ಆ್ಯಪ್ನಗರ

ಈ ನಟಿಗೆ ಪತಿಯೊಂದಿಗೆ ಬೈಕ್‌ ರೈಡ್‌ ಹೋಗೋದಂದ್ರೆ ಇಷ್ಟವಂತೆ

ನಟಿ ಸಮೀರಾ ರೆಡ್ಡಿಗೆ ಪತಿ ಜೊತೆ ಬೈಕ್‌ ರೈಡ್‌ ಹೋಗೋದಂದ್ರೆ ತುಂಬಾ ಇಷ್ಟವಂತೆ. ಅವರ ಟ್ರಾವೆಲ್ ಗೋಲ್‌ ಏನು ಅನ್ನೋದನ್ನು ತಿಳಿಯಿರಿ.

Vijaya Karnataka Web 28 Dec 2019, 12:52 pm
ಸಾಮಾನ್ಯವಾಗಿ ಎಲ್ಲರಿಗೂ ಪ್ರವಾಸ ಕೈಗೊಳ್ಳುವುದು ಇಷ್ಟ. ಅದರಲ್ಲೂ ಸೆಲೆಬ್ರಿಟಿಗಳು ಪ್ರವಾಸಕ್ಕೆ ಹೋಗೋದು ಇಡೀ ಜಗತ್ತಿಗೆ ತಿಳಿಯುತ್ತದೆ. ಅದರಲ್ಲೂ ಈ ನಟಿಗೆ ಪತಿಯೊಂದಿಗೆ ಬೈಕ್‌ನಲ್ಲಿ ಪ್ರವಾಸ ಹೋಗುವುದಂದ್ರೆ ಇಷ್ಟವಂತೆ. ಯಾರೀ ನಟಿ, ಅವರ ಟ್ರಾವೆಲ್‌ ಗೋಲ್‌ ಏನು ಅನ್ನೋದನ್ನು ತಿಳಿಯೋಣ ಬನ್ನಿ.
Vijaya Karnataka Web sameera reddy love going on biking tours with hubby
ಈ ನಟಿಗೆ ಪತಿಯೊಂದಿಗೆ ಬೈಕ್‌ ರೈಡ್‌ ಹೋಗೋದಂದ್ರೆ ಇಷ್ಟವಂತೆ



ಪ್ರವಾಸ ಅಂದ್ರೆ ಸಿಕ್ಕಾಪಟ್ಟೆ ಇಷ್ಟ

PC: Sameera Reddy instagram

ಪ್ರವಾಸ ಅಂದರೆ ಸಿಕ್ಕಾಪಟ್ಟೆ ಇಷ್ಟ ಎನ್ನುವ ನಟಿ ಸಮೀರಾ ರೆಡ್ಡಿ ಎಲ್ಲಾಬಗೆಯ ಪ್ರವಾಸಕ್ಕೂ ಸೈ ಎನ್ನುತ್ತಾರೆ. ಮದುವೆ ಮುಂಚೆ ಸೋಲೋ ಪ್ರವಾಸ ಮಾಡುತ್ತಿದ್ದವರು ಅನಂತರ ಪತಿಯೊಂದಿಗೆ ಬೈಕ್‌ ಟೂರ್‌ ಮಾಡಿ ಸಖತ್‌ ಎಂಜಾಯ್‌ ಮಾಡುತ್ತಿದ್ದರಂತೆ. ಈಗ ತಮ್ಮ ಪ್ರವಾಸದ ಶೆಡ್ಯೂಲ್‌ನಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಬೇಕು ಎನ್ನುವ ಅವರು ಮಕ್ಕಳು ಎಂಜಾಯ್‌ ಮಾಡಬಹುದಾದ ತಾಣಗಳ ಆಯ್ಕೆಯತ್ತ ಇದೀಗ ಗಮನ ನೀಡುತ್ತಾರಂತೆ.

​ಯಾವ ಬಗೆಯ ಪ್ರವಾಸ ಇಷ್ಟ

PC: Sameera Reddy instagram

ಒಂಟಿಯಾಗಿ ಪ್ರವಾಸಕ್ಕೆ ಹೋಗಲು ಆ್ಯಮ್‌ಸ್ಟರ್‌ಡ್ಯಾಮ್‌ ಸೇಫ್‌ ಎನ್ನುತ್ತಾರೆ. ಸ್ನೇಹಿತರೊಂದಿಗೆ ಕಳೆಯಲು ಗ್ರೀಸ್‌ ಬೆಸ್ಟ್‌ ಎನ್ನುವ ಅವರು, ವಾರಾಂತ್ಯದ ಟೂರ್‌ಗೆ ಚಿಕ್ಕಮಗಳೂರು ಒಳ್ಳೆಯದು. ಇಲ್ಲಿನ ಸುಂದರ ಪರಿಸರ ಮೋಡಿ ಮಾಡುತ್ತದೆ. ಇಲ್ಲಿನ ತಂಪಾದ ವಾತಾವರಣ ಖುಷಿ ನೀಡುತ್ತದೆ ಎನ್ನುತ್ತಾರೆ. ಇನ್ನು ಕುಟುಂಬದೊಂದಿಗೆ ಹೋಗಲು ಅಮೆರಿಕವನ್ನು ಇಷ್ಟ ಪಡುತ್ತಾರಂತೆ.

ಸ್ಟ್ರೀಟ್‌ ಫುಡ್‌ ಇಷ್ಟ

PC: flickr

ಪ್ರವಾಸ ಅಂದರೆ ಕೇವಲ ಸ್ಥಳ ವಿಶೇಷವಲ್ಲ. ಅಲ್ಲಿನ ಆಹಾರ ಸಂಸ್ಕೃತಿಯನ್ನು ಅರಿಯಬೇಕು. ಹೀಗಾಗಿ ಅವರು ಹೋದ ಕಡೆಯೆಲ್ಲ ಅಲ್ಲಿನ ವಿಶೇಷ ತಿನಿಸುಗಳ ಬಗ್ಗೆ ತಿಳಿಯುತ್ತಾರೆ ಹಾಗೂ ಟೇಸ್ಟ್‌ ಮಾಡುತ್ತಾರೆ. ಪ್ರವಾಸದ ವೇಳೆ ಸ್ಥಳೀಯ ಆಹಾರಗಳನ್ನು ಟೇಸ್ಟ್‌ ಮಾಡಲು ಬಯಸುತ್ತೇನೆ. ಅಲ್ಲದೆ ನನಗೆ ಸ್ಟ್ರೀಟ್‌ ಫುಡ್‌ ಅಂದರೆ ಇಷ್ಟ ಎನ್ನುತ್ತಾರೆ.

​ಟೂರ್‌ ಬ್ಯಾಗ್‌ನಲ್ಲಿಇರಲೇಬೇಕಾದ್ದು

ನಾನು ಯಾವಾಗಲೂ ಸಣ್ಣ ಮೆಡಿಕಲ್‌ ಕಿಟ್‌ ಇಟ್ಟುಕೊಂಡು ಹೋಗುತ್ತೇನೆ. ಛತ್ರಿ, ಶಾಪಿಂಗ್‌ ಬ್ಯಾಗ್‌ ಮತ್ತಿತರ ಅಗತ್ಯ ವಸ್ತುಗಳಿರುತ್ತವೆ. ಪ್ರವಾಸದ ವೇಳೆ ಕಂಫರ್ಟ್‌ ಆಗಿರಬೇಕು. ಆದ್ದರಿಂದ ವಾಕಿಂಗ್‌ ಶೂ, ಹ್ಯಾಟ್‌ ಇರಲೇಬೇಕು ಎನ್ನುತ್ತಾರೆ. ಅಂಟಾರ್ಟಿಕಾಗೆ ಹೋಗಬೇಕು ಎಂಬುದು ನನ್ನ ಟ್ರಾವೆಲ್‌ ಗೋಲ್‌. ಸೌತ್‌ ಅಮೆರಿಕಾಗೆ ಹೋಗಲು ಕಾಯುತ್ತಿದ್ದೇನೆ. ಪೆರು, ಬ್ರೇಜಿಲ್‌ ಸೇರಿದಂತೆ ಮತ್ತಿತರ ತಾಣಗಳು ನನ್ನ ಕನಸಿನ ಪ್ರವಾಸದ ತಾಣಗಳು ಎನ್ನುತ್ತಾರೆ ಸಮೀರಾ ರೆಡ್ಡಿ.

1,878 ಅಡಿ ಎತ್ತರದ ಮಾಣಿಕ್‌ಘಡ್ ಕೋಟೆ ಹತ್ತಿ ನೋಡಿ

​ಪ್ರವಾಸ ಕಲಿಸಿದ ಪಾಠ

PC: Sameera Reddy instagram

ಪ್ರವಾಸದ ವೇಳೆ ಸುರಕ್ಷೆ ಮುಖ್ಯ ಎಂಬುದು ನನ್ನ ಪ್ರವಾಸದಲ್ಲಿಕಲಿತ ಪ್ರಮುಖ ಪಾಠ ಎನ್ನುವ ಅವರು, ಅಮೂಲ್ಯವಾದ ವಸ್ತುಗಳನ್ನು ಜೋಪಾನವಾಗಿ ಬೇರೆಡೆ ಎತ್ತಿಟ್ಟುಕೊಳ್ಳಬೇಕು. ವಿಶೇಷವಾಗಿ ಹಣವನ್ನು ಬೇರೆ ಪರ್ಸ್‌ನಲ್ಲಿಇಡಬೇಕು. ಈ ಹಿಂದೆ ಹಣ ಸೇರಿದಂತೆ ಹಲವು ಅಮೂಲ್ಯ ವಸ್ತುಗಳನ್ನು ಕಳೆದುಕೊಂಡು ಈಗ ಪಾಠ ಕಲಿತಿದ್ದೇನೆ ಎನ್ನುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ