ಆ್ಯಪ್ನಗರ

ಹೊಸ ವರ್ಷದಂದು ಫ್ಲೈಟ್‌ನಲ್ಲಿ ಈ 5 ವಸ್ತುಗಳನ್ನು ಅಪ್ಪಿತಪ್ಪಿಯೂ ಒಯ್ಯಬೇಡಿ

ಈ 5 ವಸ್ತುಗಳನ್ನು ಅಪ್ಪಿ-ತಪ್ಪಿಯೂ ಫ್ಲೈಟ್‌ನಲ್ಲಿ ತೆಗೆದುಕೊಂಡು ಹೋಗದಿರಿ. ನೀವು ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ ಈ ವಿಷಯ ತಿಳಿಯಲೇಬೇಕು.

Authored by ಸೌಮ್ಯ ಟೇಮ್ಕರ್ | Vijaya Karnataka Web 6 Dec 2023, 11:30 am

ಒಂದು ವೇಳೆ ನೀವು ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ ಅಥವಾ ಹೊಸ ವರ್ಷದಂದು ಫ್ಲೈಟ್‌ನಲ್ಲಿ ಪ್ರಯಾಣಿಸುವವರು ಅಪ್ಪಿತಪ್ಪಿಯೂ ಈ 5 ವಸ್ತುಗಳನ್ನು ಒಯ್ಯಬೇಡಿ. ಇದರಿಂದ ತೊಂದರೆಗೆ ಸಿಲುಕುತ್ತೀರಿ.

ಬಹುತೇಕರು ಹೊಸ ವರ್ಷದಂದು ಭಾರತದ ಇತರ ಭಾಗಗಳಿಗೆ ಅಥವಾ ವಿದೇಶಗಳಿಗೆ ಪ್ರಯಾಣಿಸುವ ಮೂಲಕ ಅಲ್ಲಿ ಕೆಲವು ವಸ್ತುಗಳನ್ನು ಶಾಪಿಂಗ್‌ ಮಾಡಿ ತಮ್ಮ ಲಗೇಜ್‌ನಲ್ಲಿ ಸೇರಿಸುತ್ತಾರೆ. ಆದರೆ ಕೆಲವು ವಸ್ತುಗಳನ್ನು ವಿಮಾನಗಳಲ್ಲಿ ಒಯ್ಯುವಂತಿಲ್ಲ ಎಂಬ ವಿಷಯ ನಿಮಗೆ ತಿಳಿದಿರಲಿ….

ಹೌದು, ಕೆಲವು ವಸ್ತುಗಳನ್ನು ವಿಮಾನದಲ್ಲಿ ಸಾಗಿಸುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ನೀವು ಸಿಕ್ಕಿಬಿದ್ದರೆ, ಕಠಿಣ ಕ್ರಮಕ್ಕೆ ಒಳಗಾಗಬೇಕಾಗುತ್ತದೆ. ಆಗ ನಿಮಗೆ ಅಳುವುದನ್ನು ಬಿಟ್ಟು ಬೇರೆ ದಾರಿಯೇ ಇರುವುದಿಲ್ಲ. ಆದ್ದರಿಂದ ನೀವು ಯಾವ ವಸ್ತುಗಳನ್ನು ತೆಗೆದುಕೊಳ್ಳಬಾರದು ಎಂಬುದನ್ನು ನಾವು ಇಲ್ಲಿ ವಿವರಿಸಿದ್ದೇವೆ ಓದಿ. PC: Unsplash

Vijaya Karnataka Web what items are not allowed in checked luggage india
ಹೊಸ ವರ್ಷದಂದು ಫ್ಲೈಟ್‌ನಲ್ಲಿ ಈ 5 ವಸ್ತುಗಳನ್ನು ಅಪ್ಪಿತಪ್ಪಿಯೂ ಒಯ್ಯಬೇಡಿ


ಚೂಪಾದ ವಸ್ತುಗಳನ್ನು ನಿಷೇಧಿಸಲಾಗಿದೆ

ನಿಮಗಿದು ತಿಳಿದಿರಲಿ, ವಿಮಾನಗಳಲ್ಲಿ ಯಾವುದೇ ಕಾರಣಕ್ಕೂ ಚೂಪಾದ ವಸ್ತುಗಳನ್ನು ಒಯ್ಯುವಂತಿಲ್ಲ. ಯಾವುದೇ ತೀಕ್ಷ್ಣವಾದ ವಸ್ತುಗಳನ್ನು ವಿಮಾನದ ಒಳಗೆ ಪ್ರವೇಶಿಸುವಂತಿಲ್ಲ ಎಂಬ ನಿಯಮವಿದೆ.


ಉದಾಹರಣೆಗೆ, ಬ್ಲೇಡ್‌ಗಳು, ಕಟ್ಟರ್‌ಗಳು, ನೇಲ್ ಕಟರ್‌ಗಳು, ಫೈಲರ್‌ಗಳು, ಚಾಕು ಅಥವಾ ಯಾವುದೇ ಚೂಪಾದ ವಸ್ತುವನ್ನು ಒಳಗೊಂಡಿರಬಹುದು.


ತಪಾಸಣೆಯ ಸಮಯದಲ್ಲಿ, ಈ ಎಲ್ಲಾ ವಸ್ತುಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಠೇವಣಿ ಮಾಡಲಾಗುತ್ತದೆ. ಇದರಿಂದಾಗಿ ನೀವು ವಿಮಾನ ನಿಲ್ದಾಣದ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿಯುತ್ತೀರಿ, ಸಹಜವಾಗಿಯೇ ನಿಮ್ಮ ಸಮಯ ವ್ಯರ್ಥವಾಗುತ್ತದೆ. PC: Unsplash

ದ್ರವ ಅಥವಾ ಮದ್ಯವನ್ನು ಸಾಗಿಸಲು ಸಾಧ್ಯವಿಲ್ಲ

ತುಂಬಾ ಅಗ್ಗದ ಬೆಲೆಯಲ್ಲಿ ಖರೀದಿ ಮಾಡಿದ ಮದ್ಯಪಾನವನ್ನು ನಿಮ್ಮ ಬ್ಯಾಗ್‌ನಲ್ಲಿ ಸಾಗಿಸಿದರೆ ತೊಂದರೆಗೆ ಸಿಲುಕುತ್ತೀರಿ.


ಕೇವಲ ಮದ್ಯಪಾನ ಮಾತ್ರವಲ್ಲ ವಿಮಾನದಲ್ಲಿ ನೀವು 100 ಎಂಎಂ ವರೆಗೆ ಹಾಲು ಅಥವಾ ಇತರ ದ್ರವ ಪದಾರ್ಥಗಳನ್ನು ಮಕ್ಕಳೊಂದಿಗೆ ಆರಾಮವಾಗಿ ಸಾಗಿಸಬಹುದು. ಆದರೆ ನೀವು ಒಂದು ನಗರದಿಂದ ಇನ್ನೊಂದು ನಗರಕ್ಕೆ ಮದ್ಯ ಅಥವಾ ಇನ್ನಾವುದೇ ದ್ರವ ಪದಾರ್ಥವನ್ನು ಕೊಂಡೊಯ್ಯುತ್ತಿದ್ದರೆ, ತಪಾಸಣೆಯ ಸಮಯದಲ್ಲಿ ಅದನ್ನು ಕ್ಯಾಬಿನ್ ಬ್ಯಾಗೇಜ್‌ನಲ್ಲಿ ಸಾಗಿಸಲಾಗುವುದಿಲ್ಲ. ಔಷಧಿಗಳ ಜೊತೆಗೆ, ನೀವು ಯಾವುದೇ ರೀತಿಯ ದ್ರವವನ್ನು ನಿಮ್ಮೊಂದಿಗೆ ಸಾಗಿಸಲು ಸಾಧ್ಯವಿಲ್ಲ. PC: Unsplash

ಎರಡು ಲ್ಯಾಪ್‌ಟಾಪ್‌ಗಳನ್ನು ಒಯ್ಯುವುದನ್ನು ತಪ್ಪಿಸಿ

ಬಹುತೇಕರು ಸ್ವಂತ ಹಾಗೂ ಕಛೇರಿಯ ಎರಡು ಲ್ಯಾಪ್‌ಟಾಪ್‌ಗಳನ್ನು ವಿಮಾನದಲ್ಲಿ ಒಯ್ಯುತ್ತಾರೆ. ಬಹುಶಃ ಅದು ನಿಮಗೆ ದುಬಾರಿಯಾಗಬಹುದು, ಏಕೆಂದರೆ ವಿಮಾನದಲ್ಲಿ ಒಂದು ಲ್ಯಾಪ್‌ಟಾಪ್ ಸಾಗಿಸಲು ನಿಮಗೆ ಅನುಮತಿ ಇದೆ. ಆದರೆ ನೀವು ಎರಡು ಲ್ಯಾಪ್‌ಟಾಪ್‌ಗಳನ್ನು ತೆಗೆದುಕೊಂಡರೆ, ಅದು ಸಾಧ್ಯವೇ ಇಲ್ಲ. ಪ್ರತಿಯೊಂದು ಏರ್‌ಲೈನ್ ತನ್ನದೇ ಆದ ನಿಯಮಗಳನ್ನು ಹೊಂದಿದ್ದರೂ,

ಪ್ರಯಾಣಿಸುವ ಮೊದಲು ಮಾರ್ಗಸೂಚಿಗಳನ್ನು ಒಮ್ಮೆ ಪರೀಕ್ಷಿಸಲು ಮರೆಯದಿರಿ. PC: Unsplash

ಅನಿಲ ಅಥವಾ ಸ್ಫೋಟಕ ವಸ್ತುಗಳನ್ನು ನಿಷೇಧಿಸಲಾಗಿದೆ

ವಿಮಾನದಲ್ಲಿ ಯಾವುದೇ ಕಾರಣಕ್ಕೂ ಅನಿಲ ಅಥವಾ ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಕೆಲವೊಮ್ಮೆ ವಿಮಾನದಲ್ಲಿ ಪ್ರಯಾಣಿಸುವಾಗ, ಆಕಸ್ಮಿಕವಾಗಿ ಗ್ಯಾಸ್ ತುಂಬಿದ ಲೈಟರ್, ಮ್ಯಾಚ್‌ಬಾಕ್ಸ್ ಅಥವಾ ಯಾವುದೇ ಸ್ಫೋಟಕ ವಸ್ತುಗಳು ಅಪಾಯವನ್ನು ತೊಂದೊಡ್ಡಬಹುದು. ತಪಾಸಣೆಯ ಸಮಯದಲ್ಲಿ ನಿಮ್ಮ ಲಗೇಜ್‌ನಿಂದ ಇವೆಲ್ಲವನ್ನೂ ತೆಗೆದುಹಾಕಲಾಗುತ್ತದೆ ಮತ್ತು ಯಾವುದೇ ಗಂಭೀರ ಸಾಮಾನು ಕಂಡುಬಂದಲ್ಲಿ ನೀವು ಮತ್ತಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ. PC: Unsplash

ಮಾಂಸ ಅಥವಾ ತರಕಾರಿಗಳನ್ನು ಅನುಮತಿಸಲಾಗುವುದಿಲ್ಲ

ನೀವು ಪ್ರಯಾಣಿಸುವಾಗ ಮಾಂಸ ಅಥವಾ ತರಕಾರಿಗಳಂತಹ ಆಹಾರ ಪದಾರ್ಥಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗುವಂತಿಲ್ಲ. ನಿಮಗಿದು ತಿಳಿದಿರಲಿ, ವಿಮಾನ ನಿಲ್ದಾಣದಲ್ಲಿಯೇ ಇವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಯಾವುದೇ ಏರ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸುವಾಗ, ಖಂಡಿತವಾಗಿಯೂ ಅಲ್ಲಿನ

ಮಾರ್ಗಸೂಚಿಗಳನ್ನು ಓದುವುದು ಬಹಳ ಅವಶ್ಯಕ. PC: Unsplash


ಲೇಖಕರ ಬಗ್ಗೆ
ಸೌಮ್ಯ ಟೇಮ್ಕರ್
ಸೌಮ್ಯ ಟೇಮ್ಕರ್ ಅವರು ತಮ್ಮ ಉದ್ಯಮದಲ್ಲಿ 4 ವರ್ಷಗಳ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರಾಗಿದ್ದಾರೆ. ಪ್ರಯಾಣಕ್ಕೆ ಸಂಬಂಧಿಸಿದ ಲೇಖನವನ್ನು ಅಚ್ಚುಕಟ್ಟಾಗಿ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಸೌಮ್ಯಾ ಕಥೆಗಳನ್ನು ಹೇಳುವ ಹಾಗು ಪ್ರಯಾಣದ ಅನುಭವವನ್ನು ತಮ್ಮ ಲೇಖನದ ಮೂಲಕ ಹಂಚಿಕೊಳ್ಳಲು ಹೆಚ್ಚು ಇಷ್ಟ ಪಡುತ್ತಾರೆ. ತನ್ನ ವೃತ್ತಿಜೀವನದ ಅವಧಿಯಲ್ಲಿ, ಪ್ರಪಂಚದ ಅನೇಕ ಸ್ಥಳಗಳ ಬಗ್ಗೆ ರಸವತ್ತಾದ ಲೇಖನಗಳನ್ನು ಓದುಗರಿಗಾಗಿ ಬರೆಯುತ್ತಾ ಬಂದಿದ್ದಾರೆ. ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಸೌಮ್ಯ, ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಟಿಪ್ಸ್‌ಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ವಾಸ್ತವವಾಗಿ, ಆಕೆಯ ಬರವಣಿಗೆಯ ಶೈಲಿಯು ಸ್ಪಷ್ಟ ಮತ್ತು ನಿಖರತೆಯನ್ನು ಹೊಂದಿರುತ್ತದೆ. ಓದುಗರನ್ನು ತನ್ನ ಬರವಣಿಗೆಯಿಂದ ಸೆಳೆಯುವ ವಿಶಿಷ್ಟ ಸಾಮರ್ಥ್ಯ ಆಕೆಯಲ್ಲಿದೆ. ಪ್ರಯಾಣದ ಉತ್ಸಾಹಿಗಳಿಗೆ ಅವಳ ಲೇಖನಗಳನ್ನು ಓದಲೇಬೇಕು ಎನ್ನುವ ಭಾವ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸೌಮ್ಯಾ ಕೇವಲ ಪ್ರವಾಸಗಳಲ್ಲಿ ಮಾತ್ರ ಅತ್ಯಾಸಕ್ತಿ ಹೊಂದಿರುವ ವ್ಯಕ್ತಿಯಲ್ಲ, ಬದಲಾಗಿ ಕಾದಂಬರಿಗಳನ್ನು ಓದುವುದನ್ನು ಆನಂದಿಸುತ್ತಾಳೆ. ಜೊತೆಗೆ ಪ್ರತಿನಿತ್ಯ ನಡೆಯುವ ರಾಜಕೀಯ ಸುದ್ದಿಗಳ ಮಾಹಿತಿಗಳನ್ನು ಸಂಗ್ರಹಿಸುತ್ತಾಳೆ. ಒಟ್ಟಾರೆ ಸೌಮ್ಯಾ ಜೀವನದ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿರುವ ಸುಸಂಬದ್ಧ ವ್ಯಕ್ತಿ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ