ಆ್ಯಪ್ನಗರ

ಭಾರತೀಯ ರೈಲ್ವೆ ನಿಮ್ಮನ್ನು ದುಬೈಗೆ ಕೊಂಡೊಯ್ಯಲಿದೆ…ಅದು ಇಷ್ಟು ಕಡಿಮೆ ಬೆಲೆಯಲ್ಲಿ…!

ಕೈಗೆಟುವ ಬೆಲೆಯಲ್ಲಿ ದುಬೈ ಪ್ರವಾಸ ಮಾಡಲು ಭಾರತೀಯ ರೈಲ್ವೆ ನಿಮಗೆ ಅತ್ಯುತ್ತಮವಾದ ಪ್ಯಾಕೇಜ್‌ ಪರಿಚಯಿಸಿದೆ. ಅದರ ಬಗ್ಗೆ ಇಲ್ಲಿದೆ ಮಾಹಿತಿ.

Authored by ಸೌಮ್ಯ ಟೇಮ್ಕರ್ | Vijaya Karnataka Web 17 Feb 2023, 8:57 am

PC: Unsplash

ವಿದೇಶ ಪ್ರವಾಸ ಎಂದಾಕ್ಷಣ ಅನೇಕ ರೋಮಾಂಚಕ ತಾಣಗಳು ಕಣ್ಣಿನ ಮುಂದೆ ಹಾದು ಹೋಗುತ್ತವೆ. ಇನ್ನು, ವಿದೇಶ ಪ್ರವಾಸ ಜೇಬಿಗೆ ಸಂಪೂರ್ಣವಾಗಿ ಕತ್ತರಿ ಎಂಬುದು ಕೂಡ ಅಷ್ಟೇ ಸತ್ಯ. ನಿಮ್ಮ ವಿದೇಶ ಪ್ರವಾಸದ ಬಯಕೆಯನ್ನು ಸಕಾರಗೊಳಿಸಲು ಭಾರತೀಯ ರೈಲ್ವೆ ಶ್ರಮಿಸುತ್ತಿದೆ. ಅದೇನೆಂದರೆ, IRCTC ಯು ಕೈಗೆಟುವ ಬೆಲೆಯಲ್ಲಿ ದುಬೈ ಪ್ರವಾಸ ಮಾಡಿಸುತ್ತದೆ.

ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) 5 ದಿನಗಳು ಹಾಗು 4 ರಾತ್ರಿಗಳ ದುಬೈ ಪ್ರವಾಸ ಪರಿಚಯಿಸಿದೆ. ಇದರ ಟಿಕೆಟ್ ಬೆಲೆ ಎಷ್ಟು ಕಡಿಮೆ ಗೊತ್ತಾ? ಇಲ್ಲಿದೆ ಮಾಹಿತಿ.

Vijaya Karnataka Web irctc tourism dubai cost details in kannada
ಭಾರತೀಯ ರೈಲ್ವೆ ನಿಮ್ಮನ್ನು ದುಬೈಗೆ ಕೊಂಡೊಯ್ಯಲಿದೆ…ಅದು ಇಷ್ಟು ಕಡಿಮೆ ಬೆಲೆಯಲ್ಲಿ…!


ದುಬೈ ಪ್ರವಾಸ

PC: Unsplash


IRCTCಯ ಈ ದುಬೈ ಪ್ರವಾಸವು ಈಗಾಗಲೇ ಹೇಳಿದಂತೆ 5 ದಿನಗಳು ಹಾಗು 4 ರಾತ್ರಿಗಳ ಪ್ರವಾಸವಾಗಿದೆ. ಈ ಅದ್ಭುತವಾದ ದೇಶಕ್ಕೆ ನೀವು ಮಾರ್ಚ್‌ 11 ರಿಂದ 15 ರವರೆಗೆ ಪ್ರವಾಸ ಮಾಡುತ್ತೀರಿ.

ಪ್ಯಾಕೇಜ್‌ನ ಪ್ರಕಾರ, ನೀವು ವಿಮಾನದಲ್ಲಿ ಪ್ರಯಾಣಿಸುತ್ತೀರಿ. ಆಹಾರ, ವಸತಿ ಸೇರಿದಂತೆ ಅನೇಕ ಪ್ರಯಾಣ ವಿಮಾ ಸೌಲಭ್ಯಗಳನ್ನು ಪಡೆಯುತ್ತಿರಿ. ಅಷ್ಟಕ್ಕೂ ಈ ದುಬೈ ಪ್ಯಾಕೇಜ್‌ನ ಟಿಕೆಟ್‌ ಬೆಲೆ ಎಷ್ಟು ಗೊತ್ತಾ?

ಟಿಕೆಟ್ ಬೆಲೆ ಎಷ್ಟು?

PC: Unsplash

ಪ್ಯಾಕೇಜ್‌ನ ಪ್ರಕಾರ, ಇಬ್ಬರು ಅಥವಾ ಮೂವರು ಒಟ್ಟಿಗೆ ಪ್ರಯಾಣಿಸಲು ಟಿಕೆಟ್ ಬುಕ್‌ ಮಾಡಿದರೆ ವ್ಯಕ್ತಿಗೆ 85,100 ರೂಪಾಯಿಗಳು, ಅದೇ ಒಬ್ಬ ವ್ಯಕ್ತಿ ಮಾತ್ರ ಟಿಕೆಟ್ ಬುಕ್‌ ಮಾಡಿದರೆ 101800 ರೂಪಾಯಿ.

ಒಂದು ವೇಳೆ ನೀವು ಮಗುವಿನೊಂದಿಗೆ ಪ್ರಯಾಣಿಸಲು ಯೋಜಿಸಿದರೆ ಹಾಸಿಗೆ ಸಹಿತ 84400 ಹಾಗೆಯೇ ಹಾಸಿಗೆ ರಹಿತ 73300 ರೂಪಾಯಿಗಳಾಗಿರುತ್ತದೆ.

ಪ್ಯಾಕೇಜ್‌ನ ಟಿಕೆಟ್‌ ಬೆಲೆಯಲ್ಲಿ ಇವೆಲ್ಲಾ ಸೇಪರ್ಡೆಗೊಳ್ಳುವುದಿಲ್ಲ

PC: Unsplash

ವಿಮಾನ ನಿಲ್ದಾಣ ತೆರಿಗೆ ಅಥವಾ ಇಂಧನ ಸರ್ಚಾರ್ಜ್‌ನಲ್ಲಿ ಯಾವುದೇ ಹೆಚ್ಚಳ.

ಆಹಾರವನ್ನು ಈಗಾಗಲೇ ನಿಗದಿ ಪಡಿಸಲಾಗಿರುತ್ತದೆ. ವಿಶೇಷವಾದ ಮೆನುವಿನ ಆಯ್ಕೆಗಳು ಲಭ್ಯವಿಲ್ಲ.

ಚಾಲಕರು, ಮಾರ್ಗದರ್ಶಿಗಳು, ಪ್ರತಿನಿಧಿಗಳು ಇತ್ಯಾದಿಗಳಿಗೆ ಎಲ್ಲಾ ರೀತಿಯ ಸಲಹೆಗಳು.

ನೆಚ್ಚಿನ ಆಹಾರ, ಲಾಂಡ್ರಿ, ಮದ್ಯ, ಆಹಾರ ಮತ್ತು ಪಾನೀಯಗಳಂತಹ ಯಾವುದೇ ವೈಯಕ್ತಿಕ ವೆಚ್ಚಗಳು ಪ್ಯಾಕೇಜ್‌ನ ಅಡಿಯಲ್ಲಿ ಬರುವುದಿಲ್ಲ. ಇದೆಲ್ಲಾ ವೈಯಕ್ತಿಕ ಖರ್ಚುಗಳಾಗಿವೆ.

ಇದನ್ನೂ ಓದಿ: ​IRCTC ಶಿವರಾತ್ರಿ ಗಿಫ್ಟ್: ಕಡಿಮೆ ಖರ್ಚಿನಲ್ಲಿ 12 ಜ್ಯೋರ್ತಿಲಿಂಗಗಳ ದರ್ಶನ ಪಡೆಯಿರಿ

IRCTC ಯ ದುಬೈ ಪ್ಯಾಕೇಜ್‌ ಬುಕ್‌ ಮಾಡಲು ಈ ದಾಖಲೆಗಳು ಅಗತ್ಯ

PC: Unsplash

JPEG ನಲ್ಲಿರುವ ಪಾಸ್‌ಪೋರ್ಟ್‌ನ ಕಲರ್ ಸ್ಕ್ಯಾನ್ ಮಾಡಿದ ನಕಲು. ಇದು ಪ್ರವೇಶದ ದಿನಾಂಕದಿಂದ 6 ತಿಂಗಳವರೆಗೆ ಮಾನ್ಯವಾಗಿರುತ್ತದೆ.

ಬುಕಿಂಗ್ ಸಮಯದಲ್ಲಿ ಪ್ಯಾನ್ ಕಾರ್ಡ್‌ನ ಫೋಟೋಕಾಪಿ. JPEG ಸ್ವರೂಪದಲ್ಲಿ ಸ್ಕ್ಯಾನ್ ಮಾಡಿದ ಪ್ರತಿ.

JPEG ಸ್ವರೂಪದಲ್ಲಿ ಅರ್ಜಿದಾರರ ಛಾಯಾಚಿತ್ರದ ಬಣ್ಣದ ಸ್ಕ್ಯಾನ್ ಮಾಡಿದ ಪ್ರತಿ. ಛಾಯಾಚಿತ್ರವು 3 ತಿಂಗಳಿಗಿಂತ ಹೆಚ್ಚು ಹಳೆಯದಾಗಿರಬಾರದು, ಅದರ ಗಾತ್ರವು 3.5x4.5 ಸೆಂ.

ಛಾಯಾಚಿತ್ರದ ಹಿನ್ನೆಲೆ ಬಿಳಿಯಾಗಿರಬೇಕು ಮತ್ತು ನಿಮ್ಮ ಮುಖ ನಿಖರವಾಗಿ 80% ಗೋಚರಿಸಬೇಕು.

ಇದನ್ನೂ ಓದಿ: IRCTCಯ ಈ ಪ್ರವಾಸ ಪ್ಯಾಕೇಜ್‌ ಆಯ್ಕೆ ಮಾಡಿಕೊಂಡರೆ ಕರ್ನಾಟಕ ಸರ್ಕಾರದಿಂದ ಪ್ರತಿ ವ್ಯಕ್ತಿಗೆ ರೂ. 5000/- ವಿಶೇಷ ರಿಯಾಯಿತಿ

ಲೇಖಕರ ಬಗ್ಗೆ
ಸೌಮ್ಯ ಟೇಮ್ಕರ್
ಸೌಮ್ಯ ಟೇಮ್ಕರ್ ಅವರು ತಮ್ಮ ಉದ್ಯಮದಲ್ಲಿ 4 ವರ್ಷಗಳ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರಾಗಿದ್ದಾರೆ. ಪ್ರಯಾಣಕ್ಕೆ ಸಂಬಂಧಿಸಿದ ಲೇಖನವನ್ನು ಅಚ್ಚುಕಟ್ಟಾಗಿ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಸೌಮ್ಯಾ ಕಥೆಗಳನ್ನು ಹೇಳುವ ಹಾಗು ಪ್ರಯಾಣದ ಅನುಭವವನ್ನು ತಮ್ಮ ಲೇಖನದ ಮೂಲಕ ಹಂಚಿಕೊಳ್ಳಲು ಹೆಚ್ಚು ಇಷ್ಟ ಪಡುತ್ತಾರೆ. ತನ್ನ ವೃತ್ತಿಜೀವನದ ಅವಧಿಯಲ್ಲಿ, ಪ್ರಪಂಚದ ಅನೇಕ ಸ್ಥಳಗಳ ಬಗ್ಗೆ ರಸವತ್ತಾದ ಲೇಖನಗಳನ್ನು ಓದುಗರಿಗಾಗಿ ಬರೆಯುತ್ತಾ ಬಂದಿದ್ದಾರೆ. ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಸೌಮ್ಯ, ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಟಿಪ್ಸ್‌ಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ವಾಸ್ತವವಾಗಿ, ಆಕೆಯ ಬರವಣಿಗೆಯ ಶೈಲಿಯು ಸ್ಪಷ್ಟ ಮತ್ತು ನಿಖರತೆಯನ್ನು ಹೊಂದಿರುತ್ತದೆ. ಓದುಗರನ್ನು ತನ್ನ ಬರವಣಿಗೆಯಿಂದ ಸೆಳೆಯುವ ವಿಶಿಷ್ಟ ಸಾಮರ್ಥ್ಯ ಆಕೆಯಲ್ಲಿದೆ. ಪ್ರಯಾಣದ ಉತ್ಸಾಹಿಗಳಿಗೆ ಅವಳ ಲೇಖನಗಳನ್ನು ಓದಲೇಬೇಕು ಎನ್ನುವ ಭಾವ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸೌಮ್ಯಾ ಕೇವಲ ಪ್ರವಾಸಗಳಲ್ಲಿ ಮಾತ್ರ ಅತ್ಯಾಸಕ್ತಿ ಹೊಂದಿರುವ ವ್ಯಕ್ತಿಯಲ್ಲ, ಬದಲಾಗಿ ಕಾದಂಬರಿಗಳನ್ನು ಓದುವುದನ್ನು ಆನಂದಿಸುತ್ತಾಳೆ. ಜೊತೆಗೆ ಪ್ರತಿನಿತ್ಯ ನಡೆಯುವ ರಾಜಕೀಯ ಸುದ್ದಿಗಳ ಮಾಹಿತಿಗಳನ್ನು ಸಂಗ್ರಹಿಸುತ್ತಾಳೆ. ಒಟ್ಟಾರೆ ಸೌಮ್ಯಾ ಜೀವನದ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿರುವ ಸುಸಂಬದ್ಧ ವ್ಯಕ್ತಿ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ