ಆ್ಯಪ್ನಗರ

Bigg Boss 6 Episode 9: ರೋಚಕವಾಗಿ ಸಾಗಿರುವ ಬಾಗಿಲು ತೆಗೆಯೇ ಸೇಸಮ್ಮ ಟಾಸ್ಕ್

ಬಿಗ್ ಬಾಸ್ ನೀಡಿರುವ ಹೊಸ ಟಾಸ್ಕ್ ಹೆಸರು ಬಾಗಿಲು ತೆಗೆಯೇ ಸೇಸಮ್ಮ. ಈ ಟಾಸ್ಕ್‌ನಲ್ಲಿ ಮನೆಯ ಸದಸ್ಯರ ನಡುವೆ ವಾಗ್ವಾದ, ಜಗಳ, ಕಿತ್ತಾಟ ನಡೆಯುತ್ತಿದೆ.

Vijaya Karnataka Web 31 Oct 2018, 10:44 am
ಬಿಗ್ ಬಾಸ್ ಆರನೇ ಆವೃತ್ತಿಯಲ್ಲಿ ಹೊಸ ನಾಯಕತ್ವಕ್ಕಾಗಿ ಹೊಸ ಟಾಸ್ಕ್ ಆರಂಭವಾಗಿದ್ದು, ಮನೆಯ ಸದಸ್ಯರ ನಡುವೆ ಕಿಚ್ಚು ಹಚ್ಚಿದೆ. ಬಿಗ್ ಬಾಸ್ ನೀಡಿರುವ ಹೊಸ ಟಾಸ್ಕ್ ಹೆಸರು 'ಬಾಗಿಲು ತೆಗೆಯೇ ಸೇಸಮ್ಮ'. ಈ ಟಾಸ್ಕ್‌ನಲ್ಲಿ ಮನೆಯ ಸದಸ್ಯರ ನಡುವೆ ವಾಗ್ವಾದ, ಜಗಳ, ಕಿತ್ತಾಟ, ರಂಪಾಟ ನಡೆಯುತ್ತಿದೆ.
Vijaya Karnataka Web bigg-boss-kannada



ಈ ವಾರದ ಲಗ್ಜುರಿ ಬಜೆಟ್ ಟಾಸ್ಕ್ ಹೆಸರು "ಬಾಗಿಲು ತೆಗೆಯೇ ಸೇಸಮ್ಮ". ಎರಡು ತಂಡಗಳನ್ನು ರಚಿಸಲಾಯಿತು. ಬಿಗ್ ಬಾಸ್ ಮನೆಯ ಆವರಣವನ್ನು ಕಾಡಿನ ತರಹ ಸೃಷ್ಟಿಸಿ, ಒಂದು ತಂಡ ಕೊಡುವ ಕಾಟದಿಂದ ಇನ್ನೊಂದು ತಂಡದ ಸದಸ್ಯರು ತಾಳಲಾರದೆ ಗುಹೆಯಿಂದ ನುಗ್ಗಿ ಮನೆಯ ಒಳಗೆ ಹೋಗಬಹುದು. ಬಝರ್ ಒತ್ತಿದಾಗ ಒಮ್ಮೆ ಮಾತ್ರ ಗುಹೆಯ ಬಾಗಿಲು ತೆರೆಯುತ್ತದೆ. ಅದುವೇ ಬಾಗಿಲು ತೆಗೆಯೇ ಸೇಸಮ್ಮ ಟಾಸ್ಕ್.

ತಂಡದ ಒಬ್ಬ ಸದಸ್ಯ ಮಾತ್ರ ಗುಹೆಗೆ ನುಗ್ಗಲು ಸಾಧ್ಯ. ಕೊನೆಗೆ ಎಷ್ಟು ಸದಸ್ಯರು ಉಳಿಯುತ್ತಾರೋ ಅವರ ನಡುವೆ ಹೊಸ ನಾಯಕತ್ವಕ್ಕೆ ಸ್ಪರ್ಧೆ ನಡೆಯಲಿದೆ. ಬಝರ್ ಕೇಳಿಸಿದಾಗ ಒಂದು ನಿಮಿಷ ಮಾತ್ರ ಗುಹೆಯ ಬಾಗಿಲು ತೆರೆದಿರುತ್ತದೆ ಎಂದು ಬಿಗ್ ಬಾಸ್ ಸೂಚನೆ ನೀಡಿದರು.


ಮನೆಯ ಸದಸ್ಯರ ನಡುವೆ ಒಂದಷ್ಟು ವಸ್ತುಗಳ ನಡುವೆ ಕಿತ್ತಾಟ ಶುರುವಾಯಿತು. ಒಂದು ತಂಡದ ಸದಸ್ಯರು ಬಚ್ಚಿಟ್ಟುಕೊಂಡಿದ್ದ ನೀರಿಗಾಗಿ ಕಿತ್ತಾಟ ಶುರುವಾಯಿತು. ಬಿಗ್ ಬಾಸ್ ಮನೆಯ ಪ್ರಾಪರ್ಟಿಗೆ ಕೆಲವು ಸದಸ್ಯರು ಕೈಹಾಕಿದರು. ಈ ಟಾಸ್ಕ್ ಸುಸೂತ್ರವಾಗಿ ನಡೆಸುವಂತೆ ರವಿ ಅವರಿಗೆ ಜವಾಬ್ದಾರಿ ನೀಡಲಾಯಿತು.


ಟಾಸ್ಕ್‌ನಲ್ಲಿ ಒಂದು ತಂಡದ ಸದಸ್ಯರು ಇನ್ನೊಂದು ತಂಡದ ಸದಸ್ಯರಿಗೆ ಕಿರಿಕಿರಿ ಆಗುವಂತೆ ಮಾಡುತ್ತಿದ್ದರು. ಸ್ನೇಹಾ ಮತ್ತು ನವೀನ್ ಸಜ್ಜು ನಡುವೆ ಒಂದಷ್ಟು ವಾಗ್ವಾದ ನಡೆಯಿತು. ಸಂಜೆಯಾಗುತ್ತಿದ್ದರೂ ಯಾರೂ ಗುಹೆಯ ಒಳಗೆ ಹೋಗಲಿಲ್ಲ.


ಕವಿತಾ ಅವರು ನೀಡಲಾಗಿರುವ ಸಮವಸ್ತ್ರವನ್ನು ಬದಲಾಯಿಸಿದ ಕಾರಣ ಅವರನ್ನು ಆಟದಿಂದ ಹೊರಗೆ ಇಡಲಾಯಿತು. ಬಾಗಿಲು ತೆಗೆಯೇ ಸೇಸಮ್ಮ ಟಾಸ್ಕ್‌ನಲ್ಲಿ ಆನಂದ್ ಮಾಲಗತ್ತಿ ತನ್ನ ಕಾಲಿಗೆ ಪೆಟ್ಟು ಮಾಡಿಕೊಂಡು ನೋವನುಭವಿಸಿದರು.

ಆಡಮ್ ಪಾಶಾ ಹುಡುಗಿಯರ ಎದೆ ಮುಟ್ಟುತ್ತಿದ್ದಾನೆ ಎಂಬ ಆಪಾದನೆಯೂ ಕೇಳಿಬಂತು. ಆಟದಲ್ಲಿ ನಿಯಮಗಳನ್ನು ಯಾರು ಉಲ್ಲಂಘಿಸಿದ್ದಾರೆ ಎಂಬುದನ್ನು ತಿಳಿಸಬೇಕು ಎಂದು ರವಿ ಅವರನ್ನು ಬಿಗ್ ಬಾಸ್ ಕೇಳಿದರು. ಸ್ನೇಹಾ ಟವಲ್‌ನಲ್ಲಿ ಹೊಡೆದು ರೂಲ್ಸ್ ಬ್ರೇಕ್ ಮಾಡಿದರು ಎಂದು ಅವರನ್ನು ಮನೆಯ ಒಳಗೆ ಕಳುಹಿಸಲಾಯಿತು.

ಆಟದಲ್ಲಿ ಏನು ಮಜಾ ಇಲ್ಲ ಎಂದು ಕೆಲವರು. ನನ್ನನ್ನು ಅನಗತ್ಯವಾಗಿ ಮನೆಯ ಒಳಗೆ ಕಳುಹಿಸಿದರು ಎಂದು ಸ್ನೇಹಾ. ತನ್ನ ಕಣ್ಣಿಗೆ ತಗುಲಿಸಿದರು ಎಂದು ಹೇಳಿ ರಶ್ಮಿ ಬೇಕೆಂದೇ ಇನ್ನೊಬ್ಬರ ಕಣ್ಣಿಗೆ ತಗುಲಿಸಿ, ನಾನೂ ಸಾರಿ ಕೇಳುತ್ತೇನೆ ಎಂದು ಚಿಕ್ಕ ಮಕ್ಕಳ ತರಹ ಆಡಿದರು. ಆಟದಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ತಮ್ಮ ಬುದ್ಧಿವಂತಿಕೆ ಬಳಸುತ್ತಿದ್ದಾರೆ.


ಸ್ನೇಹಾ ಮತ್ತು ಕವಿತಾ ಹಗಲು ಹೊತ್ತು ನಿದ್ದೆ ಮಾಡುತ್ತಿದ್ದಾರೆ ಎಂದು ಎದ್ದೇಳು ಮಂಜುನಾಥ್ ಹಾಡು ಹಾಕಲಾಯಿತು. ಕವಿತಾರಿಗೆ ಎದ್ದೇಳು ಮಂಜುನಾಥ ಹಾಡು ಬೀಳುತ್ತಿರುವುದು ಎರಡನೇ ಸಲ. ಅಡುಗೆಮನೆಯಲ್ಲಿ ಒಂದು ವೆಜ್ ಬಿರಿಯಾನಿ ಇನ್ನೊಂದು ಮಟನ್ ಬಿರಿಯಾನಿ ಇಡಲಾಗಿದೆ. ಬಝರ್ ಒತ್ತಿದಾಗ ಯಾರು ಹೋಗುತ್ತಾರೋ ಅವರಿಗೆ ಅದು ಸಿಗಲಿದೆ ಎಂದು ಹೇಳಿದರು. ಸ್ನೇಹಾ, ಕವಿತಾ ಮತ್ತು ಕ್ಯಾಪ್ಟನ್ ಹೊರತುಪಡಿಸಿ ಉಳಿದ ಸದಸ್ಯರು ಹೋಗಬಹುದು ಎಂದರು.

ಮಟನ್ ಬಿರಿಯಾನಿ ಎಂದು ಮತ್ತೊಮ್ಮೆ ಬಿಗ್ ಬಾಸ್ ಹೇಳಿದ್ದಕ್ಕೆ ಆಂಡಿ ಮನೆಯ ಒಳಗೆ ನುಗ್ಗಲು ಪ್ರಯತ್ನಿಸಿದರು. ಆದರೆ ಉಳಿದ ಸದಸ್ಯರು ತಡೆದರು. ಒಟ್ನಲ್ಲಿ ಯಾರೂ ಮನೆಯ ಒಳಗೆ ಹೋಗಲಿಲ್ಲ. ವೆಜ್, ಮಟನ್ ಬಿರಿಯಾನಿ ಯಾರಿಗೂ ಸಿಗಲಿಲ್ಲ.

ಒಟ್ಟಾರೆ ಮನೆಯ ಹೊರಗೆ ಬಹಳಷ್ಟು ಹೊತ್ತು ಇರುವುದು ಅಸಾಧ್ಯ ಎಂಬ ಸಂಗತಿ ಮನೆಯ ಸದಸ್ಯರ ಅರಿವಿಗೆ ಬರುತ್ತಿದೆ. ಕಡೆಗೆ ಹೊಂದಾಣಿಕೆ ಮಾಡಿಕೊಂಡು ಇರಲು ಎರಡೂ ತಂಡದ ಸದಸ್ಯರು ಆಲೋಚಿಸಿದ್ದೂ ಆಯಿತು. ಸಮಯ ಸರಿಯುತ್ತಿದ್ದಂತೆ ಸದಸ್ಯರ ನಡುವೆ ಕಿರಿಕಿರಿ ಹೆಚ್ಚಾಗುತ್ತಿದೆ.

ಕನ್ನಡ ಮಾತನಾಡುತ್ತಿಲ್ಲ ಎಂದು ಕರುನಾಡ ತಾಯಿ ಸದಾ ಚಿನ್ಮಯಿ ಹಾಡು ಹಾಕಿ ಎಚ್ಚರಿಸಿದರು ಬಿಗ್ ಬಾಸ್. ಆಡಮ್ ಪಾಶಾ ಕನ್ನಡ ಮಾತನಾಡುತ್ತಿಲ್ಲ ಎಂದು ಆ ಹಾಡು ಹಾಕಲಾಗಿತ್ತು. ಮನೆಯ ಒಳಗಿರುವ ಕವಿತಾ ಅವರು ನಾನು ಊಟ ಮಾಡಲ್ಲ ಎಂದರು. ನಮ್ಮ ತಂಡ ಗೆದ್ದು ಬರುವವರೆಗೂ ನಾನು ಏನೂ ತಿನ್ನಲ್ಲ ಎಂದು ಹಠಕ್ಕೆ ಬಿದ್ದರು. ರವಿ ಸಹ ನಾನೂ ಸಹ ಊಟ ಮಾಡಲ್ಲ ಎಂದು ಮಗುಮ್ಮಾಗಿ ಇದ್ದುಬಿಟ್ಟರು.

ನಾಡಿನಲ್ಲಿದ್ದವರು ಕಾಡಿಗೆ ಹೋಗಿ, ಈಗ ಹೊಟ್ಟೆ ಹಸಿವಿನಿಂದ ಒದ್ದಾಡುವಂತಾಗಿದೆ. ಮುಖ್ಯವಾಗಿ ಆಂಡಿ ಹೊಟ್ಟೆ ಹಸಿವು ತಾಳಲಾರದೆ, ಅತ್ತಮನೆಯ ಒಳಗೆ ಹೋಗಲು ಆಗದ ಪರಿಸ್ಥಿತಿ ಎದುರಾಗಿದೆ. ಆಟ ಮುಂದುವರೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ