ಆ್ಯಪ್ನಗರ

Bigg Boss 6 Finale: ಇಲ್ಲೆಲ್ಲಾ ಸಿಗುತ್ತೆ ನೋಡಿ ಬಿಗ್ ಬಾಸ್ ಫಿನಾಲೆ ಡೀಟೇಲ್ಸ್

ಕಲರ್ಸ್ ಕನ್ನಡ ವಾಹಿನಿ ಸೇರಿದಂತೆ, ಅವರೇ ಕೆಲವೊಂದು ಆ್ಯಪ್‌, ಕೆಲವು ಆನ್‍ಲೈನ್ ವೆಬ್‌ಸೈಟ್‌ಗಳಲ್ಲೂ ನೋಡಬಹುದು. ಅದೇ ರೀತಿ ವಿಜಯ ಕರ್ನಾಟದಕ ಬಿಗ್ ಬಾಸ್ ವಿಭಾಗದಲ್ಲೂ ಲೈವ್ ಅಪ್‌ಡೇಟ್ಸ್ ಸಿಗುತ್ತದೆ. ಭಾನುವಾರ ಸಂಜೆಯಿಂದ ಕಾರ್ಯಕ್ರಮ ಆರಂಭವಾಗಲಿದೆ.

Vijaya Karnataka Web 27 Jan 2019, 8:51 pm
ಬಿಗ್‌ ಬಾಸ್‌ ಮನೆ ಈಗ ಫೈನಲ್‌ ಹಂತಕ್ಕೆ ಬಂದು ನಿಂತಿದೆ. ಮನೆಯಲ್ಲಿರುವ ಸ್ಪರ್ಧಿಗಳ ಪೈಕಿ ಯಾರಾಗ್ತಾರೆ ಬಿಗ್‌ಬಾಸ್‌ ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇದೆ. ಅದಕ್ಕೆ ಭಾನುವಾರದವರೆಗೂ ಕಾಯಲೇಬೇಕು. ಆದರೆ ಬಿಗ್‌ಬಾಸ್‌ ಫಿನಾಲೆಯ ಲೈವ್‌ ಅನ್ನು ಎಲ್ಲರೂ ಕಣ್ತುಂಬಿಕೊಳ್ಳಬಹುದು.
Vijaya Karnataka Web bigg-boss


ಬಿಗ್ ಬಾಸ್ ಆರನೇ ಸೀಸನ್‍ನ ಕ್ಷಣಕ್ಷಣ ಮಾಹಿತಿ ನಿಮಗೆ ವಿಜಯ ಕರ್ನಾಟಕದಲ್ಲೂ ಲಭ್ಯವಾಗಲಿದೆ. ಹೆಚ್ಚಿನ ಮಹಿತಿಗೆ ಬಿಗ್ ಬಾಸ್ ವಿಭಾಗವನ್ನು ಗಮನಿಸುತ್ತಿರಿ. ಭಾನುವಾರ ಸಂಜೆ 8 ಗಂಟೆಗೆ ಕಲರ್ಸ್ ಸೂಪರ್‌ ವಾಹಿನಿಯಲ್ಲಿ ನೋಡಬಹುದು. ಜತೆಗೆ ಅವರದೇ ಆ್ಯಪ್‌ನಲ್ಲೂ ಕಣ್ತುಂಬಿಕೊಳ್ಳಬಹುದು.

ಫಿನಾಲೆಯ ರೌಂಡ್‌ ಭಾನುವಾರ ರಾತ್ರಿ ಆರಂಭವಾಗಲಿದೆ. ಇದಕ್ಕೂ ಮುನ್ನ ಸ್ಪರ್ಧಿಗಳು ಎಲ್ಲರೂ ಬಂದು ಮನರಂಜನೆ ನೀಡಲಿದ್ದಾರೆ. ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಮೂಡಿಬರುತ್ತಿರುವ ಈ ರಿಯಾಲಿಟಿ ಶೋನ ಅಂತಿಮ ಕ್ಷಣಗಳನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು.

ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್‌ ಬಾಸ್‌ ಈಗ ಮತ್ತೊಂದು ಆವೃತ್ತಿಯ ಕೊನೆಯ ಘಟ್ಟ ತಲುಪಿದೆ. ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಶನಿವಾರ ರಾತ್ರಿಯಿಂದಲೇ ಬಿಗ್‌ ಬಾಸ್‌ ಫಿನಾಲೆಯ ಅಬ್ಬರ ಜೋರಾಗಿ ಸಾಗಿದೆ.

ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚು ಸ್ಪರ್ಧಿಗಳು ಸಾಮಾನ್ಯ ನಾಗರಿಕರು ಎನ್ನುವುದೇ ವಿಶೇಷವಾಗಿತ್ತು. ಕೆಲವೇ ಕೆಲವೇ ಸೆಲಬ್ರೆಟಿಗಳು, ಅದರಲ್ಲೂ ತೀರಾ ಯುವ ಸಮುದಾಯವನ್ನೇ ಈ ಬಾರಿ ಬಿಗ್‌ ಬಾಸ್‌ಯ ಸ್ಪರ್ಧಿಗಳನ್ನಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಆದರೂ ಬಿಗ್‌ಬಾಸ್‌ ಆರನೇ ಆವೃತ್ತಿ ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿದೆ ಅಲ್ಲದೇ ಜನರನ್ನು ಸೆಳೆಯುವಲ್ಲಿ ಯಶಸ್ವಿಯೂ ಆಗಿದೆ. ಬಿಗ್‌ಬಾಸ್‌ ಕನ್ನಡ ಆರನೇ ಆವೃತ್ತಿಯ ಫಿನಾಲೆ ಭಾನುವಾರ ರಾತ್ರಿ ಎಂಟು ಗಂಟೆಗೆ ಆರಂಭವಾಗಲಿದೆ. ನಿರೂಪಕ ಸುದೀಪ್‌ ಎಂದಿನಂತೆ ತಮ್ಮ ಶೈಲಿಯಲ್ಲಿಯೇ ನಿರೂಪರಣೆ ಮಾಡಿ ಬಿಗ್‌ಬಾಸ್ ವಿನ್ನರ್‌ ಯಾರು ಎನ್ನುವುದನ್ನು ಘೋಷಿಸಲಿದ್ದಾರೆ.

ಈ ಎಲ್ಲ ಕ್ಷಣಗಳನ್ನು ಕಲರ್ಸ್‌ ವಾಹಿನಿಯಲ್ಲಿ ಕಣ್ತುಂಬಿಕೊಳ್ಳಬಹುದು. ರ್‍ಯಾಪಿಡ್ ರಶ್ಮಿ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದು ಈಗ ನಾಲ್ಕು ಮಂದಿ ಮಾತ್ರ ಉಳಿದಿದ್ದಾರೆ. ನವೀನ್ ಸಜ್ಜು, ಕವಿತಾ ಗೌಡ ಹಾಗೂ ಶಶಿ ಕುಮಾರ್. ಎಲ್ಲರ ಪ್ರಶ್ನೆಯೂ ಈಗ ಒಂದೇ ಆಗಿದೆ. ಬಿಗ್‌ಬಾಸ್‌ 6 ವಿನ್ನರ್‌ ಯಾರಾಗುತ್ತಾರೆ? ಅದಕ್ಕಾಗಿ ವೇಯ್ಟ್‌ ಆಂಡ್‌ ವಾಚ್‌.

Also Read: Bigg Boss 6 Finale Live - ಅಂತಿಮ ಸುತ್ತಿನಲ್ಲಿ 3 ಮಂದಿ ಸ್ಪರ್ಧಿಗಳಿದ್ದು, ಈ ಬಾರಿ ಬಿಗ್ ಬಾಸ್ ಟ್ರೋಫಿಯನ್ನು ಯಾರು ಹಿಡಿದೆತ್ತಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ