ಆ್ಯಪ್ನಗರ

ವಾವ್‌…! ಹೊನ್ನೆಮರಡುವಿನಲ್ಲಿ ಸ್ನೇಹಿತರೊಂದಿಗೆ ಹೀಗೆಲ್ಲಾ ಎಂಜಾಯ್‌ ಮಾಡಬಹುದಾ?

ಹೊನ್ನೆಮರಡುವಿಗೆ ಭೇಟಿ ನೀಡಿದಾಗ ಯಾವೆಲ್ಲಾ ತಾಣಗಳ ಪ್ರವಾಸ ಮಾಡಬೇಕು? ಹೇಗೆಲ್ಲಾ ಎಂಜಾಯ್‌ ಮಾಡಬೇಕು ಎಂಬುದನ್ನು ಇಲ್ಲಿ ತಿಳಿಯಿರಿ.

Vijaya Karnataka Web 1 Jul 2022, 12:46 pm
PC: Pixabay
Vijaya Karnataka Web how to enjoy weekend with friends in honnemaradu
ವಾವ್‌…! ಹೊನ್ನೆಮರಡುವಿನಲ್ಲಿ ಸ್ನೇಹಿತರೊಂದಿಗೆ ಹೀಗೆಲ್ಲಾ ಎಂಜಾಯ್‌ ಮಾಡಬಹುದಾ?


ಹೊನ್ನೆಮರಡು ಬೆಂಗಳೂರಿನಿಂದ ಸುಮಾರು 400 ಕಿ.ಮೀ ದೂರದಲ್ಲಿದ್ದು, ವಾರಾಂತ್ಯದ ಸಮಯದಲ್ಲಿ ಸ್ನೇಹಿತರೊಂದಿಗೆ ಟ್ರಿಪ್‌ ಕೈಗೊಳ್ಳಬಹುದು. ಇದು ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಅದ್ಭುತವಾದ ಪ್ರವಾಸಿ ತಾಣವಾಗಿದೆ.

ಲಿಂಗನಮಕ್ಕಿ ಅಣೆಕಟ್ಟಿನ ಮೇಲಿರುವ ಈ ವಿಲಕ್ಷಣವಾದ ಗ್ರಾಮವು ಒತ್ತಡದ ಜೀವನದಿಂದ ಬೇಸತ್ತ ಪ್ರವಾಸಿಗರಿಗೆ ಸ್ವರ್ಗವಾಗಿದೆ. ನಿಮ್ಮ ಸ್ನೇಹಿತರೊಂದಿಗೆ ಈ ವಾರಾಂತ್ಯಕ್ಕೆ ಹೊನ್ನೆಮರಡುವಿನ ಆಸುಪಾಸಿನಲ್ಲಿರುವ ಈ ಅದ್ಭುತ ತಾಣಗಳನ್ನು ಅನ್ವೇಷಣೆ ಮಾಡಿ.

ಹೊನ್ನೆಮರಡು

PC: Srinath.holla

ನೀವು ಸಾಹಸವನ್ನು ಹೆಚ್ಚಾಗಿ ಇಷ್ಟಪಡುವವರಾಗಿದ್ದರೆ, ಹೊನ್ನೆಮರಡು ಅತ್ಯುತ್ತಮವಾದ ತಾಣವಾಗಿದೆ. ಏಕೆಂದರೆ, ಇದನ್ನು ಸಾಹಸ ಚಟುವಟಿಕೆಗಳ ನಾಡು ಎಂದೇ ಕರೆಯುತ್ತಾರೆ. ಈ ಹೊನ್ನೆಮರಡು ಪಟ್ಟಣದ ಹೃದಯಭಾಗದಲ್ಲಿ ಪ್ರಶಾಂತವಾದ ಬೆಟ್ಟಗಳು, ಅರಣ್ಯ ಮತ್ತು ಹಳದಿ ಬಣ್ಣದ ಚಿನ್ನದ ಮರಳಿನಿಂದ ಆವೃತವಾಗಿದೆ.

ನಗರದ ಜಂಜಾಟದಿಂದ ದೂರ ಉಳಿಯಲು ಇದಕ್ಕಿಂತ ಉತ್ತಮ ಸ್ಥಳ ಬೇರೊಂದಿಲ್ಲ. ಹೊನ್ನೆಮರಡುವಿನಲ್ಲಿ ಸಾಹಸಮಯ ರಾಫ್ಟಿಂಗ್‌, ಕ್ಯಾಂಪಿಂಗ್ ಮತ್ತು ಕ್ಯಾನೋಯಿಂಗ್‌ ನಂತಹ ಚಟುವಟಿಕೆಗಳನ್ನು ಆನಂದಿಸಬಹುದು.

​ಹೊನ್ನೆಮರಡು ಜಲಾಶಯ

PC: Sarthak Banerjee

ಶರಾವತಿ ನದಿಯ ಅಣೆಕಟ್ಟಿನ ಈ ಜಲಾಶಯವು ಪ್ರವಾಸಿಗರ ಅಚ್ಚು ಮೆಚ್ಚಿನ ಪ್ರವಾಸಿ ತಾಣವಾಗಿದೆ. ಸುಮಾರು 350 ಚದರ ಕಿ.ಮೀ ಪ್ರದೇಶದಲ್ಲಿ ಆವೃತವಾಗಿರುವ ಈ ಜಲಾಶಯದಲ್ಲಿ ದೋಣಿ ಸವಾರಿಯು ಆಹ್ಲಾದಕರವಾದ ಅನುಭೂತಿಯನ್ನು ಉಂಟು ಮಾಡುತ್ತದೆ.

ಜಲಾಶಯದ ಸುತ್ತ ಪ್ರಶಾಂತವಾದ ಹಚ್ಚ ಹಸಿರಿನ ಸೊಬಗು ನಿಮ್ಮನ್ನು ಬಹಶಃ ಆಕರ್ಷಿಸಬಹುದು. ವೈವಿಧ್ಯಮಯ ಪಕ್ಷಿಗಳ ಕಲರವವನ್ನು ಕೇಳುತ್ತಾ ನಿಮ್ಮ ಸ್ನೇಹಿತರೊಂದಿಗೆ ಕಾಲ ಕಳೆಯಬಹುದು.

​ಅಘೋರೇಶ್ವರ ದೇವಾಲಯ

ಪ್ರವಾಸ ಎಂದಾಗ ಅಲ್ಲೊಂದು ದೇವಾಲಯವಿರಬೇಕು. ಆಗಲೇ ಪ್ರವಾಸದ ಸಂಪೂರ್ಣ ಅನುಭವವಾಗುವುದು. ಹಾಗಾಗಿ ಹೊನ್ನೆಮರಡುವಿನ ಪ್ರವಾಸದಲ್ಲಿ ತಪ್ಪದೇ ಈ ಅಘೋರೇಶ್ವರ ದೇವಾಲಯಕ್ಕೆ ಹೋಗಿ.

ಹೊನ್ನೆಮರಡುವಿನಿಂದ 6 ಕಿ.ಮೀ ದೂರದಲ್ಲಿ ಇಕ್ಕೇರಿಯಲ್ಲಿ ಈ ಸುಂದರವಾದ ದೇವಾಲಯವಿದೆ. ಅಘೋರೇಶ್ವರ ದೇವಾಲಯವು ಮಹಾಶಿವನಿಗೆ ಅರ್ಪಿತವಾದ ದೇವಾಲಯವಾಗಿದ್ದು, ಅತ್ಯಂತ ಸುಂದರವಾದ ವಾಸ್ತುಶಿಲ್ಪವನ್ನು ಹೊಂದಿದೆ.

ಇದನ್ನು ಓದಿ: ಗೋವಾದ ಈ ೫ ಜನಪ್ರಿಯವಾದ ಜಲಪಾತಗಳಲ್ಲಿ ಒಂದನ್ನಾದರೂ ನೋಡಿದ್ದೀರಾ?

​ಗಡೇ ಮನೆ

ನೀವು ಹೊನ್ನೆಮರಡುವಿನಲ್ಲಿ ಹೊಸದಾಗಿ ಪ್ರವಾಸಿ ತಾಣಗಳನ್ನು ಅನ್ವೇಷಣೆ ಮಾಡಬೇಕು ಎಂದು ಅನ್ನಿಸಿದರೆ ಗಡೇ ಮನೆಗೆ ಭೇಟಿ ನೀಡಿ. ಏನಿದು ಗಡೇ ಮನೆ? ಎಲ್ಲಿದೆ?

ಇದು ಹೊನ್ನೆಮರಡು ಕೆರೆಗೆ ಸಮೀಪದಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಇಲ್ಲಿ ಒಂದು ಸಮುದಾಯವಿದೆ. ಆ ಸಮುದಾಯದ ಜನರು ದೀವಾ ಸಮಾಜವನ್ನು ಹೊಂದಿದ್ದಾರೆ. ಇವರು ತಮ್ಮ ಕಲಾ ಪ್ರಕಾರವಾದ ಚಿತ್ರ ಕಲೆಗೆ ಬಹಳ ಹೆಸರುವಾಸಿಯಾಗಿದ್ದಾರೆ. ಇಲ್ಲಿ ನೀವು ವಿವಿಧ ರೀತಿಯ ಕರಕುಶಲ ವಸ್ತುಗಳನ್ನು ಖರೀದಿ ಮಾಡಬಹುದು.

ಇದನ್ನು ಓದಿ: ನಿಮ್ಮ ಮುಂದಿನ ವೀಕೆಂಡ್ ಗಾಗಿ ಇಲ್ಲಿವೆ ಮಂಡ್ಯದ ಬೆಸ್ಟ್ ಪ್ಲೇಸ್

​ದಬ್ಬೆ ಮತ್ತು ಜೋಗ್ ಜಲಪಾತಕ್ಕೆ ಭೇಟಿ ನೀಡಿ

PC: Nikhilb239

ಹೊನ್ನೆಮರಡುವಿನ ಸಮೀಪದಲ್ಲಿ 2 ಸುಂದರ ಜಲಪಾತಗಳಿಗೆ ನೆಲೆಯಾಗಿದೆ. ನಿಮ್ಮ ಸ್ನೇಹಿತರೊಂದಿಗೆ ಈ ಜಲಪಾತಕ್ಕೆ ಭೇಟಿ ನೀಡಿ. ದಬ್ಬೆ ಜಲಪಾತ ಮೋಡಿ ಮಾಡುವ ಸೌಂದರ್ಯವನ್ನು ಹೊಂದಿದ್ದು, ಹೊನ್ನೆಮರಡುವಿನಿಂದ ಕೇವಲ 15 ಕಿ.ಮೀ ದೂರದಲ್ಲಿದೆ.

ಇನ್ನು ಜೋಗ ಜಲಪಾತವು ಭಾರತದ 2 ನೇ ಅತಿ ದೊಡ್ಡ ಜಲಪಾತವಾಗಿದೆ. ಕರ್ನಾಟಕದ ಅತಿ ಎತ್ತರದ ಜಲಪಾತ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಇದು ಹೊನ್ನೆಮರಡುವಿನಿಂದ ಸುಮಾರು 20 ಕಿ.ಮೀ ದೂರದಲ್ಲಿದೆ.

ಇದನ್ನು ಓದಿ: ಕನಕಪುರದಲ್ಲಿದೆ ಅದ್ಭುತ ಪ್ರವಾಸಿ ತಾಣಗಳು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ