ಆ್ಯಪ್ನಗರ

​ಹಂಪಿ ರಥವನ್ನು ನೀವು ಮೈಸೂರಿನಲ್ಲಿಯು ನೋಡಬಹುದು…! ಎಲ್ಲಿ ಗೊತ್ತಾ?

ಮೈಸೂರಿನಲ್ಲಿ ಹಂಪಿ ರಥದ ಪ್ರತಿಕೃತಿ  ಇದೆ. ಹಾಗೆಯೇ ಆಹ್ಲಾದಕರವಾದ ಬ್ಯಾಕ್‌ ವಾಟರ್‌ ಇದೆ. ನೀವು ಬಹುಶಃ ಈ ತಾಣವನ್ನು ಸಂದರ್ಶಿಸದೇ ಇರಬಹುದು.

Authored by ಸೌಮ್ಯ ಟೇಮ್ಕರ್ | Vijaya Karnataka Web 25 Jan 2023, 12:42 pm

PC:Doc.aneesh

ಬೆಂಗಳೂರಿನಿಂದ ಮೈಸೂರು 144 ಕಿ.ಮೀ ದೂರದಲ್ಲಿದೆ. ವಾರಾಂತ್ಯದ ಸಮಯದಲ್ಲಿ ಅದ್ಭುತವಾದ ತಾಣಕ್ಕೆ ಹೋಗಿ ಪ್ರವಾಸ ಮಾಡಬೇಕು ಅಂತ ಬಯಸುವವರು ಖಂಡಿತವಾಗಿಯು ವೇಣುಗೋಪಾಲ ಸ್ವಾಮಿ ಬ್ಯಾಕ್‌ ವಾಟರ್ ತಾಣಕ್ಕೆ ಭೇಟಿ ನೀಡಬಹುದು.

ನೀವು ಪ್ರಕೃತಿಯನ್ನು ಅತಿಯಾಗಿ ಪ್ರೀತಿಸುವವರಾಗಿದ್ದರೆ ಮತ್ತು ಧಾರ್ಮಿಕ ಸ್ಥಳಗಳನ್ನು ಸಂದರ್ಶಿಸಲು ಬಯಸಿದರೆ ಇದೊಂದು ಸೂಕ್ತವಾದ ತಾಣ ಎಂದೇ ಹೇಳಬಹುದು. ಅಷ್ಟಕ್ಕೂ ಮೈಸೂರಿನ ಪ್ರವಾಸದಲ್ಲಿ ನೀವು ಮಿಸ್‌ ಮಾಡಿಕೊಳ್ಳಲೇಬಾರದ ತಾಣಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ ಓದಿ.

Vijaya Karnataka Web one day trip with family near mysore
​ಹಂಪಿ ರಥವನ್ನು ನೀವು ಮೈಸೂರಿನಲ್ಲಿಯು ನೋಡಬಹುದು…! ಎಲ್ಲಿ ಗೊತ್ತಾ?


ಭೂ ವರಾಹ ಸ್ವಾಮಿ ದೇವಾಲಯ

PC: Doc.aneesh


ಮೈಸೂರಿನ ಸಮೀಪದಲ್ಲಿರುವ ಈ ಭೂ ವರಾಹ ಸ್ವಾಮಿ ದೇವಾಲಯವು ವಿಷ್ಣುವಿನ 3 ನೇ ಅವತಾರಕ್ಕೆ ಸಮರ್ಪಿತವಾಗಿದೆ. ಮಹಾವಿಷ್ಣುವನ್ನು ಹಂದಿಯ ರೂಪದಲ್ಲಿ ಇಲ್ಲಿ ಕಣ್ತುಂಬಿಕೊಳ್ಳಬಹುದು. ದೇವಾಲಯದ ಸಮೀಪದಲ್ಲಿ ಹೇಮಾವತಿ ನದಿಯ ಆಹ್ಲಾದಕರವಾದ ನೋಟವು ನಿಮ್ಮನ್ನು ಬೆರಗುಗೊಳಿಸುತ್ತದೆ. ಭೂದೇವಿ ಸಮೇತ ವರಾಹ ಸ್ವಾಮಿ ಇಲ್ಲಿ ನೆಲೆಸಿದ್ದಾರೆ.

ಇನ್ನು, ಹೇಮಾವತಿ ನದಿಯು ಬಲವಾದ ಒಳಹರಿವು ಹೊಂದಿರುವ ಕಾರಣ, ಈಜಾಡಲು ಸುರಕ್ಷಿತವಲ್ಲ ಎಂದು ಹೇಳಲಾಗುತ್ತದೆ. ಈ ಆಲಯವು ಕಲ್ಹಳ್ಳಿ ಗ್ರಾಮದಲ್ಲಿದೆ. ಇದು ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯಲ್ಲಿದೆ.

ಮೇಲುಕೋಟೆ ವೇಣುಗೋಪಾಲ ಸ್ವಾಮಿ ದೇವಾಲಯ

PC: Doc.aneesh

ಭೂ ವರಾಹ ಸ್ವಾಮಿ ದೇವಾಲಯದಿಂದ ಮೇಲುಕೋಟೆ ವೇಣು ಗೋಪಾಲಸ್ವಾಮಿ ದೇವಾಲಯವು ಸುಮಾರು 40 ಕಿ.ಮೀ ದೂರದಲ್ಲಿದೆ. ಸಮೀಪದಲ್ಲಿರುವ ಬ್ಯಾಕ್‌ ವಾಟರ್ ಆಲಯದ ಸೌಂದರ್ಯವನ್ನು ಹೆಚ್ಚಿಸಿದೆ.

ಇನ್ನು ದೇವಾಲಯದ ವಾಸ್ತುಶಿಲ್ಪಗಳು, ಕೆತ್ತನೆಗಳು ಸಂಕೀರ್ಣವನ್ನು ನೋಡಲು ಎರಡು ಕಣ್ಣುಗಳು ಸಾಲವು ಎಂದೇ ಹೇಳಬಹುದು.

ಹಂಪಿ ರಥದ ಪ್ರತಿಕೃತಿ

PC: Unsplash


ಸುಮಾರು 1 ಗಂಟೆಗಳ ಕಾಲ ಬೇಕು ಮೇಲುಕೋಟೆ ವೇಣು ಗೋಪಾಲಸ್ವಾಮಿ ದೇವಾಲಯವನ್ನು ನೋಡಲು. ದೇವಾಲಯವನ್ನು ಪುನರ್‌ ನಿರ್ಮಾಣ ಮಾಡಲಾಗಿದ್ದು, ಹಿಂದೆ ಇದ್ದ ದೇವಾಲಯದ ಛಾಯಾಚಿತ್ರಗಳನ್ನು ನೀವು ನೋಡಬಹುದು. ಜೊತೆಗೆ ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಹಂಪಿ ರಥ. ವಿಶ್ವ ವಿಖ್ಯಾತಿ ಹಂಪಿಯ ರಥವನ್ನು ನೀವು ನೋಡಲು ಹಂಪಿಗೆ ಹೋಗಬೇಕಾಗಿಲ್ಲ. ಈ ಮೇಲುಕೋಟೆ ವೇಣು ಗೋಪಾಲಸ್ವಾಮಿ ದೇವಾಲಯದಲ್ಲಿಯು ರಥದ ಪ್ರತಿಕೃತಿ ನೋಡಬಹುದು.

ಹೊಯ್ಸಳ ವಾಸ್ತುಶಿಲ್ಪ

PC: Doc.aneesh

ಕ್ರಿ.ಶ 12 ನೇ ಶತಮಾನದಲ್ಲಿ ಮೈಸೂರು ಜಿಲ್ಲೆಯ ಸೋಮನಾಥಪುರದಲ್ಲಿರುವ ಚೆನ್ನಕೇಶವ ದೇವಾಲಯದ ನಿರ್ಮಾಣ ಸಮಯದಲ್ಲಿ ಈ ಆಲಯವನ್ನು ನಿರ್ಮಿಸಲಾಗಿದೆ. ಇದು ಹೊಯ್ಸಳ ವಾಸ್ತುಶಿಲ್ಪಕ್ಕೆ ಅತ್ಯುತ್ತಮವಾದ ಉದಾಹರಣೆ ಎನ್ನಬಹುದು. ಮೈಸೂರಿನ ಪ್ರಮುಖ ಪ್ರವಾಸಿ ಆಕರ್ಷಣೆಗಳ ಪಟ್ಟಿಯಲ್ಲಿ ಈಗ ಮೇಲುಕೋಟೆ ವೇಣು ಗೋಪಾಲಸ್ವಾಮಿ ದೇವಾಲಯ ಸೇರ್ಪಡೆಗೊಂಡಿದೆ.

ಬ್ಯಾಕ್‌ ವಾಟರ್‌ನಲ್ಲಿ ಜಲಕ್ರೀಡೆ

PC: Doc.aneesh

ಕುಟುಂಬ ಅಥವಾ ಸ್ನೇಹಿತರೊಟ್ಟಿಗೆ ಒಂದು ದಿನದ ಪ್ರವಾಸಕ್ಕೆ ಭೇಟಿ ನೀಡಬಹುದಾದ ಅತ್ಯುತ್ತಮ ತಾಣವಿದು. ವಾಸ್ತವವಾಗಿ, ಕೆಆರ್‌ಎಸ್‌ ಹಿನ್ನೀರಿನ ನೈಸರ್ಗಿಕ ದೃಶ್ಯಾವಳಿಗಳನ್ನು ನೀವು ಆನಂದಿಸಬಹುದು. ತನ್ನ ರಮಣೀಯವಾದ ವಾತಾವರಣದಿಂದಾಗಿ ಪ್ರಕೃತಿ ಪ್ರೇಮಿಗಳನ್ನು ಆಕರ್ಷಿಸುತ್ತದೆ. ಸುಂದರವಾದ ಸೂರ್ಯಾಸ್ತ ಹಾಗು ಸೂರ್ಯೋದಯವನ್ನು ನೀವು ಹತ್ತಿರದಿಂದ ವೀಕ್ಷಿಸಬಹುದು.

ಜೊತೆಗೆ ಬೋಟಿಂಗ್‌ನಂತಹ ಜಲಕ್ರೀಡೆಗಳನ್ನು ಈ ಬ್ಯಾಕ್‌ ವಾಟರ್‌ನಲ್ಲಿ ಎಂಜಾಯ್‌ ಮಾಡಬಹುದು.

ಇದನ್ನೂ ಓದಿ: ನೆಮ್ಮದಿಯಾಗಿ ಮೈಸೂರು ಪ್ರವಾಸ ಮಾಡಬೇಕಾ? ಹಾಗಾದರೆ ಈ ದಿನ ಹೋಗಿ

ಕುಟುಂಬ ಪ್ರವಾಸ

PC: Doc.aneesh

ಕುಟುಂಬದ ಜೊತೆ ಪ್ರವಾಸ ಮಾಡಬೇಕು ಎಂದು ನೀವು ಬಯಸಿದರೆ ಈ ಮೇಲುಕೋಟೆ ವೇಣು ಗೋಪಾಲಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ. ಆಲಯಕ್ಕೆ ಬರುವ ಭಕ್ತರಿಗೆ ಅನ್ನಸಂತರ್ಪಣೆ ಸೇವೆ ಪಡೆಯಬಹುದು. ಅಲ್ಲಲ್ಲಿ ಸಣ್ಣ ಪುಟ್ಟ ಅಂಗಡಿಗಳಲ್ಲಿ ಜ್ಯುಸ್‌ಗಳು, ಕುರುಕಲು ತಿಂಡಿಗಳನ್ನು ಖರೀದಿ ಮಾಡಬಹುದು. ಸ್ವಂತ ಮನೆಯ ಮಹತ್ವಾಕಾಂಕ್ಷಿಗಳು ನೀರಿನ ಒಂದು ಭಾಗದಲ್ಲಿ ಕಲ್ಲುಗಳು ಜೋಡಿಸಿರುವುದನ್ನು ನೀವು ನೋಡಬಹುದು. ಒಟ್ಟಾರೆ ಮೈಸೂರಿನ ಸಮೀಪದಲ್ಲಿರುವ ಈ ಸುಂದರವಾದ ಧಾರ್ಮಿಕ ಸ್ಥಳಗಳು ನಿಮ್ಮ ಮನಸ್ಸಿಗೆ ನೆಮ್ಮದಿಯನ್ನು ಉಂಟು ಮಾಡುವುದರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ: ನಮ್ಮ ಮೈಸೂರಿನ 2 ದಿನದ ಪ್ರವಾಸ ಹೇಗಿತ್ತು ಗೊತ್ತಾ? ಅಬ್ಬಾ…! ಇಷ್ಟೆಲ್ಲಾ ಪ್ರವಾಸಿ ತಾಣಗಳನ್ನು ನೋಡಿ ಬಂದೆವು…

ಲೇಖಕರ ಬಗ್ಗೆ
ಸೌಮ್ಯ ಟೇಮ್ಕರ್
ಸೌಮ್ಯ ಟೇಮ್ಕರ್ ಅವರು ತಮ್ಮ ಉದ್ಯಮದಲ್ಲಿ 4 ವರ್ಷಗಳ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರಾಗಿದ್ದಾರೆ. ಪ್ರಯಾಣಕ್ಕೆ ಸಂಬಂಧಿಸಿದ ಲೇಖನವನ್ನು ಅಚ್ಚುಕಟ್ಟಾಗಿ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಸೌಮ್ಯಾ ಕಥೆಗಳನ್ನು ಹೇಳುವ ಹಾಗು ಪ್ರಯಾಣದ ಅನುಭವವನ್ನು ತಮ್ಮ ಲೇಖನದ ಮೂಲಕ ಹಂಚಿಕೊಳ್ಳಲು ಹೆಚ್ಚು ಇಷ್ಟ ಪಡುತ್ತಾರೆ. ತನ್ನ ವೃತ್ತಿಜೀವನದ ಅವಧಿಯಲ್ಲಿ, ಪ್ರಪಂಚದ ಅನೇಕ ಸ್ಥಳಗಳ ಬಗ್ಗೆ ರಸವತ್ತಾದ ಲೇಖನಗಳನ್ನು ಓದುಗರಿಗಾಗಿ ಬರೆಯುತ್ತಾ ಬಂದಿದ್ದಾರೆ. ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಸೌಮ್ಯ, ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಟಿಪ್ಸ್‌ಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ವಾಸ್ತವವಾಗಿ, ಆಕೆಯ ಬರವಣಿಗೆಯ ಶೈಲಿಯು ಸ್ಪಷ್ಟ ಮತ್ತು ನಿಖರತೆಯನ್ನು ಹೊಂದಿರುತ್ತದೆ. ಓದುಗರನ್ನು ತನ್ನ ಬರವಣಿಗೆಯಿಂದ ಸೆಳೆಯುವ ವಿಶಿಷ್ಟ ಸಾಮರ್ಥ್ಯ ಆಕೆಯಲ್ಲಿದೆ. ಪ್ರಯಾಣದ ಉತ್ಸಾಹಿಗಳಿಗೆ ಅವಳ ಲೇಖನಗಳನ್ನು ಓದಲೇಬೇಕು ಎನ್ನುವ ಭಾವ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸೌಮ್ಯಾ ಕೇವಲ ಪ್ರವಾಸಗಳಲ್ಲಿ ಮಾತ್ರ ಅತ್ಯಾಸಕ್ತಿ ಹೊಂದಿರುವ ವ್ಯಕ್ತಿಯಲ್ಲ, ಬದಲಾಗಿ ಕಾದಂಬರಿಗಳನ್ನು ಓದುವುದನ್ನು ಆನಂದಿಸುತ್ತಾಳೆ. ಜೊತೆಗೆ ಪ್ರತಿನಿತ್ಯ ನಡೆಯುವ ರಾಜಕೀಯ ಸುದ್ದಿಗಳ ಮಾಹಿತಿಗಳನ್ನು ಸಂಗ್ರಹಿಸುತ್ತಾಳೆ. ಒಟ್ಟಾರೆ ಸೌಮ್ಯಾ ಜೀವನದ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿರುವ ಸುಸಂಬದ್ಧ ವ್ಯಕ್ತಿ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ