ಆ್ಯಪ್ನಗರ

ಕಿಡ್ನಾಪ್‌, ಕಿರುಕುಳ, ದ್ರೋಹ, ಬ್ರೇಕಪ್‌ ಇತ್ಯಾದಿ! ಬಿಗ್‌ ಬಾಸ್‌ ಸ್ಪರ್ಧಿಗಳು ಬಾಯಿಬಿಟ್ಟ ಕಹಿ ಸತ್ಯಗಳಿವು!

ಕೊರೊನಾ ಭೀತಿಯ ನಡುವೆಯೂ ಶುರುವಾದ ಹಿಂದಿ ಬಿಗ್‌ ಬಾಸ್‌ 14ನೇ ಸೀಸನ್‌ ಕೊನೇ ಹಂತವನ್ನು ತಲುಪುತ್ತಿದೆ. ಎಂದಿನಂತೆ ಈ ಬಾರಿಯ ಸ್ಪರ್ಧಿಗಳ ನಡುವೆ ಜಟಾಪಟಿ ಏರ್ಪಟ್ಟಿದೆ. ಜೊತೆಗೆ ಕೆಲವು ರಹಸ್ಯಗಳೂ ಬಯಲಾಗಿವೆ.

Vijaya Karnataka Web 10 Dec 2020, 3:48 pm
ಪರಸ್ಪರ ಅಪರಿಚಿತರಾಗಿ ಬಿಗ್‌ ಬಾಸ್‌ ಮನೆಯೊಳಗೆ ಕಾಲಿಡುವ ಸ್ಪರ್ಧಿಗಳು ದಿನ ಕಳೆದಂತೆ ಆಪ್ತರಾಗಿಬಿಡುತ್ತಾರೆ. ಇದು ಈ ರಿಯಾಲಿಟಿ ಶೋನ ಮ್ಯಾಜಿಕ್‌ ಎಂದರೂ ತಪ್ಪಾಗಲಾರದು. ಅಂಥ ಒಂದು ಆಪ್ತತೆ ಬೆಳೆದ ನಂತರ ತಮ್ಮ ಮನಸ್ಸಿನ ಒಳಗಿರುವ ಎಲ್ಲ ಮಾತುಗಳನ್ನು ಹೊರಹಾಕುತ್ತಾರೆ ಸ್ಪರ್ಧಿಗಳು. ಸಲ್ಮಾನ್‌ ಖಾನ್‌ ನಿರೂಪಣೆ ಮಾಡುತ್ತಿರುವ ಬಿಗ್‌ ಬಾಸ್‌ ಹಿಂದಿ ಸೀಸನ್‌ 14ರಲ್ಲಿಯೇ ಅದು ಮರುಕಳಿಸಿದೆ.
Vijaya Karnataka Web ಬಿಗ್‌ ಬಾಸ್‌


ಲೈಂಗಿಕ ಕಿರುಕುಳ ಮತ್ತು ದ್ರೋಹ!
ನಟ ಇಜಾಜ್‌ ಖಾನ್‌ ಈವರೆಗೂ ಮುಚ್ಚಿಟ್ಟಿದ್ದ ಕೆಲವು ಕಹಿ ಘಟನೆಗಳನ್ನು ಬಿಗ್‌ ಬಾಸ್‌ ಮನೆಯ ಎಲ್ಲ ಸದಸ್ಯರ ಎದುರು ಹೇಳಿಕೊಂಡಿದ್ದಾರೆ. 'ಹಳೇ ಪ್ರಿಯತಮೆಯು ಸುಳ್ಳು ವರದಕ್ಷಿಣಿ ಕಿರುಕುಳದ ಕೇಸ್‌ನಲ್ಲಿ ನನ್ನನ್ನು ಸಿಕ್ಕಿಸಲು ಪ್ರಯತ್ನಿಸಿದ್ದಳು. ಆ ಬಳಿಕ ನನಗೆ ಪ್ರೀತಿ ಎಂಬ ವಿಚಾರದ ಮೇಲೆಯೇ ಭಯ ಹುಟ್ಟಿಕೊಂಡಿತು. ಈಗ ಆಕೆ ಬೇರೆಯವರನ್ನು ಮದುವೆ ಆಗಿದ್ದಾಳೆ. ಅವಳು ಕೂಡ ನಟಿ' ಎಂದು ಇಜಾಜ್‌ ಖಾನ್‌ ಬಾಯಿ ಬಿಟ್ಟಿದ್ದಾರೆ. ಅಲ್ಲದೆ, ಅವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಲೈಂಗಿಕ ಕಿರುಕುಳ ಆಗಿತ್ತಂತೆ. ಹಾಗಾಗಿ ಯಾರಾದರೂ ತಮ್ಮನ್ನು ಸ್ಪರ್ಶಿಸಿದರೆ ಭಯ ಆಗುತ್ತದೆ ಎಂದು ಇಜಾಜ್‌ ಹೇಳಿದ್ದಾರೆ.

ಅಪಹರಣಗೊಂಡಿದ್ದ ನಟಿ ನಿಕ್ಕಿ ತಂಬೋಲಿ!
ನಟಿ ನಿಕ್ಕಿ ತಂಬೋಲಿ ಅವರಿಗೆ ಈಗ 24 ವರ್ಷ ವಯಸ್ಸು. ಈಗಷ್ಟೇ ಅವರು ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನಟಿ ಆಗುವುದಕ್ಕೂ ಮುನ್ನ ಅವರು ಮಾಡೆಲಿಂಗ್‌ನಲ್ಲಿ ಸಕ್ರಿಯರಾಗಿದ್ದರು. 19ನೇ ವಯಸ್ಸಿನಲ್ಲಿ ಒಂದು ಅಂತಾರಾಷ್ಟ್ರೀಯ ಮಾಡೆಲಿಂಗ್‌ ಅಸೈನ್ಮೆಂಟ್‌ ಮಾಡುತ್ತಿದ್ದಾಗ ನಿಕ್ಕಿ ಅವರನ್ನು ಕಿಡ್ನಾಪ್‌ ಮಾಡಲಾಗಿತ್ತಂತೆ. ಆ ಘಟನೆಯನ್ನು ನೆನಪಿಸಿಕೊಂಡು ಬಿಗ್‌ ಬಾಸ್‌ ಮನೆಯೊಳಗೆ ನಿಕ್ಕಿ ತಂಬೋಲಿ ಕಣ್ಣೀರು ಹಾಕಿದ್ದಾರೆ.

also read: ಕನ್ನಡ ಬಿಗ್‌ ಬಾಸ್‌ ಹೊಸ ಸೀಸನ್‌ ಬಗ್ಗೆ ಬ್ರೇಕಿಂಗ್‌ ನ್ಯೂಸ್‌ ಕೊಟ್ಟ ಕಿಚ್ಚ ಸುದೀಪ್‌-ಪರಮ್‌!

ಬ್ರೇಕಪ್‌ ನೋವಿನಲ್ಲಿ ಪವಿತ್ರಾ ಪೂನಿಯಾ
ಕಿರುತೆರೆ ನಟಿ ಪವಿತ್ರಾ ಪೂನಿಯಾ ಮೇಲೆ ಅನೇಕ ಆರೋಪಗಳು ಕೇಳಿಬಂದಿವೆ. ಅವರು ಗುಟ್ಟಾಗಿ ಮದುವೆ ಆಗಿದ್ದಾರೆ ಎಂದು ಇತ್ತೀಚೆಗೆ ಹೋಟೆಲ್‌ ಉದ್ಯಮಿಯೊಬ್ಬರು ಆರೋಪಿಸಿದ್ದರು. ಪ್ರೀತಿಯ ಹೆಸರಿನಲ್ಲಿ ನಾಲ್ಕು ಜನರಿಗೆ ಪವಿತ್ರಾ ಮೋಸ ಮಾಡಿದ್ದಾರೆ ಎಂಬ ಸುದ್ದಿ ಕೂಡ ಹರಡಿದೆ. ಆದರೆ ಪವಿತ್ರಾ ತಾವು ಬ್ರೇಕಪ್‌ ನೋವಿನಲ್ಲಿ ಇರುವುದಾಗಿ ಬಿಗ್‌ ಬಾಸ್‌ ಮನೆಯೊಳಗೆ ಹೇಳಿಕೊಂಡಿದ್ದಾರೆ. 'ಮೂರು ವರ್ಷ ನಾನು ಎಂಗೇಜ್‌ ಆಗಿದ್ದೆ. ಆದರೆ ಹುಡುಗನ ತಪ್ಪು ತಿಳಿವಳಿಕೆಯಿಂದಾಗಿ ನಾನು ಬ್ರೇಕಪ್‌ ಮಾಡಿಕೊಳ್ಳಬೇಕಾಯಿತು' ಎಂದು ಪವಿತ್ರಾ ಹೇಳಿಕೊಂಡಿದ್ದಾರೆ.

also read: ಮದುವೆ ಬಳಿಕ ಬೇರೆಯವರ ಜೊತೆ ಡೇಟಿಂಗ್‌! ಗಂಡನಿಗೆ 4 ಬಾರಿ ಮೋಸ ಮಾಡಿದ ಬಿಗ್‌ ಬಾಸ್‌ ಸ್ಪರ್ಧಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ