Please enable javascript.Apsarakonda Waterfalls,ಅಪ್ಸರೆಯರು ಸ್ನಾನ ಮಾಡಲು ಬರುತ್ತಿದ್ದ ಆ ಕೊಳ ಕರ್ನಾಟಕದ ಯಾವ ಭಾಗದಲ್ಲಿದೆ ಗೊತ್ತಾ? - apsarakonda waterfalls: a pond where nymphs used to come to bath - Vijay Karnataka

ಅಪ್ಸರೆಯರು ಸ್ನಾನ ಮಾಡಲು ಬರುತ್ತಿದ್ದ ಆ ಕೊಳ ಕರ್ನಾಟಕದ ಯಾವ ಭಾಗದಲ್ಲಿದೆ ಗೊತ್ತಾ?

Authored by ಸೌಮ್ಯ ಟೇಮ್ಕರ್ | Vijaya Karnataka Web 19 Apr 2024, 9:00 am
Subscribe

ಅಪ್ಸರೆಯರು ಸ್ನಾನ ಮಾಡಲು ಹಾಗೂ ವಿಶ್ರಾಂತಿ ತೆಗೆದುಕೊಳ್ಳಲು ಬರುತ್ತಿದ್ದ ಆ ಕೊಳ ಕರ್ನಾಟಕದ ಯಾವ ಭಾಗದಲ್ಲಿದೆ ಎಂಬುದು ನಿಮಗೆ ತಿಳಿದಿದೆಯೇ?

apsarakonda waterfalls a pond where nymphs used to come to bath
ಅಪ್ಸರೆಯರು ಸ್ನಾನ ಮಾಡಲು ಬರುತ್ತಿದ್ದ ಆ ಕೊಳ ಕರ್ನಾಟಕದ ಯಾವ ಭಾಗದಲ್ಲಿದೆ ಗೊತ್ತಾ?
ಅಪ್ಸರೆಯರು ಮಿಂದೆದ್ದ ಕೊಳ ನಮ್ಮ ಕರ್ನಾಟಕದಲ್ಲಿದೆ ಎಂದರೆ ನೀವು ನಂಬುತ್ತೀರಾ? ಆ ಕೊಳದ ಸೌಂದರ್ಯ ಹಾಗು ಸ್ಪಟಿಕ ಸ್ಪಷ್ಟವಾದ ನೀರು ಎಂತವರಿಗೂ ಬೆರಗುಗೊಳಿಸುತ್ತದೆ. ಸಾಕಷ್ಟು ಜನರು ಈ ಕೊಳದಲ್ಲಿ ಸ್ನಾನ ಮಾಡಲು ಹಾಗು ಸಂತೋಷದಾಯಕವಾದ ಸಮಯ ಕಳೆಯಲು ಬಯಸುತ್ತಾರೆ.

ವಾರಾಂತ್ಯದ ಸಮಯದಲ್ಲಿ ನೀವು ಈ ಸ್ಥಳಕ್ಕೆ ಭೇಟಿ ನೀಡಬಹುದು. ಅಷ್ಟಕ್ಕೂ ಈ ಅದ್ಭುತವಾದ ಕೊಳ ಇರುವುದು ಹೊನ್ನಾವರದಲ್ಲಿ. ಆ ಜಲಪಾತದ ಹೆಸರೇ ಅಪ್ಸರಕೊಂಡ. ‘ಅಪ್ಸರೆಯರು ಸ್ನಾನ ಮಾಡುತ್ತಿದ್ದ’ ಕೊಳವನ್ನು ಅಪ್ಸರಕೊಂಡ ಎಂದು ಕರೆಯುತ್ತಾರೆ. ಅಷ್ಟಕ್ಕೂ ಈ ಕೊಳದ ಸೌಂದರ್ಯ ಎಂತದ್ದು ಎಂಬುದನ್ನು ಇಲ್ಲಿ ತಿಳಿಯಿರಿ. ( All PC: Pixabay ಸಾಂದರ್ಭಿಕ ಚಿತ್ರ)

ಬೆಂಗಳೂರಿನಿಂದ 476 ಕಿ.ಮೀ ದೂರದಲ್ಲಿದೆ

ಬೆಂಗಳೂರಿನಿಂದ 476 ಕಿ.ಮೀ ದೂರದಲ್ಲಿದೆ

ಬೆಂಗಳೂರಿನಿಂದ ಸುಮಾರು 476 ಕಿ.ಮೀ ದೂರದಲ್ಲಿರುವ ಈ ಅಪ್ಸರಕೊಂಡ ಅನೇಕ ದಂತ ಕಥೆಗಳನ್ನು ಹೊಂದಿದೆ. ಆ ದಂತಕಥೆಯ ಪ್ರಕಾರ, ಈ ಕೊಳದಲ್ಲಿ ಅಪ್ಸರೆಯರು ಬಂದು ಸ್ನಾನ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಜಲಕ್ರೀಡೆ ಮಾಡಲು ಬಯಸುವ ಮಂದಿ ಸಾಮಾನ್ಯವಾಗಿ ಈ ನೀರಿರುವ ತಾಣಗಳಿಗೆ ಭೇಟಿ ನೀಡಲು ಬಯಸುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಗೋಡಿನಲ್ಲಿರುವ ಈ ಸುಂದರವಾದ ಕೊಳವು ಹೊನ್ನಾವರದಿಂದ ಕೇವಲ 7 ಕಿ.ಮೀ ದೂರದಲ್ಲಿದೆ.

ಸ್ಪಟಿಕ ಸ್ಪಷ್ಟವಾದ ನೀರು

ಸ್ಪಟಿಕ ಸ್ಪಷ್ಟವಾದ ನೀರು

ಕೊಳವು ಸ್ಪಟಿಕ ಸ್ಪಷ್ಟವಾದ ನೀರಿಗೆ ಹೆಸರುವಾಸಿಯಾಗಿದೆ. ಕೊಳದ ಕೆಳಭಾಗದಲ್ಲಿರುವ ಕಲ್ಲುಗಳು ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸುವಷ್ಟು ನೀರು ನಿಚ್ಚಳವಾಗಿದೆ.

ಇನ್ನು ಜಲಪಾತವು 10 ಮೀಟರ್‌ ಎತ್ತರದಿಂದ ಧುಮ್ಮುಕ್ಕುತ್ತದೆ. ಕೇವಲ 10 ಮೀಟರ್‌ ಎತ್ತರದಿಂದ ಆದರೂ ರಭಸವಾಗಿ ಕೊಳದಲ್ಲಿ ಬೀಳುವ ಆ ದೃಶ್ಯ ಅದ್ಭುತವಾದುದು. PC: Pixabay

ಮಳೆಗಾಲದಲ್ಲಿ ಭೇಟಿ ನೀಡಿ

ಮಳೆಗಾಲದಲ್ಲಿ ಭೇಟಿ ನೀಡಿ

ಅಪ್ಸರಕೊಂಡ ಕೊಳದ ನಿಜವಾದ ಸೌಂದರ್ಯವನ್ನು ಸವಿಯಲು ನೀವು ಪ್ರತ್ಯೇಕವಾಗಿ ಮಳೆಗಾಲದಲ್ಲಿಯೇ ಭೇಟಿ ನೀಡಬೇಕು. ಈ ಕೊಳದ ಸುತ್ತಲೂ ಗುಪ್ತವಾದ ಗುಹೆಗಳಿವೆ. ಅವುಗಳಲ್ಲಿ ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಕೆಲವು ದಿನಗಳು ವಾಸ ಮಾಡಿದರು ಎಂದು ಹೇಳಲಾಗುತ್ತದೆ.

ಸಾಹಸಿ ಯುವಕರು ಜಲಪಾತದ ತುದಿಗೆ ತಲುಪಿ ಅಲ್ಲಿಂದ ಕೊಳಕ್ಕೆ ಧುಮುಕುವ ಮೂಲಕ ಮೋಜಿನ ಕ್ಷಣಗಳನ್ನು ಆನಂದಿಸುತ್ತಾರೆ. PC: Pixabay

ನೈಸರ್ಗಿಕ ಸೌಂದರ್ಯದಿಂದ ಆವೃತವಾಗಿದೆ

ನೈಸರ್ಗಿಕ ಸೌಂದರ್ಯದಿಂದ ಆವೃತವಾಗಿದೆ

ಇನ್ನು, ಕೊಳವು ನೈಸರ್ಗಿಕ ಸೌಂದರ್ಯದಿಂದ ಆವೃತವಾಗಿದೆ. ಸುತ್ತಲೂ ಹಚ್ಚ ಹಸಿರಿನ ವಾತಾವರಣ, ಸ್ಪಷ್ಟವಾಗಿ ಗೋಚರಿಸುವ ನೀರು ಇಲ್ಲಿ ನಿಜಕ್ಕೂ ಕಣ್ಮನ ಸೆಳೆಯುತ್ತದೆ. ನಿರ್ಮಲವಾದ ವಾತಾವರಣದಲ್ಲಿ ಸ್ನೇಹಿತರೊಟ್ಟಿಗೆ ಆನಂದಮಯ ಕ್ಷಣಗಳನ್ನು ಕಳೆಯುವುದು ನಿಜಕ್ಕೂ ಸಂತೋಷವನ್ನುಂಟು ಮಾಡುತ್ತದೆ.

ಹಾಗೆಯೇ, ಇಲ್ಲೊಂದು ಉದ್ಯಾನವನವಿದೆ. ಉದ್ಯಾನವನದ ಸೌಂದರ್ಯವನ್ನು ಆನಂದಿಸಲು ನೀವು ಟಿಕೆಟ್‌ ತೆಗೆದುಕೊಳ್ಳಬೇಕಾಗುತ್ತದೆ. PC: Pixabay

ಅಪ್ಸರಕೊಂಡಕ್ಕೆ ಹೋದಾಗ ಇವೆಲ್ಲಾ ಪ್ರವಾಸಿ ಆಕರ್ಷಣೆಗಳನ್ನು ಕಣ್ತುಂಬಿಕೊಳ್ಳಿ

ಅಪ್ಸರಕೊಂಡಕ್ಕೆ ಹೋದಾಗ ಇವೆಲ್ಲಾ ಪ್ರವಾಸಿ ಆಕರ್ಷಣೆಗಳನ್ನು ಕಣ್ತುಂಬಿಕೊಳ್ಳಿ

ನರಸಿಂಹಸ್ವಾಮಿ ದೇವಾಲಯ

ಉದ್ಬವ ಗಣಪತಿ ದೇವಾಲಯ

ರಾಮಚಂದ್ರ ಮಠ

ಸುಂದರ ಉದ್ಯಾನವನ

ದೇವಿಯ ಆಲಯ PC: Pixabay

 ಸೌಮ್ಯ ಟೇಮ್ಕರ್
ಲೇಖಕರ ಬಗ್ಗೆ
ಸೌಮ್ಯ ಟೇಮ್ಕರ್
ಸೌಮ್ಯ ಟೇಮ್ಕರ್ ಅವರು ತಮ್ಮ ಉದ್ಯಮದಲ್ಲಿ 4 ವರ್ಷಗಳ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರಾಗಿದ್ದಾರೆ. ಪ್ರಯಾಣಕ್ಕೆ ಸಂಬಂಧಿಸಿದ ಲೇಖನವನ್ನು ಅಚ್ಚುಕಟ್ಟಾಗಿ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಸೌಮ್ಯಾ ಕಥೆಗಳನ್ನು ಹೇಳುವ ಹಾಗು ಪ್ರಯಾಣದ ಅನುಭವವನ್ನು ತಮ್ಮ ಲೇಖನದ ಮೂಲಕ ಹಂಚಿಕೊಳ್ಳಲು ಹೆಚ್ಚು ಇಷ್ಟ ಪಡುತ್ತಾರೆ. ತನ್ನ ವೃತ್ತಿಜೀವನದ ಅವಧಿಯಲ್ಲಿ, ಪ್ರಪಂಚದ ಅನೇಕ ಸ್ಥಳಗಳ ಬಗ್ಗೆ ರಸವತ್ತಾದ ಲೇಖನಗಳನ್ನು ಓದುಗರಿಗಾಗಿ ಬರೆಯುತ್ತಾ ಬಂದಿದ್ದಾರೆ. ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಸೌಮ್ಯ, ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಟಿಪ್ಸ್‌ಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ವಾಸ್ತವವಾಗಿ, ಆಕೆಯ ಬರವಣಿಗೆಯ ಶೈಲಿಯು ಸ್ಪಷ್ಟ ಮತ್ತು ನಿಖರತೆಯನ್ನು ಹೊಂದಿರುತ್ತದೆ. ಓದುಗರನ್ನು ತನ್ನ ಬರವಣಿಗೆಯಿಂದ ಸೆಳೆಯುವ ವಿಶಿಷ್ಟ ಸಾಮರ್ಥ್ಯ ಆಕೆಯಲ್ಲಿದೆ. ಪ್ರಯಾಣದ ಉತ್ಸಾಹಿಗಳಿಗೆ ಅವಳ ಲೇಖನಗಳನ್ನು ಓದಲೇಬೇಕು ಎನ್ನುವ ಭಾವ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸೌಮ್ಯಾ ಕೇವಲ ಪ್ರವಾಸಗಳಲ್ಲಿ ಮಾತ್ರ ಅತ್ಯಾಸಕ್ತಿ ಹೊಂದಿರುವ ವ್ಯಕ್ತಿಯಲ್ಲ, ಬದಲಾಗಿ ಕಾದಂಬರಿಗಳನ್ನು ಓದುವುದನ್ನು ಆನಂದಿಸುತ್ತಾಳೆ. ಜೊತೆಗೆ ಪ್ರತಿನಿತ್ಯ ನಡೆಯುವ ರಾಜಕೀಯ ಸುದ್ದಿಗಳ ಮಾಹಿತಿಗಳನ್ನು ಸಂಗ್ರಹಿಸುತ್ತಾಳೆ. ಒಟ್ಟಾರೆ ಸೌಮ್ಯಾ ಜೀವನದ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿರುವ ಸುಸಂಬದ್ಧ ವ್ಯಕ್ತಿ.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ