ಆ್ಯಪ್ನಗರ

ವಂಡರ್‌ಲಾ ವಾಟರ್‌ ಪಾರ್ಕ್‌ಗೆ ಟಿಕೇಟ್‌ ಎಷ್ಟು? ಅಲ್ಲಿ ಏನೆಲ್ಲಾ ಇದೆ ಗೊತ್ತಾ?

ವಂಡರ್‌ ಲಾ ವಾಟರ್‌ ಪಾರ್ಕ್ ಎಂದರೆ ಮಕ್ಕಳಿಗಂತೂ ಬಹಳ ಇಷ್ಟವಾಗುತ್ತದೆ. ಅದರಲ್ಲೂ ವಿಕೇಂಡ್‌ನಲ್ಲಿ ಫ್ಯಾಮಿಲಿ ಜೊತೆ ವಾಟರ್‌ ಪಾರ್ಕ್‌ನಲ್ಲಿಕಾಲ ಕಳೆಯೋದು ಒಂದು ಸುಂದರ ಅನುಭವ. ದೊಡ್ಡವರು ಮಕ್ಕಳೊಂದಿಗೆ ಮಕ್ಕಳಾಗಿ ಮನಸ್ಸು ಬಿಚ್ಚಿ ನೀರಿನಲ್ಲಿ ಆಡುತ್ತಾ ಕಾಲ ಕಳೆಯುತ್ತಾರೆ.

Vijaya Karnataka Web 5 Sep 2019, 1:03 pm
ವಂಡರ್‌ಲಾ ವಾಟರ್‌ಪಾರ್ಕ್ ಎಂದರೆ ಸಣ್ಣ ಮಕ್ಕಳಿಂದ ಹಿಡಿದು ಯುವಕರ ವರೆಗೂ ಇಷ್ಟಪಡುವಂತಹ ವಾಟರ್‌ ಪಾರ್ಕ್‌ ಆಗಿದೆ. ಬಹಳಷ್ಟು ಜನರು ಫ್ಯಾಮಿಲಿ ಜೊತೆಗೆಯೋ ಅಥವಾ ಫ್ರೆಂಡ್ಸ್‌ ಜೊತೆಗೋ ವಂಡರ್‌ಲಾಗೆ ಹೋಗಿರುತ್ತೀರಿ. ಆದರೆ ವಂಡರ್‌ಲಾಗೆ ಹೋಗದೇ ಇರುವಂತಹ ಸಾಕಷ್ಟು ಜನರು ನಮ್ಮ ದೇಶದಲ್ಲಿದ್ದಾರೆ. ಹೀಗಿರುವಾಗ ವಂಡರ್‌ಲಾದ ಬಗ್ಗೆ ಏನೂ ಗೊತ್ತೇ ಇಲ್ಲದವರಿಗೆ ನಾವಿಂದು ವಂಡರ್‌ಲಾ ಬಗ್ಗೆ ಒಂದಿಷ್ಟು ಮಾಹಿತಿ ನೀಡಲಿದ್ದೇವೆ.
Vijaya Karnataka Web wonderla water park bangaloretickets and tips
ವಂಡರ್‌ಲಾ ವಾಟರ್‌ ಪಾರ್ಕ್‌ಗೆ ಟಿಕೇಟ್‌ ಎಷ್ಟು? ಅಲ್ಲಿ ಏನೆಲ್ಲಾ ಇದೆ ಗೊತ್ತಾ?


60ಕ್ಕೂ ಅಧಿಕ ಸವಾರಿಗಳು
ವಂಡರ್‌ಲಾವು ಒಂದು ಅದ್ಭುತ ತಾಣವಾಗಿದೆ. ಇದು ಸಣ್ಣ ಕ್ಷಣಗಳನ್ನು ಆಚರಿಸಲು ಮತ್ತು ಜಲಕ್ರೀಡೆಯನ್ನು ಇಷ್ಟಪಡುವವರಿಗರ ಒಂದು ಉತ್ತಮ ಸ್ಥಳವಾಗಿದೆ. 60ಕ್ಕೂ ಸವಾರಿಗಳನ್ನು ಒಂದೇ ತಾಣದಲ್ಲಿ ಪಡೆಯ ಬಹುದು, ಪ್ರಕಾಶಮಾನವಾದ ಸೂರ್ಯನ ಶಾಖದದಲ್ಲಿ ನೀರಿನ ಕೊಳದಲ್ಲಿ ನಮಗಿಷ್ಟ ಬಂದಂತೆ ಆನಂದಿಸಬಹುದು. ಒಂದಕ್ಕಿಂತ ಒಂದು ವಿಭಿನ್ನ ಕ್ರೀಡೆಗಳನ್ನು ಇಲ್ಲಿ ಟ್ರೈ ಮಾಡಬಹುದು.

ವಂಡರ್‌ ಲಾ ಟಿಕೇಟ್ ಎಷ್ಟು ?
ವಂಡರ್‌ ಲಾ ಟಿಕೇಟ್ ಬೆಲೆಯು ಸೀಸನ್‌ಗೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಬೆಂಗಳೂರಿನ ವಂಡರ್‌ಲಾವು ಸಾಮಾನ್ಯ ಸೀಸನ್‌ನಲ್ಲಿ ವಾರಾಂತ್ಯದಲ್ಲಿ ಹಾಗೂ ವಾರದ ನಡುವಿನ ದಿನಗಳಲ್ಲಿ ಟಿಕೇಟ್ ಬೆಲೆ ಬೇರೆ ಬೇರೆ ಇರುತ್ತದೆ. ಇನ್ನು ಹಬ್ಬದ ಸೀಸನ್‌ನಲ್ಲಿ ಬೆಲೆ ಬೇರೆ ಇರುತ್ತದೆ. ಸಾಮಾನ್ಯವಾಗಿ ವಾರಾಂತ್ಯದಲ್ಲಿ, ಸರ್ಕಾರಿ ರಜಾ ದಿನಗಳಲ್ಲಿ ಹಾಗೂ ಹಬ್ಬದ ಸೀಸನ್‌ನಲ್ಲಿ ಟಿಕೇಟ್ ಬೆಲೆಯು ಹೆಚ್ಚು ಇರುತ್ತದೆ. ಹಾಗಾಗಿ ವಂಡರ್‌ಲಾಗೆ ಹೋಗುವುದಾದರೆ ವಾರದ ನಡುವಿನ ದಿನಗಳಲ್ಲಿ ಹೋಗುವುದು ಸೂಕ್ತ.
ಸಾಮಾನ್ಯ ದಿನಗಳಲ್ಲಿವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಹಬ್ಬ ಹರಿದಿನಗಳಲ್ಲಿ
ವಯಸ್ಕರಿಗೆRs. 923 + 18% GSTRs. 1182 + 18% GSTRs. 1254 + 18% GST
ಮಕ್ಕಳಿಗೆRs. 740 + 18% GSTRs. 945 + 18% GSTRs. 1005 + 18% GST
ಹಿರಿಯ ನಾಗರಿಕರಿಗೆRs. 690 + 18% GST Rs. 885 + 18% GSTRs. 940 + 18% GST
70+ಹಿರಿಯ ನಾಗರಿಕರಿಗೆRs. 460 + 18% GSTRs. 590 + 18% GSTRs. 625 + 18% GST
ಯೋಧರಿಗೆRs. 740 + 18% GSTRs. 945 + 18% GSTRs. 1005 + 18% GST

ವಾಟರ್‌ ಪಾರ್ಕ್ ಸಮಯ
ವಾರದ ನಡುವಿನ ದಿನಗಳಲ್ಲಿ ಬೆಳಗ್ಗೆ11:00 ಗಂಟೆಯಿಂದ ಸಂಜೆ 6:00 ಗಂಠೆ ವರೆಗೆ ತೆರೆದಿರುತ್ತದೆ. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಬೆಳಗ್ಗೆ11:00 ಗಂಟೆಯಿಂದ ಸಂಜೆ 7:00 ಗಂಟೆ ವರೆಗೆ ತೆರೆದಿರುತ್ತದೆ. ಹಾಗೆಯೇ ನೀವು ಲ್ಯಾಂಡ್‌ ರೈಡ್‌ ಬೆಳಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ಇರುತ್ತದೆ. ವಾಟರ್‌ ರೈಡ್‌ ಮಧ್ಯಾಹ್ನ12 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಇರುತ್ತದೆ.

ನೀರಿಗೆ ಇಳಿಯುವ ಮುನ್ನ ಕೆಲವು ಟಿಪ್ಸ್
ಈ ಸರಳ ಸಲಹೆಗಳು ನಿಮ್ಮ ಉತ್ತಮ ಸಮಯವನ್ನು ಒಟ್ಟಿಗೆ ಸುರಕ್ಷಿತವಾಗಿಸಲು ಸಹಾಯ ಮಾಡುತ್ತದೆ. ಎಸ್‌ಪಿಎಫ್ 15 ಅಥವಾ ಹೆಚ್ಚಿನದನ್ನು ಹೊಂದಿರುವ ಯುವಿ ರಕ್ಷಣಾತ್ಮಕ ಸನ್‌ಗ್ಲಾಸ್ ಮತ್ತು ಸನ್‌ಸ್ಕ್ರೀನ್ ಧರಿಸಿ. ಎಲ್ಲಾ ಸಮಯದಲ್ಲೂ ಸಾಕಷ್ಟು ನೀರು ಕಡಿಯಿರಿ. ನೀವು ಮಕ್ಕಳನ್ನು ವಾಟರ್‌ಪಾರ್ಕ್‌ಗೆ ಕರೆದುಕೊಂಡು ಬಂದಿದ್ದರೆ, ಅವರು ನಿಮ್ಮನ್ನು ಹೇಗೆ ಸಂಪರ್ಕಿಸಬೇಕು ಎಂದು ತಿಳಿದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಿ.

ಆರೋಗ್ಯ ಸಮಸ್ಯೆ ಇದ್ದರೆ ಜಾಗರೂಕರಾಗಿರಿ
ರೈಡ್ ಕ್ಯೂ ಪ್ರದೇಶದಲ್ಲಿ ಶಿಸ್ತು ಕಾಪಾಡಿಕೊಳ್ಳಿ. ಇಲ್ಲಿನ ನೀರಿನ ಕೊಳಗಳು ಆಳವಿರುವುದಿಲ್ಲ ಹಾಗಾಗಿ ಜಂಪ್ ಮಾಡಲು ಹೋಗಬೇಡಿ. ಗರ್ಭಿಣಿಯರು, ಹೃದಯ ರೋಗಿಗಳು, ಇತ್ತೀಚಿನ ದಿನಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಜನರು, ಅಧಿಕ ರಕ್ತದೊತ್ತಡ ಹೊಂದಿರುವವರು ಮತ್ತು ಆರೋಗ್ಯ ಸಮಸ್ಯೆ ಇರುವವರು ವೇಗದ ಅಥವಾ ಅಧಿಕ-ಥ್ರಿಲ್ ನೀಡುವ ಸವಾರಿಗಳನ್ನು ಟ್ರೈ ಮಾಡುವುದೇ ಬೇಡ.

ನೈಲಾನ್ ಬಟ್ಟೆಗಳನ್ನು ಧರಿಸಿ
ಯಾವಾಗಲೂ ನೈಲಾನ್ ಅಥವಾ 100% ಸಂಶ್ಲೇಷಿತ ವಸ್ತುಗಳಿಂದ ಮಾಡಿದ ಉಡುಪುಗಳನ್ನು ಧರಿಸಿ ಅದು ಟೀ ಶರ್ಟ್, ಶಾರ್ಟ್ಸ್, ಬರ್ಮುಡಾಸ್, 3/4 ಅಥವಾ ಈಜು ಸೂಟ್ ಆಗಿರಬಹುದು. ಸೀರೆಗಳು, ಚುರಿದಾರ್‌ಗಳು, ಸಲ್ವಾರ್‌ಗಳು, ದುಪಟ್ಟಾ, ಫಾರ್ಮಲ್ ಪ್ಯಾಂಟ್, ಶರ್ಟ್, ಬುರ್ಖಾ, ಶಾಲಾ ಸಮವಸ್ತ್ರ, ಡೆನಿಮ್ , ಕಾರ್ಗೋಸ್ ಇತ್ಯಾದಿಗಳನ್ನು ನೀರಿನ ಸವಾರಿಗಳಲ್ಲಿ ಅನುಮತಿಸಲಾಗುವುದಿಲ್ಲ. ಬಹುತೇಕ ಎಲ್ಲಾ ಸವಾರಿಗಳು ಚಲನೆ / ಚಲಿಸುವ ಭಾಗಗಳನ್ನು ಒಳಗೊಂಡಿರುತ್ತವೆ. ಅದಕ್ಕಾಗಿಯೇ ಸೀರೆ , ಸಡಿಲವಾದಂತಹ ಬಟ್ಟೆಗಳನ್ನು ಧರಿಸಿದ್ದರೆ ಅವರಿಗೆ ನೀರಿಗೆ ಇಳಿಯಲು ಅವಕಾಶ ನೀಡಲಾಗುವುದಿಲ್ಲ. ಇದರಿಂದ ಅವರಿಗೆ ಹಾಗೂ ಇತರರಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚು.
ಒಂದು ವೇಳೆ ನೀವು ವಾಟರ್‌ ಪಾರ್ಕ್‌ಗೆ ಹೋದಾಗ ನೀರಲ್ಲಿ ಹಾಕಲು ಬಟ್ಟೆ ಕೊಂಡೊಯ್ಯದಿದ್ದಲ್ಲಿ, ವಾಟರ್‌ ಪಾರ್ಕ್‌ನ ಅಂಗಡಿಗಳಲ್ಲಿ ಅದಕ್ಕೆ ಪರ್ಯಾಯ ವ್ಯವಸ್ಥೆಗಳಿವೆ. ಉದ್ಯಾನವನದ ಅಂಗಡಿಗಳಲ್ಲಿ ನೀವು ನೈಲಾನ್, ಸಿಂಥೆಟಿಕ್ ಬಟ್ಟೆಗಳನ್ನು ಖರೀದಿಸಬಹುದು 150ರೂ.ಗೆ ಖರೀದಿಸಬಹುದು. ನೀರಿಗೆ ಇಳಿದ ನಂತರ ಲೈಫ್‌ಗಾರ್ಡ್‌ಗಳು, ರೈಡ್ ಆಪರೇಟರ್‌ಗಳು ಮತ್ತು ಸವಾರಿಗಳ ಬಳಿ ತಿಳಿಸಲಾಗುವ ಸೂಚನೆಗಳನ್ನು ಅನುಸರಿಸಿ.

ಸವಾರಿಯನ್ನು ಆಯ್ಕೆ ಮಾಡುವಾಗ ಎಚ್ಚರದಿಂದಿರಿ
ವಂಡರ್‌ಲಾದಲ್ಲಿರುವ ಪ್ರತಿಯೊಂದು ಸವಾರಿಗಳನ್ನು ನೀವು ಇಷ್ಟಪಡುತ್ತೀರಿ ಆದರೆ ಎಲ್ಲವನ್ನೂ ನೀವು ಅನುಭವಿಸಲು ಸಾಧ್ಯವಿಲ್ಲ. ಹಾಗಾಗಿ ಈ ಸವಾರಿಗಳೊಂದಿಗೆ ಅನುಭವವು ಗರಿಷ್ಠ ಮಟ್ಟದಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ. ನಿಮಗೆ ಯಾವುದು ಸಾಧ್ಯವೋ ಅದನ್ನೇ ಟ್ರೈ ಮಾಡಿ. ನಿಮಗೆ ಸಂತೋಷವನ್ನು ನೀಡುವಂತಹ ಸವಾರಿಯನ್ನೇ ಆಯ್ಕೆ ಮಾಡಿ. ಇಲ್ಲವಾದಲ್ಲಿ ನೀವು ಅನಾರೋಗ್ಯಕ್ಕೀಡಾಗುವ ಸಾಧ್ಯತೆ ಇದೆ.

ಸವಾರಿ ಮೇಲೆ ಫೋಟೊ
ನೀವು ಕೆಲವು ಸವಾರಿಗಳಲ್ಲಿ ಕುಳಿತುಕೊಂಡಾಗ ಅಲ್ಲಿನ ಆ ಕುತೂಹಲ ಹಾಗೂ ಸಂತೋಷ ನಿಮ್ಮ ಮುಖದಲ್ಲಿ ಎದ್ದು ಕಾಣುತ್ತದೆ. ಆ ಸಂದರ್ಭದಲ್ಲಿ ಕ್ಲಿಕಿಸಿದ ಫೋಟೋಗಳನ್ನು ಅಲ್ಲಿ ಮಾರಾಟ ಮಾಡಲಾಗುತ್ತದೆ. ನೀಮ್ಮ ಸವಾರಿ ಮುಗಿದ ನಂತರ ನೀವು ಆ ಫೋಟೋಗಳನ್ನು ಕೊಳ್ಳ ಬಹುದು. ಇದು ನಿಮ್ಮ ಮುಖದ ಭಾವನೆ ಆ ಸಂದರ್ಭದಲ್ಲಿ ಹೇಗಿತ್ತು ಎನ್ನುವುದನ್ನು ತೋರಿಸುತ್ತದೆ. ಇದು ನಿಮಗೆ ಜೀವನ ಪರ್ಯಂತ ನೆನಪಿನ ಕ್ಷಣಗಳಲ್ಲಿ ಒಂದಾಗಿ ಸದಾ ನಿಮ್ಮ ಜೊತೆಗೆ ಇರುತ್ತದೆ.

ಬೆಲೆಬಾಳುವ ವಸ್ತುಗಳನ್ನು ಲಾಕರ್‌ನಲ್ಲಿಡಿ
ನೀವು ನೀರಿಗೆ ಇಳಿಯುವ ಮುನ್ನ ನಿಮ್ಮಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಲಾಕರ್‌ನಲ್ಲಿಟ್ಟು ಆರಾಮದಿಂದ ನೀರಿನಲ್ಲಿ ಆಟವಾಡಿ. ಟಿಕೇಟ್‌ ಕೌಂಟರ್‌ನಲ್ಲಿ ದೊಡ್ಡ ಲೈನ್‌ನ್ನು ತಪ್ಪಿಸಬೇಕಾದರೆ ನೀವು ಫಾಸ್ಟ್ರಾಕ್ ಟಿಕೇಟ್ ಕೊಳ್ಳಿ. ಈಜಿ ಪೇ ಮೂಲಕ ವಂಡರ್‌ಲಾದಲ್ಲಿ ಹಣ ಪಾವತಿಸಿ. ಪ್ರಥಮ ಚಿಕಿತ್ಸೆ ಬಾಕ್ಸ್ ಅಲ್ಲಿ ಇರುತ್ತದೆ. ನಿಮಗೆ ಅಗತ್ಯವೆನಿಸಿದಾಗ ಅದನ್ನು ಕೇಳಿ ಪಡೆದುಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ