ್ಯ ಟೇಮ್ಕರ್
ಸೌಮ್ಯ ಟೇಮ್ಕರ್ ಅವರು ತಮ್ಮ ಉದ್ಯಮದಲ್ಲಿ 4 ವರ್ಷಗಳ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರಾಗಿದ್ದಾರೆ. ಪ್ರಯಾಣಕ್ಕೆ ಸಂಬಂಧಿಸಿದ ಲೇಖನವನ್ನು ಅಚ್ಚುಕಟ್ಟಾಗಿ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಸೌಮ್ಯಾ ಕಥೆಗಳನ್ನು ಹೇಳುವ ಹಾಗು ಪ್ರಯಾಣದ ಅನುಭವವನ್ನು ತಮ್ಮ ಲೇಖನದ ಮೂಲಕ ಹಂಚಿಕೊಳ್ಳಲು ಹೆಚ್ಚು ಇಷ್ಟ ಪಡುತ್ತಾರೆ. ತನ್ನ ವೃತ್ತಿಜೀವನದ ಅವಧಿಯಲ್ಲಿ, ಪ್ರಪಂಚದ ಅನೇಕ ಸ್ಥಳಗಳ ಬಗ್ಗೆ ರಸವತ್ತಾದ ಲೇಖನಗಳನ್ನು ಓದುಗರಿಗಾಗಿ ಬರೆಯುತ್ತಾ ಬಂದಿದ್ದಾರೆ. ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಸೌಮ್ಯ, ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಟಿಪ್ಸ್‌ಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ವಾಸ್ತವವಾಗಿ, ಆಕೆಯ ಬರವಣಿಗೆಯ ಶೈಲಿಯು ಸ್ಪಷ್ಟ ಮತ್ತು ನಿಖರತೆಯನ್ನು ಹೊಂದಿರುತ್ತದೆ. ಓದುಗರನ್ನು ತನ್ನ ಬರವಣಿಗೆಯಿಂದ ಸೆಳೆಯುವ ವಿಶಿಷ್ಟ ಸಾಮರ್ಥ್ಯ ಆಕೆಯಲ್ಲಿದೆ. ಪ್ರಯಾಣದ ಉತ್ಸಾಹಿಗಳಿಗೆ ಅವಳ ಲೇಖನಗಳನ್ನು ಓದಲೇಬೇಕು ಎನ್ನುವ ಭಾವ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸೌಮ್ಯಾ ಕೇವಲ ಪ್ರವಾಸಗಳಲ್ಲಿ ಮಾತ್ರ ಅತ್ಯಾಸಕ್ತಿ ಹೊಂದಿರುವ ವ್ಯಕ್ತಿಯಲ್ಲ, ಬದಲಾಗಿ ಕಾದಂಬರಿಗಳನ್ನು ಓದುವುದನ್ನು ಆನಂದಿಸುತ್ತಾಳೆ. ಜೊತೆಗೆ ಪ್ರತಿನಿತ್ಯ ನಡೆಯುವ ರಾಜಕೀಯ ಸುದ್ದಿಗಳ ಮಾಹಿತಿಗಳನ್ನು ಸಂಗ್ರಹಿಸುತ್ತಾಳೆ. ಒಟ್ಟಾರೆ ಸೌಮ್ಯಾ ಜೀವನದ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿರುವ ಸುಸಂಬದ್ಧ ವ್ಯಕ್ತಿ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ