ಆ್ಯಪ್ನಗರ

ಕೂತಲ್ಲೇ ಆನಂದಿಸಿ ನಿಮ್ಮ ಕನಸಿನ ತಾಣದ ಪ್ರವಾಸದ ಅನುಭವ

ಬೇಸಿಗೆ ರಜೆಯಲ್ಲಿ ಪ್ರವಾಸಕ್ಕೆ ಹೋಗುವ ಕನಸನ್ನು ಕೊರೊನಾ ಕಮರಿಸಿದೆ. ಆದರೆ ನಿಮ್ಮ ಮನೆಯೊಳಗೆ ಕುಳಿತು ಜಗತ್ತನ್ನು ಸುತ್ತಿ ಬನ್ನಿ.

Vijaya Karnataka Web 21 Mar 2020, 1:24 pm

PC: Michal.jalovy
Vijaya Karnataka Web experience virtual tour at home
ಕೂತಲ್ಲೇ ಆನಂದಿಸಿ ನಿಮ್ಮ ಕನಸಿನ ತಾಣದ ಪ್ರವಾಸದ ಅನುಭವ

ಸರಿಯಾಗಿ ಇವತ್ತಿಗೆ ಫಿನ್‌ಲ್ಯಾಂಡ್‌ನಲ್ಲಿರಬೇಕಿತ್ತು, ನಾವು ಇಟಲಿಯಲ್ಲಿರಬೇಕಿತ್ತು ಎಂದು ಹಲುಬುತ್ತಿರುವವರು ಇನ್ಯಾರೋ, ಮಗದೊಬ್ಬರು ಹಿಮಾಚಲದ ಝಿರೋ ವ್ಯಾಲಿಗೆ ಬುಕ್‌ ಮಾಡಿ ಕೂತಿದ್ದರೆ, ಪಕ್ಕದ ಮನೆ ಅಂಕಲ್ಲುಐವತ್ತನೇ ಮದುವೆ ವಾರ್ಷಿಕೋತ್ಸವಕ್ಕೆ ಹೋಗಬೇಕಾದ ಸ್ವಿಸ್‌ ವಿಸಾ ಕ್ಯಾನ್ಸಲ್‌ ಮಾಡಿ ಕೂತಿದ್ದಾರೆ. ಕಾರಣ ಪ್ರತಿಯೊಬ್ಬರ ಯೋಜನೆಗಳನ್ನು ಕೊರೊನಾ ಎಂಬ ಕಣ್ಣಿಗೆ ಕಾಣದ ಕ್ರಿಮಿ ತಿಂದು ಹಾಕಿದೆ.

ಅಂಗೈಯಲ್ಲೇ ಜಗತ್ತು

ಜಗತ್ತು ಅಗತ್ಯಕ್ಕಿಂತ ತುಸು ಹೆಚ್ಚು ನಿಧಾನವಾಗುತ್ತಿದೆ, ಅಲ್ಲಲ್ಲಿ ಸ್ಥಬ್ಧವಾಗಿದೆ. ಇನ್ನುಳಿದ ಕಡೆಯಲ್ಲಿ ಸ್ವಯಂ ನಿರ್ಬಂಧ. ಆದರೇನಂತೆ ನೀವು ನೋಡಬೇಕಾದ, ಹೋಗಬೇಕಾದ ಜಾಗವೆಲ್ಲ ಈಗ ಅಂಗೈಯಲ್ಲೇ ಒಮ್ಮೆ ನೋಡಿ ಬಿಡಿ. ಕಣ್ಣೆದುರೇ ಜಗತ್ತು ಎದ್ದು ನಿಲ್ಲಲು ತಯಾರಿದೆ.

ವಚ್ರ್ಯುವಲ್‌ ಟೂರ್‌
ವಚ್ರ್ಯುವಲ್‌ ಟೂರ್‌ ಅಂದರೆ ಕೂತಲ್ಲೇ ಜಗತ್ತು ಸುತ್ತುವ ಜಾಣ್ಮೆಯ ಪ್ರವಾಸ ಅಷ್ಟೆ. ಅರ್ಧ ದಿನದ ಜಾಲತಾಣ ಮಾಹಿತಿಯ ಆಕರಕ್ಕಾಗಿ ವ್ಯಯಿಸಿದರೆ ಮುಂದಿನ ದಿನಗಳೆಲ್ಲವಾರಕ್ಕೊಮ್ಮೆ ದೇಶ ಸುತ್ತಿ ಬಂದ ಅನುಭವ ಪಡೆಯುವುದು ಪಕ್ಕಾ. ಆವಾಹಿಸಿಕೊಳ್ಳುವ ಆಪ್ತತೆ ನಮಗಿರಬೇಕಷ್ಟೆ. ನೋಡಬೇಕಾದ ಪ್ರತಿ ಊರಿನ ದೇಶದ ಮಾಹಿತಿ ಇವತ್ತು ತೀರ ಕಣ್ಣೆದುರೇ ನಡೆಯುತ್ತಿರುವಂತೆ ಮಾಹಿತಿಗಳು ಅಂತರ್ಜಾಲದಲ್ಲಿಲಭ್ಯವಿವೆ. ಆದರೆ ಸಾವಿರಾರು ಪುಟಗಟ್ಟಲೇ ಮಾಹಿತಿಯಲ್ಲಿಬೇಕಾದ ಜಾಗ, ಅದರ ಚಿತ್ರ ಲೈವ್‌ ಕಾನ್ಸೆರ್ಟ್‌ಗಳು ಎಲ್ಲಬಿಟ್ಟು ಸುಮ್ಮನೆ ಸಾವಿರ ಚಿತ್ರಗಳ ರಾಶಿ ಎದುರಿಗೆ ಬಿದ್ದಿರುತ್ತದೆ.

ಲೈವ್‌ ವಿಡಿಯೋಗಳ ತಾಣಗಳು

ಬದಲಿಗೆ ಪ್ರತೀ ದೇಶದ, ನೋಡಬೇಕಿರುವ ಸ್ಥಳಗಳ ಮಾಹಿತಿಯ ಬ್ಲಾಗ್‌ ಅಥವಾ ಲೈವ್‌ ವಿಡಿಯೋಗಳ ತಾಣಗಳನ್ನು ಹುಡುಕುತ್ತಾ ಹೋಗಿ. ಜಾಲತಾಣ ಹುಡುಕುವುದೂ ಟ್ರಿಕ್ಕಿ ಕೆಲಸ. ಒಂದೊಂದು ಅಲ್ಪವಿರಾಮ, ಫುಲ್‌ ಸ್ಟಾಪು, ಅಡ್ಡ ಗೆರೆ ಹೀಗೆ ಚಿನ್ಹೆ ಸೇರಿಸುವುದರ ಮೂಲಕ ನಮಗೆ ಬೇಕಾದ ಪುಟ ಅತ್ಯಂತ ಸ್ಪಷ್ಟವಾಗಿ, ನೇರವಾಗಿ ತಲುಪಬಹುದು.


ಪ್ರವಾಸದ ಚಿತ್ರಣ

ಬ್ರಾಜಿಲ್‌ ಕಾಡುಗಳ ವಿಡಿಯೋ ಮತ್ತು ಅದರ ಧ್ವನಿ ಮುದ್ರಿಕೆ ಸಹಿತ ಬೇಕೆಂದಿಟ್ಟುಕೊಳ್ಳಿ. ಹಾಗಂತ ಸರ್ಚ್ ಕೊಟ್ಟರೆ ಎಲ್ಲೆಲ್ಲೋ ಹೋಗಿ ತಲುಪಿಬಿಡುತ್ತೀರಿ. ನಿರ್ದಿಷ್ಟ ಪದ ಮತ್ತು ಮಾಹಿತಿಯ ಸಹಿತ ಟೈಪಿಸುತ್ತಾ ಹೋದಂತೆ ಅಲ್ಲಿನ ಪ್ರವಾಸೋದ್ಯಮ ಮತ್ತು ಇನ್ನಿತರ ಸಂಸ್ಥೆಗಳು ಪ್ರಕಟಿಸಿಗೊಂಡಿರುವ ಸುಸ್ಪಷ್ಟ ಮಾಹಿತಿಗಳು ಲಭ್ಯವಾಗುತ್ತವೆ. ನಿಜವಾಗಿಯೂ ಬ್ರಾಜಿಲ್‌ನ ಪುಟಗಳು, ಅದರ ಒಳನಾಡು ಜಲಸಾರಿಗೆ, ಆಪ್ತವಾಗುವ ಹಳ್ಳಿಗಳು ಹೀಗೆ ಎಲ್ಲಾಸಿಕ್ಕುತ್ತಾ ಹೋಗುತ್ತದೆ. ಕೊನೆಕೊನೆಗೆ ಅದರ ಅಕ್ಷಾಂಶ, ರೇಖಾಂಶದ ಮೇಲೂ ಹಿಡಿತ ಸಿಕ್ಕಿ ಅಕ್ಷರಶ: ಊರೊಂದರ ಒಳಹೊಕ್ಕು ಬರಬಹುದು. ಅಲ್ಲಿಗೆ ಶೇ.70 ರಷ್ಟು ಮುಖ್ಯಾತಿಮುಖ್ಯ ಪ್ರವಾಸದ ಚಿತ್ರಣ ನಿಮ್ಮ ಕಣ್ಣೆದುರು ಕೇವಲ ನಾಲ್ಕೈದು ಗಂಟೆಗಳ ಅವಧಿಯಲ್ಲಿಹಾಯ್ದು ಹೋಗಿರುತ್ತದೆ.

ಪ್ರಕಟಿಸಿರುವ ಮಾಹಿತಿ
ಸರಸರನೆ ಓದುವ ಓದಿ ಅರ್ಥೈ‍ಸಿಕೊಳ್ಳುವ, ಲಿಂಕ್‌ಗಳ ಕೆಳಗೆ ಇರುವ ಸಣ್ಣಸಣ್ಣ ಒಂದೇ ಸಾಲಿನಲ್ಲಿ ಶಬ್ದಗಳ ರೂಪದಲ್ಲಿ ಪ್ರಕಟಿಸಿರುವ ಮಾಹಿತಿ ಎಷ್ಟು ಜನ ನೋಡಿದ್ದಾರೆ, ಎಲ್ಲಿಯ ಪೋಸ್ಟು, ಯಾರ ಬ್ಲಾಗು, ಯಾವ ಬ್ಲಾಗಿಗೆ ಹೆಚ್ಚು ಮಹತ್ವ ಇದೆ, ಯಾವುದು ಅತ್ಯಂತ ನಿಖರ ಇತ್ಯಾದಿ ಮಾಹಿತಿಯನ್ನೆಲ್ಲ, ಒಬ್ಬ ನುರಿತ ಜಾಲಿಗ ಕಣ್ಣಾಡಿಸುತ್ತಲೇ ಅರಿತು ಬಿಡಬಲ್ಲ. ಅಂಥವನು ಸರಕ್ಕನೆ ಮುಂದಿನ ವೆಬ್‌ಸೈಟ್‌ ಹುಡುಕುತ್ತಾ ಹೋಗುತ್ತಾನೆ. ಹೋಗುವಾಗಲೇ ಅಲ್ಲೊಂದು 'ನಾಟ್‌ ರೆಕಮೆಂಡೆಂಡ್‌' ಎಂಬ ಕಮೆಂಟ್‌ ಬಿಸಾಡಿರುತ್ತಾನೆ. ಹಾಗೆ ಸಿಕ್ಕುವ ಸಂವಹನದಲ್ಲೇ ಅಪ್ಪಟ ಪುಟಕ್ಕೆ ಒಯ್ದು ನಿಲ್ಲಿಸುವವರೆಗೂ ನಾವು ಹುಡುಕುತ್ತಾ ಹೋಗಬಹುದು. ಅಂಥವರೊಂದಿಗೆ ಕುಳಿತೂ ಕೂಡಾ ಒಂದು ವಚ್ರ್ಯುವಲ್‌ ಟೂರ್‌ ಮಾಡಿ. ಇದರಿಂದ ಹೋಗಬೇಕಾದ ಜಾಗದ ಬಗ್ಗೆ ಹೆಚ್ಚಿನ ಚಿತ್ರ ಮಾಹಿತಿ ಮತ್ತು ನೇರ ದರ್ಶನ ಜೊತೆಗೆ ಮತ್ತೊಮ್ಮೆ ನಿಮ್ಮ ಪ್ರವಾಸ ಪರಿಷ್ಕರಿಸಲು ಅವಕಾಶವೂ ಇರುವುದರಿಂದ ಮರು ನಿರ್ಧಾರಕ್ಕೆ ಹೆಚ್ಚಿನ ಅನುಕೂಲ.

ಅಪ್‌ಡೇಟ್‌ ಗಮನಿಸಿ

ಉದಾ: ಭೂತಾನ್‌ ಬಗ್ಗೆ ನಮಗೆ ಅತ್ಯಂತ ಹೆಚ್ಚಿನ ನಿರೀಕ್ಷೆ ಇರುತ್ತದೆ. ಆದರೆ ಇತ್ತೀಚೆಗೆ ಅಲ್ಲಿಪ್ರವಾಹ ಉಂಟಾಗಿ ಆದ ಅನಾಹುತದ ಬಗ್ಗೆ ಓದಿದ್ದರೂ ಮರೆತಿರುತ್ತೇವೆ. ಅಂತಹ ಸ್ಥಳದಲ್ಲಿಮೂಲಭೂತ ವ್ಯವಸ್ಥೆ ಮರು ಸ್ಥಾಪನೆ ಆಗಲು ವರ್ಷಗಟ್ಟಲೇ ಬೇಕಾಗುತ್ತದೆ. ಆದರೆ ಪ್ರವಾಸ ನಿಗದಿ ಪಡಿಸುವಾಗ ನಾವು ಈ ಅಂಶಗಳನ್ನು ಗಮನಿಸಿಯೇ ಇರುವುದಿಲ್ಲ. ಜಾಲತಾಣದ ಚಿತ್ರ ಮಾತ್ರ ಗಮನಿಸಿರುತ್ತೇವೆ. ಅಲ್ಲಿಯಾವುದೋ ಕಾಲದ ಹಸಿರು ನಳನಳಿಸುತ್ತಿರುತ್ತದೆ. ಇತ್ತಿಚಿನ ದಿನದ ಅಪ್‌ಡೇಟ್‌ ಗಮನಿಸದಿದ್ದಲ್ಲಿಪರಿಸ್ಥಿತಿ ಗಂಭೀರ. ಹಾಗಾದಾಗ ಪ್ರವಾಸ ವ್ಯರ್ಥ. (ನೇಪಾಳಕ್ಕೆ 2020 ರ ನಂತರವೇ ಬನ್ನಿ ಎಂದು ವರ್ಷದ ಹಿಂದೆಯೇ ಸ್ವತ: ನೇಪಾಳ ಸರಕಾರ ಪ್ರಕಟಿಸಿದೆ. ಕಾರಣ ಪ್ರವಾಹಕ್ಕೆ ಸಿಕ್ಕು ಹಡಾಲೆದ್ದು ಹೋಗಿದ್ದು. ಆದರೆ ನೇರ ಜಾಲತಾಣ ನೋಡುವವನಿಗೆ ಈ ಮಾಹಿತಿ ಇರುವುದೇ ಇಲ್ಲ. ಹೋದರೆ ಪರಿಸ್ಥಿತಿ ಗಂಭೀರ)

ಎಡಿನ್‌ಬರ್ಗ್‌ ಜನರು ಎಲ್ಲೆಂದರಲ್ಲಿ ಉಗುಳುವುದಿಲ್ಲ, ಮತ್ತೆಲ್ಲಿ ಅಂತೀರಾ?

ಆ್ಯಪ್‌ಗಳು ಲಭ್ಯವಿವೆ
ಅದರ ಬದಲಿಗೆ ಜಾಲತಾಣದಲ್ಲಿಇದನ್ನೆಲ್ಲವ್ಯವಸ್ಥಿತವಾಗಿ ಪೂರೈಸುವ ಪುಟಗಳೇ ಇವೆ. ಆಯಾ ದಿನಾಂಕ ಮತ್ತು ನಿಗದಿತ ಮಾಹಿತಿಯ ಆಧಾರದ ಮೇಲೆ ತೀರ ಇತ್ತೀಚಿನ ವಚ್ರ್ಯುವಲ್‌ ಟೂರ್‌ ಮಾಡಿದರೆ, ನೈಜವಾಗಿ ಸ್ಥಳಾನುಭವವವೂ ಆಗುತ್ತದೆ. ಅದರ ಜತೆಗೆ ಅಯಾ ಸ್ಥಳದ ಪ್ರವಾಸೋದ್ಯಮದಲ್ಲಿ ಲಭ್ಯವಾಗಬಹುದಾದ ಸುಲಭ ದಾರಿ ಗೋಚರವಾಗುತ್ತವೆ. ಇದರ ಜತೆಗೆ ನಿಮ್ಮ ಭಾಷೆಯ ಆಯ್ಕೆಗೆ ಅನುಗುಣವಾಗಿ, ಲೈವ್‌ ವಿಡಿಯೋ ಅಪ್‌ಡೆಟ್‌ಗಳು ಮತ್ತು ಆಯಾ ದೇಶದ ಪ್ರವಾಸೋದ್ಯಮ ಹಾಕಿರುವ ಮುದ್ರಿಕೆಗಳಲ್ಲಿ ಭಾಷೆ ಅರ್ಥಕ್ಕೆ, ಹಿಡಿತಕ್ಕೆ ಸಿಕ್ಕದಿದ್ದಲ್ಲಿನಮ್ಮ ನಮ್ಮ ಭಾಷೆಗೆ ಭಾಷಾಂತರಿಸುವ, ಇಲ್ಲವಾದಲ್ಲಿಕನಿಷ್ಟ ಭಾರತೀಯ ಇಂಗ್ಲಿಷ್‌ಗೆ ಭಾಷಾಂತರಿಸಿಯೇ ಬಿತ್ತರಿಸುವ ಆ್ಯಪ್‌ಗಳು ಲಭ್ಯವಿವೆ.

ಮ್ಯಾಗ್ನಿಫೈರ್‌ ಅಳವಡಿಸಿ

ಅವನ್ನೆಲ್ಲಅಳವಡಿಸಿಕೊಂಡು, ಇರುವ ಮೊಬೈಲ್‌ ಸ್ವಲ್ಪ ಆಧುನಿಕವಾಗಿದ್ದರೆ, ಅದಕ್ಕೆ ಮ್ಯಾಗ್ನಿಫೈರ್‌ ಅಳವಡಿಸಿ, ದನಿಯ ಬಿತ್ತರಕ್ಕೆ ಮನೆಯಲ್ಲೇ ಇರುವ ಸ್ಪೀಕರ್‌ಗೆ ವೈಫೈ ಮೂಲಕ ಕನೆಕ್ಟ್ ಮಾಡಿ, ಮೆತ್ತನೆಯ ಸೋಫಾ ಮೇಲೆ ಕಾಲು ಮಡಚಿ ಕಾಫಿ ಹಿಡಿದು ಕೂತು ಬಿಡಿ. ಎದುರಿಗೆ ಜಗತ್ತು ಗಿರಗಿರ ಸುತ್ತತೊಡಗುತ್ತದೆ. ಮತ್ತೆಲ್ಲಇಲ್ಲೇ ನೋಡುತ್ತಾ, ನೈಜ ಮಾಹಿತಿಯ ಜೊತೆಗೆ ಹತ್ತು ಪ್ರವಾಸ ಮಾಡುವ ಬದಲಿಗೆ ಪರಿಷ್ಕೃತವಾಗುತ್ತ ಅರ್ಧಕ್ಕೆ ಇಳಿಯುತ್ತದೆ. ಆರ್ಥಿಕ ಹೊಡೆತವೂ ತಪ್ಪುತ್ತದೆ.

*ಸಂತೋಷಕುಮಾರ ಮೆಹೆಂದಳೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ