ಆ್ಯಪ್ನಗರ

​ದೆಹಲಿ ಈ ತಾಣಗಳಲ್ಲಿ ಅಗ್ಗದ ಬೆಲೆಯಲ್ಲಿ ಬ್ರೈಡಲ್‌ ಸೆಟ್‌ ಖರೀದಿ ಮಾಡಿ

ದೆಹಲಿಯ ಈ ಸ್ಥಳಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ಶಾಪಿಂಗ್‌ ಮಾಡಬಹುದು.

Authored by ಸೌಮ್ಯ ಟೇಮ್ಕರ್ | Vijaya Karnataka Web 2 Mar 2023, 5:36 pm

PC:iStock

ದೆಹಲಿ ಕೇವಲ ಮೊಘಲರ ಸ್ಮಾರಕಗಳಿಗೆ ಮಾತ್ರ ಫೇಮಸ್ ಆಗಿಲ್ಲ. ಬದಲಾಗಿ ಶಾಪಿಂಗ್‌ ಮಾಡಲು ಅತ್ಯುತ್ತಮವಾದ ನಗರವಾಗಿದೆ. ಇಲ್ಲಿ ಕೈಗೆಟುಕುವ ಬೆಲೆಯಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಬೇಕಾದ ವಸ್ತುಗಳು ದೊರೆಯುತ್ತವೆ. ಅದರಲ್ಲೂ, ದೆಹಲಿಯ ಈ ಮಾರುಕಟ್ಟೆಗಳು ವಧುವಿನ ಆಭರಣಗಳಿಗೆ ಉತ್ತಮವಾಗಿವೆ. ಅದ್ಭುತವಾದ ಬ್ರೈಡಲ್ ಸೆಟ್‌ಗಳು ರೂ 1500 ದಿಂದ ದೊರೆಯುತ್ತವೆ.

ಲೆಹೆಂಗಾ, ಪಾದರಕ್ಷೆ, ಹೇರ್‌ಸ್ಟೈಲ್‌ ವಸ್ತುಗಳು, ದುಪಟ್ಟಾ, ಸೀರೆ ಸೇರಿದಂತೆ ಸಾಕಷ್ಟು ಅಲಂಕಾರಿಕ ವಸ್ತುಗಳು ಲೇಖನದಲ್ಲಿ ಹೇಳಲಾಗುವ 4 ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಲ್ಲಿ ದೊರೆಯುತ್ತವೆ. ದೆಹಲಿಯ ಪ್ರವಾಸಕ್ಕೆ ಹೋದಾಗ ಈ ಮಾರುಕಟ್ಟೆಗಳಿಗೆ ಹೋಗಿ ಶಾಪಿಂಗ್‌ ಮಾಡುವುದನ್ನು ಮರೆಯದಿರಿ.

Vijaya Karnataka Web places in delhi where you should shopping bridal jewelry
​ದೆಹಲಿ ಈ ತಾಣಗಳಲ್ಲಿ ಅಗ್ಗದ ಬೆಲೆಯಲ್ಲಿ ಬ್ರೈಡಲ್‌ ಸೆಟ್‌ ಖರೀದಿ ಮಾಡಿ


ಮದುವೆಯ ಆಭರಣಗಳಿಗಾಗಿ ತಿಲಕ್ ನಗರ

PC:iStock

ದೆಹಲಿಯ ತಿಲಕ್ ನಗರವು ಶಾಪಿಂಗ್‌ಗೆ ಅತ್ಯುತ್ತಮವಾದ ಸ್ಥಳವಾಗಿದೆ.

ಮದುವೆಗೆ ಸಂಬಂಧಿಸಿದ ಅನೇಕ ವಸ್ತುಗಳು ಇಲ್ಲಿ ಸುಲಭವಾಗಿ ಖರೀದಿ ಮಾಡಬಹುದು. ಎಲ್ಲಾ ವಸ್ತುಗಳು ತುಂಬಾನೇ ಡಿಫರೆಂಟ್‌ ಆಗಿರುತ್ತದೆ. ವಧುವಿನ ಆಭರಣಗಳನ್ನು ಖರೀದಿ ಮಾಡಲು ಅಥವಾ ಬಾಡಿಗೆಗೆ ಪಡೆಯಲು ತಿಲಕ್‌ ನಗರಕ್ಕೆ ಹೋಗಿ. ಸುಮಾರು 2000 ದಿಂದ 6000 ದ ಒಳಗೆ ಉತ್ತಮ ದರ್ಜೆಯ ಬ್ರೈಡಲ್‌ ಸೆಟ್‌ಗಳು ದೊರೆಯುತ್ತವೆ.

ಇಲ್ಲಿಗೆ ತಲುಪಲು ನೀವು ಮೆಟ್ರೋ ಸಹಾಯವನ್ನು ತೆಗೆದುಕೊಳ್ಳಬಹುದು. ನೀವು ಖಾಸಗಿ ಕ್ಯಾಬ್ ಮೂಲಕವೂ ತಿಲಕ್‌ ನಗರಕ್ಕೆ ತೆರಳಬಹುದು.

ರಾಜೌರಿ ಗಾರ್ಡನ್

PC:iStock

ದೆಹಲಿಯ ಮತ್ತೊಂದು ಅದ್ಭುತವಾದ ಶಾಪಿಂಗ್‌ ತಾಣವೆಂದರೆ ಅದು ರಾಜೌರಿ ಗಾರ್ಡನ್‌. ಇಲ್ಲಿ ಕೇವಲ ಬ್ರೈಡಲ್ ಸೆಟ್‌ಗಳು ಮಾತ್ರವಲ್ಲ, ಏರ್‌ಪಿನ್‌ನಿಂದ ಹಿಡಿದು ಭಾರವಾದ ಲೆಹೆಂಗಾಗಳವರೆಗೆ ದೊರೆಯುತ್ತದೆ. ಚೌಕಾಸಿ ಮಾಡುವ ಕಲೆ ನಿಮಗೆ ಗೊತ್ತಿದ್ದರೆ ಸಾಕು ರಾಚೌರಿ ಗಾರ್ಡನ್‌ನಲ್ಲಿ ಅಗ್ಗದ ಬೆಲೆಯಲ್ಲಿ ಸಾಕಷ್ಟು ವಸ್ತುಗಳನ್ನು ಖರೀದಿಸಬಹುದು.

ಈ ಮಾರುಕಟ್ಟೆಗೆ ತಲುಪಲು ನೀವು ಮೆಟ್ರೋವನ್ನು ಪಡೆಯಬಹುದು. ಇಲ್ಲಿಗೆ ಸಮೀಪದ ಮೆಟ್ರೋ ನಿಲ್ದಾಣದ ಹೆಸರು ರಾಜೌರಿ ಗಾರ್ಡನ್.

ಉತ್ತಮ್ ನಗರ

PC:iStock

ದೆಹಲಿಯ ಉತ್ತಮ್ ನಗರವು ಕೂಡ ಅಗ್ಗದ ಮತ್ತು ಬಜೆಟ್ ಸ್ನೇಹಿ ಶಾಪಿಂಗ್‌ಗೆ ಬಹಳ ಸೂಕ್ತವಾದ ತಾಣವಾಗಿದೆ. ದೆಹಲಿಯ ಮಂದಿಗೆ ಫೇವರೆಟ್‌ ತಾಣಗಳಲ್ಲಿ ಈ ಉತ್ತಮ್‌ ನಗರವು ಒಂದು. ಉತ್ತಮ್‌ ನಗರದ ಆರ್ಯ ಸಮಾಜ ರಸ್ತೆಯಲ್ಲಿ ಶಾಪಿಂಗ್‌ ಮಾಡಿ. ದೊಡ್ಡ ಸಂಖ್ಯೆಯ ಜನಸಂದಣಿಯನ್ನು ನೀವು ನೋಡಬಹುದು. ಅತಿ ಕಡಿಮೆ ಬೆಲೆಯಲ್ಲಿ ವಧುವಿಗೆ ಅಭರಣಗಳು ದೊರೆಯುತ್ತವೆ. ಹಾಗೆಯೇ ಅತ್ಯುತ್ತಮವಾದ ಅಲಂಕಾರಿಕ ವಸ್ತುಗಳು, ಪಾರ್ಟಿ ವೇರ್‌ ಸೀರೆಗಳು ದೊರೆಯುತ್ತವೆ. ಇಲ್ಲಿಗೆ ತಲುಪಲು ಸಮೀಪದ ಮೆಟ್ರೋ ನಿಲ್ದಾಣವೆಂದರೆ, ಉತ್ತಮ್ ನಗರ ಪಶ್ಚಿಮ ಮತ್ತು ಉತ್ತಮ್ ನಗರ ಪೂರ್ವ.

ಇದನ್ನೂ ಓದಿ: ಪ್ರವಾಸ ಮಾಡುವುದಾದರೆ ಇಂತಹ ತಾಣಗಳ ಪ್ರವಾಸ ಮಾಡಬೇಕಂತೆ…!

ಚಾಂದಿನಿ ಚೌಕ್

PC:iStock

ಮುಖ್ಯವಾಗಿ ದೆಹಲಿಯ ಈ ಚಾಂದಿನಿ ಚೌಕ್‌ ಜನಪ್ರಿಯ ಶಾಪಿಂಗ್‌ ತಾಣವಾಗಿದೆ. ಇಲ್ಲಿ ದೊರೆಯದ ವಸ್ತುಗಳೇ ಇಲ್ಲ ಎನ್ನಬಹುದು. ಪುರುಷರಿಗೆ ಹಾಗು ಮಹಿಳೆಯರಿಗೆ ತರಾವರಿ ವಸ್ತುಗಳನ್ನು ಖರೀದಿ ಮಾಡಬಹುದು.

ಇಲ್ಲಿ ಲೆಹೆಂಗಾ-ಸೀರೆ ಅಥವಾ ಸೂಟ್‌ಗೆ ಹೆಚ್ಚು ಪ್ರಸಿದ್ಧವಾಗಿದೆ. ವಧುವಿನ ಆಭರಣಗಳು ಸಹ ಇಲ್ಲಿ ತುಂಬಾ ಅಗ್ಗವಾಗಿದೆ. ದೆಹಲಿಯಲ್ಲಿ ಶಾಪಿಂಗ್‌ ಮಾಡಲು ನೀವು ಬಯಸಿದರೆ ಖಂಡಿತವಾಗಿಯು ಚಾಂದಿನಿ ಚೌಕ್‌ಗೆ ಭೇಟಿ ನೀಡಿ.

ಇದನ್ನೂ ಓದಿ: ಮಹಿಳೆಯರ ದಿನಾಚರಣೆ: ಮಹಿಳೆಯರು ಒನ್‌ ಡೇ ಟ್ರಿಪ್‌ ಮಾಡಲು ಸೂಕ್ತ ಈ ತಾಣಗಳು

ಲೇಖಕರ ಬಗ್ಗೆ
ಸೌಮ್ಯ ಟೇಮ್ಕರ್
ಸೌಮ್ಯ ಟೇಮ್ಕರ್ ಅವರು ತಮ್ಮ ಉದ್ಯಮದಲ್ಲಿ 4 ವರ್ಷಗಳ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರಾಗಿದ್ದಾರೆ. ಪ್ರಯಾಣಕ್ಕೆ ಸಂಬಂಧಿಸಿದ ಲೇಖನವನ್ನು ಅಚ್ಚುಕಟ್ಟಾಗಿ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಸೌಮ್ಯಾ ಕಥೆಗಳನ್ನು ಹೇಳುವ ಹಾಗು ಪ್ರಯಾಣದ ಅನುಭವವನ್ನು ತಮ್ಮ ಲೇಖನದ ಮೂಲಕ ಹಂಚಿಕೊಳ್ಳಲು ಹೆಚ್ಚು ಇಷ್ಟ ಪಡುತ್ತಾರೆ. ತನ್ನ ವೃತ್ತಿಜೀವನದ ಅವಧಿಯಲ್ಲಿ, ಪ್ರಪಂಚದ ಅನೇಕ ಸ್ಥಳಗಳ ಬಗ್ಗೆ ರಸವತ್ತಾದ ಲೇಖನಗಳನ್ನು ಓದುಗರಿಗಾಗಿ ಬರೆಯುತ್ತಾ ಬಂದಿದ್ದಾರೆ. ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಸೌಮ್ಯ, ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಟಿಪ್ಸ್‌ಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ವಾಸ್ತವವಾಗಿ, ಆಕೆಯ ಬರವಣಿಗೆಯ ಶೈಲಿಯು ಸ್ಪಷ್ಟ ಮತ್ತು ನಿಖರತೆಯನ್ನು ಹೊಂದಿರುತ್ತದೆ. ಓದುಗರನ್ನು ತನ್ನ ಬರವಣಿಗೆಯಿಂದ ಸೆಳೆಯುವ ವಿಶಿಷ್ಟ ಸಾಮರ್ಥ್ಯ ಆಕೆಯಲ್ಲಿದೆ. ಪ್ರಯಾಣದ ಉತ್ಸಾಹಿಗಳಿಗೆ ಅವಳ ಲೇಖನಗಳನ್ನು ಓದಲೇಬೇಕು ಎನ್ನುವ ಭಾವ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸೌಮ್ಯಾ ಕೇವಲ ಪ್ರವಾಸಗಳಲ್ಲಿ ಮಾತ್ರ ಅತ್ಯಾಸಕ್ತಿ ಹೊಂದಿರುವ ವ್ಯಕ್ತಿಯಲ್ಲ, ಬದಲಾಗಿ ಕಾದಂಬರಿಗಳನ್ನು ಓದುವುದನ್ನು ಆನಂದಿಸುತ್ತಾಳೆ. ಜೊತೆಗೆ ಪ್ರತಿನಿತ್ಯ ನಡೆಯುವ ರಾಜಕೀಯ ಸುದ್ದಿಗಳ ಮಾಹಿತಿಗಳನ್ನು ಸಂಗ್ರಹಿಸುತ್ತಾಳೆ. ಒಟ್ಟಾರೆ ಸೌಮ್ಯಾ ಜೀವನದ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿರುವ ಸುಸಂಬದ್ಧ ವ್ಯಕ್ತಿ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ